Sign In

By signing in or creating an account, you agree with Associated Broadcasting Company's Terms & Conditions and Privacy Policy.

Maruti Suzuki: ಆಲ್ಟೋ ಕೆ10 ಮತ್ತು ಎಸ್-ಪ್ರೆಸ್ಸೊ ಖರೀದಿದಾರರಿಗೆ ಸಿಹಿಸುದ್ದಿ ಕೊಟ್ಟ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಆಲ್ಟೋ ಕೆ10 ಮತ್ತು ಎಸ್-ಪ್ರೆಸ್ಸೊ ಹ್ಯಾಚ್ ಬ್ಯಾಕ್ ಕಾರು ಮಾದರಿಗಳ ಬೆಲೆಯಲ್ಲಿ ಇಳಿಕೆ ಮಾಡಿದೆ.

Maruti Suzuki: ಆಲ್ಟೋ ಕೆ10 ಮತ್ತು ಎಸ್-ಪ್ರೆಸ್ಸೊ ಖರೀದಿದಾರರಿಗೆ ಸಿಹಿಸುದ್ದಿ ಕೊಟ್ಟ ಮಾರುತಿ ಸುಜುಕಿ
ಮಾರುತಿ ಸುಜುಕಿ ಕಾರುಗಳು
Follow us
Praveen Sannamani
|

Updated on: Sep 02, 2024 | 2:44 PM

ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಬಹುಬೇಡಿಕೆಯ ಆಲ್ಟೋ ಕೆ10 ಮತ್ತು ಎಸ್-ಪ್ರೆಸ್ಸೊ ಹ್ಯಾಚ್ ಬ್ಯಾಕ್ ಕಾರು ಮಾದರಿಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಹಬ್ಬದ ಋತುವಿನಲ್ಲಿ ಕಾರು ಖರೀದಿದಾರರಿಗೆ ಇದು ಸಾಕಷ್ಟು ಸಹಕಾರಿಯಾಗಲಿದೆ. ಜೊತೆಗೆ ಹೊಸ ಕಾರು ಖರೀದಿದಾರರಿಗೆ ಡೀಲರ್ಸ್ ಮಟ್ಟದಲ್ಲೂ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಬೆಲೆ ಇಳಿಕೆಯೊಂದಿಗೆ ಕೆಲವು ಹೊಸ ಫೀಚರ್ಸ್ ಗಳನ್ನು ಸಹ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೊಸ ದರಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಆಲ್ಟೋ ಕೆ10 ಬೆಲೆಯಲ್ಲಿ ರೂ. 6,500 ಬೆಲೆ ಇಳಿಕೆ ಮಾಡಿದ್ದು, ಬೆಲೆ ಇಳಿಕೆ ನಂತರ ಹೊಸ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 3.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.96 ಲಕ್ಷ ಬೆಲೆ ಹೊಂದಿದೆ.

ಹಾಗೆಯೇ ಮತ್ತೊಂದು ಕಾರು ಮಾದರಿಯಾದ ಎಸ್-ಪ್ರೆಸ್ಸೊ ಬೆಲೆಯಲ್ಲಿ ರೂ. 2 ಸಾವಿರದಷ್ಟು ಬೆಲೆ ಇಳಿಕೆ ಮಾಡಿದ್ದು, ಬೆಲೆ ಇಳಿಕೆ ನಂತರ ಇದು ಎಕ್ಸ್ ಶೋರೂಂ ಪ್ರಕಾರ ರೂ. 4.26 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.11 ಲಕ್ಷ ಬೆಲೆ ಹೊಂದಿದೆ. ಬೆಲೆ ಇಳಿಕೆಯೊಂದಿಗೆ ಹೊಸ ಕಾರುಗಳಲ್ಲಿ ಈ ಬಾರಿ ಕೆಲವು ಪ್ರಮುಖ ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇವು ಕಾರು ಪ್ರಯಾಣವನ್ನು ಮತ್ತಷ್ಟು ಸುರಕ್ಷಿತವಾಗಿಸಲಿವೆ.

ಆಲ್ಟೋ ಕೆ10 ಮತ್ತು ಎಸ್-ಪ್ರೆಸ್ಸೊ ಕಾರುಗಳಲ್ಲಿ ಯಾವುದೇ ಬೆಲೆ ಹೆಚ್ಚಳವಿಲ್ಲದೆ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೌಲಭ್ಯವನ್ನು ಕಡ್ಡಾಯವಾಗಿ ನೀಡಲು ನಿರ್ಧರಿಸಿದ್ದು, ಹೊಸ ಸುರಕ್ಷಾ ಸೌಲಭ್ಯವು ಎಲ್ಲಾ ವೆರಿಯೆಂಟ್ ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೌಲಭ್ಯವು ಕಾರು ಚಾಲನೆಯ ಸಂದರ್ಭದಲ್ಲಿ ಹೆಚ್ಚಿನ ವೇಗದಲ್ಲೂ ಚಾಲಕನು ಉತ್ತಮವಾಗಿ ನಿಯಂತ್ರಣ ಮಾಡಬಹುದಾಗಿದ್ದು, ಇದು ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಜೊತೆಗೆ ಸಂಯೋಜನೆ ಹೊಂದಿರುತ್ತದೆ.

ಇದನ್ನೂ ಓದಿ: ಹೊಸ ಕಾರು ಖರೀದಿಸುವಾಗ ಯಾವ ವೆರಿಯೆಂಟ್ ಗಳು ಖರೀದಿಗೆ ಬೆಸ್ಟ್?

ಇಎಸ್ ಸಿ ಸೌಲಭ್ಯವನ್ನು ಪ್ರಮುಖವಾಗಿ ಕಾರನ್ನು ಸ್ಕಿಡ್ಡಿಂಗ್ ಆಗುವುದನ್ನು ತಪ್ಪಿಸುವುದರ ಜೊತೆಗೆ ಅತಿ ಕಡಿಮೆ ಅವಧಿಯಲ್ಲಿ ಕಾರನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಈ ಮೂಲಕ ಇದು ಸಂಭಾವ್ಯ ಅಪಘಾತಗಳನ್ನು ತಡೆಯಲಿದ್ದು, ಇದು ಪ್ರಯಾಣಿಕರ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಬಹುದು. ಇದರಲ್ಲದೇ ಹೊಸ ಕಾರುಗಳಲ್ಲಿ ಮಾರುತಿ ಸುಜುಕಿಯು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಹಿಲ್ ಹೋಲ್ಡ್ ಅಸಿಸ್ಟ್ ಜೋಡಣೆಯನ್ನು ಸಹ ಕಡ್ಡಾಯಗೊಳಿಸಿದೆ.