AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ಪೊಲೀಸ್ ಮುಖ್ಯಸ್ಥರ ಪ್ರಕಾರ ಬುಚಾನಲ್ಲಿ ಬಲಿಯಾದವರ ಪೈಕಿ ಹೆಚ್ಚಿನವರನ್ನು ಗುಂಡಿಟ್ಟು ಕೊಲ್ಲಲಾಗಿದೆ

ರಷ್ಯನ್ ಸೇನೆ ಬುಚಾ ಪ್ರಾಂತ್ಯದಿಂದ ಹೊರಟು ಹೋದ ಮೇಲೆ ಸಾದಾ ಉಡುಪಿನಲ್ಲಿದ್ದ, ಮತ್ತು ಎರಡೂ ಕೈಗಳನ್ನ ಬೆನ್ನ ಹಿಂದೆ ಕಟ್ಟಿದ ದೇಹಗಳು ಬೀದಿಗಳಲ್ಲಿ ಚದುರಿದಂತೆ ಬಿದ್ದಿದ್ದ ದೃಶ್ಯ ವಿಶ್ವದ ಗಮನಕ್ಕೆ ಬಂತು.

ಉಕ್ರೇನ್ ಪೊಲೀಸ್ ಮುಖ್ಯಸ್ಥರ ಪ್ರಕಾರ ಬುಚಾನಲ್ಲಿ ಬಲಿಯಾದವರ ಪೈಕಿ ಹೆಚ್ಚಿನವರನ್ನು ಗುಂಡಿಟ್ಟು ಕೊಲ್ಲಲಾಗಿದೆ
ಬುಚಾ ಜನರ ಅನಾಥ ಶವಗಳು
Follow us
TV9 Web
| Updated By: ganapathi bhat

Updated on: Apr 16, 2022 | 8:06 AM

ಕೀವ್, ಉಕ್ರೇನ್: ಉಕ್ರೇನ್ ರಾಜಧಾನಿ ಕೀವ್ (Kyiv) ನಗರದ ಹೊರವಲಯಲ್ಲಿರುವ ಬುಚಾನಲ್ಲಿ (Bucha) ರಷ್ಯನ ಸೈನಿಕರು ನಡೆಸಿದ ಮಾರಣಹೋಮದಲ್ಲಿ ಮೃತಪಟ್ಟ ಜನರಲ್ಲಿ ಹೆಚ್ಚಿನವರು ಗುಂಡೇಟಿನಿಂದ ಸತ್ತಿದ್ದಾರೆ ಎಂದು ಆ ಭಾಗದ ಪೊಲೀಸ್ ಮುಖ್ಯಸ್ಥ ಶುಕ್ರವಾರ ಹೇಳಿದ್ದಾರೆ. ರಷ್ಯಾ ಸೇನೆ ವಶಪಡಿಸಿಕೊಂಡಿದ್ದ ಬುಚಾ ಪ್ರದೇಶವನ್ನು ತನ್ನ ವಶಕ್ಕೆ ವಾಪಸ್ಸು ಪಡೆದುಕೊಂಡಿದೆ. ಸತ್ತವರಲ್ಲಿ ಶೇಕಾಡಾ 95 ರಷ್ಟು ಬಂದೂಕುಧಾರಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಜನರನ್ನು ಕೊಲ್ಲಲು ಚಿಕ್ಕಗಾತ್ರದ ಆಯುಧಗಳನ್ನು ಸಹ ಬಳಸಲಾಗಿದೆ ಎಂದು ಕೀವ್ ಪ್ರಾದೇಶಿಕ ಮುಖ್ಯಸ್ಥ ಆಂಡ್ರಿ ನೆಬಿಟೋವ್ (Andriy Nebitov) ಹೇಳಿರುವರೆಂದು ಉಕ್ರೇನ್ ಇಂಟರ್ ಫ್ಯಾಕ್ಸ್ ನ್ಯೂಸ್ ಏಜೆನ್ಸಿ ಪತ್ರಿಕಾ ಗೋಷ್ಟಿಯೊಂದರಲ್ಲಿ ತಿಳಿಸಿದೆ.

‘ರಷ್ಯಾದ ಸೇನೆ ಬುಚಾ ಪ್ರದೇಶವನ್ನು ಆಕ್ರಮಿಸಿಕೊಂಡ ಸಮಯದಲ್ಲಿ ಅಲ್ಲಿ ವಾಸವಾಗಿದ್ದ ಉಕ್ರೇನಿಯನ್ನರನ್ನು ಸುಖಾಸುಮ್ಮನೆ, ಯಾವುದೇ ಪ್ರಚೋದನೆ ಇಲ್ಲದೆ ಗುಂಡು ಹಾರಿಸಿ ಕೊಂದರು. ಈ ಸತ್ಯಾಂಶವು ದಾಖಲಾಗಿದೆ. ಈ ಬಗೆಯ ಅಪರಾಧಗಳನ್ನು 21 ನೇ ಶತಮಾನದಲ್ಲಿ ಮುಚ್ಚಿಡುವುದು ಸಾಧ್ಯವಿಲ್ಲ. ಈ ಘೋರ ಕೃತ್ಯಗಳನ್ನು ಜನ ಕಣ್ಣಾರೆ ಕಂಡಿದ್ದಾರೆ ಮತ್ತು ಕೆಮೆರಾಗಳಲ್ಲೂ ಸೆರೆಯಾಗಿವೆ,’ ಎಂದು ನೆಬಿಟೋವ್ ಹೇಳಿದರು.

ಫ್ರಾನ್ಸ್‌ನ ರಾಷ್ಟ್ರೀಯ ಜೆಂಡರ್‌ಮೇರಿಯ ವಿಧಿವಿಜ್ಞಾನ ವಿಭಾಗದ ತಜ್ಞರ ತಂಡವು ಧ್ವಂಸಗೊಂಡಿರುವ ಬುಚಾ ಪಟ್ಟಣದಲ್ಲಿ ಸಾಮೂಹಿಕ ಸಮಾಧಿಯಲ್ಲಿ ಹೂಳಲ್ಪಟ್ಟವರ ದೇಹಗಳನ್ನು ಪರೀಕ್ಷಿಸುವ ಮತ್ತು ಅವುಗಳನ್ನು ಗುರುತಿಸುವ ಪ್ರಯತ್ನಗಳನ್ನು ಹಲವಾರು ದಿನಗಳಿಂದ ಮಾಡುತ್ತಿದೆ. ಇದನ್ನು ಮಾನವ ಇತಿಹಾಸದ ಅತಿದೊಡ್ಡ ಸಾಮೂಹಿಕ ಸಮಾಧಿಗಳಲ್ಲಿ ಒಂದೆಂದು ಹೇಳಲಾಗುತ್ತಿದೆ.

ರಷ್ಯಾದ ಪಡೆಗಳು ಬುಚಾ ಪ್ರಾಂತ್ಯದ ಮೇಲೆ ದಾಳಿ ಮಾಡಿ ಜನರ ಮೇಲೆ ನಡೆಸಿದ ಹಿಂಸಾಚಾರವು ಜಗತ್ತನ್ನು ಬೆಚ್ಚಿಬೀಳಿಸಿದೆ.

ಒಂದು ತಿಂಗಳ ಆಕ್ರಮಣದ ನಂತರ ಮಾರ್ಚ್ 30 ರಂದು ರಷ್ಯಾ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ದಾಳಿಯಲ್ಲಿ ಸತ್ತ ಜನರ ರಕ್ತಸಿಕ್ತ, ಕೊಳೆಯುತ್ತಿದ್ದ ಮತ್ತು ಕ್ರಿಮಿಕೀಟಗಳಿಂದ ಮುಕ್ಕುರಿದ ದೇಹಗಳನ್ನು ಸ್ಥಳೀಯ ನಿವಾಸಿಗಳೇ ಮಣ್ಣಲ್ಲಿ ಹೂತರು.

ರಷ್ಯನ್ ಸೇನೆ ಬುಚಾ ಪ್ರಾಂತ್ಯದಿಂದ ಹೊರಟು ಹೋದ ಮೇಲೆ ಸಾದಾ ಉಡುಪಿನಲ್ಲಿದ್ದ, ಮತ್ತು ಎರಡೂ ಕೈಗಳನ್ನ ಬೆನ್ನ ಹಿಂದೆ ಕಟ್ಟಿದ ದೇಹಗಳು ಬೀದಿಗಳಲ್ಲಿ ಚದುರಿದಂತೆ ಬಿದ್ದಿದ್ದ ದೃಶ್ಯ ವಿಶ್ವದ ಗಮನಕ್ಕೆ ಬಂತು.

ಅಲ್ಲಿಂದೀಚೆಗೆ ಹಲವಾರು ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ. ರಷ್ಯಾದ ಸೇನೆ ಬುಚಾದಿಂದ ಹಿಂತೆಗೆದ ಬಳಿಕ ಕನಿಷ್ಟ 400 ಶವಗಳು ಪತ್ತೆಯಾಗಿವೆ ಎಂದು ಅಲ್ಲಿನ ಮೇಯರ್ ಅನಾಟೊಲಿ ಫೆದೊರುಕ್ ಹೇಳಿದ್ದಾರೆ.

ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳೊಂದಿಗೆ ವ್ಯವಹರಿಸುವ ಹೇಗ್ ನಲ್ಲಿರುವ ಅಂತರರಾಷ್ಟ್ರೀಯ ಅಪರಾಧ ಕೋರ್ಟ್ ತನಿಖಾಧಿಕಾರಿಗಳ ತಂಡ ಪ್ರಸ್ತುತ ಉಕ್ರೇನಲ್ಲಿದ್ದು ಅದರ ಮುಖ್ಯಸ್ಥ ಈ ದೇಶವನ್ನು ‘ಅಪರಾಧದ ದೃಶ್ಯ’ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ:   51ನೇ ದಿನಕ್ಕೆ ಉಕ್ರೇನ್ ಯುದ್ಧ: ಅತಿಮುಖ್ಯ ಸಮರನೌಕೆ ಕಳೆದುಕೊಂಡ ರಷ್ಯಾಕ್ಕೆ ಹಿನ್ನಡೆ, ಅಣ್ವಸ್ತ್ರ ದಾಳಿಯ ಭೀತಿ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು