AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಲ್ಲಿ ಪ್ರೀತಿಯ ಪಾತ್ರ ತಿಳಿದು ಬದುಕಿ

ನಿಮ್ಮನ್ನು ಸಾಕಿ, ಸಲಹುದರಲ್ಲೇ ಜೀವ ಸವೆಸಿದ ಜೀವಗಳಿಗೆ ಪ್ರೀತಿಯ ಬೆಚ್ಚನೆಯ ಭಾವವನ್ನು ನೀಡಿ. ಆ ಮಸುಕಾದ ಕಣ್ಣುಗಳಿ ಅರಳಿ ಆನಂದದಿಂದಿರುವುದನ್ನು ನೋಡಿ. ನಿಮ್ಮಲ್ಲೊಂದು ಸಾರ್ಥಕಬಾವ ಮೈತಳೆಯೋದನ್ನು ಗಮನಿಸಿ. ಈ ಹಿಂದೆ ಎಂದಿಗೂ ನೀವು ಅಷ್ಟು ಆನಂದಿಂದ ನಿಮ್ಮನ್ನು ದಿಟ್ಟಿಸುವ ಆ ಕಣ್ಣುಗಳನ್ನು ಈ ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಕಂಡಿರುವುದಿಲ್ಲ.

ಬದುಕಲ್ಲಿ ಪ್ರೀತಿಯ ಪಾತ್ರ ತಿಳಿದು ಬದುಕಿ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Jul 20, 2024 | 2:13 PM

ಪ್ರತಿಯೊಬ್ಬರಿಗೂ ಪ್ರೀತಿಯೆಂದರೆ ನೆನಪಾಗೋದು ಪ್ರೇಮಿಗಳು. ಅರ್ಥೈಸಲು ಪ್ರಯತ್ನಿಸೋದಾದ್ರೆ, ಒಂದು ಹುಡುಗ ಹಾಗು ಹುಡುಗಿಯ ನಡುವಿನ ಪ್ರೇಮ. ವಿಶಾಲರ್ಥದಲ್ಲಿ ನೋಡೋದಾದ್ರೆ, ಇಬ್ಬರು ವ್ಯಕ್ತಿಗಳ ನಡುವಿನ ಅಕ್ಕರೆಯ, ಮಮತೆಯ ಭಾವ ಆ ಇಬ್ಬರು ವ್ಯಕ್ತಿಗಳು ವಿರುದ್ಧ ಲಿಂಗಗಳೇ ಆಗಿರಬೇಕು ಅಂತೇನಿಲ್ಲ. ವಯಸ್ಸು, ಅಂತಸ್ತು ಎಂಬ ಯಾವ ಮಿತಿಗಳೂ ಇಲ್ಲ. ಕೆಲವುಬಾರಿ ನಾವು ಪ್ರೀತಿಸ್ತಾ ಇರೋದಕ್ಕೆ ಜೀವವಿದಿಯ ಅನ್ನೋದು ಮುಖ್ಯವಾಗೊಲ್ಲ.

ಮಿತಿಗಳಿಲ್ಲ ಅತಿಯಾದ ಪ್ರೀತಿ ಬದುಕಿಗೆ ಅನಿವಾರ್ಯ. ಅದರ ರೂಪಗಳು, ಮೂಲಗಳು ಯಾವುದೇ ಇರಲಿ ಬದುಕಲು ಬದುಕಲ್ಲಿ ಪ್ರೀತಿ ಬೇಕು. ಸದಾಕಾಲ ಪ್ರೀತಿಯನ್ನು ಸ್ವೀಕರಿಸಲು ಬಯಸುವ ಬಹುತೇಕರಿಗೆ, ಪ್ರೀತಿಕೊಟ್ಟಾಗ ಸಿಗುವ ಸಾರ್ಥಕಭಾವದ ಅನುಭವಾಗಿರಲಿಕ್ಕಿಲ್ಲ.

ಯಾರನ್ನ ಪ್ರೀತಿಸಿದರೆ ಆ ಭಾವಕ್ಕೆ ಮತ್ತು ಬದುಕಿಗೆ ಸಾರ್ಥಕತೆ ಸಿಗುತ್ತೆ ಅಂತ ಕೇಳಿದ್ರೆ, ಒಮ್ಮೆ ಪ್ರಶ್ನಿಸಿಕೊಳ್ಳಿ ನಿಮ್ಮ ಬದುಕಿಗೆ ಪ್ರೀತಿಯನ್ನು ಪರಿಚಯಿಸಿದ್ದು ಯಾರು? ಅಥವಾ ನೀವು ಯಾವದನ್ನು ನಿಮ್ಮ ಮೊದಲ ಪ್ರೀತಿ ಅಂತ ಭಾವಿಸಿರುವುರೋ ಆ ಪ್ರೀತಿ ನಿಮ್ಮನ್ನ ಅಪಾರವಾಗಿ ನೋಯಿಸಿದಾಗ ಮರಳಿ ಬದುಕಿನ ಮೇಲೆ ಭರವಸೆ ತುಂಬಿ, ಬದುಕು ಕಟ್ಟಿಕೊಳ್ಳಲು ಸ್ಪೂರ್ಥಿಯಾದವರು ಯಾರು?

ಯಾವುದೇ ಸ್ವಾರ್ಥಭಾವವಿಲ್ಲದೇ ನಿಮ್ಮನ್ನ ಪ್ರೀತಿಯಿಂದಲೇ ಪೋಷಿಸಿದ್ದು ಇಂದಿಗೂ ನಿಮ್ಮೆಲ್ಲ ಸರಿ ತಪ್ಪುಗಳನ್ನ ಮುಕ್ತವಾಗಿ ಸ್ವೀಕರಿಸಿ; ‘ಏನೇ ಮಾಡಿದರೂ ನನ್ನ ಕೂಸು ಅಲ್ವೇ’ ಅಂತೇಳಿ ಎದೆಗಪ್ಪಿಕೊಳ್ಳೋ ಔದಾರ್ಯ ಇರೋದು ತಂದೆ ತಾಯಿಯೆಂಬೆರೆಡು ಜೀವಗಳಿಗೆ ಮಾತ್ರ. ಬದುಕೆಂಬುದೊಂದು ಬಂಡಿಯಾದರೆ ನಿಸ್ವಾರ್ಥ ಪ್ರೀತಿಯ ಸಾರಥಿಗಳಿವರು.

ಬಂಡಿ ಸಾಗಿದಂತೆ ಬದುಕಿನ ಅವಶ್ಯಕತೆ,ಅನಿವಾರ್ಯತೆಗಳು ಬದಲಾಗೋದು ಸಹಜ 20-25 ವರ್ಷಗಳ ಕಾಲ ನಿಮ್ಮನ್ನ ಪ್ರೀತಿಯಿಂದ ಪೊರೆದವರಿಗೆ ಪ್ರೀತಿಯ ಅವಶ್ಯಕತೆ ವಯೋಸಹಜವಾಗಿ ಹೆಚ್ಚಾಗುತ್ತದೆ. ಒಂಟಿತನ ಅವರನ್ನ ಆವರಿಸಿದಾಗ ಬದುಕಲು ಪ್ರೀತಿ ಅನಿವಾರ್ಯ ಎಂದೆನಿಸಿಬಿಡತ್ತೆ. ಬರಸಿಡಿದ ಆಸೆಗಳನ್ನ ಪೂರೈಸಿಕೊಳ್ಳೋ ಬರದಲ್ಲಿ ಸಮಯದ ಬೆಂಬಿಡದೆ, ಭಾವನೆಗಳಿಗೆ ಬೆಲೆಕೊಡದೆ ಸಾಗುತ್ತರೋ ಎಷ್ಟೋ ಮಕ್ಕಳಿಗೆ ಇದರ ಪರಿವೆಯೇ ಇರುವುದಿಲ್ಲ. ತಮಗೆ ಜನ್ಮ ನೀಡಿದೆರಡು ಜೀವಗಳ ನೋವು ತಿಳಿಯುವುದೂ ಇಲ್ಲ, ತಿಳಿದರೂ ಲೆಕ್ಕಿಸದಿರುವ ನಿಷ್ಟೂರ ಮನಸ್ಥಿತಿಗಳು ಮನುಷ್ಯತ್ವವನ್ನೇ ಮರೆತಂತೆ ಭಾಸವಾಗುತ್ತದೆ.

ನಿಮ್ಮನ್ನು ಸಾಕಿ, ಸಲಹುದರಲ್ಲೇ ಜೀವ ಸವೆಸಿದ ಜೀವಗಳಿಗೆ ಪ್ರೀತಿಯ ಬೆಚ್ಚನೆಯ ಭಾವವನ್ನು ನೀಡಿ. ಆ ಮಸುಕಾದ ಕಣ್ಣುಗಳಿ ಅರಳಿ ಆನಂದದಿಂದಿರುವುದನ್ನು ನೋಡಿ. ನಿಮ್ಮಲ್ಲೊಂದು ಸಾರ್ಥಕಬಾವ ಮೈತಳೆಯೋದನ್ನು ಗಮನಿಸಿ. ಈ ಹಿಂದೆ ಎಂದಿಗೂ ನೀವು ಅಷ್ಟು ಆನಂದಿಂದ ನಿಮ್ಮನ್ನು ದಿಟ್ಟಿಸುವ ಆ ಕಣ್ಣುಗಳನ್ನು ಈ ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಕಂಡಿರುವುದಿಲ್ಲ.

ವಯಸ್ಸಾದ ನಿಮ್ಮ ತಂದೆ ತಾಯಿಯ ಆಸೆಗಳನೊಮ್ಮೆ ಕೇಳಿ, ಅವರಿಗೆ ನಿಮ್ಮ ಸಾಂಗತ್ಯ ಬಿಟ್ಟು ಬೇರೇನು ಬೇಕಿರುವುದಿಲ್ಲ. ನೀವು ಗಳಿಸಿದ ಹಣ, ಆಸ್ತಿ-ಅಂತಸ್ತು, ಹೆಸರು ಅವರಿಗೆ ಹೆಮ್ಮೆಯುಂಟು ಮಾಡಬಹುದು ಆದರೆ ನೀವು ಅವರಿಗೆ ನೀಡದೇ ವಂಚಿಸಿದ ಆ ಪ್ರೀತಿ ನಿಮ್ಮ ಬದುಕನ್ನ ನಿಮ್ಮೆಲ್ಲ ಸಾಧನೆಗಳನ್ನು ಮೀರಿ ಭಾದಿಸುತ್ತದೆ. ಇಂತಹ ಪಶ್ಚಾತಾಪದ ಮೌನವೊಂದು ಬದುಕನ್ನು ಆವರಿಸುವ ಮೊದಲು ಎಲ್ಲ ಸ್ವಾರ್ಥ ಮತ್ತು ಆಸೆ-ಆಮಿಷಗಳ ಬಂಧನವನ್ನ ಮೀರಿ ನಮ್ಮವರನ್ನು ಸೇರೋಣ, ಪ್ರೀತಿಯಿಂದಲೇ ಅವರನ್ನ ಸೇರೋಣ. ಪ್ರೀತಿ ಹೇಳಿಕೊಟ್ಟವರನ್ನು ಮತ್ತೆ-ಮತ್ತೆ ಪ್ರೀತಿಸುವ ಕಲೆಯನ್ನು ಬದುಕಲ್ಲಿ ಕರಗತಗೊಳಿಸಿಕೊಂಡು ಬದುಕೋಣ.

ಲೇಖನ: ದರ್ಶಿನಿ ತಿಪ್ಪಾರೆಡ್ಡಿ

ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ

ಎಸ್. ಡಿ. ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರ – ಉಜಿರೆ

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ