
ನ್ಯೂಯಾರ್ಕ್, ಅಕ್ಟೋಬರ್ 13: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮಾಜಿ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರಿಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಮುಖಭಂಗ ಎದುರಾಗಿದೆ. ಸೋಮವಾರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೂನಸ್ ಅವರನ್ನು ಬಾಂಗ್ಲಾದೇಶದ ವಲಸಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದ್ದಾರೆ ಹಾಗೂ ತಮ್ಮ ಆಡಳಿತಾವಧಿಯಲ್ಲಿ ಸಾವುನೋವುಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದ ‘ಡೈಲಿ ಸನ್’ ಪತ್ರಿಕೆಯ ವರದಿಯ ಪ್ರಕಾರ, ದೋಹಾದಿಂದ ಕತಾರ್ ಏರ್ವೇಸ್ ವಿಮಾನದಲ್ಲಿ ಅಕ್ಟೋಬರ್ 12ರಂದು ಮುಹಮ್ಮದ್ ಯೂನಸ್ ವಿಮಾನ ನಿಲ್ದಾಣದ ಟರ್ಮಿನಲ್ 8 ತಲುಪಿದ ವೇಳೆ ಈ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ವೀಡಿಯೊದಲ್ಲಿ, ವಲಸಿಗರು ಯೂನಸ್ ಅವರನ್ನು ಸುತ್ತುವರೆದು, “ನೀವು ಭಯೋತ್ಪಾದಕ. ಬಾಂಗ್ಲಾದೇಶದಲ್ಲಿ ಜನರನ್ನು ಹತ್ಯೆ ಮಾಡಿದ್ದೀರಿ. ಇಲ್ಲಿಗೆ ಯಾಕೆ ಬಂದಿದ್ದೀರಿ?” ಎಂದು ಪ್ರಶ್ನಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಅಣು ಇಂಧನ ಸಾಗಿಸುತ್ತಿದ್ದ ರಷ್ಯಾ ವಿಮಾನಕ್ಕೆ ವಾಯುಮಾರ್ಗ ಬಂದ್ ಮಾಡಿದ ಪಾಕಿಸ್ತಾನ!
ಪ್ರತಿಭಟನಾಕಾರರು ‘ಗೋ ಬ್ಯಾಕ್’ (ಹಿಂದಿರುಗಿ ಹೋಗಿ) ಎಂದು ಘೋಷಣೆಗಳನ್ನು ಕೂಗಿದ್ದಾರೆ. ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹಾಗೂ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರಿಂದ, ಯೂನಸ್ ಅವರನ್ನು ತಕ್ಷಣವೇ ವೀಲ್‌ಚೇರ್‌ನಲ್ಲಿ ವಾಪಾಸ್ ಟರ್ಮಿನಲ್ ಒಳಗೆ ಕರೆದೊಯ್ಯಲಾಯಿತು. ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದ್ದಾರೆ ಮತ್ತು ನೂರಾರು ಜನರ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
Muhammad Yunus has been spotted at JFK airport, New york.
“You, terrorist why did you come here. You have destroyed the democracy in my country!” https://t.co/SjUMUc7WIg
— subash kumar (@Krishan10_) October 13, 2026
ಪ್ರತಿಭಟನಾಕಾರರ ಆಕ್ರೋಶ ಹಾಗೂ ಭಾರಿ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಮುಹಮ್ಮದ್ ಯೂನಸ್ ಅವರನ್ನು ತಕ್ಷಣವೇ ವೀಲ್‌ಚೇರ್‌ನಲ್ಲಿ ವಾಪಾಸ್ ಟರ್ಮಿನಲ್ ಒಳಗೆ ಕರೆದೊಯ್ಯಲಾಯಿತು. ಅವರ ಅಧಿಕಾರಾವಧಿಯಲ್ಲಿ ನಡೆದ ಹಿಂಸಾಚಾರ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳಿಗೆ ಅವರು ಹೊಣೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 2026ರ ಏಪ್ರಿಲ್‌ನಲ್ಲಿ ಬಾಂಗ್ಲಾದೇಶದಲ್ಲಿ ಚುನಾವಣೆ; ಮುಹಮ್ಮದ್ ಯೂನಸ್ ಘೋಷಣೆ
ಇದೇ ವೇಳೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹತ್ಯಾಕಾಂಡವನ್ನು ಖಂಡಿಸಿ ಭಾರತದ ಶಿಮ್ಲಾದಲ್ಲಿಯೂ ಪ್ರತಿಭಟನೆಗಳು ನಡೆದಿವೆ. ‘ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್’ ಬ್ಯಾನರ್ ಅಡಿಯಲ್ಲಿ ಸಮಾಜಮುಖಿ ಸಂಘಟನೆಗಳು ಪ್ರತಿಭಟನೆ ನಡೆಸಿ, ಮುಹಮ್ಮದ್ ಯೂನಸ್ ಅವರಿಗೆ ನೀಡಿರುವ ನೋಬೆಲ್ ಶಾಂತಿ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿವೆ. ಮುಹಮ್ಮದ್ ಯೂನಸ್ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕು ಹಾಗೂ 2006ರಲ್ಲಿ ಅವರಿಗೆ ನೀಡಲಾದ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಮರುಪರಿಶೀಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Tue, 13 October 26