Auto Tips: ನೀವು ಕೆಂಪು ಬಣ್ಣದ ಕಾರು ಖರೀದಿಸುವ ಪ್ಲ್ಯಾನ್​ನಲ್ಲಿದ್ದರೆ ತಪ್ಪದೆ ಈ ಸ್ಟೋರಿ ಓದಿ

ವಿವಿಧ ಸ್ಥಳಗಳಲ್ಲಿ ಕೆಂಪು ಬಣ್ಣದ ಕಾರುಗಳಿಗೆ ಸಂಬಂಧಿಸಿದ ಅನೇಕ ಪುರಾಣಗಳು ಮತ್ತು ನಂಬಿಕೆಗಳು ಇಂದು ಜನರಲ್ಲಿ ಇದೆ. ಸದ್ಯ ನಾವು ಇದೇ ರೀತಿ ಕೆಂಪು ಬಣ್ಣದ ಬಗ್ಗೆ ಹೆಚ್ಚು ಕೇಳಿದ ಐದು ಪುರಾಣಗಳ ಬಗ್ಗೆ ನೋಡೋಣ. ಇದು ನಿಜವೇ? ಅಥವಾ ಸುಳ್ಳಾ ಎಂದು ನಾವು ಹೇಳುತ್ತೇವೆ.

Auto Tips: ನೀವು ಕೆಂಪು ಬಣ್ಣದ ಕಾರು ಖರೀದಿಸುವ ಪ್ಲ್ಯಾನ್​ನಲ್ಲಿದ್ದರೆ ತಪ್ಪದೆ ಈ ಸ್ಟೋರಿ ಓದಿ
Red color car
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Nov 10, 2024 | 10:52 AM

‘ಕೆಂಪು’ ಈ ಬಣ್ಣದ ಬಗ್ಗೆ ಅನೇಕ ರೀತಿಯ ವಿಷಯಗಳನ್ನು ಹೇಳಲಾಗುತ್ತದೆ. ಕೆಲವು ಕಡೆಗಳಲ್ಲಿ ಇದನ್ನು ಅಪಾಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ ಇದನ್ನು ಮಂಗಳಕರ ಅಥವಾ ಪ್ರೀತಿಯ ಬಣ್ಣವೆಂದು ಕೂಡ ಹೇಳುತ್ತಾರೆ. ಅದೇ ಕಾರಿನ ವಿಚಾರಕ್ಕೆ ಬಂದರೆ, ಈ ಬಣ್ಣದ ಬಗ್ಗೆ ವಿವಿಧ ರೀತಿಯ ಪುರಾಣಗಳ ಮಾತುಗಳು ಕೇಳಿಬರುತ್ತವೆ. ಕೆಂಪು ಕಾರನ್ನು ಕಂಡರೆ ತಕ್ಷಣ 6 ಬಾರಿ ಚಪ್ಪಾಳೆ ತಟ್ಟಿ ಸಂಜೆವೇಳೆಗೆ ಅಪ್ಪ ಏನಾದರು ತರುತ್ತಾನೆ ಎಂಬ ಮಾತು ಕೇಳಿರಬಹುದು. ನೀವು 90 ರ ದಶಕದಲ್ಲಿ ಹುಟ್ಟಿದ್ದರೆ, ಇಂತಹದ್ದನ್ನು ಕೇಳಿರಬೇಕು.

ಅಷ್ಟೇ ಅಲ್ಲ. ವಿವಿಧ ಸ್ಥಳಗಳಲ್ಲಿ ಕೆಂಪು ಬಣ್ಣದ ಕಾರುಗಳಿಗೆ ಸಂಬಂಧಿಸಿದ ಅನೇಕ ಪುರಾಣಗಳು ಮತ್ತು ನಂಬಿಕೆಗಳು ಇಂದು ಜನರಲ್ಲಿ ಇದೆ. ಸದ್ಯ ನಾವು ಇದೇ ರೀತಿ ಕೆಂಪು ಬಣ್ಣದ ಬಗ್ಗೆ ಹೆಚ್ಚು ಕೇಳಿದ ಐದು ಪುರಾಣಗಳ ಬಗ್ಗೆ ನೋಡೋಣ. ಇದು ನಿಜವೇ? ಅಥವಾ ಸುಳ್ಳಾ ಎಂದು ನಾವು ಹೇಳುತ್ತೇವೆ.

ಕೆಂಪು ಕಾರುಗಳು ಹೆಚ್ಚು ಆ್ಯಕ್ಸಿಡೆಂಟ್ ಆಗುತ್ತದೆ:

ಕೆಂಪು ಬಣ್ಣದ ಕಾರುಗಳು ಇತರ ಬಣ್ಣದ ಕಾರುಗಳಿಗಿಂತ ಹೆಚ್ಚು ಆ್ಯಕ್ಸಿಡೆಂಟ್ ಆಗುತ್ತವೆ ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ವಾಸ್ತವವಾಗಿ ಈ ಪುರಾಣಕ್ಕೆ ಯಾವುದೇ ಕಾಂಕ್ರೀಟ್ ಪುರಾವೆಗಳಿಲ್ಲ. ಅಪಘಾತದ ಕಾರಣವು ಚಾಲಕನ ಚಲನ ಶೈಲಿ, ರಸ್ತೆ ಪರಿಸ್ಥಿತಿಗಳು ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಇದಕ್ಕೂ ಕಾರಿನ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ.

ಕೆಂಪು ಕಾರುಗಳ ವಿಮೆ ದುಬಾರಿ:

ಕೆಂಪು ಬಣ್ಣದ ಕಾರುಗಳ ವಿಮಾ ಪ್ರೀಮಿಯಂ ಇತರ ಬಣ್ಣದ ಕಾರುಗಳಿಗಿಂತ ಹೆಚ್ಚಾಗಿರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಸತ್ಯವೆಂದರೆ ವಿಮಾ ಕಂಪನಿಗಳು ಕಾರಿನ ಬಣ್ಣದ ಆಧಾರದ ಮೇಲೆ ವಿಮಾ ಪ್ರೀಮಿಯಂ ಅನ್ನು ನಿರ್ಧರಿಸುವುದಿಲ್ಲ. ವಿಮಾ ದರಗಳು ಕಾರಿನ ಮಾದರಿ, ಎಂಜಿನ್ ಸಾಮರ್ಥ್ಯ, ಚಾಲಕನ ವಯಸ್ಸು ಮತ್ತು ಇತರೆ ಕೆಲವು ಅಂಶಗಳನ್ನು ಅವಲಂಬಿಸಿರುತ್ತದೆ.

ಕೆಂಪು ಕಾರುಗಳು ಹೆಚ್ಚು ಕಳ್ಳತನ ಆಗುತ್ತದೆ:

ಕೆಂಪು ಬಣ್ಣದ ಕಾರುಗಳು ಹೆಚ್ಚು ಎದ್ದು ಕಾಣುವ ಕಾರಣ ಕಳ್ಳರ ಗಮನವನ್ನು ಹೆಚ್ಚು ಆಕರ್ಷಿಸುತ್ತವೆ ಎಂದು ನಂಬಲಾಗಿದೆ. ಆದರೆ ವಾಸ್ತವದಲ್ಲಿ, ಕಾರು ಕಳ್ಳತನದ ಸಂದರ್ಭದಲ್ಲಿ ಬಣ್ಣವು ಯಾವುದೇ ಮಹತ್ವದ ಪರಿಣಾಮವನ್ನು ಬೀರುವುದಿಲ್ಲ. ಕಳ್ಳರು ಕಾರನ್ನು ಅದರ ಮಾದರಿ, ಸುರಕ್ಷತಾ ಉಪಕರಣಗಳು ಮತ್ತು ಇತರ ಅಂಶಗಳನ್ನು ನೋಡುವ ಮೂಲಕ ಕದಿಯುತ್ತಾರೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ; ಹಬ್ಬದ ಸೀಸನ್​ನಲ್ಲಿ ಭಾರೀ ಬಿಸಿನೆಸ್

ಕೆಂಪು ಕಾರುಗಳು ಹೆಚ್ಚು ಬಿಸಿಯಾಗುತ್ತವೆ:

ಕೆಂಪು ಬಣ್ಣದ ಕಾರುಗಳು ಇತರ ಬಣ್ಣಗಳಿಗಿಂತ ಹೆಚ್ಚು ಬಿಸಿ ಆಗುತ್ತವೆ ಎಂಬ ನಂಬಿಕೆ ಇದೆ. ವಾಸ್ತವವಾಗಿ, ಗಾಢ ಬಣ್ಣಗಳು (ಕಪ್ಪು ಬಣ್ಣದಂತೆ) ಹೆಚ್ಚು ಶಾಖವನ್ನು ಹೀರಿಕೊಳ್ಳುತ್ತವೆ, ಆದರೆ ಕೆಂಪು ಕಾರುಗಳು ಯಾವುದೇ ನಿರ್ದಿಷ್ಟ ರೀತಿಯಲ್ಲಿ ಹೆಚ್ಚಿನ ಶಾಖವನ್ನು ಹೀರಿಕೊಳ್ಳುವುದಿಲ್ಲ. ಇದು ಸ್ವಲ್ಪ ಮಟ್ಟಿಗೆ ನಿಜವಾಗಿರಬಹುದು, ಆದರೆ ಅದರ ಪರಿಣಾಮವು ತುಂಬಾ ಚಿಕ್ಕದಾಗಿದೆ. ಇವೆಲ್ಲವೂ ಕೇವಲ ಕಟ್ಟುಕಥೆಗಳಷ್ಟೆ. ಕೆಂಪು ಬಣ್ಣದ ಕಾರುಗಳು ಅನೇಕ ಜನರ ನೆಚ್ಚಿನ ಆಯ್ಕೆಯಾಗಿದೆ. ಬಣ್ಣದ ಕಾರನ್ನು ಆರಿಸುವುದು ನಿಮ್ಮ ವೈಯಕ್ತಿಕ ಆಯ್ಕೆ. ಇದಕ್ಕೂ ಪುರಾಣಕ್ಕೂ ಯಾವುದೇ ಸಂಬಂಧವಿಲ್ಲ.

ಮತ್ತಷ್ಟು ಆಟೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:51 am, Sun, 10 November 24

ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ