AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶಕ್ಕೆ ಅಣು ಇಂಧನ ಸಾಗಿಸುತ್ತಿದ್ದ ರಷ್ಯಾ ವಿಮಾನಕ್ಕೆ ವಾಯುಮಾರ್ಗ ಬಂದ್ ಮಾಡಿದ ಪಾಕಿಸ್ತಾನ!

ಬಾಂಗ್ಲಾದೇಶವು ಪಾಕಿಸ್ತಾನದೊಂದಿಗೆ ತನ್ನ ದ್ವಿಪಕ್ಷೀಯ ಸಂಬಂಧಗಳನ್ನು ಮರುಸ್ಥಾಪಿಸಲು ಮತ್ತು ಬಲಪಡಿಸಲು ಶ್ರಮಿಸುತ್ತಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಾಂಗ್ಲಾದೇಶದ ಮೊದಲ 'ರೂಪ್‌ಪುರ್ ಅಣು ವಿದ್ಯುತ್ ಸ್ಥಾವರ'ಕ್ಕೆ ರಷ್ಯಾದಿಂದ ಅಣು ಇಂಧನ (ಯುರೇನಿಯಂ) ಹೊತ್ತು ತರುತ್ತಿದ್ದ ಸರಕು ವಿಮಾನಕ್ಕೆ ಪಾಕಿಸ್ತಾನವು ತನ್ನ ವಾಯುಮಾರ್ಗ ಬಳಸಲು ಅನುಮತಿ ನಿರಾಕರಿಸಿದೆ. ರೂಪ್‌ಪುರ್ ಅಣುಸ್ಥಾವರದ 2ನೇ ಯುನಿಟ್‌ಗೆ ಅಗತ್ಯವಿದ್ದ ಯುರೇನಿಯಂ ಇಂಧನ ಕಂತು ಸೆಪ್ಟೆಂಬರ್ 24ರಂದು ಢಾಕಾಗೆ ತಲುಪಬೇಕಿತ್ತು. ಆದರೆ, ಇಸ್ಲಾಮಾಬಾದ್ ತನ್ನ ವಾಯುಪ್ರದೇಶ ಪ್ರವೇಶಿಸಲು ತಡೆ ನೀಡಿದ್ದರಿಂದ ಈ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಬಾಂಗ್ಲಾದೇಶಕ್ಕೆ ಅಣು ಇಂಧನ ಸಾಗಿಸುತ್ತಿದ್ದ ರಷ್ಯಾ ವಿಮಾನಕ್ಕೆ ವಾಯುಮಾರ್ಗ ಬಂದ್ ಮಾಡಿದ ಪಾಕಿಸ್ತಾನ!
Rooppur Project
ಸುಷ್ಮಾ ಚಕ್ರೆ
|

Updated on: Sep 29, 2026 | 5:38 PM

Share

ಇಸ್ಲಮಾಬಾದ್, ಸೆಪ್ಟೆಂಬರ್ 29: ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಮ್ಮ ದ್ವಿಪಕ್ಷೀಯ ರಾಜತಾಂತ್ರಿಕ ಬಾಂಧವ್ಯವನ್ನು ಬಲಪಡಿಸಲು ಶ್ರಮಿಸುತ್ತಿರುವ ಮಧ್ಯೆಯೇ, ಬಾಂಗ್ಲಾದೇಶದ ‘ರೂಪ್‌ಪುರ್ ಅಣು ವಿದ್ಯುತ್ ಸ್ಥಾವರಕ್ಕೆ’ ರಷ್ಯಾದಿಂದ ಅಣು ಇಂಧನ (ಯುರೇನಿಯಂ) ಹೊತ್ತು ತರುತ್ತಿದ್ದ ವಿಮಾನಕ್ಕೆ ಪಾಕಿಸ್ತಾನವು ತನ್ನ ವಾಯುಮಾರ್ಗ ಪ್ರವೇಶಿಸಲು ಅನುಮತಿ ನಿರಾಕರಿಸಿದೆ. ಇದರಿಂದಾಗಿ ಬಾಂಗ್ಲಾದೇಶಕ್ಕೆ ತಲುಪಬೇಕಿದ್ದ ಪ್ರಮುಖ ಯುರೇನಿಯಂ ಪೂರೈಕೆ ವಿಳಂಬಗೊಂಡಿದೆ.

ದಶಕಗಳಲ್ಲೇ ಅತ್ಯಂತ ಭೀಕರ ಇಂಧನ ಹಾಗೂ ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿರುವ ಬಾಂಗ್ಲಾದೇಶಕ್ಕೆ ಈ ಅಣುಸ್ಥಾವರದ ಶೀಘ್ರ ಕಾರ್ಯಾಚರಣೆ ಅತ್ಯಂತ ನಿರ್ಣಾಯಕವಾಗಿತ್ತು. ದೇಶದ ವಿದ್ಯುತ್ ಕೊರತೆಯನ್ನು ನೀಗಿಸಲು ಆದಷ್ಟು ಬೇಗ ‘ರೂಪ್‌ಪುರ್’ ಸ್ಥಾವರದಿಂದ ವಾಣಿಜ್ಯಿಕ ವಿದ್ಯುತ್ ಉತ್ಪಾದನೆ ಆರಂಭಿಸಲು ಬಾಂಗ್ಲಾದೇಶ ಸರ್ಕಾರ ಯೋಜಿಸಿತ್ತು. ಆದರೆ, ಪಾಕಿಸ್ತಾನ ವಾಯುಮಾರ್ಗ ಬಂದ್​​ ಮಾಡಿದ್ದರಿಂದಾಗಿ ಯುರೇನಿಯಂ ಇಂಧನ ತಲುಪುವುದು ವಿಳಂಬವಾಗಿದ್ದು, ಅಣುಸ್ಥಾವರ ಕಾರ್ಯಾರಂಭಗೊಳ್ಳುವ ಕಾಲಮಿತಿಯ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಪಾಕಿಸ್ತಾನದ ಸ್ಪಷ್ಟನೆಯೇನು?:

ರಷ್ಯಾದ ವಿಮಾನಕ್ಕೆ ವಾಯುಪ್ರದೇಶ ಬಳಸಲು ಅವಕಾಶ ನೀಡದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಸ್ಪಷ್ಟನೆ ನೀಡಿರುವ ಪಾಕಿಸ್ತಾನ, ಇದೊಂದು ಕೇವಲ “ತಾಂತ್ರಿಕ ವಿಷಯ” ಎಂದು ಹೇಳಿದೆ. ಢಾಕಾದಲ್ಲಿರುವ ಪಾಕಿಸ್ತಾನ ಹೈಕಮಿಷನ್ ಇಂದು ಹೇಳಿಕೆ ಬಿಡುಗಡೆ ಮಾಡಿದ್ದು, ರಾಜತಾಂತ್ರಿಕ ವಿಮಾನಗಳ ಸಂಚಾರ ಹಾಗೂ ವಾಯುಪ್ರದೇಶ ಬಳಸುವ ಅನುಮತಿ ವಿನಂತಿಗಳನ್ನು ನಿಗದಿತ ನಾಗರಿಕ ವಿಮಾನಯಾನ ನಿಯಮಾವಳಿಗಳ ಪ್ರಕಾರವೇ ಪರಿಶೀಲಿಸಲಾಗುತ್ತದೆ ಎಂದಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ವ್ಯಾಪಾರಿಯ ಭೀಕರ ಕೊಲೆ; ತೇಲುತ್ತಿದ್ದ ಡ್ರಮ್‌ನಲ್ಲಿ ಮೃತದೇಹ ಪತ್ತೆ!

“ವರದಿಗಳ ಪ್ರಕಾರ, ಈ ವಿಷಯವು ವಿಮಾನದ ಮಾರ್ಗ ಮತ್ತು ವಾಯುಮಾರ್ಗದ ಅನುಮತಿಗೆ ಸಂಬಂಧಿಸಿದ ತಾಂತ್ರಿಕ ಹಾಗೂ ಕಾರ್ಯವಿಧಾನದ ವ್ಯವಸ್ಥೆಗಳಿಗೆ ಸಂಬಂಧಿಸಿದ್ದಾಗಿದೆ. ಸಂಬಂಧಪಟ್ಟ ವಿಮಾನಯಾನ ಅಧಿಕಾರಿಗಳ ನಡುವೆ ಸಮನ್ವಯದ ಅಗತ್ಯವಿರುವುದರಿಂದ ಕೆಲವೊಮ್ಮೆ ವಿಮಾನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಬಹುದು” ಎಂದು ಹೈಕಮಿಷನ್ ಸಮರ್ಥಿಸಿಕೊಂಡಿದೆ. ಅಲ್ಲದೆ, ಪಾಕಿಸ್ತಾನವು ಬಾಂಗ್ಲಾದೇಶದೊಂದಿಗಿನ ಬಾಂಧವ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಹೇಳಿದೆ.

ವಿಳಂಬಗೊಂಡ ಯುರೇನಿಯಂ ಸರಕು:

ಬಾಂಗ್ಲಾದೇಶದ ‘ರೂಪ್‌ಪುರ್ ಅಣು ವಿದ್ಯುತ್ ಸ್ಥಾವರ’ದ ಎರಡನೇ ಯುನಿಟ್‌ಗೆ ಅಗತ್ಯವಿದ್ದ ಯುರೇನಿಯಂ ಇಂಧನವು ಸೆಪ್ಟೆಂಬರ್ 24ರಂದು ಢಾಕಾಗೆ ತಲುಪಬೇಕಿತ್ತು. ಆದರೆ ಪಾಕಿಸ್ತಾನಿ ವಾಯುಪ್ರದೇಶದ ಅನುಮತಿ ಸಿಗದ ಕಾರಣ ಯೋಜಿತ ಸಾಗಣೆ ರದ್ದಾಗಿದೆ. ರಷ್ಯಾದ ‘ರೊಸಾಟಮ್’ ಸಂಸ್ಥೆಯು ಈಗ ಅಕ್ಟೋಬರ್ ಮೊದಲ ವಾರದಲ್ಲಿ ಯುರೇನಿಯಂ ಬಾಂಗ್ಲಾದೇಶ ತಲುಪುವಂತೆ ನೂತನ ವೇಳಾಪಟ್ಟಿಯನ್ನು ಪ್ರಸ್ತಾಪಿಸಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ತಾಲಿಬಾನ್​ನಿಂದ ಭೀಕರ ಬಾಂಬ್ ಸ್ಫೋಟ; 12 ಜನ ಸಾವು, 30 ಮಂದಿಗೆ ಗಾಯ

ಬಾಂಗ್ಲಾದೇಶದ ಪಬ್ನಾ ಜಿಲ್ಲೆಯ ಈಶ್ವರ್ದಿ ಉಪಜಿಲೆಯ ಪದ್ಮಾ ನದಿ ದಂಡೆಯ ಮೇಲಿರುವ ‘ರೂಪ್‌ಪುರ್’ ಬಾಂಗ್ಲಾದೇಶದ ಚೊಚ್ಚಲ ಅಣು ವಿದ್ಯುತ್ ಯೋಜನೆಯಾಗಿದೆ. ರಷ್ಯಾದ ‘ರೊಸಾಟಮ್’ ತಾಂತ್ರಿಕ ನೆರವಿನೊಂದಿಗೆ ನಿರ್ಮಿಸಲಾಗುತ್ತಿರುವ ಈ ಯೋಜನೆಯು ತಲಾ 1,200 ಮೆಗಾವ್ಯಾಟ್ ಸಾಮರ್ಥ್ಯದ ಎರಡು ‘VVER-1200’ ರಿಯಾಕ್ಟರ್‌ಗಳನ್ನು ಹೊಂದಿದ್ದು, ಒಟ್ಟು 2,400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ