ರಜನಿ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ದೊಡ್ಡ ಮೊತ್ತ ಪಡೆದ ಪೂಜಾ ಹೆಗ್ಡೆ?
Pooja Hegde: ಕೆಲ ವರ್ಷಗಳ ಹಿಂದೆಯಷ್ಟೆ ತೆಲುಗು ಚಿತ್ರರಂಗದ ನಂಬರ್ 1 ನಟಿಯಾಗಿದ್ದ ಪೂಜಾ ಹೆಗ್ಡೆ ಇದೀಗ ತೆಲುಗು ಚಿತ್ರರಂಗದಿಂದ ಒಂದು ಅವಕಾಶವನ್ನೂ ಪಡೆದುಕೊಳ್ಳುತ್ತಿಲ್ಲ. ನಾಯಕಿಯಾಗಿ ಮಿಂಚುತ್ತಿದ್ದ ಪೂಜಾ ಹೆಗ್ಡೆ ಐಟಂ ಹಾಡುಗಳಲ್ಲಿ ನಟಿಸುತ್ತಿದ್ದು, ಇದಕ್ಕಾಗಿ ಭಾರಿ ಸಂಭಾವನೆ ಪಡೆದಿದ್ದಾರೆ. ಪೂಜಾ ಹೆಗ್ಡೆ ಪಡೆಯುತ್ತಿರುವ ಸಂಭಾವನೆ ಮೊತ್ತ ಎಷ್ಟು? ಮಾಹಿತಿ ಇಲ್ಲಿದೆ...

ಪೂಜಾ ಹೆಗ್ಡೆ ಅವರು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮಿಂಚಿದ್ದಾರೆ. ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಅವರು ಹೋಗಿದ್ದು ಗೊತ್ತೇ ಇದೆ. ಆದರೆ, ಅದು ಯಶಸ್ಸು ಕಂಡಿಲ್ಲ ಎಂಬ ವಿಚಾರ ಈಗ ಗೊತ್ತಿಲ್ಲದೆ ಇರುವ ವಿಚಾರ ಏನೂ ಇಲ್ಲ. ಅವರು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದ್ದಾರೆ. ಈಗ ಅವರು ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಮಾಡಲು ಒಪ್ಪಿಕೊಂಡಿದ್ದಾರೆ. ಈ ಆಫರ್ ಪಡೆದ ಅವರು ಸಾಕಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಲೋಕೇಶ್ ಕನಗರಾಜ್ ಅವರು ‘ಕೂಲಿ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ರಜನಿಕಾಂತ್ ಅವರು ಹೀರೋ ಆಗಿದ್ದಾರೆ. ಈ ಮೊದಲು ‘ಜೈಲರ್’ ಸಿನಿಮಾದಲ್ಲಿ ರಜನಿ ಹಾಗೂ ತಮನ್ನಾ ಕಾಣಿಸಿಕೊಂಡಿದ್ದ ವಿಶೇಷ ಸಾಂಗ್ ಹಿಟ್ ಆಯಿತು. ಈ ಕಾರಣಕ್ಕೆ ಹೊಸ ಸಿನಿಮಾದಲ್ಲೂ ಐಟಂ ಸಾಂಗ್ ಇಡಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಲೋಕೇಶ್ ಕನಗರಾಜ್ ಅವರು ಪೂಜಾ ಹೆಗ್ಡೆಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ.
ರಜನಿಕಾಂತ್ ಜೊತೆ ಪೂಜಾ ಹೆಗ್ಡೆ ಹೆಜ್ಜೆ ಹಾಕಲು ಬರೋಬ್ಬರಿ 2 ಕೋಟಿ ರೂಪಾಯಿ ಕೇಳಿದ್ದಾರೆ. ಇದನ್ನು ಕೊಡಲು ನಿರ್ಮಾಪಕರು ಒಪ್ಪಿದ್ದಾರೆ. ತಮನ್ನಾ ಹಾಗೂ ರಜನಿಕಾಂತ್ ಕಾಣಿಸಿಕೊಂಡ ಸಾಂಗ್ ಸೂಪರ್ ಹಿಟ್ ಆಗಿತ್ತು. ಪೂಜಾ ಹೆಗ್ಡೆ ನಟಿಸೋ ಸಾಂಗ್ ಕೂಡ ಹಿಟ್ ಆಗಬಹುದು ಎಂಬುದು ನಿರ್ಮಾಪಕರ ಊಹೆ. ಹೀಗಾಗಿ, ದೊಡ್ಡ ಮೊತ್ತದಲ್ಲಿ ಹಣ ನೀಡಲು ಅವರು ಒಪ್ಪಿದ್ದಾರೆ.
ಇದನ್ನೂ ಓದಿ:ರಜನಿಕಾಂತ್ ಜೊತೆ ನಟಿ ಪೂಜಾ ಹೆಗ್ಡೆ ಐಟಂ ಡ್ಯಾನ್ಸ್
‘ಕೂಲಿ’ ಸಿನಿಮಾದ ಪಾತ್ರವರ್ಗದ ಬಗ್ಗೆ ನೋಡುವುದಾದರೆ ಇದರಲ್ಲಿ ದೊಡ್ಡ ಬಳಗವೇ ಇದೆ. ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್. ಸತ್ಯರಾಜ್, ಸೌಬಿನ್ ಶಾಹಿರ್ ಇದ್ದಾರೆ. ಎಲ್ಲಾ ಭಾಷೆಯ ಕಲಾವಿದರು ಇದರಲ್ಲಿ ನಟಿಸುತ್ತಿರುವುದು ವಿಶೇಷ. ಈ ಚಿತ್ರದ ಕೊನೆಯ ಹಂತದ ಶೂಟ್ ನಡೆಯುತ್ತಿದೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಅವರು ದೊಡ್ಡ ಬಜೆಟ್ನಲ್ಲಿ ಸಿದ್ಧಪಡಿಸುತ್ತಾ ಇದ್ದಾರೆ.
‘ಕೂಲಿ’ ಚಿತ್ರದ ಬಳಿಕ ರಜನಿಕಾಂತ್ ಅವರು ‘ಜೈಲರ್ 2’ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. ಪೂಜಾ ಹೆಗ್ಡೆ ಅವರು ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಲು ರೆಡಿ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:14 pm, Sat, 1 March 25