AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೃಥ್ವಿಶಂಕರ

ಪೃಥ್ವಿಶಂಕರ

Senior Sub Editor - TV9 Kannada

pruthveesha.chandregowda@tv9.com

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬೆನ್ ಸ್ಟೋಕ್ಸ್​ಗೆ ಗೇಟ್​ ಪಾಸ್; 4 ವರ್ಷಗಳ ಬಳಿಕ ಜೋ ರೂಟ್​ಗೆ ಟೆಸ್ಟ್ ನಾಯಕತ್ವ

ಬೆನ್ ಸ್ಟೋಕ್ಸ್​ಗೆ ಗೇಟ್​ ಪಾಸ್; 4 ವರ್ಷಗಳ ಬಳಿಕ ಜೋ ರೂಟ್​ಗೆ ಟೆಸ್ಟ್ ನಾಯಕತ್ವ

Eng vs NZ 2nd Test: ಇಂಗ್ಲೆಂಡ್-ನ್ಯೂಜಿಲೆಂಡ್ ಎರಡನೇ ಟೆಸ್ಟ್‌ಗೆ ಬೆನ್ ಸ್ಟೋಕ್ಸ್ ಅಶಿಸ್ತಿನ ಕಾರಣದಿಂದ ಹೊರಬಿದ್ದಿದ್ದಾರೆ. ಕ್ಲಬ್‌ನಲ್ಲಿನ ಘಟನೆ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿದೆ. ಜೋ ರೂಟ್ 4 ವರ್ಷಗಳ ನಂತರ ಮತ್ತೆ ಇಂಗ್ಲೆಂಡ್ ನಾಯಕತ್ವ ವಹಿಸಲಿದ್ದಾರೆ. ಜೋಫ್ರಾ ಆರ್ಚರ್ ಮತ್ತು ಜೋರ್ಡಾನ್ ಕಾಕ್ಸ್ ತಂಡಕ್ಕೆ ಸೇರಿದ್ದು, ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಬದಲಿಗೆ ಆಡಲಿದ್ದಾರೆ. ಇಸಿಬಿ ಇಡೀ ಘಟನೆಯ ತನಿಖೆ ನಡೆಸುತ್ತಿದೆ.

ನೆರೆಯ ದೇಶದ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ ಭಾರತ; ಸ್ವಾತಂತ್ರ್ಯ ದಿನದಂದು ಮೊದಲ ಪಂದ್ಯ

ನೆರೆಯ ದೇಶದ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ ಭಾರತ; ಸ್ವಾತಂತ್ರ್ಯ ದಿನದಂದು ಮೊದಲ ಪಂದ್ಯ

India vs Sri Lanka Test Series 2026: 2026ರಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 15ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ನಿರ್ಣಾಯಕವಾಗಿದೆ. ಇದರೊಂದಿಗೆ ಟಿ20 ಸರಣಿಯೂ ನಿರೀಕ್ಷಿಸಲಾಗಿದೆ. ಒಂಬತ್ತು ವರ್ಷಗಳ ನಂತರ ಭಾರತ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಯುವ ಪಡೆ ಪ್ರದರ್ಶನ ನೀಡಲಿದೆ. ಗಾಲೆ ಮತ್ತು ಕೊಲಂಬೊ ಮೈದಾನಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಟಿ20 ವಿಶ್ವಕಪ್​ನಲ್ಲಿ ಭಾರತ- ಪಾಕ್ ನಡುವೆ ಫೈಟ್; ಹೇಗಿದೆ ಮುಖಾಮುಖಿ ದಾಖಲೆ?

ಟಿ20 ವಿಶ್ವಕಪ್​ನಲ್ಲಿ ಭಾರತ- ಪಾಕ್ ನಡುವೆ ಫೈಟ್; ಹೇಗಿದೆ ಮುಖಾಮುಖಿ ದಾಖಲೆ?

India vs Pakistan Women's T20 World Cup 2026: 2026ರ ಮಹಿಳಾ ಟಿ20 ವಿಶ್ವಕಪ್ ಜೂನ್ 12ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದ್ದು, ಜೂನ್ 14ರಂದು ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದು ಟೂರ್ನಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ. ಮುಖಾಮುಖಿ ದಾಖಲೆಗಳಲ್ಲಿ ಭಾರತ ಪಾಕಿಸ್ತಾನದ ಮೇಲೆ ಸ್ಪಷ್ಟ ಪ್ರಾಬಲ್ಯ ಸಾಧಿಸಿದೆ – 16 ಪಂದ್ಯಗಳಲ್ಲಿ 13ರಲ್ಲಿ ಭಾರತ ಗೆಲುವು ಸಾಧಿಸಿದೆ. ಟಿ20 ವಿಶ್ವಕಪ್‌ನಲ್ಲಿ 8 ಪಂದ್ಯಗಳಲ್ಲಿ 6ರಲ್ಲಿ ಭಾರತ ಮೇಲುಗೈ ಸಾಧಿಸಿದ್ದು, 2020ರಲ್ಲಿ ರನ್ನರ್ ಅಪ್ ಆಗಿತ್ತು.

ರಿಚಾ ಹೋರಾಟ ವ್ಯರ್ಥ; 3 ಎಸೆತಗಳಲ್ಲಿ 6 ರನ್ ಬಾರಿಸದೆ ಸೋತ ಟೀಂ ಇಂಡಿಯಾ

ರಿಚಾ ಹೋರಾಟ ವ್ಯರ್ಥ; 3 ಎಸೆತಗಳಲ್ಲಿ 6 ರನ್ ಬಾರಿಸದೆ ಸೋತ ಟೀಂ ಇಂಡಿಯಾ

Women's T20 World Cup 2026 Warm-up: 2026ರ ಮಹಿಳಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ 5 ರನ್‌ಗಳ ರೋಚಕ ಸೋಲನುಭವಿಸಿದೆ. ಇಂಗ್ಲೆಂಡ್ ನೀಡಿದ 172 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ರಿಚಾ ಘೋಷ್ ಅವರ 68 ರನ್‌ಗಳ ಹೋರಾಟದ ಹೊರತಾಗಿಯೂ ಗೆಲುವಿನ ದಡ ಮುಟ್ಟಲು ವಿಫಲವಾಯಿತು. ಕೊನೆಯ ಓವರ್‌ನಲ್ಲಿ ರಿಚಾ ವಿಕೆಟ್ ಪತನದೊಂದಿಗೆ ತಂಡ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು

ಆಡುವ ಬಯಕೆ ಇದೆ, ಆದರೆ..?; ಟೀಂ ಇಂಡಿಯಾದಲ್ಲಿ ಆಡುವ ಬಗ್ಗೆ ಮನದಾಳ ತೆರೆದಿಟ್ಟ ಭುವನೇಶ್ವರ್

ಆಡುವ ಬಯಕೆ ಇದೆ, ಆದರೆ..?; ಟೀಂ ಇಂಡಿಯಾದಲ್ಲಿ ಆಡುವ ಬಗ್ಗೆ ಮನದಾಳ ತೆರೆದಿಟ್ಟ ಭುವನೇಶ್ವರ್

Bhuvneshwar Kumar comeback: ಇತ್ತೀಚಿನ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 28 ವಿಕೆಟ್‌ ಪಡೆದ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾ ಕಮ್‌ಬ್ಯಾಕ್ ಬಗ್ಗೆ ಆಸಕ್ತಿ ಹೆಚ್ಚಿಸಿದ್ದಾರೆ. ಸ್ವಿಂಗ್ ಬೌಲರ್ ಭುವಿ, ಇತ್ತೀಚಿನ ಸರಣಿಗಳಿಗೆ ಆಯ್ಕೆಯಾಗದಿದ್ದರೂ, ಮೌನ ಮುರಿದು ನೀಲಿ ಜೆರ್ಸಿ ಧರಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಆಯ್ಕೆದಾರರ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದಿದ್ದಾರೆ.

ಚೊಚ್ಚಲ ಟೆಸ್ಟ್​ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್

ಚೊಚ್ಚಲ ಟೆಸ್ಟ್​ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್

Manav Suthar: ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಅಫ್ಘಾನಿಸ್ತಾನ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಈಗ ಇಂಗ್ಲೆಂಡ್‌ನ ವಾರ್ವಿಕ್‌ಷೈರ್ ಕೌಂಟಿ ಕ್ಲಬ್ ಸೇರಲಿದ್ದಾರೆ. 23 ವರ್ಷದ ಈ ಎಡಗೈ ಸ್ಪಿನ್ನರ್ ಕೌಂಟಿ ಚಾಂಪಿಯನ್‌ಶಿಪ್‌ನ ಎರಡು ಪ್ರಮುಖ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್ ಪಿಚ್‌ಗಳಲ್ಲಿ ತಮ್ಮ ಮಾಂತ್ರಿಕ ಬೌಲಿಂಗ್ ಪ್ರದರ್ಶಿಸಲು ಸುತಾರ್ ಉತ್ಸುಕರಾಗಿದ್ದಾರೆ.

ತ್ರಿಕೋನ ಸರಣಿಯ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ; ಎದುರಾಳಿ ಯಾರು? ಪಂದ್ಯ ಎಷ್ಟು ಗಂಟೆಗೆ ಆರಂಭ?

ತ್ರಿಕೋನ ಸರಣಿಯ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ; ಎದುರಾಳಿ ಯಾರು? ಪಂದ್ಯ ಎಷ್ಟು ಗಂಟೆಗೆ ಆರಂಭ?

India A vs Afghanistan A: ಭಾರತ ಎ ತಂಡವು ಶ್ರೀಲಂಕಾ ಪ್ರವಾಸದ ತ್ರಿಕೋನ ಸರಣಿಯಲ್ಲಿ ಜೂನ್ 11 ರಂದು ಅಫ್ಘಾನಿಸ್ತಾನ ಎ ವಿರುದ್ಧ ತನ್ನ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಡಂಬುಲ್ಲಾದಲ್ಲಿ ನಡೆಯುವ ಈ ಪಂದ್ಯ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಆತ್ಮವಿಶ್ವಾಸದಲ್ಲಿರುವ ತಿಲಕ್ ವರ್ಮಾ ನಾಯಕತ್ವದ ಭಾರತ ಎ, ಸತತ ಎರಡನೇ ಗೆಲುವಿನ ಗುರಿಯಲ್ಲಿದೆ. ಸೋನಿ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರ ವೀಕ್ಷಿಸಿ.

ICC Test Rankings: ಟಾಪ್ 10 ರೊಳಗೆ ಇಬ್ಬರು ಭಾರತೀಯರು; ಅಗ್ರಸ್ಥಾನದಲ್ಲಿ ಉಳಿದ ಬುಮ್ರಾ

ICC Test Rankings: ಟಾಪ್ 10 ರೊಳಗೆ ಇಬ್ಬರು ಭಾರತೀಯರು; ಅಗ್ರಸ್ಥಾನದಲ್ಲಿ ಉಳಿದ ಬುಮ್ರಾ

ICC Test Rankings: ಐಸಿಸಿ ಬಿಡುಗಡೆ ಮಾಡಿದ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಶುಭ್​ಮನ್ ಗಿಲ್ 8ನೇ ಸ್ಥಾನಕ್ಕೆ ಏರಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಶತಕದ ನೆರವಿನಿಂದ ಗಿಲ್ ಟಾಪ್ 10 ಪ್ರವೇಶಿಸಿದ್ದಾರೆ. ಯಶಸ್ವಿ ಜೈಸ್ವಾಲ್ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಸ್ಪ್ರೀತ್ ಬುಮ್ರಾ ನಂ.1 ಟೆಸ್ಟ್ ಬೌಲರ್ ಆಗಿ ಮುಂದುವರಿದಿದ್ದಾರೆ. ರಿಷಭ್ ಪಂತ್ 12ನೇ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ 34ನೇ ಸ್ಥಾನದಲ್ಲಿದ್ದಾರೆ. ಹ್ಯಾರಿ ಬ್ರೂಕ್ ಟೆಸ್ಟ್ ಬ್ಯಾಟ್ಸ್‌ಮನ್ ನಂ.1 ಸ್ಥಾನಕ್ಕೇರಿದ್ದಾರೆ.

IND vs AFG: ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್..!

IND vs AFG: ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್..!

Hardik Pandya Ruled Out Due to Injury: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಜೂನ್ 13ರಿಂದ ಆರಂಭವಾಗಲಿರುವ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಹೊರಗುಳಿದಿದ್ದಾರೆ. ಕಾಲು ಉಳುಕಿರುವ ಪಾಂಡ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ರಿಹ್ಯಾಬ್ ಪಡೆಯಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯ ನಂತರ ಇದು ಭಾರತಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಮೂರು ಪಂದ್ಯಗಳ ಸರಣಿ ಧರ್ಮಶಾಲಾ, ಲಕ್ನೋ ಮತ್ತು ಚೆನ್ನೈನಲ್ಲಿ ನಡೆಯಲಿದೆ.

Women’s T20 World Cup: ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ?

Women’s T20 World Cup: ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ?

Women's T20 World Cup 2026: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸಮೀಪಿಸುತ್ತಿದೆ. ಈ ಪ್ರತಿಷ್ಠಿತ ಟೂರ್ನಿ ಆರಂಭಕ್ಕೂ ಮುನ್ನ, ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಫೈನಲ್‌ಗಳನ್ನು ಆಡಿದ ತಂಡಗಳ ಬಗ್ಗೆ ತಿಳಿಯೋಣ. ಆಸ್ಟ್ರೇಲಿಯಾ ದಾಖಲೆಯ 7 ಬಾರಿ ಫೈನಲ್ ತಲುಪಿ 6 ಪ್ರಶಸ್ತಿ ಗೆದ್ದಿದ್ದರೆ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಭಾರತದಂತಹ ತಂಡಗಳ ಫೈನಲ್ ಸಾಧನೆ ಹಾಗೂ 2026ರ ವಿಶ್ವಕಪ್ ಗುರಿಯನ್ನು ಈ ಲೇಖನ ವಿವರಿಸುತ್ತದೆ.

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ

World Yogasana Championship 2026: ಅಹಮದಾಬಾದ್‌ನ ಉದ್ಘಾಟನಾ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಭಾರತ 102 ಚಿನ್ನ ಸೇರಿದಂತೆ 114 ಪದಕಗಳೊಂದಿಗೆ ಪ್ರಾಬಲ್ಯ ಸಾಧಿಸಿದೆ. 79 ದೇಶಗಳ ಭಾಗವಹಿಸುವಿಕೆ ಕಂಡ ಈ ಚಾಂಪಿಯನ್‌ಶಿಪ್, ಯೋಗಾಸನವನ್ನು ಜಾಗತಿಕ ಸ್ಪರ್ಧಾತ್ಮಕ ಕ್ರೀಡೆಯಾಗಿ ಬೆಳೆಸುವಲ್ಲಿ ಮತ್ತು ಒಲಿಂಪಿಕ್ಸ್‌ಗೆ ಕೊಂಡೊಯ್ಯುವಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ. ಭಾರತದ ಸಾಧನೆ ಗಮನಾರ್ಹ.

IND vs ENG: ಬದಲಾದ ಸಮಯದಲ್ಲಿ ಆರಂಭವಾಗಲಿದೆ ಭಾರತ- ಇಂಗ್ಲೆಂಡ್ ನಡುವಿನ ಟಿ20 ಸರಣಿ

IND vs ENG: ಬದಲಾದ ಸಮಯದಲ್ಲಿ ಆರಂಭವಾಗಲಿದೆ ಭಾರತ- ಇಂಗ್ಲೆಂಡ್ ನಡುವಿನ ಟಿ20 ಸರಣಿ

India vs England T20: ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಹುನಿರೀಕ್ಷಿತ ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಲಿದ್ದಾರೆ. ಈ ಸರಣಿಯ ಪಂದ್ಯಗಳ ಆರಂಭಿಕ ಸಮಯವನ್ನು ಬದಲಾಯಿಸಲಾಗಿದೆ; ಈಗ ಕೆಲವು ಪಂದ್ಯಗಳು ರಾತ್ರಿ 10 ಗಂಟೆಗೆ, ಇನ್ನು ಕೆಲವು ರಾತ್ರಿ 7 ಗಂಟೆಗೆ ಶುರುವಾಗಲಿವೆ. ತಂಡದ ವಿವರಗಳು ಹಾಗೂ ಸಂಪೂರ್ಣ ವೇಳಾಪಟ್ಟಿಯನ್ನು ಲೇಖನದಲ್ಲಿ ಪರಿಶೀಲಿಸಿ.