Hyundai: RDE ಮಾನದಂಡದೊಂದಿಗೆ ಹೊಸ ಕಾರುಗಳನ್ನ ಬಿಡುಗಡೆ ಮಾಡಿದ ಹ್ಯುಂಡೈ
ಕೇಂದ್ರ ಸರ್ಕಾರವು ಮುಂಬರುವ ಏಪ್ರಿಲ್ 1ರಿಂದ ರಿಯಲ್ ಡ್ರೈವಿಂಗ್ ಎಮಿಷನ್ ಜಾರಿಗೆ ತರುತ್ತಿದ್ದು, ಹೊಸ ಮಾನದಂಡ ಜಾರಿಗೆ ಮುನ್ನ ಹ್ಯುಂಡೈ ಕಂಪನಿಯು ನವೀಕೃತ ಮಾದರಿಗಳನ್ನ ಬಿಡುಗಡೆ ಮಾಡಿದೆ.

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮುಂಬರುವ ಏಪ್ರಿಲ್ 1ರಿಂದ ಹಲವು ಹೊಸ ಮಾನದಂಡಗಳನ್ನ ಜಾರಿಗೆ ತರಲು ಸಿದ್ದವಾಗುತ್ತಿದೆ. ಹೀಗಾಗಿ ಹೊಸ ಮಾನದಂಡಗಳಿಗೆ ಅನುಗುಣವಾಗಿ ಹ್ಯುಂಡೈ (Hyundai) ಕಂಪನಿ ತನ್ನ ಪ್ರಮುಖ ಕಾರುಗಳನ್ನು ನವೀಕರಿಸುತ್ತಿದ್ದು, ಹೊಸ ಕಾರುಗಳು ಭಾರೀ ಬದಲಾವಣೆ ಪಡೆದುಕೊಂಡಿದೆ. ಮಾಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಹ್ಯುಂಡೈ ಇಂಡಿಯಾ ಕಂಪನಿ ಮುಂಚೂಣಿಯಲ್ಲಿದ್ದು, ಇದೀಗ ಕಂಪನಿ ಕೇಂದ್ರ ಸರ್ಕಾರದ ಹೊಸ ಮಾನದಂಡದೊಂದಿಗೆ ತನ್ನ ಪ್ರಮುಖ ಕಾರು ಮಾದರಿಗಳನ್ನ ಉನ್ನತೀಕರಿಸಿದೆ.
ಮುಂಬರುವ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ರಿಯಲ್ ಡ್ರೈವಿಂಗ್ ಎಮಿಷನ್ ಗೆ (Real Driving Emissions) ಅನುಗುಣವಾಗಿ ಹೊಸ ಕಾರುಗಳನ್ನು ಬಿಡುಗಡೆ ಮಾಡಿದ್ದು, ಹೊಸ ಕಾರುಗಳು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಸ್ಮಾರ್ಟ್ ಮತ್ತು ಹಲವು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಪಡೆದುಕೊಂಡಿವೆ. ರಿಯಲ್ ಡ್ರೈವಿಂಗ್ ಎಮಿಷನ್ ನಿಂದಾಗಿ ಹೊಸ ಕಾರುಗಳ ಎಂಜಿನ್ ನಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿದ್ದು, ಹೊಸ ಮಾನದಂಡದಿಂದಾಗಿ ಮಾಲಿನ್ಯ ಪ್ರಮಾಣವು ಗಣನೀಯವಾಗಿ ತಗ್ಗಲಿದೆ.
ಹಾಗೆಯೇ ರಿಯಲ್ ಡ್ರೈವಿಂಗ್ ಎಮಿಷನ್ ಪೂರೈಸಿರುವ ಹೊಸ ಕಾರುಗಳು ಇ20 ಇಂಧನ ಮಾನದಂಡಕ್ಕೆ ಪೂರಕವಾಗಿವೆ. ಇ20 ಇಂಧನ ಮಾನದಂಡದೊಂದಿಗೆ ಕೇಂದ್ರ ಸರ್ಕಾರವು ಇನ್ಮುಂದೆ ಇಂಧನಗಳಲ್ಲಿ ಶೇ. 20 ರಷ್ಟು ಎಥೆನಾಲ್ ಮಿಶ್ರಣ ಮಾಡಲಿದೆ. ಇದರಿಂದ ಹೊಸ ಕಾರುಗಳಿಂದ ಉತ್ಪತ್ತಿಯಾಗುವ ಮಾಲಿನ್ಯವು ಕಡಿಮೆ ಅಪಾಯಕಾರಿಯಾಗಿರಲಿದ್ದು, ಹೊಸ ಕಾರುಗಳ ಕಾರ್ಯಕ್ಷಮತೆ ಕೂಡಾ ಸುಧಾರಿಸಲಿದೆ.
ಇದೇ ಕಾರಣಕ್ಕೆ ಹ್ಯುಂಡೈ ಕಂಪನಿಯು ಹೊಸ ಮಾನದಂಡ ಕಡ್ಡಾಯಕ್ಕೂ ಮುನ್ನವೇ ಪ್ರಮುಖ ಕಾರುಗಳನ್ನ ನವೀಕರಿಸಿದ ಮಾನದಂಡದೊಂದಿಗೆ ಬಿಡುಗಡೆ ಮಾಡಿದೆ. ಇನ್ನು ಹೊಸ ಕಾರುಗಳ ಪೆಟ್ರೋಲ್ ಮಾದರಿಗಳ ಜೊತೆಗೆ ಡೀಸೆಲ್ ಮಾದರಿಯಲ್ಲೂ ಹ್ಯುಂಡೈ ಕಂಪನಿಯು ಮಹತ್ವದ ಬದಲಾವಣೆ ತಂದಿದೆ. 1.5 ಲೀಟರ್ ಡೀಸೆಲ್ ಮಾದರಿಯು ಇದೀಗ ಎಸ್ ಇಆರ್ ತಂತ್ರಜ್ಞಾನದೊಂದಿಗೆ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಿಸಿದೆ. ಹೊಸ ಡೀಸೆಲ್ ಮಾದರಿಯು 113.5 ಹಾರ್ಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಕಾರುಗಳಲ್ಲಿ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಹೊಸ ಕಾರಿನಲ್ಲಿ ಕಂಪನಿಯು ಬೆಸ್ ವೆರಿಯೆಂಟ್ ನಲ್ಲೂ ಇರುವಂತೆ ನಾಲ್ಕು ಏರ್ ಬ್ಯಾಗ್ ಗಳನ್ನು ಜೋಡಿಸಿದೆ. ಜೊತೆಗೆ ಹೊಸ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಸಿಸ್ಟಂ, ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದ್ದು, ಕ್ರೆಟಾ ಮಾದರಿಯಲ್ಲಿ ಬೆಸ್ ವೆರಿಯೆಂಟ್ ನಲ್ಲೂ ಆರು ಏರ್ ಬ್ಯಾಗ್ ಜೋಡಿಸಿದೆ. ಇದರೊಂದಿಗೆ ಹೊಸ ಕಾರು ಮಾದರಿಯಲ್ಲಿ ಪವರ್ ಫುಲ್ ಎಂಜಿನ್ ಹೊರತಾಗಿಯೂ ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬದಲಾಗಿ ಹೊಸ ಕಾರಿನ ಸುರಕ್ಷಾ ಫೀಚರ್ಸ್ ಗಳನ್ನ ಉನ್ನತೀಕರಿಸಿದ್ದು, ಇದು ಗ್ರಾಹಕರಿಗೆ ಗರಿಷ್ಠ ಸುರಕ್ಷತೆ ಖಾತ್ರಿಪಡಿಸುತ್ತವೆ.hy
Published On - 6:37 pm, Thu, 16 February 23




