ಬೆಂಗಳೂರು: ರಾಜ್ಯದಲ್ಲಿ 5,298.69 ಕೋಟಿ ರೂ ಮೊತ್ತದ ಒಟ್ಟು 78 ಹೂಡಿಕೆ ಯೋಜನೆಗಳಿಗೆ ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ (Karnataka Industries and Commerce Ministry) ಅನುಮೋದನೆ ನೀಡಿದೆ. ಮಾರ್ಚ್ 19, ಭಾನುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿಯಲ್ಲಿ (State Level Single Window Clearance Committee) ಈ 78 ಹೂಡಿಕೆ ಪ್ರಸ್ತಾವಗಳಿಗೆ ಸಮ್ಮತಿ ನೀಡಲಾಯಿತು ಎಂದು ಸಚಿವಾಲಯದಿಂದ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದೆ. ಈ ಯೋಜನೆಗಳಿದ 13,917 ಉದ್ಯೋಗಗಳು ಸೃಷ್ಟಿಯಾಗಲು ಸಾಧ್ಯ ಇದೆ.
ಈ 78 ಯೋಜನೆಗಳ ಪೈಕಿ 17 ದೊಡ್ಡ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳು ಪ್ರಮುಖವಾದುವಾಗಿವೆ. ಈ ಒಂದೊಂದು ಯೋಜನೆಯೂ ಕನಿಷ್ಠ 50 ಕೋಟಿ ರೂ ಮೊತ್ತದ್ದಾಗಿದೆ. ಈ 17 ಯೋಜನೆಗಳಿಂದಲೇ 3,552.66 ಕೋಟಿ ರೂ ಮೊತ್ತದ ಹೂಡಿಕೆಗಳಾಗಬಹುದು. ರಾಜ್ಯದ ವಿವಿಧೆಡೆ 6,933 ಕೋಟಿ ಜನರಿಗೆ ಉದ್ಯೋಗ ಅವಕಾಶ ಒದಗಿಸುವ ನಿರೀಕ್ಷೆ ಇದೆ.
ಹಾಗೆಯೇ, 50 ಕೋಟಿ ರೂಗಿಂತ ಕಡಿಮೆ ಇರುವ, ಆದರೆ 15ಕೋಟಿ ರುಪಾಯಿಗೂ ಹೆಚ್ಚು ಹೂಡಿಕೆ ಇರುವ 59 ಯೋಜನೆಗಳಿಗೂ ಇಲಾಖೆ ಅಂಕಿತ ಹಾಕಿದೆ. ಈ 59 ಯೋಜನೆಗಳಿಂದ 1,542.88 ಕೋಟಿ ರೂ ಹೂಡಿಕೆ ಬರಲಿದ್ದು 6,984 ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಇಲಾಖೆ ನೀಡಿದ ಹೇಳಿಕೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Adani: ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ಕೈಬಿಟ್ಟ ಅದಾನಿ; ಭಾರತಕ್ಕೆ ಮುಂದುವರಿಯಲಿರುವ ಪಿವಿಸಿ ಆಮದು ತಲೆನೋವು
ಇನ್ನೆರಡು ಹಳೆಯ ಯೋಜನೆಗಳಿಗೆ ಹೆಚ್ಚುವರಿ ಹೂಡಿಕೆ ಪ್ರಸ್ತಾವಕ್ಕೆ ಇಲಾಖೆ ಒಪ್ಪಿ ಕೊಟ್ಟಿದೆ. ಇದರಿಂದ 203.15 ಕೋಟಿ ರೂ ಹೂಡಿಕೆ ಬರಲಿದೆ. ಹೆಚ್ಚು ಉದ್ಯೋಗಸೃಷ್ಟಿಯೂ ಆಗಬಹುದು.
ಇದೇ ಜನವರಿ ಕೊನೆಯ ವಾರದಲ್ಲಿ 3,455.39 ಕೋಟಿ ರೂ ಮೊತ್ತದ 59 ಹೂಡಿಕೆ ಯೋಜನೆಗಳಿಗೆ ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಒಪ್ಪಿಗೆ ಕೊಟ್ಟಿದೆ. ಈ ಯೋಜನೆಗಳಿಂದ 18 ಸಾವಿರಕ್ಕೂ ಹೆಚ್ಚು ಉದ್ಯೋಗಸೃಷ್ಟಿಯಾಗಬಹುದ ಎಂಬ ನಿರೀಕ್ಷೆ ಇದೆ. ಈ 59 ಯೋಜನೆಗಳ ಪೈಕಿ 11 ಯೋಜನೆಗಳು ಕನಿಷ್ಠ 50 ಕೋಟಿ ರೂ ಹೂಡಿಕೆ ಇರುವ ದೊಡ್ಡ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳಾಗಿವೆ.
ಇದನ್ನೂ ಓದಿ: Economic Crisis: ಫೋರೆಕ್ಸ್ ರಿಸರ್ವ್ ಮತ್ತೆ ಕುಸಿತ; ವಿನಾಶದತ್ತ ಆರ್ಥಿಕತೆ- ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ
Published On - 10:50 am, Mon, 20 March 23