ಹೆಣವನ್ನೂ ಬಿಡದ ಕಾಮುಕ, ರೈಲಿನಲ್ಲಿ ಮೃತ ಮಹಿಳೆಯೊಂದಿಗೆ ಸಂಭೋಗ ನಡೆಸಿದ ಪಾಪಿ
ಸತ್ತ ಹೆಣದ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಮಹಿಳೆಯೊಬ್ಬರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಹಜವಾಗಿ ಸಾವನ್ನಪ್ಪಿದ್ದರು, ಆ ಮಹಿಳೆಯ ಮೃತದೇಹದ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ವರದಿಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರದ (ಎಂಟಿಎ) ಕಣ್ಗಾವಲು ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, 50ರ ಆಸುಪಾಸಿನ ವ್ಯಕ್ತಿ ಶವದೊಂದಿಗೆ ಸಂಭೋಗ ನಡೆಸುತ್ತಿರುವುದು ಕಂಡುಬಂದಿದೆ.

ವಾಷಿಂಗ್ಟನ್, ಏಪ್ರಿಲ್ 11: ರೈಲಿನಲ್ಲಿ ಮೃತ ಮಹಿಳೆ(Woman) ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ನ್ಯೂಯಾರ್ಕ್ನ ರೈಲಿನಲ್ಲಿ ಸತ್ತ ಪ್ರಯಾಣಿಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ವರದಿಗಳ ಪ್ರಕಾರ ಏಪ್ರಿಲ 9 ರಂದು ಈ ಘಟನೆ ನಡೆದಿದೆ. ಈ ದೌರ್ಜನ್ಯವೆಸಗಿರುವುದು ಸಬ್ವೇ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಲೋವರ್ ಮ್ಯಾನ್‌ಹ್ಯಾಟನ್‌ನ ವೈಟ್‌ಹಾಲ್ ಸ್ಟ್ರೀಟ್ ನಿಲ್ದಾಣದಲ್ಲಿ ಆರ್ ರೈಲಿನಲ್ಲಿ ಮೃತ ದೇಹ ಪತ್ತೆಯಾದ ನಂತರ ಈ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರದ (ಎಂಟಿಎ) ಕಣ್ಗಾವಲು ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, 50ರ ಆಸುಪಾಸಿನ ವ್ಯಕ್ತಿ ಶವದೊಂದಿಗೆ ಸಂಭೋಗ ನಡೆಸುತ್ತಿರುವುದು ಕಂಡುಬಂದಿದೆ. ಮ್ಯಾನ್‌ಹ್ಯಾಟನ್ ಸುರಂಗಮಾರ್ಗದಲ್ಲಿ ವ್ಯಕ್ತಿ ಶವದ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮೃತ ಮಹಿಳೆಯನ್ನು ಇನ್ನೂ ಗುರುತಿಸಲಾಗಿಲ್ಲ ಮತ್ತು ವರದಿಗಳ ಪ್ರಕಾರ ಸಹಜ ಕಾರಣಗಳಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಇಬ್ಬರೂ ಪರಸ್ಪರ ತಿಳಿದಿದ್ದರು ಎಂಬುದಕ್ಕೆ ಪುರಾವೆ ಇಲ್ಲ.
ಮತ್ತಷ್ಟು ಓದಿ: ದಾವಣಗೆರೆ: ಜಾತ್ರೆಗೆ ಬಂದಿದ್ದ ದಲಿತ ಮಹಿಳೆ ಮೇಲೆ ಬಸ್ನಲ್ಲಿ ಲೈಂಗಿಕ ದೌರ್ಜನ್ಯ ಯತ್ನ
ಮತ್ತೊಂದು ಘಟನೆ ಕ್ಯಾನ್ಸರ್ ರೋಗಿ ಮೇಲೆ ಅತ್ಯಾಚಾರ ಚಿಕಿತ್ಸೆ ಕೊಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬ 13 ವರ್ಷದ ಕ್ಯಾನ್ಸರ್(Cancer) ರೋಗಿ ಮೇಲೆ ಅತ್ಯಾಚಾರ ನಡೆಸಿ, ಗರ್ಭಿಣಿ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಬಿಹಾರದಲ್ಲಿ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ. ಬಿಹಾರ ಮೂಲದ ಬಾಲಕಿ ಕ್ಯಾನ್ಸ್ ಚಿಕಿತ್ಸೆಗೆಂದು ಮಹಾರಾಷ್ಟ್ರಕ್ಕೆ ಬಂದಿದ್ದಳು. ಅದೇ ಹಳ್ಳಿಯಿಂದ ಬಂದಿರುವ ಈ ವ್ಯಕ್ತಿ ಆಕೆಗೆ ಸಹಾಯ ಮಾಡಿದ್ದ, ಎರಡು ತಿಂಗಳ ಹಿಂದೆ ಬದ್ಲಾಪುರದಲ್ಲಿ ವಾಸಿಸಲು ಒಂದು ಸ್ಥಳವನ್ನು ಬಾಡಿಗೆಗೆ ಪಡೆದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆ ವ್ಯಕ್ತಿ ಆಕೆಯ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮುಂಬೈ ಆಸ್ಪತ್ರೆಯಲ್ಲಿ, ಅಪ್ರಾಪ್ತ ಬಾಲಕಿಯೊಬ್ಬಳು ಕಿಮೊಥೆರಪಿ ಪಡೆಯುತ್ತಿದ್ದಾಗ ನಿಯಮಿತ ತಪಾಸಣೆಯ ಸಮಯದಲ್ಲಿ ಅವಳು ಗರ್ಭಿಣಿಯಾಗಿರುವುದು ಪತ್ತೆಯಾಗಿದೆ.
ಆರೋಪಿ ಸಂತ್ರಸ್ತೆಯ ಕುಟುಂಬಕ್ಕೆ ಸಹಾಯ ಮಾಡಿದ್ದ, ಈ ಸಮಯದಲ್ಲಿ, ಅವನು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗರ್ಭ ಧರಿಸುವಂತೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ