ಅಲ್ಪ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಲಾಭಗಳಿಸಿದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ದುಗ್ಗಪ್ಪ ಗೌಡ

ನಿವೃತ್ತ ಬ್ಯಾಂಕ್ ಮ್ಯಾನೇಜರ್ ದುರ್ಗಪ್ಪ ಗೌಡ  ಅಲ್ಪ ಭೂಮಿಯಲ್ಲಿ  ವಿವಿಧ ಬೆಳಗಳನ್ನು ಬೆಳೆದು ಲಾಭಗಳಿಸುವ ಮೂಲಕ ಯಶಸ್ವಿಯಾಗಿದ್ದಾರೆ. ಇವರು  ಮೂವತ್ತೇಳು ವರ್ಷಗಳ ಕಾಲ ದುಡಿಯುವಾಗಲೇ ಬಿಡುವಿನ ಪ್ರತಿಯೊಂದು ಕ್ಷಣವನ್ನೂ ಕೃಷಿಗಾಗಿ ವ್ಯಯಿಸುತ್ತಿದ್ದರು. ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ದುಗಪ್ಪ ಗೌಡ. ತಮ್ಮ ಎರಡೂವರೆ ಎಕರೆ ಭೂಮಿಯಲ್ಲಿ ಮೂವತ್ತಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿ ಅವುಗಳನ್ನು ನೆಟ್ಟಿದ್ದಾರೆ.

ಅಲ್ಪ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಲಾಭಗಳಿಸಿದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ದುಗ್ಗಪ್ಪ ಗೌಡ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 09, 2022 | 12:40 PM

ಕೃಷಿ ಎಂದಾಕ್ಷಣ ಉಸ್ಸಪ್ಪ ಎಂದು ದೂರ ಸರಿಯುವವರು ಇರುವ ಈ ಜಮಾನದಲ್ಲಿ ಇಲ್ಲೊಬ್ಬ ಕೃಷಿಕ, ಕೃಷಿಯನ್ನೆ ನಂಬಿಕೊಂಡು ಕೈ ತುಂಬಾ ಆದಾಯ ಗಳಿಸುತ್ತಿದ್ದಾರೆ. ಹಾಗೇ ಛಲವೊಂದಿದ್ದರೆ ಸಾಧಿಸಲು ವಯಸ್ಸು ಅಡ್ಡಿಯಾಗದು’ ಎಂಬುವುದನ್ನು ಇಳಿವಯಸ್ಸಿನ ಪ್ರಗತಿಪರ ಕೃಷಿಕರೋರ್ವರು ಸಾಧಿಸಿ ತೋರಿಸಿದ್ದಾರೆ, ಉಪ್ಪಿನಂಗಡಿಯ ತಣ್ಣೀರುಪಂತ ಗ್ರಾಮದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ದುರ್ಗಪ್ಪ ಗೌಡ  ಅಲ್ಪ ಭೂಮಿಯಲ್ಲಿ  ವಿವಿಧ ಬೆಳೆಗಳನ್ನು ಬೆಳೆದು ಲಾಭಗಳಿಸುವ ಮೂಲಕ ಯಶಸ್ವಿಯಾಗಿದ್ದಾರೆ. ಇವರು  ಮೂವತ್ತೇಳು ವರ್ಷಗಳ ಕಾಲ ದುಡಿಯುವಾಗಲೇ ಬಿಡುವಿನ ಪ್ರತಿಯೊಂದು ಕ್ಷಣವನ್ನೂ ಕೃಷಿಗಾಗಿ ವ್ಯಯಿಸುತ್ತಿದ್ದರು. ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ದುಗಪ್ಪ ಗೌಡ. ತಮ್ಮ ಎರಡೂವರೆ ಎಕರೆ ಭೂಮಿಯಲ್ಲಿ ಮೂವತ್ತಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿ ಅವುಗಳನ್ನು ನೆಟ್ಟಿದ್ದಾರೆ. ಇದೀಗ ವಿವಿಧ ತಳಿಗಳ ಅಡಿಕೆ, ಹತ್ತಕ್ಕೂ ಹೆಚ್ಚು ವಾಣಿಜ್ಯ ಬೆಳೆಗಳು, ಹಲವಾರು ಪ್ರಭೇದದ ಔಷಧೀಯ ಗಿಡಗಳು, ತರಕಾರಿ ಹಣ್ಣುಗಳ ಜೊತೆಗೆ ಹೈನುಗಾರಿಕೆ ಮತ್ತು ಜೇನುಕೃಷಿಗೆ ವಿಸ್ತರಿಸಿಕೊಂಡಿದ್ದಾರೆ.

ಕೊರೊನಾ ಲಾಕ್ ಡೌನ್‌ ಪೂರ್ವ ಋತುನಲ್ಲಿ ವಾರಕ್ಕೆ  ಮಿಶ್ರ ಬೆಳೆಯನ್ನು   ಬೆಳೆಯುವ  ಮೂಲಕ 8 ಸಾವಿರ ಲಾಭಗಳಿಸಿದ್ದಾರೆ. ಇದೀಗ ಔಷಧೀಯ ಗಿಡಗಳನ್ನು ಬೆಳೆದು ಮಾರಾಟ ಮಾಡಿ ಆದಾಯ ಪಡೆಯುತ್ತಿದ್ದಾರೆ.  ಇಲ್ಲಿ ಬೆಳೆಯುವ ಕಸಿ ಮಾವು, ಹಲಸು, ದಾಳಿಂಬೆ, ಜಂಬೂನೇರಳೆ, ಸೀತಾಫಲ, ಲಕ್ಷ್ಮಣಫಲ, ಕೆಸಿ ಅಂಬಟೆ ಇತ್ಯಾದಿ ಹಣ್ಣುಗಳನ್ನು ಮಾರಾಟ ಮಾಡಿ ಆದಾಯ ಪಡೆಯುತ್ತಿದ್ದಾರೆ. ಜೊತೆಗೆ ತೋಟದಲ್ಲಿ ನೆಲ್ಲಿಕಾಯಿ, ನೋನಿ, ಜಾಯಿಕಾಯಿ, ಚಂದನ, ತುಳಸಿ, ಪುನರ್ಪುಳಿ, ಲವಂಗ ಸೇರಿ ಹಲವು ಬಗೆಗಿನ ಮಸಾಲೆ ಪದಾರ್ಥಗಳು ಬೆಳೆದು ಹೆಚ್ಚಿನ ಲಾಭಗಳಿಸುತ್ತಿದ್ದಾರೆ.

ಹಣ್ಣಿನ ಕೃಷಿ 

ಕಿಲೋಗೆ ಇನ್ನೂರು ರೂಪಾಯಿ ದರದಲ್ಲಿ ಮಾರುತ್ತಾರೆ. ಮೂರು ತಳಿಯ ಪಪಾಯಿ ಮರಗಳಲ್ಲಿಯೂ ವಿಪುಲವಾಗಿ ಫಸಲಿದೆ. ಇನ್ನೊಂದೆಡೆ ಔಷಧೀಯ ಗಿಡಗಳನ್ನು ನೆಟ್ಟಿದ್ದಾರೆ. ನೆಲ್ಲಿ, ನೋನಿ, ಜಾಯಿಕಾಯಿ, ಚಂದನ, ಏಕನಾಯಕನ ಬೇರು, ತುಲಸಿ, ಪುನರ್ಪುಳಿ, ಅಗಸೆ ಸೇರಿ ಹಲವು ಬಗೆಗಳಿವೆ. ಜಾಯಿಕಾಯಿ, ಲವಂಗದಂತಹ ಮಸಾಲೆ ಪದಾರ್ಥದ ಮರಗಳಿವೆ, ಕಾಫಿ ಗಿಡಗಳಿವೆ.

ಅಧಿಕ ಇಳುವರಿಯ ಸಪೋಟಾ 

ಮೂರು ವಿಧದ ಸಪೋಟಾ ತಳಿಗಳು ಫಲಭಾರದಿಂದ ಬಾಗುತ್ತಿವೆ. ಸಪೋಟಾ ಅತ್ಯಂತ ಲಾಭಕರ ಉಪಕೃಷಿ ಎನ್ನುವ ಇವರು ಈ ಕೃಷಿಗೆ ಯಾವುದೇ ಗೊಬ್ಬರ ಬಳಸುವುದಿಲ್ಲ. ಕಡು ಬಿಸಿಲನ್ನು ಬಯಸುವ ಈ ಮರ ನೈಸರ್ಗಿಕ ಸಾರದಿಂದಲೇ ನೆಟ್ಟವನ ಕೈ ಹಿಡಿಯುತ್ತದೆ ಎನ್ನುತ್ತಾರೆ. ಒಂದೊಂದು ಮರವೂ ಕ್ವಿಂಟಾಲಿಗಿಂತ ಅಧಿಕವಾಗಿ ಹಣ್ಣು ಕೊಡುತ್ತದೆ. ಸಪೋಟಾ ಮರದಲ್ಲಿ ಹಣ್ಣಾಗುವುದಿಲ್ಲ. ಬಲಿತ ಕಾಯಿಗಳನ್ನು ಕೊಯಿದು ಒಂದು ಪಾಲಿಥಿನ್‌ ಚೀಲದಲ್ಲಿ ತುಂಬಿಸಿ ಅದರ ಜೊತೆಗೆ ಒಂದು ಬಾಳೆಹಣ್ಣು ಇರಿಸಿ, ಬಿಗಿಯಾಗಿ ಬಾಯಿ ಕಟ್ಟಿದರೆ ಸಾಕು, ಎರಡು ದಿನಗಳಲ್ಲಿ ಕ್ರಮಬದ್ಧವಾಗಿ ಹಣ್ಣಾಗುತ್ತದೆ.

ಆಧುನಿಕತೆ ಕೃಷಿಗೆ ಅನಿವಾರ್ಯ 

ಎರಡು ಗೋಗಳನ್ನು ಸಾಕಿ ಹೈನುಗಾರಿಕೆಯ ಜೊತೆಗೆ ಕೃಷಿಗೆ ಸಾವಯವ ಗೊಬ್ಬರ, ಸಾವಯವ ದ್ರವ, ಪರಿಸರ ಸ್ನೇಹಿ ಕೀಟನಾಶಕ ಮಾತ್ರ ಬಳಸುವ  ದುರ್ಗಪ್ಪ ಗೌಡರು ನೂರು ಮರಗಳಲ್ಲಿ ಆರು ಕ್ವಿಂಟಾಲು ಒಣ ಅಡಕೆ ಬೆಳೆಯಬಹುದೆಂಬುದನ್ನು ತೋರಿಸಿ ಕೊಟ್ಟಿದ್ದಾರೆ. ತೆಂಗಿನಲ್ಲಿಯೂ ಹಲವು ತಳಿಗಳಿವೆ. ಜೇನು ವ್ಯವಸಾಯವನ್ನೂ ಮಾಡಿ ಲಾಭ ಗಳಿಸುತ್ತಿದ್ದಾರೆ. ಕೂಲಿಯ ಜನಗಳನ್ನು ಅವಲಂಬಿಸುವ ಬದಲು ಯಾಂತ್ರೀಕೃತ ಕೃಷಿಗೆ ಒತ್ತು ನೀಡಿ, ಸ್ವಂತ ದುಡಿಮೆಯಿಂದ ಮಾತ್ರ ಲಾಭ ಗಳಿಸಲು ಸಾಧ್ಯ ಎಂಬುದನ್ನು ಒತ್ತಿ ಹೇಳುತ್ತಾರೆ. ಖಾಲಿ ಜಾಗದಲ್ಲಿ ರಬ್ಬರ್‌, ಅದರೊಂದಿಗೆ ಅನನಾಸಿನ ಉಪಕೃಷಿ ಸಾಧ್ಯವೆಂಬುದನ್ನು ಅವರಲ್ಲಿ ಕಾಣಬಹುದು. ಅತಿ ಕಡಿಮೆ ವೆಚ್ಚದಲ್ಲಿ ಮಳೆಗಾಲದಲ್ಲಿ ಅಡಿಕೆ, ಜಾಯಿಕಾಯಿಗಳನ್ನು ಒಣಗಿಸಲು ಸೌರಶಕ್ತಿಯ ಚಾವಣಿಯೊಂದನ್ನು ಮಾದರಿಯಾಗಿ ರೂಪಿಸಿದ್ದಾರೆ.

“ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ನನ್ನ ಕನಸಾಗಿತ್ತು. ಮಿಶ್ರ ಕೃಷಿಯಲ್ಲಿ ತೊಡಗಿಸಿಕೊಂಡರೆ, ಅಲ್ಪ ಅವಧಿಯಲ್ಲಿ ಅಧಿಕ  ಲಾಭಗಳಿಸಬಹುದು. ಉತ್ತಮ ರೀತಿಯಲ್ಲಿ ಬೆಳೆಯನ್ನು ಹಾಗೂ ಭೂಮಿಯನ್ನು ಫಲವತ್ತಿನಿಂದ ಇಟ್ಟುಕೊಂಡರೆ ಅಷ್ಟೇ ಒಳ್ಳೆಯ ಆದಾಯ ದೊರಕುತ್ತದೆ. ಕೃಷಿಯಲ್ಲಿ ಕಾರ್ಮಿಕರನ್ನು ಅವಲಂಬಿಸಿದರೆ ನಷ್ಟವಾಗುತ್ತದೆ. ಅದಕ್ಕಾಗಿ ಯಾಂತ್ರಿಕೃತ ಕೃಷಿಗೆ ಹೆಚ್ಚಿನ ಮಹತ್ವ ನೀಡಿ ಲಾಭಗಳಿಸಿಕೊಂಡಿದ್ದೇನೆ.” –   ದುಗ್ಗಪ್ಪ ಗೌಡ,ಕೃಷಿಕರು

-ಪೌದನ್ ಎಸ್. ಡಿ. ಎಮ್ ಸ್ನಾತಕೋತ್ತರ ಕೇಂದ್ರ, ಉಜಿರೆ

Published On - 12:37 pm, Wed, 9 February 22