ಅಮೆರಿಕದಲ್ಲಿ ಅತಿ ಶ್ರೀಮಂತರಿಗೆ ಸಂಪತ್ತಿನ ತೆರಿಗೆ ಹಾಕಲು ಪ್ರಸ್ತಾವ; ನೂರಾರು ಕೋಟಿ ಡಾಲರ್ ಕಟ್ಟಬೇಕಾಗುತ್ತೆ ಕೋಟ್ಯಧಿಪತಿಗಳು

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ತತ್ತರಿಸಿರುವ ಅಮೆರಿಕದ ಆರ್ಥಿಕತೆ ಚೇತರಿಸಿಕೊಳ್ಳಲು ಶತಕೋಟ್ಯಧಿಪತಿಗಳಿಗೆ ಸಂಪತ್ತಿನ ಮೇಲೆ ತೆರಿಗೆ ಹಾಕುವ ಪ್ರಸ್ತಾವ ಮಾಡಲಾಗಿದೆ.

ಅಮೆರಿಕದಲ್ಲಿ ಅತಿ ಶ್ರೀಮಂತರಿಗೆ ಸಂಪತ್ತಿನ ತೆರಿಗೆ ಹಾಕಲು ಪ್ರಸ್ತಾವ; ನೂರಾರು ಕೋಟಿ ಡಾಲರ್ ಕಟ್ಟಬೇಕಾಗುತ್ತೆ ಕೋಟ್ಯಧಿಪತಿಗಳು
ಪ್ರಾತಿನಿಧಿಕ ಚಿತ್ರ
Follow us
Srinivas Mata
| Updated By: ರಶ್ಮಿ ಕಲ್ಲಕಟ್ಟ

Updated on: Mar 07, 2021 | 4:55 PM

ಅಮೆರಿಕದಲ್ಲಿ ಸಂಪತ್ತು ಅಸಮಾನತೆಯನ್ನು ಕಡಿಮೆ ಮಾಡಲು ಸಹಾಯ ಆಗುವಂತೆ, ಅದರಲ್ಲೂ ಕೊವಿಡ್ ಬಿಕ್ಕಟ್ಟಿನ ವೇಳೆಯಲ್ಲಿ ಸಂಪತ್ತು ಅಸಮಾನತೆ ಇನ್ನಷ್ಟು ಹೆಚ್ಚಾಗಿರುವ ನಿಟ್ಟಿನಲ್ಲಿ ದೇಶದಲ್ಲಿ ಈ ವಾರದ ಅರಂಭದಲ್ಲಿ “ಲಕ್ಷಾಧೀಶರ ತೆರಿಗೆ ಕಾಯ್ದೆ” ಪ್ರಸ್ತಾವ ಮಾಡಲಾಗಿದೆ. ಅದರ ಪ್ರಕಾರ, 50 ಮಿಲಿಯನ್ ಡಾಲರ್​ಗೂ ಹೆಚ್ಚಿನ ಸಂಪತ್ತು ಇರುವವರಿಗೆ ಶೇಕಡಾ 2 ಸುಂಕ, 1 ಬಿಲಿಯನ್ ಅಮೆರಿಕನ್ ಡಾಲರ್​ಗಿಂತ ಹೆಚ್ಚಿನ ಸಂಪತ್ತು ಇರುವವರಿಗೆ ಶೇ 3 ಸುಂಕ ವಿಧಿಸುವುದಕ್ಕೆ ಪ್ರಸ್ತಾವ ಮಾಡಲಾಗಿದೆ. ಇದರಿಂದ 1 ಲಕ್ಷ ಅಮೆರಿಕನ್ ಅಥವಾ ಮೇಲ್ ಸ್ತರದಲ್ಲಿ ಇರುವ ಶೇ 0.5ರಷ್ಟು ಜನರ ಮೇಲೆ ಪ್ರಭಾವ ಆಗಲಿದೆ ಎಂದು ಸಿಎನ್​ಬಿಸಿ ವರದಿ ಮಾಡಿದೆ.

ಈಗಿನ ಪ್ರಸ್ತಾವಿತ ತೆರಿಗೆ ಆಧಾರದ ಮೇಲೆ ಅಮೆಜಾನ್​ನ ಜೆಫ್ ಬೆಜೋಸ್ 570 ಕೋಟಿ ಅಮೆರಿಕನ್ ಡಾಲರ್ ಪಾವತಿ ಮಾಡಬೇಕಾಗುತ್ತದೆ. ಟೆಸ್ಲಾದ  ಎಲಾನ್ ಮಸ್ಕ್ 460 ಕೋಟಿ ಅಮೆರಿಕನ್ ಡಾಲರ್, ಬಿಲ್​ಗೇಟ್ಸ್ ಮತ್ತು ಮಾರ್ಕ್ ಝುಕರ್​ಬರ್ಗ್ ಕ್ರಮವಾಗಿ 360 ಕೋಟಿ ಅಮೆರಿಕನ್ ಡಾಲರ್ ಮತ್ತು 300 ಕೋಟಿ  ಅಮೆರಿಕನ್ ಡಾಲರ್ ಪಾವತಿಸಬೇಕಾಗುತ್ತದೆ. ಇನ್​​ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್ ಅಂಡ್ ಅಮೆರಿಕನ್ಸ್ ಫಾರ್ ಟ್ಯಾಕ್ಸ್ ಫೇರ್​ನೆಸ್ ಮುಂದಿಟ್ಟಿರುವ ಲೆಕ್ಕಾಚಾರ ಇದು.

ಮಸಾಚ್ಯುಸೆಟ್ಸ್​ನ ಸೆನೆಟರ್ ಎಲಿಜಬೆತ್ ವಾರೆನ್ ಮತ್ತು ವೆರ್ಮಾಂಟ್ ಸೆನೆಟರ್ ಬರ್ನಿ ಸ್ಯಾಂಡರ್ಸ್ ಸೇರಿದಂತೆ ಹಲವರು ತೆರಿಗೆಯನ್ನು ಪ್ರಸ್ತಾವ ಮಾಡಿದ್ದರು. ವಾರೆನ್ ಮಾತನಾಡಿ, ಮುಂದಿನ ಹತ್ತು ವರ್ಷಗಳಲ್ಲಿ 3 ಲಕ್ಷ ಕೋಟಿ ಅಮೆರಿಕನ್ ಡಾಲರ್​​ನಷ್ಟು ಸಂಗ್ರಹ ಮಾಡಬಹುದು. ಹೆಚ್ಚುವರಿ ಆದಾಯವು ಮಕ್ಕಳ ಸಂರಕ್ಷಣೆ, ಶಿಕ್ಷಣ ಮೂಲಸೌಕರ್ಯ ಮತ್ತು ಸ್ವಚ್ಛ ಇಂಧನಕ್ಕಾಗಿ ಪಾವತಿಸಲು ಸಹಾಯ ಆಗುತ್ತದೆ ಎಂದು ಹೇಳಿದ್ದಾಗಿ ವರದಿ ಆಗಿದೆ.

“ನಾವು ತೆರಳುತ್ತಿರುವ ದಿಕ್ಕಿನ ಬಗ್ಗೆ ಅರ್ಥವಾಗುತ್ತದೆ. ಈ ಬಿಕ್ಕಟ್ಟು ಹಲವಾರು ಶತಕೋಟ್ಯಧಿಪತಿಗಳನ್ನು ಸೃಷ್ಟಿಸಿದೆ. ಯಾರು ಮೇಲ್ಮಟ್ಟದಲ್ಲಿದ್ದಾರೋ ಅವರು ತುದಿಬೆರಳಿನಲ್ಲಿ ನಿಂತಂತೆ ಒದ್ದಾಡುತ್ತಿಲ್ಲ,” ಎಂದು ಸಿಎನ್​ಬಿಸಿಗೆ ವಾರೆನ್ ತಿಳಿಸಿದ್ದಾರೆ. ತೆರಿಗೆ ಪಾವತಿಸಿದ ನಂತರವೂ ಜೆಫ್ ಬೆಜೋಸ್ ಹಾಗೂ ಎಲಾನ್ ಮಸ್ಕ್ ಬಳಿ ಕ್ರಮವಾಗಿ 185 ಬಿಲಿಯನ್ ಯುಎಸ್​ಡಿ (18500 ಕೋಟಿ ಅಮೆರಿಕನ್ ಡಾಲರ್) ಹಾಗೂ 148 ಬಿಲಿಯನ್ ಯುಎಸ್​ಡಿ (14800 ಕೋಟಿ ಅಮೆರಿಕನ್ ಡಾಲರ್) ಇರುತ್ತದೆ.

ಇದನ್ನೂ ಓದಿ: Corona impact on global wealth: ಅತಿ ಶ್ರೀಮಂತರಿಗೆ ನಾನಾ ದೇಶದಲ್ಲಿ ನಾನಾ ಅಳತೆಗೋಲು

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ