ಕಾರ್ಪೊರೇಟ್ ತೆರಿಗೆ 5 ಪ್ರತಿಶತದಷ್ಟು ಇಳಿಕೆ; ಏಂಜೆಲ್ ಟ್ಯಾಕ್ಸ್ ರದ್ದು; ಉದ್ಯಮ ವಲಯಕ್ಕೆ ತುಸು ರಿಲೀಫ್

Union budget 2024, corporate taxes and angel taxes: ಮುಂಗಡ ಪತ್ರದಲ್ಲಿ ನಿರ್ಮಲಾ ಸೀತಾರಾಮನ್ ಅವರು ವಿದೇಶೀ ಸಂಸ್ಥೆಗಳ ಮೇಲಿನ ಕಾರ್ಪೊರೇಟ್ ಟ್ಯಾಕ್ಸ್ ದರವನ್ನು ಶೇ. 40ರಿಂದ ಶೇ. 35ಕ್ಕೆ ಇಳಿಸಿದ್ದಾರೆ. ಇದು ವಿದೇಶೀ ಬಂಡವಾಳ ಆಕರ್ಷಿಸಲು ನೆರವಾಗಬಹುದು. ಹಾಗೆಯೇ, ಏಂಜೆಲ್ ಟ್ಯಾಕ್ಸ್ ಅನ್ನೂ ರದ್ದುಗೊಳಿಸಲಾಗಿದೆ. ಇದು ಇನ್ನೂ ಲಿಸ್ಟ್ ಆಗದ ಕಂಪನಿಗಳಿಗೆ ಅನುಕೂಲವಾಗಬಹುದು.

ಕಾರ್ಪೊರೇಟ್ ತೆರಿಗೆ 5 ಪ್ರತಿಶತದಷ್ಟು ಇಳಿಕೆ; ಏಂಜೆಲ್ ಟ್ಯಾಕ್ಸ್ ರದ್ದು; ಉದ್ಯಮ ವಲಯಕ್ಕೆ ತುಸು ರಿಲೀಫ್
ಕಾರ್ಪೊರೇಟ್ ಟ್ಯಾಕ್ಸ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Jul 23, 2024 | 4:33 PM

ನವದೆಹಲಿ, ಜುಲೈ 23: ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 5 ರಷ್ಟು ಕಡಿಮೆ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಕಾರ್ಪೊರೇಟ್ ತೆರಿಗೆಯನ್ನು ಶೇ. 40ರಿಂದ ಶೇ. 35ಕ್ಕೆ ಇಳಿಸಲಾಗಿದೆ. ಇಡೀ ಭಾರತೀಯ ಸ್ಟಾರ್ಟಪ್ ಸಮುದಾಯಕ್ಕೆ ದುಸ್ವಪ್ನವಾಗಿದ್ದ ಏಂಜೆಲ್ ತೆರಿಗೆಯನ್ನು ರದ್ದುಪಡಿಸಲಾಗುತ್ತಿದೆ. ಕಂಪನಿ ಆಫ್ ಮಾರ್ಕೆಟ್ ವಹಿವಾಟುಗಳು ಮತ್ತು ಷೇರುಗಳ ವಿತರಣೆಯ ಮೂಲಕ ಸಂಗ್ರಹಿಸಿದ ಬಂಡವಾಳದ ಮೇಲೆ ಪಾವತಿಸಬೇಕಾದ ಈ ತೆರಿಗೆಯನ್ನು ಸ್ಟಾರ್ಟಪ್‌ಗಳನ್ನ ಉತ್ತೇಜಿಸುವ ಉದ್ದೇಶದಿಂದ ರದ್ದು ಮಾಡಲಾಗಿದೆ ಎಂದಿದ್ದಾರೆ.

ಇಲ್ಲಿ ಏಂಜೆಲ್ ತೆರಿಗೆ ಎಂದರೆ, ಲಿಸ್ಟ್ ಆಗಿಲ್ಲದ ಷೇರುಗಳನ್ನು ನ್ಯಾಯಯುತ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಗಳಿಸಿದ ಲಾಭಕ್ಕೆ ವಿಧಿಸಲಾಗುವ ತೆರಿಗೆ.

ಕಾರ್ಪೊರೇಟ್ ತೆರಿಗೆ ಕಡಿತ

ಹೂಡಿಕೆ ಮತ್ತು ಉದ್ಯೋಗವನ್ನು ಮುಕ್ತವಾಗಿ ಬೆಂಬಲಿಸಲು ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಗಳನ್ನು ಕಡಿತಗೊಳಿಸಲಾಗಿದೆ. ಅಭಿವೃದ್ಧಿ ಅಗತ್ಯಗಳಿಗಾಗಿ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಸಲುವಾಗಿ, ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 40 ರಿಂದ 35 ಕ್ಕೆ ಇಳಿಸುವುದಾಗಿ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಇದು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರದ ಬಹು ದೊಡ್ಡ ಘೋಷಣೆಯಾಗಿದೆ.

ಇದನ್ನೂ ಓದಿ: ಎಸ್​ಟಿಟಿ, ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ದರಗಳ ಹೆಚ್ಚಳ; ಷೇರು ಹೂಡಿಕೆದಾರರಿಗೆ ಬಜೆಟ್ ಕಹಿ

ಸ್ಟ್ಯಾಂಡರ್ಡ್ ಡಿಡಕ್ಷನ್‌ ಅನ್ನು ಈಗ 50,000 ರೂ.ಗಳಿಂದ 75,000 ರೂ.ಗೆ ಹೆಚ್ಚಿಸಲಾಗಿದ್ದು, ಇದು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇರುವವರಿಗೆ ಮಾತ್ರ ಅನ್ವಯ ಆಗುತ್ತದೆ. ಹಾಗೆಯೇ, 12,000 ರೂವರೆಗಿನ ಕೆಲ ಟ್ಯಾಕ್ಸ್ ಸ್ಲ್ಯಾಬ್ ಮತ್ತು ದರಗಳನ್ನು ಬದಲಾಯಿಸಲಾಗಿದೆ.

– ದರ್ಶಿನಿ ತಿಪ್ಪಾರೆಡ್ಡಿ

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Tue, 23 July 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ