ಪ್ರತ್ಯೇಕ ಘಟನೆ: ಕೊಡಗಿನಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಬಲಿ; ಹಾಸನದಲ್ಲಿ ನಾಲ್ವರ ಮೇಲೆ ಚಿರತೆ ದಾಳಿ
ಕರ್ನಾಟಕದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚುತ್ತಿವೆ. ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಬಲಿಯಾಗಿದ್ದಾರೆ. ಮತ್ತೊಂದೆಡೆ ಹಾಸನದಲ್ಲಿ ಚಿರತೆ ದಾಳಿಗೆ ನಾಲ್ವರು ಗಾಯಗೊಂಡಿದ್ದಾರೆ. ಅರಣ್ಯ ಇಲಾಖೆ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದು, ಕಾಡುಪ್ರಾಣಿಗಳ ಉಪಟಳದಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
- Gopal AS
- Updated on: Jun 5, 2026
- 3:20 pm
ಕೊಡಗು ಭೀಕರ ಪ್ರವಾಹ ಸಂತ್ರಸ್ತರಿಗೆ 7 ವರ್ಷಗಳಾದರೂ ಸಿಗದ ಪುನರ್ವಸತಿ ಆಸರೆ: ಮಳೆಗಾಲದಲ್ಲಿ ಪ್ರವಾಹದ ಭೀತಿ
ಕೊಡಗಿನ ಕುಶಾಲನಗರ ತಾಲ್ಲೂಕಿನಲ್ಲಿ ಪ್ರವಾಹ ಸಂತ್ರಸ್ತರ ಪುನರ್ವಸತಿಗಾಗಿ ಅಭ್ಯತ್ ಮಂಗಳದಲ್ಲಿ 7 ಎಕರೆ ಜಾಗ ಗುರುತಿಸಿ 7 ವರ್ಷಗಳಾಗಿವೆ. ಆದರೂ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ 140ಕ್ಕೂ ಹೆಚ್ಚು ಕುಟುಂಬಗಳು ಇಂದಿಗೂ ಪ್ಲಾಸ್ಟಿಕ್ ಶೆಡ್‌ಗಳಲ್ಲೇ ಜೀವಭಯದಲ್ಲಿ ಬದುಕುವಂತಾಗಿದೆ. ಅಷ್ಟೇ ಅಲ್ಲದೆ, ಹಾಗೋಹೀಗೋ ಬದುಕುತ್ತಿರುವವರಿಗೂ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಲಾಗುತ್ತಿದೆ.
- Gopal AS
- Updated on: Jun 3, 2026
- 2:16 pm
ತಿರುವಿನಲ್ಲಿ ವೇಗವಾಗಿ ಬಂದ ಗೂಡ್ಸ್ ಆಟೋ ಜಸ್ಟ್ ಮಿಸ್!
ಮಡಿಕೇರಿ ಬಳಿಯ ಬೋಯಿಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಭೀಕರ ರಸ್ತೆ ಅಪಘಾತವೊಂದು ಜಸ್ಟ್ ಮಿಸ್ ಆಗಿದ್ದು, ಭಾರೀ ಅನಾಹುತ ತಪ್ಪಿದೆ. ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಗೂಡ್ಸ್ ಆಟೋವೊಂದು ಅತಿ ವೇಗವಾಗಿ ಬಂದಿದೆ. ಈ ವೇಳೆ ಎದುರಿಗಿದ್ದ ಕಾರಿಗೆ ಅಪ್ಪಳಿಸುವುದನ್ನು ತಪ್ಪಿಸಲು ಆಟೋ ಚಾಲಕ ವಾಹನವನ್ನು ತಕ್ಷಣವೇ ಬಲಬದಿಗೆ ತಿರುಗಿಸಿದ್ದಾನೆ. ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್‌ಗೆ ಆಟೋ ಡಿಕ್ಕಿಯಾಗುವ ಸಾಧ್ಯತೆ ಇತ್ತು. ಆದರೆ, ಕೆಎಸ್‌ಆರ್‌ಟಿಸಿ ಚಾಲಕ ತಕ್ಷಣವೇ ಬ್ರೇಕ್ ಹಾಕಿ ಬಸ್ ಪಕ್ಕಕ್ಕೆ ಸರಿಸಿದ್ದರಿಂದ ದೊಡ್ಡ ದುರಂತ ತಪ್ಪಿದೆ. ಈ ಇಡೀ ರೋಮಾಂಚನಕಾರಿ ಅಪಘಾತದ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
- Gopal AS
- Updated on: May 31, 2026
- 12:54 pm
ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ!
ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಹಾಗೂ 'ಮಾರ್ತಾಂಡ' ಆನೆ ಬಲಿಯಾಗಿದೆ. ಶಿಬಿರದಲ್ಲಿ ಆನೆಗಳ ಸಂಖ್ಯೆ ಮಿತಿಗೊಳಿಸಲು ಮತ್ತು ಪ್ರವಾಸಿಗರಿಂದ ದೂರವಿಡಲು 2019ರಲ್ಲೇ ಹೈಕೋರ್ಟ್ ತಜ್ಞರ ಸಮಿತಿ ನೀಡಿದ್ದ ನೆಗೆಟಿವ್ ವರದಿ ಹಾಗೂ ಪ್ರಮುಖ ಶಿಫಾರಸುಗಳನ್ನು ಅರಣ್ಯ ಇಲಾಖೆ ಸಂಪೂರ್ಣ ನಿರ್ಲಕ್ಷಿಸಿದ್ದೇ ಈ ದಾರುಣ ದುರಂತಕ್ಕೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.
- Gopal AS
- Updated on: May 21, 2026
- 6:15 am
ಎರಡೆರಡು ಬಾರಿ ಸೆರೆ, ಮನೆಗಳ ಬಾಗಿಲು ಮುರಿದು ಪುಂಡಾಟ: ಕಾದಾಟದಲ್ಲಿ ಮೃತಪಟ್ಟ ಮಾರ್ತಾಂಡ ಆನೆಗಿತ್ತು ಭಯಂಕರ ಇತಿಹಾಸ
ಮಡಿಕೇರಿಯ ದುಬಾರೆ ಆನೆ ಶಿಬಿರದಲ್ಲಿ, ಕಂಜನ್ ಆನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಮೇ 19ರಂದು ಸಾವನ್ನಪ್ಪಿದ ಮಾರ್ತಾಂಡ ಆನೆಯನ್ನು ಮೂರು ವರ್ಷಗಳ ಹಿಂದೆ ಇದೇ ದಿನ ಸೆರೆಹಿಡಿಯಲಾಗಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದು, ಘಟನೆ ಬೆನ್ನಲ್ಲೇ ಪ್ರವಾಸಿ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ.
- Gopal AS
- Updated on: May 19, 2026
- 2:41 pm
ಕಾದಾಟದ ವೇಳೆ ಗಂಭೀರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಸಾವು
ಕುಶಾಲನಗರದ ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾದಾಟದಿಂದ ಗಂಭೀರ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವನ್ನಪ್ಪಿದೆ. ಕಾವೇರಿ ನದಿಯಲ್ಲಿ ಸ್ನಾನಕ್ಕೆ ಕರೆದೊಯ್ದಾಗ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಘರ್ಷಣೆ ನಡೆದಿತ್ತು. ಗಾಯಾಳು ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಅದಕ್ಕೆ ಸ್ಪಂದಿಸದೆ ಕೊನೆಯುಸಿರು ಎಳೆದಿರೋದಾಗಿ ಡಿಎಫ್ಒ ಮಾಹಿತಿ ನೀಡಿದ್ದಾರೆ. ಆನೆಗಳ ಘರ್ಷಣೆ ವೇಳೆ ಸಿಲುಕಿ ಪ್ರವಾಸಿ ಮಹಿಳೆಯೋರ್ವರು ಕೂಡ ನಿನ್ನೆ ಮೃತಪಟ್ಟಿದ್ದರು.
- Gopal AS
- Updated on: May 20, 2026
- 12:40 pm
ದುಬಾರೆ ಆನೆ ಶಿಬಿರ 2 ದಿನ ಬಂದ್: ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ
ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾಳಗಕ್ಕೆ ಸಿಲುಕಿ ಚೆನ್ನೈ ಮೂಲದ ಮಹಿಳೆ ತುಳಸಿ ಸಾವನ್ನಪ್ಪಿದ ಘಟನೆ ನಡೆದ ಹಿನ್ನೆಲೆಯಲ್ಲಿ ನಂಜರಾಯಪಟ್ಟಣದಲ್ಲಿರುವ ಶಿಬಿರವನ್ನು ಎರಡು ದಿನಗಳ ಕಾಲ ಬಂದ್ ಮಾಡಲಾಗಿದ್ದು, ಪ್ರವಾಸಿಗರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಆನೆ ಶಿಬಿರದಲ್ಲಿ ಪ್ರಸ್ತುತ ನಿರ್ಜನ ವಾತಾವರಣ ನಿರ್ಮಾಣವಾಗಿದೆ.
- Gopal AS
- Updated on: May 19, 2026
- 12:37 pm
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ತುಳಸಿ ಆನೆಗಳ ಕಾದಾಟಕ್ಕೆ ಬಲಿಯಾಗಿದ್ದಾರೆ. ಮದವೇರಿದ ಆನೆಗಳ ಕಾಳಗದ ವೇಳೆ ಆನೆಯೊಂದು ದಂಪತಿಗಳ ಮೇಲೆ ಬಿದ್ದಾಗ ತುಳಸಿ ಗಂಭೀರ ಗಾಯಗೊಂಡರು. ಈ ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲಾಗಿದೆ.
- Gopal AS
- Updated on: May 18, 2026
- 10:33 pm
ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು
ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಚೆನ್ನೈ ಮೂಲದ 33 ವರ್ಷದ ಮಹಿಳೆ ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದ ವೇಳೆ, ಕಾವೇರಿ ನದಿಯಲ್ಲಿ ಆನೆಗಳು ಕಾದಾಟ ನಡೆಸಿವೆ. ಈ ಸಂದರ್ಭ ಆನೆ ಬಿದ್ದ ಪರಿಣಾಮ ಮಹಿಳೆ ಅಡಿಗೆ ಸಿಲುಕಿ ಗಂಭೀರ ಗಾಯಗೊಂಡು ನಿಧನರಾಗಿದ್ದಾರೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
- Gopal AS
- Updated on: May 18, 2026
- 3:57 pm
ಟಿಬೆಟನ್ ನಿರಾಶ್ರಿತರ ‘ಹಸಿರು’ ಸಾಧನೆಗೆ ಮೋದಿ ಮೆಚ್ಚುಗೆ! ಎಕೊ ನಳಂದ ಅರಣ್ಯ ಸಂಸ್ಥಾಪಕರ ಹರ್ಷ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಕೊಡಗಿನ ಗಡಿಯಂಚಿನ ಬೈಲುಕುಪ್ಪೆಯ ಟಿಬೆಟನ್ ಖಾಸಗಿ ಅರಣ್ಯವನ್ನು ಶ್ಲಾಘಿಸಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟನ್ ಕ್ಯಾಂಪ್‌ನಲ್ಲಿರುವ 'ಎಕೋ ನಳಂದ' ಅರಣ್ಯದ ಸಂಸ್ಥಾಪಕ ಕರ್ಮ ಸಮ್ತೆನ್ಲಿಂಗ್ಪ ರಿನ್ಪೊಚೆ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
- Gopal AS
- Updated on: Apr 28, 2026
- 2:53 pm
ಕೊಡಗು: ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ; ಜನಗಣತಿ ಒತ್ತಡಕ್ಕೊಳಗಾಗಿ ಹೀಗೆ ಮಾಡಿಕೊಂಡ್ರಾ?
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ಶಿಕ್ಷಕಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿದೆ. ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನುತ್ತಿದ್ದರೆ, ಜನಗಣತಿ ಕರ್ತವ್ಯದ ಒತ್ತಡದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸದ್ಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Gopal AS
- Updated on: Apr 26, 2026
- 9:57 pm
ಅನಾಥಾಶ್ರಮದಲ್ಲಿ ಮದ್ವೆ ಸಂಭ್ರಮ: ಅನಾಥೆ ಬಾಳಲ್ಲಿ ಹೊಸ ಬೆಳಕು, ತುಂಬು ಮನೆ ಸೇರಿದ ಮೈನಾ
ಮಡಿಕೇರಿಯ ತನಲ್ ಆಶ್ರಮದಲ್ಲಿದ್ದ ಯುವತಿಗೆ ಹೊಸ ಜೀವನದ ಬಾಗಿಲು ತೆರೆದಿದೆ. ಕೊಡವ ಸಂಪ್ರದಾಯದಂತೆ ವಿವಾಹ ನೆರವೇರಿದ್ದು, ತುಂಬು ಕುಟುಂಬ ಸೇರಿದ್ದಾರೆ. ಆಶ್ರಮದ ವ್ಯವಸ್ಥಾಪಕ ಮೊಹಮ್ಮದ್ ತಂದೆಯ ಸ್ಥಾನದಲ್ಲಿ ನಿಂತು ಧಾರೆ ಎರೆದಿದ್ದು ವಿಶೇಷ. ಈ ಅಪರೂಪ ವಿವಾಹದ ಸುಂದರ ಫೋಟೋಗಳು ಇಲ್ಲಿವೆ ನೋಡಿ.
- Gopal AS
- Updated on: Apr 24, 2026
- 3:29 pm