ಗಮನಿಸಿ: ಏಪ್ರಿಲ್ 1 ರಿಂದ ಈ ವಾಹನಗಳಿಗೆ ಪೆಟ್ರೋಲ್- ಡೀಸೆಲ್ ಸಿಗುವುದಿಲ್ಲ

|

Updated on: Mar 25, 2025 | 12:46 PM

Delhi Vehicles rules: ಪೆಟ್ರೋಲ್ ಪಂಪ್‌ಗಳಲ್ಲಿ ಅಳವಡಿಸಲಾದ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳು ವಾಹನಗಳ ವಯಸ್ಸನ್ನು ಸ್ಕ್ಯಾನ್ ಮಾಡುತ್ತವೆ. ಅದರ ವಯಸ್ಸು NGT ನಿಗದಿಪಡಿಸಿದ ವಯಸ್ಸನ್ನು ಮೀರಿದರೆ ಅವರಿಗೆ ತೈಲ ನೀಡಲಾಗುವುದಿಲ್ಲ. ಈ ಕ್ಯಾಮೆರಾಗಳು ರಿಯಲ್ ಟೈಮ್ ನಲ್ಲಿ ನಂಬರ್ ಪ್ಲೇಟ್‌ ಗಳನ್ನು ಓದುವ ಮೂಲಕ ವಾಹನಗಳನ್ನು ಗುರುತಿಸುತ್ತವೆ.

ಗಮನಿಸಿ: ಏಪ್ರಿಲ್ 1 ರಿಂದ ಈ ವಾಹನಗಳಿಗೆ ಪೆಟ್ರೋಲ್- ಡೀಸೆಲ್ ಸಿಗುವುದಿಲ್ಲ
Petrol Diesel
Follow us on

Petrol Diesel not allowed for these vehicles: ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ (Delhi Government) ಹೊಸ ಮಾರ್ಗವನ್ನು ಕಂಡುಕೊಂಡಿದೆ. ಇದರ ಅಡಿಯಲ್ಲಿ, ಹಳೆಯ ವಾಹನಗಳಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ನೀಡಲಾಗುವುದಿಲ್ಲ. ಏಪ್ರಿಲ್ 1 ರಿಂದ ದೆಹಲಿ ನಗರದಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ANPR ಕ್ಯಾಮೆರಾಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ನಿಗದಿಪಡಿಸಿದ ವಯಸ್ಸಿನ ಮಿತಿಯನ್ನು ಮೀರಿದ ವಾಹನಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಇದರೊಂದಿಗೆ, ಪೆಟ್ರೋಲ್ ಪಂಪ್‌ಗಳು ಅಂತಹ ವಾಹನಗಳಿಗೆ ಇಂಧನ ನೀಡಲು ನಿರಾಕರಿಸಲಿದೆ ಎಂದು ಹೇಳಲಾಗಿದೆ.

ಎಷ್ಟು ಹಳೆಯ ವಾಹನಗಳಿಗೆ ಈ ನಿಯಮ ಅನ್ವಯಿಸುತ್ತದೆ?:

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಈ ನಿಯಮ ಏಪ್ರಿಲ್ 1 ರಿಂದ ದೆಹಲಿಯಲ್ಲಿ ಜಾರಿಗೆ ಬರಲಿದೆ. ವರದಿಗಳ ಪ್ರಕಾರ, ದೆಹಲಿಯಾದ್ಯಂತ ಹಳೆಯ ವಾಹನಗಳು ಪೆಟ್ರೋಲ್ ಮತ್ತು ಡೀಸೆಲ್ ಬಳಸುವುದನ್ನು ತಡೆಯುವ ಮೂಲಕ ಸರ್ಕಾರದ ನಿರ್ದೇಶನಗಳನ್ನು ಉತ್ತಮವಾಗಿ ಪಾಲಿಸುವುದು ಈ ಉಪಕ್ರಮದ ಗುರಿಯಾಗಿದೆ. ಈಗ ಈ ನಿಯಮ ಎಷ್ಟು ಹಳೆಯ ವಾಹನಗಳಿಗೆ ಅನ್ವಯವಾಗುತ್ತದೆ ಎಂಬುದು ಪ್ರಶ್ನೆ. ಎನ್‌ಜಿಟಿ ಮಾರ್ಗಸೂಚಿಗಳ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ಇಂಧನ ತುಂಬಿಸುವುದನ್ನು ನಿಷೇಧಿಸಲಾಗುವುದು.

ANPR ಹೇಗೆ ಕೆಲಸ ಮಾಡುತ್ತದೆ?:

ಪೆಟ್ರೋಲ್ ಪಂಪ್‌ಗಳಲ್ಲಿ ಅಳವಡಿಸಲಾದ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳು ವಾಹನಗಳ ವಯಸ್ಸನ್ನು ಸ್ಕ್ಯಾನ್ ಮಾಡುತ್ತವೆ. ಅದರ ವಯಸ್ಸು NGT ನಿಗದಿಪಡಿಸಿದ ವಯಸ್ಸನ್ನು ಮೀರಿದರೆ ಅವರಿಗೆ ತೈಲ ನೀಡಲಾಗುವುದಿಲ್ಲ. ಈ ಕ್ಯಾಮೆರಾಗಳು ರಿಯಲ್ ಟೈಮ್ ನಲ್ಲಿ ನಂಬರ್ ಪ್ಲೇಟ್‌ ಗಳನ್ನು ಓದುವ ಮೂಲಕ ವಾಹನಗಳನ್ನು ಗುರುತಿಸುತ್ತವೆ. ದೆಹಲಿಯಲ್ಲಿ ಸುಮಾರು 500 ಪೆಟ್ರೋಲ್ ಪಂಪ್‌ ಗಳಿದ್ದು, ಅವುಗಳಲ್ಲಿ ಶೇ. 80 ರಷ್ಟರಲ್ಲಿ ಈಗಾಗಲೇ ANPR ಅನ್ನು ಸ್ಥಾಪಿಸಲಾಗಿವೆ. ಹಳೆಯ ವಾಹನವು ತೈಲಕ್ಕಾಗಿ ಬಂದಾಗಲೆಲ್ಲಾ, ಈ ವ್ಯವಸ್ಥೆಯು ಅದನ್ನು ಡೀಫಾಲ್ಟರ್ ಎಂದು ಘೋಷಿಸುತ್ತದೆ.

ಇದನ್ನೂ ಓದಿ
ಕಳೆದ ತಿಂಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು?
ಮಾರುತಿ ಆಲ್ಟೊದ ಮೈಲೇಜ್ ಈಗ ಮೊದಲಿಗಿಂತ ಹೆಚ್ಚಾಗಲಿದೆ
ಕಾರು ಖರೀದಿದಾರರಿಗೆ ಬಿಗ್ ಶಾಕ್: ಹುಂಡೈ ಕಾರುಗಳ ಬೆಲೆಗಳ ಬೆಲೆ ಏರಿಕೆ
ಭಾರತದಲ್ಲಿ ಬಿಡುಗಡೆ ಆಯಿತು ಮರ್ಸಿಡಿಸ್​ನ ಹೊಸ ದುಬಾರಿ ಕಾರು: ಬೆಲೆ ಎಷ್ಟು?

ಕಳೆದ ತಿಂಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು?: ಇಲ್ಲಿದೆ ನೋಡಿ ಪಟ್ಟಿ

ಈ ನಿಯಮವನ್ನು ಉಲ್ಲಂಘಿಸಿದರೆ ಏನಾಗುತ್ತದೆ?:

ಈ ಸಂಪೂರ್ಣ ಪ್ರಕ್ರಿಯೆಯನ್ನು ವಾಹನ್ ಪೋರ್ಟಲ್‌ಗೆ ಲಿಂಕ್ ಮಾಡಲಾಗಿದೆ, ಅದರ ಮೂಲಕ ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಮಾಹಿತಿಯನ್ನು ಪಡೆಯಲಾಗುತ್ತದೆ. ಇದಲ್ಲದೆ, ಯಾವುದೇ ಹಳೆಯ ವಾಹನವು ಮತ್ತೆ ರಸ್ತೆಯಲ್ಲಿ ಕಂಡುಬಂದರೆ ಅದನ್ನು ಸ್ಕ್ರ್ಯಾಪ್ ಯಾರ್ಡ್‌ಗೆ ಕಳುಹಿಸಲಾಗುತ್ತದೆ. ಸರ್ಕಾರ ಇದುವರೆಗೆ 59 ಲಕ್ಷ ಹಳೆಯ ವಾಹನಗಳ ನೋಂದಣಿಯನ್ನು ರದ್ದುಗೊಳಿಸಿದೆ. ಆದರೆ ಇನ್ನೂ ಅನೇಕ ವಾಹನಗಳು ರಸ್ತೆಯಲ್ಲಿ ಓಡುತ್ತಿವೆ ಎಂಬುದು ಗಮನಿಸಬೇಕಾದ ವಿಚಾರ. ಯಾವುದೇ ವಾಹನವು ಈ ನಿಯಮವನ್ನು ಉಲ್ಲಂಘಿಸಿದರೆ ವಾಹನದ ಮಾಲೀಕರು 10,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗೆಯೆ ಪುನಃ ಸಿಕ್ಕಿಬಿದ್ದರೆ ಅದನ್ನು ರದ್ದುಗೊಳಿಸಲಾಗುತ್ತದೆ ಎಂಬ ನಿಯಮ ತರಲಾಗಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ