Submersible tourism: ಏನಿದು ಸಬ್‌ಮರ್ಸಿಬಲ್ ಪ್ರವಾಸೋದ್ಯಮ? ಈ ಸಾಹಸ ಪ್ರಯಾಣಕ್ಕೆ ಎಷ್ಟು ಖರ್ಚಾಗುತ್ತದೆ?

ಸಬ್‌ಮರ್ಸಿಬಲ್ ಎಂಬುದು ಒಂದು ರೀತಿಯ ನೌಕೆಯಾಗಿದ್ದು ಅದು ನೀರಿನ ಅಡಿಯಲ್ಲಿ ಪ್ರಯಾಣಿಸಬಹುದು. ಇವುಗಳನ್ನು ವಾಣಿಜ್ಯ, ಮಿಲಿಟರಿ ಮತ್ತು ವೈಜ್ಞಾನಿಕ ಉದ್ದೇಶಗಳಿಗಾಗಿ ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಸಬ್‌ಮರ್ಸಿಬಲ್ ಗಳನ್ನು 1980 ರ ದಶಕದ ಮಧ್ಯಭಾಗದಿಂದ ಪ್ರವಾಸೋದ್ಯಮಕ್ಕಾಗಿ ಬಳಸಲಾಗುತ್ತಿದೆ.

Submersible tourism: ಏನಿದು ಸಬ್‌ಮರ್ಸಿಬಲ್ ಪ್ರವಾಸೋದ್ಯಮ? ಈ ಸಾಹಸ ಪ್ರಯಾಣಕ್ಕೆ ಎಷ್ಟು ಖರ್ಚಾಗುತ್ತದೆ?
ಸಬ್‌ಮರ್ಸಿಬಲ್ ಪ್ರವಾಸೋದ್ಯಮ
Follow us
ರಶ್ಮಿ ಕಲ್ಲಕಟ್ಟ
|

Updated on: Jun 22, 2023 | 8:57 PM

ಟೈಟಾನಿಕ್ ( Titanic) ಹಡಗಿನ ಅವಶೇಷಗಳನ್ನು ನೇರವಾಗಿ ನೋಡುವುದು ಸಾಹಸದ ಪ್ರಯಾಣ. ಇದಕ್ಕಾಗಿ ಅಟ್ಲಾಂಟಿಕ್ ಸಾಗರದ ಆಳಕ್ಕೆ ಸುಮಾರು ಎರಡೂವರೆ ಮೈಲುಗಳಷ್ಟು ಇಳಿಯುವ ಮಿನಿವ್ಯಾನ್ ಗಾತ್ರದ ಸಬ್‌ಮರ್ಸಿಬಲ್ (submersible) ಹಡಗನ್ನು ಹತ್ತಬೇಕು. ಮುಳುಗಿದ ಹಡಗನ್ನು ತಲುಪಲು ಸುಮಾರು ಎರಡು ಗಂಟೆಗಳು ಮತ್ತು ಮೇಲ್ಮೈಗೆ ಹಿಂತಿರುಗಲು ಇನ್ನೆರಡು ಗಂಟೆಗಳು ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಪರಿಶೋಧನೆಗೆ ಸಮಯ ತೆಗೆದುಕೊಳ್ಳುತ್ತದೆ. ಟೈಟಾನ್ (Titanic Submarine) ಎಂದು ಕರೆಯಲ್ಪಡುವ ಜಲಾಂತರ್ಗಾಮಿ ಕಣ್ಮರೆಯಾದಾಗಿನಿಂದ ಸಬ್‌ಮರ್ಸಿಬಲ್ ಪ್ರವಾಸೋದ್ಯಮದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ.ಏನಿದು ಈ ಸಾಹಸ ಪ್ರವಾಸ? ಖರ್ಚು, ವೆಚ್ಚ ಎಷ್ಟಿರುತ್ತದೆ? ನೋಡೋಣ ಬನ್ನಿ

ಎಷ್ಟು ಖರ್ಚು?

ಈ ಪ್ರವಾಸ ಕೈಗೊಳ್ಳಲು ಕಾಲು ಮಿಲಿಯನ್ ಡಾಲರ್‌ ಬೆಲೆ ತೆರೆಯಬೇಕು. ಇಷ್ಟು ದುಬಾರಿ ಆಗಿದ್ದರೂ , ಅಂತಹ ಸಾಹಸಕ್ಕಾಗಿ ಆಸಕ್ತಿ ಹೊಂದಿರುವ ಜನರು ಕಮ್ಮಿಯೇನಿಲ್ಲ. ಟೈಟಾನ್ ಎಂದು ಕರೆಯಲ್ಪಡುವ ನೌಕೆಯು ಐದು ಮಂದಿಯೊಂದಿಗೆ ಉತ್ತರ ಅಟ್ಲಾಂಟಿಕ್‌ನಲ್ಲಿ ಭಾನುವಾರ ಕಣ್ಮರೆಯಾಯಿತು. ಅದರ ಆಮ್ಲಜನಕವು ಗುರುವಾರ ಖಾಲಿಯಾಗುತ್ತಾ ಬರುತ್ತಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಪ್ರಪಂಚದ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ನಿರ್ಭೀತ ಪ್ರಯಾಣಿಕರಿಗೆ, ಸಬ್‌ಮರ್ಸಿಬಲ್ ಟ್ರಿಪ್ ದೊಡ್ಡ ಸಂಗತಿಯೇನಲ್ಲ ಅಂತಾರೆ ರೋಮನ್ ಮತ್ತು ಎರಿಕಾ ಸಹ-ಸಂಸ್ಥಾಪಕ, ರೋಮನ್ ಚಿಪೋರುಖಾ. ಭಾರೀ ಶ್ರೀಮಂತ ಗ್ರಾಹಕರಿರುವ  ಪ್ರಯಾಣ ಕಂಪನಿಯು ವಾರ್ಷಿಕ ಸದಸ್ಯತ್ವ 100,000 ಡಾಲರ್ ನಿಂದ ಪ್ರಾರಂಭವಾಗುತ್ತದೆ.

ಸಬ್‌ಮರ್ಸಿಬಲ್ ಪ್ರವಾಸೋದ್ಯಮ ಎಂದರೇನು?

ಸಬ್‌ಮರ್ಸಿಬಲ್ ಎಂಬುದು ಒಂದು ರೀತಿಯ ನೌಕೆಯಾಗಿದ್ದು ಅದು ನೀರಿನ ಅಡಿಯಲ್ಲಿ ಪ್ರಯಾಣಿಸಬಹುದು. ಇವುಗಳನ್ನು ವಾಣಿಜ್ಯ, ಮಿಲಿಟರಿ ಮತ್ತು ವೈಜ್ಞಾನಿಕ ಉದ್ದೇಶಗಳಿಗಾಗಿ ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಸಬ್‌ಮರ್ಸಿಬಲ್ ಗಳನ್ನು 1980 ರ ದಶಕದ ಮಧ್ಯಭಾಗದಿಂದ ಪ್ರವಾಸೋದ್ಯಮಕ್ಕಾಗಿ ಬಳಸಲಾಗುತ್ತಿದೆ. ಈಗ ಪ್ರಪಂಚದಾದ್ಯಂತ ಕಂಡುಬರುತ್ತವೆ ಎಂದು ಸಬ್‌ಮರ್ಸಿಬಲ್‌ಗಳನ್ನು ನಿರ್ಮಿಸುವ ಎಂಜಿನಿಯರಿಂಗ್ ಸಂಸ್ಥೆಯಾದ ಹೈಡ್ರೋಸ್ಪೇಸ್ ಗ್ರೂಪ್ ಅನ್ನು ನಡೆಸುತ್ತಿರುವ ವಿಲಿಯಂ ಕೊಹ್ನೆನ್ ಹೇಳುತ್ತಾರೆ. ಹವಾಯಿ ಅಥವಾ ಕೆರಿಬಿಯನ್‌ನಂತಹ ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು.

ಸಾಮಾನ್ಯವಾಗಿ, ಪ್ರವಾಸಿ ಸಬ್ ಅಥವಾ ಸಬ್‌ಮರ್ಸಿಬಲ್​​​ದಲ್ಲಿ 20 ರಿಂದ 60 ಜನರು ಪ್ರಯಾಣಿಸಹುದು.ಟೈಟಾನಿಕ್ ಮಿಷನ್‌ನಷ್ಟು ಆಳದಲ್ಲಿ ಅಲ್ಲವಾದರೂ ಒಂದು ಗಂಟೆಯ ಅವಧಿಯಲ್ಲಿ ಆಳಕ್ಕೆ ಹೋಗಬಹುದು.ಅವರಲ್ಲಿ 99 ಪ್ರತಿಶತವು 150 ಅಡಿಗಳಿಗಿಂತ ಹೆಚ್ಚು ಇಳಿಯುವುದಿಲ್ಲ (ಸುಮಾರು ಎರಡು ಟೆನ್ನಿಸ್ ಕೋರ್ಟ್‌ಗಳ ಉದ್ದ). ಈ ಪ್ರವಾಸಗಳು ಸರಾಸರಿ ಎರಡರಿಂದ ಮೂರು ಗಂಟೆಗಳವರೆಗೆ ಇರುತ್ತದೆ. ಹೀಗೆ ನೀರಿನ ಆಳಕ್ಕೆ ಹೋಗುವುದಾದರೆ ಗರಿಷ್ಠ 12,800 ಅಡಿ ಆಳಕ್ಕೆ ಹೋಗಬಹುದು. ಟೈಟಾನಿಕ್ ಭಗ್ನಾವಶೇಷವು ಕೆನಡಾದ ನ್ಯೂಫೌಂಡ್‌ಲ್ಯಾಂಡ್‌ನಿಂದ ದಕ್ಷಿಣಕ್ಕೆ 370 ಮೈಲುಗಳಷ್ಟು 12,500 ಅಡಿ ಆಳದಲ್ಲಿದೆ.

ಟೈಟಾನಿಕ್ ಪ್ರವಾಸಕ್ಕೆ ಎಷ್ಟು ವೆಚ್ಚವಾಗುತ್ತದೆ?

ಓಷನ್‌ಗೇಟ್ ಟೈಟಾನಿಕ್ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ $250,000 ವೆಚ್ಚವಾಗಿದೆ. ಪ್ರಯಾಣ ಆರಂಭವಾಗುವ ಮತ್ತು ಕೊನೆಯಾಗುವ ನ್ಯೂಫೌಂಡ್‌ಲ್ಯಾಂಡ್‌ನ ಸೇಂಟ್ ಜಾನ್ಸ್‌ ಇರುವ ಪ್ರಯಾಣವನ್ನು ಹೊರತು ಪಡಿಸಿರುವ ವೆಚ್ಚವಾಗಿದೆ. ತನ್ನ ಕಂಪನಿಯ OceanGate ನುರಿತ, ಎತ್ತರದ ಮತ್ತು ಸ್ವಲ್ಪ ಉದ್ದವಾದ ಆವೃತ್ತಿಯನ್ನ ಹೊಂದಿದೆ ಎಂದು ಐಷಾರಾಮಿ ಪ್ರಯಾಣ ಕಂಪನಿ ಬ್ರೌನ್ ಮತ್ತು ಹಡ್ಸನ್ ಸಂಸ್ಥಾಪಕ, ಫಿಲಿಪ್ ಬ್ರೌನ್ ಹೇಳುತ್ತಾರೆ. ಇದರಲ್ಲಿ ಪ್ರತಿ ವ್ಯಕ್ತಿಗೆ ಸುಮಾರು $293,535 ವೆಚ್ಚವಾಗುತ್ತದೆ. ಪ್ಯಾಕೇಜಿನಲ್ಲಿ ಸೇಂಟ್ ಜಾನ್ ಮತ್ತು ಅಲ್ಲಿನ ತಯಾರಿ, ಡೈವ್‌ಗೆ ತಿಂಗಳುಗಳ ಮೊದಲು ಪ್ರಾರಂಭವಾಗುವ ಅಪಾಯ ತಗ್ಗಿಸುವ ಪ್ರಕ್ರಿಯೆಗಳು ಸೇರಿವೆ.

ಇದನ್ನೂ ಓದಿ: ನಾಪತ್ತೆಯಾಗಿರುವ ಟೈಟಾನಿಕ್ ಸಬ್‌ಮೆರಿನ್​​ನಲ್ಲಿ ಖಾಲಿಯಾಗುತ್ತಾ ಬಂದಿದೆ ಆಕ್ಸಿಜನ್; ಪವಾಡಗಳು ನಡೆಯಬೇಕು ಎಂದ ತಜ್ಞರು

ಪ್ರವಾಸಿ ಸಬ್‌ಮರ್ಸಿಬಲ್‌ಗಳು ಸುರಕ್ಷಿತವೇ?

ಈ ಉದ್ಯಮವು ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ನಿಯಂತ್ರಿಸಲ್ಪಡುತ್ತದೆ. ಯಾವುದೇ ದುರಂತಗಳಿಲ್ಲದೆ 50 ವರ್ಷಗಳ ಸುರಕ್ಷತಾ ದಾಖಲೆಯನ್ನು ಹೊಂದಿದೆ ಎಂದು ಮೆರೈನ್ ಟೆಕ್ನಾಲಜಿ ಸೊಸೈಟಿ (MTS) ಹೇಳಿರುವುದಾಗಿ ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಟೈಟಾನ್ ಒಂದು ವಿಶಿಷ್ಟ ವಿನ್ಯಾಸದಿಂದ ಕೂಡಿದ್ದು,”Classed” ಸಬ್‌ಮರ್ಸಿಬಲ್ ಅಲ್ಲ, ಇದು “ಸುಸ್ಥಾಪಿತ ಸುರಕ್ಷತಾ ಮಾರ್ಗಸೂಚಿಗಳಲ್ಲಿ ಕಾರ್ಯನಿರ್ವಹಿಸುತ್ತದೆ” ಎಂದು ಸಬ್‌ಮರ್ಸಿಬಲ್‌ಗಳನ್ನು ನಿರ್ಮಿಸುವ ಎಂಜಿನಿಯರಿಂಗ್ ಸಂಸ್ಥೆಯಾದ ಹೈಡ್ರೋಸ್ಪೇಸ್ ಗ್ರೂಪ್ ಅನ್ನು ನಡೆಸುತ್ತಿರುವ ವಿಲಿಯಂ ಕೊಹ್ನೆನ್ ಹೇಳಿದ್ದಾರೆ.

ಆದರೆ ಯಾವುದೇ ರೀತಿಯ ಸಾರಿಗೆಯಂತೆ, ಸಬ್‌ಮರ್ಸಿಬಲ್ ಮೂಲಕ ಪ್ರಯಾಣಿಸುವಾಗ ಅಪಾಯ ಇದ್ದೇ ಇರುತ್ತದೆ. ಮಂಗಳವಾರ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಮಾಜಿ ಓಷನ್‌ಗೇಟ್ ಪ್ರಯಾಣಿಕ ಮೈಕ್ ರೀಸ್ ಅವರು ಪ್ರವಾಸದ ಮೊದಲು ಪ್ರವಾಸದಲ್ಲಿ ಯಾವೆಲ್ಲ ರೀತಿಯಲ್ಲಿ ಪ್ರಾಣಕ್ಕೆ ಅಪಾಯವಿದೆ ಎಂಬ ವಿವರಣೆ ಪತ್ರಕ್ಕೆ ಸಹಿ ಹಾಕಬೇಕಿದೆ ಎಂದಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ