ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಲ್ಲಿ ಮತ್ತೆ ಕಾಣಿಸಿಕೊಂಡ ಟ್ರಂಪ್ ಫೋಟೋ
ಅಮೆರಿಕದ ನ್ಯಾಯಾಂಗ ಇಲಾಖೆಯ ವೆಬ್‌ಪುಟದಲ್ಲಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಫೋಟೋ ಮತ್ತೆ ಕಾಣಿಸಿಕೊಂಡಿದೆ. ಈ ಫೋಟೋ ಹಿಂದೆ ಕಾಣೆಯಾಗಿತ್ತು, ಇದು ವ್ಯಾಪಕ ಚರ್ಚೆ ಮತ್ತು ಅನುಮಾನಗಳಿಗೆ ಕಾರಣವಾಗಿತ್ತು. ಎಪ್‌ಸ್ಟೀನ್ ಪ್ರಕರಣದಲ್ಲಿ ಟ್ರಂಪ್ ಮತ್ತು ಇತರ ಪ್ರಮುಖ ವ್ಯಕ್ತಿಗಳೊಂದಿಗಿನ ಅವರ ಸಂಬಂಧದ ಬಗ್ಗೆ ಪ್ರಶ್ನೆಗಳು ಎತ್ತಿದ್ದು, ದಾಖಲೆಗಳ ಕಣ್ಮರೆ ನ್ಯಾಯ ಇಲಾಖೆಯ ಪಾರದರ್ಶಕತೆಯ ಬಗ್ಗೆ ಅನುಮಾನ ಮೂಡಿಸಿತ್ತು.

ನ್ಯೂಯಾರ್ಕ್, ಡಿಸೆಂಬರ್ 22:ಜೆಫ್ರಿ ಎಪ್‌ಸ್ಟೀನ್ ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ ಸಾರ್ವಜನಿಕ ವೆಬ್ ಪುಟದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಫೋಟೋ ಮತ್ತೆ ಕಾಣಿಸಿಕೊಂಡಿದೆ. ಅಮೆರಿಕದ ನ್ಯಾಯ ಇಲಾಖೆಯ ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿತ್ತು. ಅದರ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.
ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಲೈಂಗಿಕ ವೃತ್ತಿಗೆ ಬಾಲಕಿಯರನ್ನು ಅಕ್ರಮವಾಗಿ ಸಾಗಿಸಿದ ಆರೋಪ, ಮತ್ತು ಹಣಕಾಸು ಅವ್ಯವಹಾರದ ಆರೋಪದಿಂದ ಜೈಲು ಸೇರಿದ್ದ ಅಮೆರಿಕದ ಶ್ರೀಮಂತ ವ್ಯಕ್ತಿ ಜೆಫ್ರಿ ಎಪ್ ಸ್ಟೀನ್ ಕಾರಾಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅಮೆರಿಕದ ಪ್ರತಿಷ್ಠಿತರ ಜೊತೆ ವ್ಯವಹರಿಸುತ್ತಿದ್ದ ಜೆಫ್ರಿ ಅವರ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಇಲಾಖೆಯಲ್ಲಿದ್ದ ಮುಖ್ಯ ದಾಖಲೆಗಳು ಈಗ ಕಣ್ಮರೆಯಾಗಿವೆ. ಶುಕ್ರವಾರ ಲಭ್ಯವಿದ್ದ ಈ ದಾಖಲೆಗಳು ಶನಿವಾರದ ವೇಳೆಗೆ ವೆಬ್‌ಪುಟದಿಂದ ಕಣ್ಮರೆಯಾಗಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ಮತ್ತಷ್ಟು ಓದಿ: ತೆಲಂಗಾಣ ಸರ್ಕಾರ ಹೈದರಾಬಾದ್ ರಸ್ತೆಗೆ ಡೊನಾಲ್ಡ್ ಟ್ರಂಪ್ ಹೆಸರಿಡಲು ಕಾರಣವೇನು?
ನಾಪತ್ತೆಯಾಗಿರುವ ದಾಖಲೆಗಳಲ್ಲಿದ್ದ ಫೋಟೋದಲ್ಲಿ ಡೊನಾಲ್ಡ್ ಟ್ರಂಪ್, ಜೆಫ್ರಿ ಎಪ್‌ಸ್ಟೀನ್, ಮೆಲಾನಿಯಾ ಟ್ರಂಪ್ ಹಾಗೂ ಜೆಫ್ರಿ ಎಪ್‌ಸ್ಟೀನ್ ನ ದೀರ್ಘಕಾಲದ ಸಹಚರಿ ಘಿಸ್ಲೇನ್ ಮ್ಯಾಕ್ಸ್‌ವೆಲ್ ಜೊತೆಗಿರುವುದು ಕಂಡುಬಂದಿತ್ತು. ನ್ಯಾಯ ಇಲಾಖೆ ವೆಬ್‌ಪುಟದಿಂದ ದಾಖಲೆಗಳು ನಾಪತ್ತೆಯಾಗಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಹಾಗೂ ಅನುಮಾನಗಳು ಮೂಡಲು ಎಡೆ ಮಾಡಿಕೊಟ್ಟಿದೆ.
ನ್ಯಾಯಾಂಗ ಇಲಾಖೆಯು ಯಾವುದೇ ರಾಜಕಾರಣಿಗಳ ಹೆಸರುಗಳನ್ನು ತಿದ್ದುಪಡಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಕಾನೂನಿನಿಂದ ಅಗತ್ಯವಿರುವ ದಾಖಲೆಗಳಿಗೆ ಮಾತ್ರ ತಿದ್ದುಪಡಿಗಳನ್ನು ಮಾಡಲಾಗುತ್ತದೆ ಎಂದು ಹೇಳಿದೆ. ಟ್ರಂಪ್ ಮತ್ತು ಹಣಕಾಸುದಾರ ಜೆಫ್ರಿ ಎಪ್ಸ್ಟೀನ್ ಆಪ್ತರಾಗಿದ್ದರು.
ಟ್ರಂಪ್, ಮೆಲಾನಿಯಾ ಟ್ರಂಪ್ ಮತ್ತು ಎಪ್ಸ್ಟೀನ್ ಅವರ ಆಪ್ತ ಸಹಚರರಾದ ಗಿಸ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ತೋರಿಸುವ ಮತ್ತೊಂದು ಮಸುಕಾದ ಫೋಟೋ ಇತ್ತು. ಈ ಫೋಟೋವನ್ನು ಟ್ರಂಪ್ ಮತ್ತು ಮೆಲಾನಿಯಾ ಅವರ ವಿವಾಹದ ಮೊದಲು 2000 ರಲ್ಲಿ ಮಾರ್-ಎ-ಲಾಗೊದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಫೈಲ್‌ಗಳನ್ನು ಏಕೆ ತೆಗೆದುಹಾಕಲಾಗಿದೆ ಅಥವಾ ಅವು ಉದ್ದೇಶಪೂರ್ವಕವಾಗಿ ಕಾಣೆಯಾಗಿವೆಯೇ ಎಂದು ನ್ಯಾಯಾಂಗ ಇಲಾಖೆ ಹೇಳಿಲ್ಲ.
ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಹಿಂದೆಂದೂ ನೋಡಿರದ ಫೋಟೋಗಳ ಸರಣಿ ಇತ್ತು ಆದರೆ ಟ್ರಂಪ್ ಅವರ ಕೆಲವೇ ಕೆಲವು ಫೋಟೋಗಳು ಇದ್ದವು. ಇಬ್ಬರೂ ಎಪ್ಸ್ಟೀನ್ ಜೊತೆ ಸಂಬಂಧ ಹೊಂದಿದ್ದರು, ಆದರೆ ಇಬ್ಬರೂ ಆ ಸ್ನೇಹವನ್ನು ನಿರಾಕರಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




