AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

Satya Nadella warns AI could leave entire industries struggling: ಕೃತಕ ಬುದ್ಧಿಮತ್ತೆ ಇರುವ ಭವಿಷ್ಯದ ಕರಾಳ ಮುಖವನ್ನು, ಹಾಗೂ ಅದನ್ನು ತಡೆಯುವ ಉಪಾಯವನ್ನು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ತಿಳಿಸಿದ್ದಾರೆ. ಎಐ ಟೆಕ್ನಾಲಜಿಯ ಪೂರ್ಣ ಮೌಲ್ಯ ಮತ್ತು ಲಾಭವು ಕೆಲವೇ ದೈತ್ಯ ಕಂಪನಿಗಳ ಕೈಗೆ ಸಿಗಬಹುದು ಎಂದು ಎಚ್ಚರಿಸಿದ್ದಾರೆ. ಜಾಗತೀಕರಣದ ಸಂದರ್ಭದಲ್ಲಿ ಆಗಿದ್ದ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ.

ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ
ಸತ್ಯ ನಾಡೆಳ್ಳಾImage Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 16, 2026 | 4:46 PM

Share

ವಾಷಿಂಗ್ಟನ್, ಜೂನ್ 16: ಮೈಕ್ರೋಸಾಫ್ಟ್ (Microsoft) ಕಂಪನಿಯ ಸಿಇಒ ಸತ್ಯ ನಾಡೆಳ್ಳ (Satya Nadella) ಅವರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಭವಿಷ್ಯದ ಕುರಿತು ಜಾಗತಿಕ ಉದ್ಯಮ ರಂಗಕ್ಕೆ ದೊಡ್ಡ ಎಚ್ಚರಿಕೆಯೊಂದನ್ನು ನೀಡಿದ್ದಾರೆ. “ಎಐ ತಂತ್ರಜ್ಞಾನದ ಸಂಪೂರ್ಣ ಲಾಭ ಮತ್ತು ಮೌಲ್ಯವು ಕೇವಲ ಕೆಲವು ದೈತ್ಯ ಕಂಪನಿಗಳ ಕೈಯಲ್ಲೇ ಉಳಿದುಬಿಟ್ಟರೆ, ಇಡೀ ಉದ್ಯಮ ರಂಗವೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು ಮತ್ತು ನಾಶವಾಗಬಹುದು” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಜಾಗತೀಕರಣದ ಸಂದರ್ಭದಲ್ಲಾಗಿದ್ದ ತಪ್ಪು ಮರುಕಳಿಸದಿರಲಿ

ಹಿಂದೆ ಜಾಗತೀಕರಣದ (Globalization) ಆರಂಭಿಕ ದಿನಗಳಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಉದ್ಯೋಗಗಳು ಒಂದೆಡೆಯಿಂದ ಮತ್ತೊಂದೆಡೆಗೆ ವಲಸೆ ಹೋದವು. ಕಾಗದದ ಮೇಲೆ ಆರ್ಥಿಕ ಬೆಳವಣಿಗೆ ಕಂಡರೂ, ಸ್ಥಳೀಯ ಮಟ್ಟದಲ್ಲಿ ಹಲವು ಕೈಗಾರಿಕೆಗಳು ಮತ್ತು ಸಮುದಾಯಗಳು ಸಂಪೂರ್ಣವಾಗಿ ಹಾನಿಗೊಳಗಾದವು. ಇಂತಹ ತಪ್ಪು ಈಗ ಎಐ ಬೆಳವಣಿಗೆ ವೇಳೆ ಆಗದಂತೆ ಎಚ್ಚರವಹಿಸಬೇಕು ಎಂದು ಮೈಕ್ರೋಸಾಫ್ಟ್ ಸಿಇಒ ಸಲಹೆ ನೀಡಿದ್ದಾರೆ.

“ಕೆಲವೇ ಕೆಲವು ಎಐ ಮಾದರಿಗಳು (AI Models) ಇಡೀ ಮಾರುಕಟ್ಟೆಯನ್ನು ನುಂಗಿ ನೀರು ಕುಡಿಯುವ ಮತ್ತು ಎಲ್ಲಾ ಆರ್ಥಿಕ ಲಾಭಗಳನ್ನು ತಾವೇ ಬಾಚಿಕೊಳ್ಳುವ ಪರಿಸ್ಥಿತಿಯನ್ನು ಸಮಾಜ ಮತ್ತು ಜಾಗತಿಕ ಆರ್ಥಿಕತೆ ಎಂದಿಗೂ ಸಹಿಸುವುದಿಲ್ಲ. ಇಂತಹ ಅಪಾಯಕಾರಿ ಪರಿಸ್ಥಿತಿಯನ್ನು ನಾವು ತಡೆಯಬೇಕಿದೆ” ಎಂದು ಸತ್ಯ ನಾಡೆಲ್ಲಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಸರ್ವಂ ಎಐ ಈಗ ಯುನಿಕಾರ್ನ್ ಕಂಪನಿಗಳ ಸಾಲಿನಲ್ಲಿ; ಹೂಡಿಕೆ ಮಾಡಿದ ಎಚ್​ಸಿಎಲ್​ಗೂ ಷೇರುಪೇಟೆಯಲ್ಲಿ ಸುಗ್ಗಿ

ಕಂಪನಿಗಳಿಗೆ ಹೊಸ ಸೂತ್ರ: ಎರಡು ರೀತಿಯ ಬಂಡವಾಳ

ಭವಿಷ್ಯದಲ್ಲಿ ಉದ್ಯಮಗಳು ಬದುಕುಳಿಯಲು ಕೇವಲ ಬೇರೆ ಕಂಪನಿಗಳ AI ಮಾದರಿಗಳನ್ನು ನಂಬಿ ಕೂರಬಾರದು. ಬದಲಿಗೆ ತಮ್ಮದೇ ಆದ ಎರಡು ಪ್ರಮುಖ ಬಂಡವಾಳಗಳನ್ನು (Capital) ವೃದ್ಧಿಸಿಕೊಳ್ಳಬೇಕು ಎಂದಿದ್ದಾರೆ ಆಂಧ್ರ ಸಂಜಾತ ಮೈಕ್ರೋಸಾಫ್ಟ್ ಸಿಇಒ. ಅವರು ಹೆಸರಿಸಿದ ಎರಡು ಬಂಡವಾಳವೆಂದರೆ ಅವು ಮಾನವ ಬಂಡವಾಳ ಮತ್ತು ಟೋಕನ್ ಬಂಡವಾಳ.

ಮಾನವ ಬಂಡವಾಳವೆಂದರೆ ನೌಕರರ ಜ್ಞಾನ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಪರಸ್ಪರ ಸಂಬಂಧಗಳು ಮತ್ತು ಸೃಜನಶೀಲತೆ. AI ಬಂದ ತಕ್ಷಣ ಮಾನವನ ಅಗತ್ಯ ಕಡಿಮೆ ಆಗುವುದಿಲ್ಲ, ಬದಲಿಗೆ ಅವರ ಮೌಲ್ಯ ಮತ್ತಷ್ಟು ಹೆಚ್ಚುತ್ತದೆ.

ಇನ್ನು ಟೋಕನ್ ಬಂಡವಾಳ (Token Capital) ಎಂದರೆ ಒಂದು ಕಂಪನಿಯು ಸ್ವತಃ ಅಭಿವೃದ್ಧಿಪಡಿಸುವ ಮತ್ತು ತನ್ನ ಸ್ವಂತ ಸ್ವಾಮ್ಯದಲ್ಲಿ ಇಟ್ಟುಕೊಳ್ಳುವ AI ಸಾಮರ್ಥ್ಯಗಳು.

ಇದನ್ನೂ ಓದಿ: ಎನ್​ಆರ್​ಐಗಳ ಡೆಪಾಸಿಟ್​ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ?

ಕಂಪನಿ ಹಿರಿಯರ ಬೌದ್ಧಿಕ ಜ್ಞಾನ ಉಳಿಯಬಲ್ಲುದಾ?

“ಕಂಪನಿಗಳು ತಮ್ಮ ಆಂತರಿಕ ಜ್ಞಾನ ಮತ್ತು ಬೌದ್ಧಿಕ ಆಸ್ತಿಯನ್ನು (IP) ರಕ್ಷಿಸಿಕೊಳ್ಳಲು ತಮ್ಮದೇ ಆದ ಕಲಿಕಾ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮ ಕಂಪನಿಯು ಬಳಸುತ್ತಿರುವ ಪ್ರಮುಖ ‘AI ಮಾಡೆಲ್’ ಅನ್ನು ಬದಲಾಯಿಸಿದರೂ ಸಹ, ನಿಮ್ಮ ಕಂಪನಿಯ ಹಿರಿಯ ನೌಕರನಿಗಿರುವಂತಹ (Company Veteran) ರಹಸ್ಯ ಜ್ಞಾನ ಮತ್ತು ಕಾರ್ಯಕ್ಷಮತೆ ನಿಮ್ಮ ಸಿಸ್ಟಮ್‌ನಲ್ಲಿ ಹಾಗೇ ಉಳಿಯಬೇಕು. ಆ ಮಟ್ಟಿಗೆ ಕಂಪನಿಗಳು ಸ್ವಾವಲಂಬನೆ ಸಾಧಿಸಬೇಕು” ಎಂದು ಭಾರತ ಮೂಲದ ಮೈಕ್ರೋಸಾಫ್ಟ್ ಸಿಇಒ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್