ಪಾಕಿಸ್ತಾನದಲ್ಲಿ ಏನಾಗುತ್ತಿದೆ? ಇಸ್ಲಾಮಾಬಾದ್, ರಾವಲ್ಪಿಂಡಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ್ದೇಕೆ?
ಪಾಕಿಸ್ತಾನದಲ್ಲಿ ತೆಹ್ರೀಕ್-ಇ-ಲಬ್ಬಾಯಿಕ್ ಅವರ ಅಮೆರಿಕ ರಾಯಭಾರ ಕಚೇರಿಯ ಪ್ರತಿಭಟನೆಯ ನಡುವೆ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಇಂಟರ್ನೆಟ್ ಹಾಗೂ ಮೊಬೈಲ್ ಸೇವೆಯನ್ನು ನಿಷೇಧಿಸಲಾಗಿದೆ. ರಸ್ತೆಗಳನ್ನು ಕೂಡ ಮುಚ್ಚಲಾಗಿದೆ. ಗಾಜಾದಲ್ಲಿ ನಡೆದ ಹತ್ಯೆಗಳನ್ನು ಪ್ರತಿಭಟಿಸಲು ಹಲವಾರು ಜನರು ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ. ಭದ್ರತಾ ಕಾಳಜಿ ಮತ್ತು ಹಿಂಸಾತ್ಮಕ ಘರ್ಷಣೆಗಳನ್ನು ಉಲ್ಲೇಖಿಸಿ ಪಾಕಿಸ್ತಾನವು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಇಸ್ಲಮಾಬಾದ್, ಅಕ್ಟೋಬರ್ 10: ಪಾಕಿಸ್ತಾನ (Pakistan) ಸರ್ಕಾರವು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇಸ್ರೇಲ್ ವಿರೋಧಿ ಪ್ರತಿಭಟನೆಗೆ ಮುಂಚಿತವಾಗಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು. ತೀವ್ರಗಾಮಿ ಇಸ್ಲಾಮಿಸ್ಟ್ ಪಕ್ಷವಾದ ತೆಹ್ರೀಕ್-ಇ-ಲಬ್ಬಾಯಿಕ್ ಪಾಕಿಸ್ತಾನ್ (TLP) ಇಂದು ‘ಲಬ್ಬಾಯಿಕ್ ಯಾ ಅಕ್ಸಾ ಮಿಲಿಯನ್ ಮಾರ್ಚ್’ ಯೋಜಿಸುವ ಮುನ್ನ ಇಸ್ಲಮಾಬಾದ್ನ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಮುಚ್ಚಿದೆ.
ಲಾಹೋರ್ ನಗರದಲ್ಲಿ ಕಾನೂನು ಜಾರಿ ಅಧಿಕಾರಿಗಳು ಮತ್ತು ಪಕ್ಷದ ಸದಸ್ಯರ ನಡುವೆ ಇಸ್ರೇಲ್ ವಿರೋಧಿ ಪ್ರತಿಭಟನೆಯ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಇಂದು ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಹೊರಗೆ ಇಸ್ರೇಲ್ ವಿರೋಧಿ ಪ್ರದರ್ಶನ ನಡೆಸುವುದಾಗಿ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ ಘೋಷಿಸಿತ್ತು. ಇದಾದ ನಂತರ ಪಂಜಾಬ್ ಪೊಲೀಸರು ಟಿಎಲ್‌ಪಿ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿ ಅದರ ಮುಖ್ಯಸ್ಥ ಸಾದ್ ಹುಸೇನ್ ರಿಜ್ವಿಯನ್ನು ಬಂಧಿಸಿದರು.
ಇದನ್ನೂ ಓದಿ: ಪಾಕಿಸ್ತಾನ- ಅಫ್ಘಾನ್ ಗಡಿಯಲ್ಲಿ ಗುಂಡಿನ ದಾಳಿ; 11 ಪಾಕ್ ಸೈನಿಕರು, 19 ಉಗ್ರರು ಸಾವು
ಆಂತರಿಕ ಸಚಿವಾಲಯವು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರಕ್ಕೆ (ಪಿಟಿಎ) ಇಂದು ಮಧ್ಯರಾತ್ರಿಯಿಂದ ಅವಳಿ ನಗರಗಳಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ. ಟಿಎಲ್‌ಪಿಯ ಪ್ರತಿಭಟನಾ ಕರೆಯ ಹಿನ್ನೆಲೆಯಲ್ಲಿ ಹೆಚ್ಚಿದ ಭದ್ರತಾ ಕಳವಳಗಳ ನಡುವೆಯೇ ಪಂಜಾಬ್ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಪ್ರಾಂತ್ಯದಾದ್ಯಂತ ಸೆಕ್ಷನ್ 144 ಅನ್ನು ವಿಧಿಸಿದೆ. ಎಲ್ಲಾ ರೀತಿಯ ಪ್ರತಿಭಟನೆಗಳು, ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು 10 ದಿನಗಳವರೆಗೆ ನಿಷೇಧಿಸಿದೆ.
ಸಾರ್ವಜನಿಕ ಸ್ಥಳಗಳು, ಬೀದಿಗಳು ಮತ್ತು ತೆರೆದ ಪ್ರದೇಶಗಳಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗುವುದು ಎಂದು ಪ್ರಾಂತೀಯ ಗೃಹ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ಪ್ರಾರ್ಥನೆಗಳು, ಮದುವೆಗಳು, ಅಂತ್ಯಕ್ರಿಯೆಗಳು, ಕಚೇರಿಗಳು ಅಥವಾ ನ್ಯಾಯಾಲಯದ ಆವರಣಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಪಂಜಾಬ್‌ನಾದ್ಯಂತ ಶಸ್ತ್ರಾಸ್ತ್ರಗಳ ಪ್ರದರ್ಶನ ಮತ್ತು ಧ್ವನಿವರ್ಧಕಗಳ ಬಳಕೆಯ ಮೇಲೆ ಆದೇಶವು ಸಂಪೂರ್ಣ ನಿಷೇಧವನ್ನು ವಿಧಿಸುತ್ತದೆ.
ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯ ಅವಳಿ ನಗರಗಳಲ್ಲಿ ಇಂದು ರಾತ್ರಿ 12 ಗಂಟೆಯಿಂದ ಮುಂದಿನ ಆದೇಶದವರೆಗೆ 3G/4G ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ದೇಶಿಸಲಾಗಿದೆ. ಪಂಜಾಬ್ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಸೆಕ್ಷನ್ 144 ಅನ್ನು ವಿಧಿಸಿತು. ಸಾರ್ವಜನಿಕ ಸಭೆಗಳು, ಪ್ರತಿಭಟನೆಗಳು ಮತ್ತು ಅಂತಹ ಇತರ ಪ್ರದರ್ಶನಗಳನ್ನು 10 ದಿನಗಳವರೆಗೆ ನಿಷೇಧಿಸಿತು. ಅಕ್ಟೋಬರ್ 11ರವರೆಗೆ ರಾವಲ್ಪಿಂಡಿಯಲ್ಲಿ ಸೆಕ್ಷನ್ 144 ಈಗಾಗಲೇ ಜಾರಿಯಲ್ಲಿದೆ. ಇಸ್ಲಾಮಾಬಾದ್‌ನಲ್ಲಿ ಎಲ್ಲಾ ಪ್ರಮುಖ ಪ್ರವೇಶ ದ್ವಾರಗಳನ್ನು ನಿರ್ಬಂಧಿಸಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




