AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿಕೋನ ಸರಣಿಯ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ; ಎದುರಾಳಿ ಯಾರು? ಪಂದ್ಯ ಎಷ್ಟು ಗಂಟೆಗೆ ಆರಂಭ?

India A vs Afghanistan A: ಭಾರತ ಎ ತಂಡವು ಶ್ರೀಲಂಕಾ ಪ್ರವಾಸದ ತ್ರಿಕೋನ ಸರಣಿಯಲ್ಲಿ ಜೂನ್ 11 ರಂದು ಅಫ್ಘಾನಿಸ್ತಾನ ಎ ವಿರುದ್ಧ ತನ್ನ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಡಂಬುಲ್ಲಾದಲ್ಲಿ ನಡೆಯುವ ಈ ಪಂದ್ಯ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಆತ್ಮವಿಶ್ವಾಸದಲ್ಲಿರುವ ತಿಲಕ್ ವರ್ಮಾ ನಾಯಕತ್ವದ ಭಾರತ ಎ, ಸತತ ಎರಡನೇ ಗೆಲುವಿನ ಗುರಿಯಲ್ಲಿದೆ. ಸೋನಿ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರ ವೀಕ್ಷಿಸಿ.

ತ್ರಿಕೋನ ಸರಣಿಯ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ; ಎದುರಾಳಿ ಯಾರು? ಪಂದ್ಯ ಎಷ್ಟು ಗಂಟೆಗೆ ಆರಂಭ?
India A
ಪೃಥ್ವಿಶಂಕರ
|

Updated on:Jun 10, 2026 | 5:20 PM

Share

ಏಕದಿನ ತ್ರಿಕೋನ ಸರಣಿಗಾಗಿ (Tri-Series) ಶ್ರೀಲಂಕಾ ಪ್ರವಾಸ ಮಾಡಿರುವ ಭಾರತ ಎ ತಂಡ ಆಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ ತಂಡವನ್ನು ಮಣಿಸಿ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಜೂನ್ 9 ರಂದು ಡಂಬುಲ್ಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ 8 ರನ್​ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಎ ತಂಡ ರುತುರಾಜ್ ಗಾಯಕ್ವಾಡ್ ಅವರ ಶತಕ ಹಾಗೂ ತಿಲಕ್ ವರ್ಮಾ ಅವರ ಅರ್ಧಶತಕದ ನೆರವಿನಿಂದ 277 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೊನೆಯಲ್ಲಿ ಎಡವಿ, ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿತು. ಇದೀಗ ಭಾರತ ಎ ತಂಡ ತನ್ನ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ತಿಲಕ್ ವರ್ಮಾ ಪಡೆಗೆ ಅಫ್ಘಾನಿಸ್ತಾನ ಎ (India A vs Afghanistan A) ತಂಡ ಎದುರಾಗುತ್ತಿದೆ.

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಜೂನ್ 11 ರಂದು ನಡೆಯಲಿದೆ.

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ರಂಗಿರಿ ಡಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣ, ದಂಬುಲ್ಲಾದಲ್ಲಿ ನಡೆಯಲಿದೆ.

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.

ಉಭಯ ತಂಡಗಳು

ಭಾರತ ಎ ತಂಡ: ಪ್ರಭ್ಸಿಮ್ರಾನ್ ಸಿಂಗ್(ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ(ನಾಯಕ), ಆಯುಷ್ ಬಡೋನಿ, ಸೂರ್ಯಾಂಶ್ ಶೆಡ್ಗೆ, ಅನುಕೂಲ್ ರಾಯ್, ಅನ್ಶುಲ್ ಕಾಂಬೋಜ್, ಅರ್ಷದ್ ಖಾನ್, ವಿಪ್ರಜ್ ನಿಗಮ್, ಯಶ್ ಠಾಕೂರ್, ಯುದ್ಧವೀರ್ ಸಿಂಗ್ ಚರಕ್, ಕುಮಾರ್ ಕುಶಾಗ್ರಾ, ನಿಶಾಂತ್ ಸಿಂಧು.

ಅಫ್ಘಾನಿಸ್ತಾನ ಎ ತಂಡ: ಇಮ್ರಾನ್ ಮಿರ್(ನಾಯಕ), ನೂರ್ ಉಲ್ ರೆಹಮಾನ್(ವಿಕೆಟ್ ಕೀಪರ್), ಹಸನ್ ಐಸಾಖಿಲ್, ಬಹಿರ್ ಶಾ, ಇಜಾಜ್ ಅಹ್ಮದ್ ಅಹ್ಮದ್ಝೈ, ಫರ್ಮಾನುಲ್ಲಾ ಸಫಿ, ಶಮ್ಸ್ ಉರ್ ರೆಹಮಾನ್, ಖಲೀಲ್ ಗುರ್ಬಾಜ್, ಜಹೀರ್ ಖಾನ್, ಫರಿದೂನ್ ದಾವುದ್ಝೈ, ಮೊಹಮ್ಮದ್ ಇಬ್ರಾಹಿಂ, ಅಬ್ದುಲ್ಲಾ ಅಹ್ಮದ್ಝೈ, ಖಾಲಿದ್ ತನಿವಾಲ್, ಇಶಾಕ್ ರಹಿಮಿ, ಫೈಸಲ್ ಖಾನ್ ಅಹ್ಮದ್ಝೈ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Wed, 10 June 26

Follow Us
ಖಾಲಿ ಸೈಟ್​ಗಳಲ್ಲಿ 5 ವರ್ಷದ ಒಳಗೆ ಕಟ್ಟಡ ಕಟ್ಟಲೇಬೇಕು: ಸಿಎಂ ಖಡಕ್ ಸೂಚನೆ
ಖಾಲಿ ಸೈಟ್​ಗಳಲ್ಲಿ 5 ವರ್ಷದ ಒಳಗೆ ಕಟ್ಟಡ ಕಟ್ಟಲೇಬೇಕು: ಸಿಎಂ ಖಡಕ್ ಸೂಚನೆ
‘ಪ್ರಜ್ವಲ್​​ಗೆ ಜಿಮ್ ಟ್ರೇನರ್ ಕೊಟ್ಟಿದ್ವಿ, ಆದರೂ ಅಚಿವ್​ ಮಾಡಿಲ್ಲ’
‘ಪ್ರಜ್ವಲ್​​ಗೆ ಜಿಮ್ ಟ್ರೇನರ್ ಕೊಟ್ಟಿದ್ವಿ, ಆದರೂ ಅಚಿವ್​ ಮಾಡಿಲ್ಲ’
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ