
ನವದೆಹಲಿ, ಜೂನ್ 16: ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ (CEA) ವಿ. ಅನಂತ ನಾಗೇಶ್ವರನ್ ಅವರು ದೇಶದ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಮಾರುಕಟ್ಟೆಯ ಕುರಿತು ಅತ್ಯಂತ ಕಟು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. “ಕೇವಲ ದೊಡ್ಡ ಪದವಿಗಳನ್ನು (Degrees) ಪಡೆಯುವುದರಿಂದ ಉದ್ಯೋಗ ಸಿಗುವುದಿಲ್ಲ. ಇಂದಿನ ಮಾರುಕಟ್ಟೆಗೆ ಬೇಕಿರುವುದು ಉದ್ಯೋಗದ ಕೌಶಲ್ಯಗಳು (Employability). ಯುವಜನರು ಕೇವಲ ಸರ್ಟಿಫಿಕೇಟ್‌ಗಳ ಹಿಂದೆ ಓಡುವ ಬದಲು ಪ್ರಾಯೋಗಿಕ ಕೌಶಲ್ಯ ಮತ್ತು ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದ್ದಾರೆ. ಎಎನ್ಐ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡುತ್ತಿದ್ದ ಅವರು, ಇಂದಿನ ವಿದ್ಯಾರ್ಥಿಗಳು ಪದವಿ ಮುಗಿಸಿ ಎಂಬಿಎ, ಯುಪಿಎಸ್ಸಿ ಇತ್ಯಾದಿಯತ್ತ ಓಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನಂತ ನಾಗೇಶ್ವರನ್ ಅವರ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಯುವಕರು ಪದವಿ ಮುಗಿಸಿ ಹೊರಬರುತ್ತಿದ್ದರೂ, ಕಂಪನಿಗಳಿಗೆ ಬೇಕಾದ ಕೌಶಲ್ಯಗಳು ಅವರಲ್ಲಿ ಇರುತ್ತಿಲ್ಲವಂತೆ (The Skill Gap). ಬರೀ ಶೈಕ್ಷಣಿಕ ಅಂಕಗಳು ಅಥವಾ ಪದವಿ ಪತ್ರಗಳು ಯುವಕರಿಗೆ ಕೆಲಸ ಗಿಟ್ಟಿಸಿಕೊಡಲಾರವು. ಉದ್ಯಮ ರಂಗಕ್ಕೆ ನೇರವಾಗಿ ಕೆಲಸಕ್ಕೆ ಬಳಸಿಕೊಳ್ಳಬಹುದಾದ (Trade Skills) ಹಾಗೂ ತಾಂತ್ರಿಕ ಜ್ಞಾನವಿರುವ ಉದ್ಯೋಗಿಗಳ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು ಕೇವಲ ಥಿಯರಿ ಹೇಳಿಕೊಡದೆ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು ಎಂಬುದು ಅವರ ಸಲಹೆ.
ಇದನ್ನೂ ಓದಿ: ಭಾರತದಲ್ಲಿ ರಾತ್ರೋರಾತ್ರಿ ಮಣ್ಣುಪಾಲಾಯ್ತು 17 ವರ್ಷಗಳ ಶ್ರಮ: ಟರ್ಕಿ ಕಂಪನಿಯ ಅಳಲಿಗೆ ಏನು ಕಾರಣ? ತಪ್ಪು ಯಾರದು?
ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಯುವ ಪೀಳಿಗೆಯ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಿಇಎ ಒತ್ತಿ ಹೇಳಿದ್ದಾರೆ. “ಒಬ್ಬ ವ್ಯಕ್ತಿಯ ಉತ್ಪಾದಕತೆ (Productivity) ಆತನ ಆರೋಗ್ಯದ ಮೇಲೆಯೇ ನಿರ್ಧರಿತವಾಗುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರುವ ಯುವ ಶಕ್ತಿಯಿಂದ ಮಾತ್ರ ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚುತ್ತಿರುವ ಜೀವನಶೈಲಿ ಕಾಯಿಲೆಗಳು ಮತ್ತು ಮಾನಸಿಕ ಒತ್ತಡಗಳು ಅವರ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ” ಎಂದಿದ್ದಾರೆ.
ಕೇವಲ ಸಾಫ್ಟ್‌ವೇರ್ ಅಥವಾ ಕಾರ್ಪೊರೇಟ್ ಕೆಲಸಗಳಷ್ಟೇ ಅಲ್ಲದೆ, ವಿಭಿನ್ನ ವೃತ್ತಿಪರ ಕೌಶಲ್ಯಗಳನ್ನು (Vocational and Trade Skills) ಕಲಿಯುವುದಕ್ಕೆ ಯುವಕರು ಆದ್ಯತೆ ನೀಡಬೇಕು. ಕೊಳಾಯಿ ಕೆಲಸ (Plumbing), ಎಲೆಕ್ಟ್ರಿಷಿಯನ್, ಕಾರ್ಪೆಂಟಿಂಗ್, ಹೊಸ ಉತ್ಪಾದನಾ ತಂತ್ರಜ್ಞಾನಗಳು (Advanced Manufacturing) ಸೇರಿದಂತೆ ಪ್ರಾಯೋಗಿಕ ಕೆಲಸಗಳಿಗೆ ಜಾಗತಿಕವಾಗಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಇಂತಹ ಕ್ಷೇತ್ರಗಳಲ್ಲಿ ನೈಪುಣ್ಯತೆ ಸಾಧಿಸಿದರೆ ಉದ್ಯೋಗದ ಕೊರತೆ ಎದುರಾಗುವುದಿಲ್ಲ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾದ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೆಲವೇ ಎಐ ಮಾಡಲ್ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ
ಭಾರತವು ಸದ್ಯ ಜನಸಂಖ್ಯಾ ಬಲ (Demographic Dividend) ಹೊಂದಿರುವ ದೇಶವಾಗಿದೆ. ಇದರ ಪೂರ್ಣ ಲಾಭವನ್ನು ಭಾರತ ಪಡೆದುಕೊಳ್ಳಬೇಕಾದರೆ ಯುವಜನರು ತಮ್ಮ ಯೋಚನಾ ಲಹರಿಯನ್ನು ಬದಲಾಯಿಸಿಕೊಳ್ಳಬೇಕು. ಸರ್ಕಾರದ ನೀತಿಗಳು ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಿದ್ದರೂ, ಸ್ವತಃ ವಿದ್ಯಾರ್ಥಿಗಳು ಮತ್ತು ಪೋಷಕರು ಕೇವಲ ‘ಪದವಿಗಳ ವ್ಯಾಮೋಹ’ದಿಂದ ಹೊರಬಂದು, ನೈಜ ಮಾರುಕಟ್ಟೆಯ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ವಿ ಅನಂತ ನಾಗೇಶ್ವರನ್ ಎಚ್ಚರಿಸಿದ್ದಾರೆ. ನೈಜ ಮಾರುಕಟ್ಟೆ ಕೌಶಲ್ಯಗಳೆಂದರೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ