ಬಜೆಟ್ಗೆ ಮುಂಚೆ ಪ್ರಮುಖ ಆರ್ಥಿಕ ತಜ್ಞರ ಜೊತೆ ನಿರ್ಮಲಾ ಸೀತಾರಾಮನ್ ಸಭೆ
Union budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬುಧವಾರ ವಿವಿಧ ಆರ್ಥಿಕ ತಜ್ಞರ ಜೊತೆ ಸಭೆ ನಡೆಸಿದ್ದಾರೆ. ಬಜೆಟ್ಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಡೆದ ಈ ಸಭೆಯಲ್ಲಿ ಬಜೆಟ್ಗೆ ಬೇಕಾದ ಕೆಲ ಸಲಹೆ ಸೂಚನೆಗಳನ್ನು ಹಣಕಾಸು ಸಚಿವೆ ಪಡೆದಿದ್ದಾರೆ. ಸಚಿವಾಲಯದ ಕೆಲ ಉನ್ನತ ಅಧಿಕಾರಿಗಳೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರೆನ್ನಲಾಗಿದೆ.
ನವದೆಹಲಿ, ಜೂನ್ 19: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ ಪೂರ್ವಭಾವಿ ಸಮಾಲೋಚನೆಗಳ (pre-budget consultation) ಪ್ರಕ್ರಿಯೆ ಆರಂಭಿಸಿದ್ದಾರೆ. ದೇಶದ ಪ್ರಮುಖ ಆರ್ಥಿಕ ತಜ್ಞರೊಂದಿಗೆ ಅವರು ಬುಧವಾರ ಸಭೆ ನಡೆಸಿದ್ದಾರೆ. 2024-25ರ ಹಣಕಾಸು ವರ್ಷದ ಬಜೆಟ್ನ ರೂಪುರೇಖೆ ಹೇಗಿರಬೇಕು ಎಂದು ಅವರು ತಜ್ಞರ ಸಲಹೆಗಳನ್ನು ಈ ಸಭೆಯಲ್ಲಿ ಯಾಚಿಸಿದ್ದಾರೆ. ವಿವಿಧ ಆರ್ಥಿಕ ತಜ್ಞರು ಮಾತ್ರವಲ್ಲದೇ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳೂ ಭಾಗವಹಿಸಿದ್ದರು.
ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಪ್ರಮುಖ ಆರ್ಥಿಕ ತಜ್ಞರ ಜೊತೆ ಬಜೆಟ್ ಮುಂಚಿನ ಸಮಾಲೋಚನಾ ಸಭೆ ನಡೆಯಿತು ಎಮದು ಹಣಕಾಸು ಸಚಿವಾಲಯವು ಎಕ್ಸ್ ಪೋಸ್ಟ್ನಲ್ಲಿ ಪ್ರಕಟಿಸಿದೆ.
ನೇರ ಮತ್ತು ಪರೋಕ್ಷ ತೆರಿಗೆ ವಿಚಾರದಲ್ಲಿ ಸಲಹೆಗಳನ್ನು ನೀಡುವಂತೆ, ಹಾಗು ಕಾನೂನು ಸರಳಿಗೊಳಿಸಲು ಏನು ಮಾಡಬಹುದು ಎಂಬ ಸಲಹೆ ನೀಡುವಂತೆ ವ್ಯಾಪಾರ ಮತ್ತು ಉದ್ಯಮ ಸಂಘಟನೆಗಳಿಗೆ ಇದೇ ವೇಳೆ ಹಣಕಾಸು ಸಚಿವೆ ಮನವಿ ಮಾಡಿದ್ದಾರೆ.
Union Minister for Finance & Corporate Affairs Smt. @nsitharaman chairs the first Pre-Budget Consultations with leading economists in connection with the forthcoming General Budget 2024-25 in New Delhi, today.
The #PreBudget consultation meeting was also attended by Union… pic.twitter.com/ylVvfv3CtM
— Ministry of Finance (@FinMinIndia) June 19, 2024
ಇದನ್ನೂ ಓದಿ: ತೆರಿಗೆ ವಿನಾಯಿತಿ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಸಾಧ್ಯತೆ; ಮಧ್ಯಮ ವರ್ಗದವರಿಗೆ ಸಿಗಲಿದೆ ರಿಲೀಫ್
ಅಬಕಾರಿ ಸುಂಕ ಮತ್ತು ಆಮದು ಸುಂಕದಲ್ಲಿ ಉದ್ಯಮ ವಲಯದವರು ಬದಲಾವಣೆ ಬಯಸಿದ್ದಲ್ಲಿ, ಅದಕ್ಕೆ ಪೂರಕವಾದ ಅಂಕಿ ಅಂಶಗಳ ವಿವರವನ್ನೂ ಸಲ್ಲಿಸುವುದು ಅಗತ್ಯ. ತೆರಿಗೆ ಬದಲಾವಣೆಯಿಂದ ಆಗುವ ಪರಿಣಾಮಗಳೇನು ಎಂದೂ ತಿಳಿಸಬೇಕಾಗುತ್ತದೆ.
ಕಾರ್ಪೊರೇಟ್ ಅಫೇರ್ಸ್ ಸಚಿವರೂ ಆಗಿರುವ ನಿರ್ಮಲಾ ಸೀತಾರಾಮನ್ ಅವರು ಜೂನ್ 22ರಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಸಲಿದ್ದಾರೆ. ಅಲ್ಲಿ ವಿವಿಧ ರಾಜ್ಯಗಳ ಬೇಡಿಕೆಗಳನ್ನು ಆಲಿಸಲಿದ್ದಾರೆ. ಯಾವ್ಯಾವ ವಸ್ತುಗಳಿಗೆ ಜಿಎಸ್ಟಿ ದರದಲ್ಲಿ ಬದಲಾವಣೆ ಮಾಡಬಹುದು ಎಂಬ ಸಲಹೆಗಳನ್ನು ಪಡೆಯಲಿದ್ದಾರೆ.
ಲೋಕಸಭಾ ಚುನಾವಣೆಯ ಕಾರಣಕ್ಕೆ ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಾತ್ರವೇ ಆಗಿತ್ತು. ಜುಲೈ ಕೊನೆಯ ವಾರದಲ್ಲಿ ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ಇದಕ್ಕೆ ಮುನ್ನ ವಿವಿಧ ವಲಯ, ಉದ್ಯಮಗಳು ಹಾಗೂ ಸಂಬಂಧಿತ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಹಣಕಾಸು ಇಲಾಖೆ ಸಂಗ್ರಹಿಸಿ ಬಳಿಕ ಬಜೆಟ್ ರೂಪಿಸಲಿದೆ.
ಇದನ್ನೂ ಓದಿ: ಎಕ್ಸೆಸ್ ಗ್ರಾಂಟ್, ಇನ್ಫ್ಲೇಶನ್, ಡೆಫಿಸಿಟ್ ಇತ್ಯಾದಿ ಬಜೆಟ್ ಪದಗಳ ಅರ್ಥ ತಿಳಿಯಿರಿ
ಇದೇ ಜೂನ್ 24ರಂದು 18ನೇ ಲೋಕಸಭೆಯ ಮೊದಲ ಸೆಷನ್ ಆರಂಭವಾಗಲಿದ್ದು, ಹೊಸ ಸಂಸದರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಜೂನ್ 27ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ. ಜುಲೈ 3ರವರೆಗೂ ಈ ಸೆಷನ್ ಇರಲಿದೆ.
ಇದಾದ ಬಳಿಕ ಜುಲೈ 22 ಅಥವಾ ಜುಲೈ ಕೊನೆಯ ವಾರದಲ್ಲಿ ಬಜೆಟ್ ಅಧಿವೇಶನ ಆರಂಭವಾಗುವ ನಿರೀಕ್ಷೆ ಇದೆ. ಈ ವೇಳೆ ಮೊದಲಿಗೆ ಬಜೆಟ್ ಮಂಡನೆ ಆಗಿ ಬಳಿಕ ಅದರ ಮೇಲೆ ಚರ್ಚೆಗಳಾಗಲಿದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ