Kamala Harris: ಭಾರತೀಯರ ಜೊತೆಗೆ ದೀಪಾವಳಿ ಆಚರಿಸಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತೀಯರ ಜೊತೆಗೆ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Kamala Harris: ಭಾರತೀಯರ ಜೊತೆಗೆ ದೀಪಾವಳಿ ಆಚರಿಸಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ದೀಪಾವಳಿ ಹಬ್ಬ ಆಚರಿಸಿದ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 22, 2022 | 6:45 PM

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತೀಯರ ಜೊತೆಗೆ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ತಮ್ಮ ಅಧಿಕೃತ ನಿವಾಸ-ನೌಕಾ ವೀಕ್ಷಣಾಲಯದಲ್ಲಿ ದೀಪಾವಳಿಯ ಆಚರಣೆ ಮಾಡಿದ್ದಾರೆ. ಇದು ಭಾರತ ಹೆಮ್ಮೆಪಡುವ ವಿಚಾರ ಎಂದು ನೆಟ್ಟಿಗರು ಹೇಳಿದ್ದಾರೆ. ಅನೇಕರು ಇದು ಭಾರತದ ಸಂಸ್ಕೃತಿಗೆ ಕಮಲಾ ಹ್ಯಾರಿಸ್ ನೀಡಿದ ಗೌರವ ಎಂದು ಹೇಳಿದ್ದಾರೆ.

ಕಮಲಾ ಹ್ಯಾರಿಸ್ ಶುಕ್ರವಾರ ಅಮೆರಿಕದಲ್ಲಿರುವ ಭಾರತೀಯರ ಜೊತೆಗೆ ದೀಪಾವಳಿ ಮುನ್ನವೇ ತಮ್ಮ ಅಧಿಕೃತ ನಿವಾಸ-ನೌಕಾ ವೀಕ್ಷಣಾಲಯದಲ್ಲಿ ದೀಪಾವಳಿ ಆಚರಣೆಯನ್ನು ಆಯೋಜಿಸಿದರು. ಈ ಸಂಭ್ರಮದಲ್ಲಿ ನೀರಾ ತಾಂಡೇನ್, ವಿವೇಕ್ ಮೂರ್ತಿ, ರಿಚ್ ವರ್ಮಾ ಮತ್ತು ಅಜಯ್ ಭುಟೋರಿಯಾ ಸೇರಿದಂತೆ ಹಲವಾರು ಪ್ರಮುಖ ಭಾರತೀಯರು ಉಪಸ್ಥಿತರಿದ್ದರು.

ಕಮಲಾ ಹ್ಯಾರಿಸ್ ಅವರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ಕಮಲಾ ಹ್ಯಾರಿಸ್ ಅವರ ಪತಿಯೂ ಭಾಗಿಯಾಗಿದ್ದರು, ಅವರ ಜೊತೆಗೆ ಪಟಾಕಿ ಹೊಡೆದು ದೀಪಾವಳಿಯನ್ನು ಅದ್ಭುತವಾಗಿ ಆಚರಿಸಿಕೊಂಡಿದ್ದಾರೆ. ಕಮಲಾ ಹ್ಯಾರಿಸ್ ಅವರ ನಿವಾಸವನ್ನು ದೀಪಗಳಿಂದ ಅಲಂಕಾರ ಮಾಡಿದ್ದು, ಬಂದಿರುವ ಅತಿಥಿಗಳಿಗೆ ವಿವಿಧ ರೀತಿಯ ಭಾರತೀಯ ಭಕ್ಷ್ಯಗಳನ್ನು ಮಾಡಲಾಗಿತ್ತು.

ಇದನ್ನು ಓದಿ: Viral News: ಕೊರೊನಾದಿಂದ ಸಾವನ್ನಪ್ಪಿದ ರೋಗಿ ಶವಾಗಾರದಲ್ಲಿ ಬದುಕಿ ಬಂದ ಕತೆಯಿದು!

ಕಮಲಾ ಹ್ಯಾರಿಸ್ ಮೂಲತಃ ಭಾರತೀಯರು. ಇವರು ಚೆನ್ನೈನಲ್ಲಿ ಜನಿಸಿ, ಡಾಕ್ಟರೇಟ್ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದರು, ನಂತರ ಅಲ್ಲಿಯೇ  ನೆಲೆಸಿ ಈಗ ಜೋ ಬೈಡನ್ ಸರ್ಕಾರದಲ್ಲಿ ಉಪಧ್ಯಾಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ದೀಪಾವಳಿ ಬಗ್ಗೆ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಹೆಚ್ಚು ನಂಬಿಕೆ ಮತ್ತು ಪ್ರೀತಿ ಹೊಂದಿದ್ದಾರೆ. ಪ್ರತಿ ವರ್ಷ ತಮ್ಮ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಕುಟುಂಬ ಜೊತೆಗೆ ಆಚರಣೆ ಮಾಡುತ್ತಾರೆ ಎಂದು ಅವರೇ ಒಂದು ಸಂದರ್ಶನದಲ್ಲಿ ಹೇಳುತ್ತಾರೆ.

ನಮ್ಮ ಜೀವನದ ದ್ವಂದ್ವತೆ ಸರಿಪಡಿಸಲು ಮತ್ತು ಕತ್ತಲಿನಿಂದ ಬೆಳಕಿನ ಕಡೆ ಸಾಗಲು ಈ ಹಬ್ಬ ಮುಖ್ಯವಾಗಿರುತ್ತದೆ. ಈ ಆಚರಣೆ ಜಗತ್ತಿನ ಒಂದು ದೊಡ್ಡ ಸಂಸ್ಕೃತಿಯಾಗಿದೆ. ನಮ್ಮ ಕತ್ತಲಿನ ಜೀವನಕ್ಕೆ ಒಂದು ಬೆಳಕಿನ ಮಾರ್ಗದರ್ಶನ ನೀಡುವ ಕೆಲಸ ಆಗಬೇಕು. ನಮ್ಮ ಜೀವನದ ಪ್ರತಿಕ್ಷಣವು ಒಳ್ಳೆಯದ್ದನ್ನೇ ಯೋಚನೆ ಮಾಡಬೇಕು ಎಂದು ಕಮಲಾ ಹ್ಯಾರಿಸ್ ಹೇಳಿದರು.

Published On - 6:39 pm, Sat, 22 October 22

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM