AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರಿಗೆದಾರರಿಗೆ FAST-DS ಸ್ಕೀಮ್; ವಿದೇಶಿ ಆಸ್ತಿಗಳನ್ನು ಸ್ವಯಂ ಆಗಿ ಘೋಷಿಸಲು ಹೊಸ ಯೋಜನೆ

Government launches FAST-DS scheme: ಭಾರತೀಯರ ವಿದೇಶಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ FAST-DS ಸ್ಕೀಮ್ ಘೋಷಣೆ ಮಾಡಿದೆ. ಈ ಯೋಜನೆಯು, ಭಾರತೀಯರು ತಮ್ಮ ವಿದೇಶಿ ಆಸ್ತಿಗಳನ್ನು ಘೋಷಿಸಲು ಅವಕಾಶ ಕಲ್ಪಿಸುತ್ತದೆ. ವಿದೇಶೀ ಆಸ್ತಿ ಗಳಿಕೆಗೆ ಹಣದ ಮೂಲ ತಿಳಿಸದಿದ್ದರೆ ಅದಕ್ಕೆ ಅಸ್ತಿಮೌಲ್ಯದ ಶೇ. 30ರಷ್ಟು ತೆರಿಗೆ ಹಾಗು ಅಷ್ಟೇ ಪ್ರಮಾಣದ ಶುಲ್ಕ ತೆತ್ತು ಸಕ್ರಮ ಮಾಡಿಕೊಳ್ಳಬಹುದು. ತೆರಿಗೆ ಕಟ್ಟಲಾದ ಹಣದಲ್ಲಿ ಆಸ್ತಿ ಖರೀದಿಸಿದ್ದರೆ ಅದಕ್ಕೆ ಸಣ್ಣ ಪ್ರಮಾಣದ ಶುಲ್ಕ ಇರುತ್ತದೆ.

ತೆರಿಗೆದಾರರಿಗೆ FAST-DS ಸ್ಕೀಮ್; ವಿದೇಶಿ ಆಸ್ತಿಗಳನ್ನು ಸ್ವಯಂ ಆಗಿ ಘೋಷಿಸಲು ಹೊಸ ಯೋಜನೆ
ತೆರಿಗೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 16, 2026 | 12:49 PM

Share

ನವದೆಹಲಿ, ಆಗಸ್ಟ್ 16: ಬಹಿರಂಗಪಡಿಸದೆ ಇದ್ದ ವಿದೇಶೀ ಆಸ್ತಿಗಳನ್ನು ತೆರಿಗೆ ಪಾವತಿಸುವ ಮೂಲಕ ಸಕ್ರಮ ಮಾಡುವ ಒಂದು ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಕೇಂದ್ರ ಆದಾಯ ತೆರಿಗೆ ಇಲಾಖೆ (CBDT) ಸಣ್ಣ ತೆರಿಗೆದಾರರಿಗಾಗಿ FAST-DS (Foreign Assets of Small Taxpayers – Disclosure Scheme) ನಿಯಮಗಳನ್ನು ರೂಪಿಸಿದೆ. ವಿದೇಶಿ ಆಸ್ತಿ ಘೋಷಣೆಗೆ ಏಕಕಾಲಿಕ ಅವಕಾಶ (One-Time Window) ನೀಡಿದೆ. ಇದರೊಂದಿಗೆ, ಭಾರತೀಯರ ವಿದೇಶೀ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಕೆಲಸಕ್ಕೆ ಕೈಹಾಕಿದೆ. ಈ FAST-DS ಸ್ಕೀಮ್ ಇಂದೇ (ಆಗಸ್ಟ್ 16) ಜಾರಿಗೆ ಬಂಇದಿದ್ದು, ವಿದೇಶೀ ಆಸ್ತಿಗಳ ಘೋಷಣೆಗೆ ಅರ್ಜಿ ಸಲ್ಲಿಸಲು ಈ ವರ್ಷದ ಕೊನೆಯವರೆಗೆ (ಡಿ. 31) ಕಾಲಾವಕಾಶ ಕೊಡಲಾಗಿದೆ.

ವಿದ್ಯಾರ್ಥಿಗಳು, ಟೆಕ್ ನೌಕರರು ಮತ್ತು ಭಾರತಕ್ಕೆ ಮರಳಿದ ಎನ್‌ಆರ್‌ಐ (NRI) ಗಳಂತಹ ಸಣ್ಣ ತೆರಿಗೆದಾರರು ತಪ್ಪಿನಿಂದ ಅಥವಾ ಮಾಹಿತಿಯ ಕೊರತೆಯಿಂದ ವಿದೇಶಿ ಬ್ಯಾಂಕ್ ಖಾತೆ, ಶೇರು ಅಥವಾ ಆಸ್ತಿಗಳನ್ನು ತೆರಿಗೆ ಸಲ್ಲಿಕೆಯಲ್ಲಿ ತೋರಿಸದಿದ್ದರೆ, ದಂಡ ಅಥವಾ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಈ ಯೋಜನೆಯಡಿ ಸ್ವಯಂಪ್ರೇರಿತವಾಗಿ ಘೋಷಿಸಬಹುದು.

ಇದನ್ನೂ ಓದಿ: ಭಾರತದ 5ನೇ ತಲೆಮಾರಿನ ಫೈಟರ್ ಜೆಟ್​ಗೆ ದೇಶೀಯ ಇಂಜಿನ್ ಅಭಿವೃದ್ಧಿ: ರಿಲಯನ್ಸ್, ರೋಲ್ಸ್ ರಾಯ್ಸ್ ಪಾಲುದಾರಿಕೆ

ನಿಯಮಗಳು ಮತ್ತು ಪಾವತಿ ವಿವರ

ಘೋಷಿಸದ ಆಸ್ತಿ/ಆದಾಯ (₹1 ಕೋಟಿಯವರೆಗೆ): ತೆರಿಗೆದಾರರು ಆಸ್ತಿಯ ಮೌಲ್ಯದ ಮೇಲೆ 30% ತೆರಿಗೆ ಮತ್ತು 30% ಹೆಚ್ಚುವರಿ ಶುಲ್ಕ ಸೇರಿದಂತೆ ಒಟ್ಟು 60% ತೆರಿಗೆ ಪಾವತಿಸಬೇಕಾಗುತ್ತದೆ.

ವರದಿ ಮಾಡದ ಕಾನೂನುಬದ್ಧ ಆಸ್ತಿ (₹5 ಕೋಟಿಯವರೆಗೆ): ಆಸ್ತಿಯು ಕಾನೂನುಬದ್ಧವಾಗಿದ್ದು, ಐಟಿಆರ್ (Schedule FA) ನಲ್ಲಿ ನಮೂದಿಸಲು ಮರೆತಿದ್ದರೆ, ₹1 ಲಕ್ಷದ ನಿಗದಿತ ಶುಲ್ಕ (Flat Fee) ಪಾವತಿಸಿ ಕಾಯ್ದೆಗೊಳಿಸಬಹುದು.

ಈ ಯೋಜನೆಯಡಿ ಸರಿಯಾಗಿ ಮಾಹಿತಿ ನೀಡಿದ ತೆರಿಗೆದಾರರಿಗೆ ಕಪ್ಪು ಹಣ ಕಾಯ್ದೆ (Black Money Act, 2015) ಅಡಿಯಲ್ಲಿ ಕಠಿಣ ದಂಡ (90%) ಹಾಗೂ ಶಿಕ್ಷೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ.

ಈ ಯೋಜನೆಯು ವಿದೇಶಿ ಆಸ್ತಿ ಮತ್ತು ಆದಾಯವನ್ನು ಬಹಿರಂಗಪಡಿಸಲು ತೆರಿಗೆದಾರರಿಗೆ ನೀಡಲಾದ ಒಂದು ಅವಕಾಶವಾಗಿದೆ. ಆದರೆ, ಈ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ.

₹1 ಕೋಟಿಯ ಆಸ್ತಿ ಬಹಿರಂಗಪಡಿಸಲು ₹60 ಲಕ್ಷ ಏಕೆ?

₹1 ಕೋಟಿ ರೂ ಆಸ್ತಿ ಘೋಷಣೆಗೆ ₹60 ಲಕ್ಷ ಪಾವತಿಸಬೇಕು ಎಂದರೆ ಅದು 60% ತೆರಿಗೆ ಎಂದು ತಪ್ಪಾಗಿ ಭಾವಿಸಬಹುದು. ವಾಸ್ತವದಲ್ಲಿ ಅದರ ಲೆಕ್ಕಾಚಾರ ಹೀಗೆ ಇರುತ್ತದೆ:

30% ತೆರಿಗೆ: ಮೂಲ ಆದಾಯ ಅಥವಾ ಆಸ್ತಿಯ ಮೇಲೆ 30% ತೆರಿಗೆ ಬೀಳುತ್ತದೆ.

30% ಹೆಚ್ಚುವರಿ ಶುಲ್ಕ: ಅಷ್ಟೇ ಮೊತ್ತದ (ಅಂದರೆ ತೆರಿಗೆಯ 100% ರಷ್ಟು) ದಂಡ ಅಥವಾ ಹೆಚ್ಚುವರಿ ಮೊತ್ತವನ್ನು ವಿಧಿಸಲಾಗುತ್ತದೆ.

ಒಟ್ಟು ಸೇರಿದರೆ, ₹1 ಕೋಟಿ ಮೌಲ್ಯದ ಆಸ್ತಿ ಘೋಷಣೆಗೆ ₹60 ಲಕ್ಷ ಪಾವತಿಸಬೇಕಾಗುತ್ತದೆ. ಇದು ‘ಅಘೋಷಿತ’ ವಿದೇಶಿ ಆಸ್ತಿಗಳಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ: ನಿಮ್ಮ ಬಳಿ ಈ ದಾಖಲೆಗಳಿದ್ರೆ ಮೃತ ವ್ಯಕ್ತಿಯ ಬ್ಯಾಂಕ್ ಖಾತೆಗಳ ವಿವರ ಪಡೆಯೋದು ಸುಲಭ

ಎರಡು ವಿಧದ ವರ್ಗೀಕರಣಗಳಿವೆ, ಗಮನಿಸಿ

ಎಲ್ಲಾ ಪ್ರಕರಣಗಳಿಗೂ 60% ದಂಡ ಬೀಳುವುದಿಲ್ಲ. ಯೋಜನೆಯಲ್ಲಿ ಎರಡು ಪ್ರಮುಖ ವಿಭಾಗಗಳಿವೆ:

ಮೊದಲನೇ ವಿಭಾಗ (Category 1): ಅಘೋಷಿತ ವಿದೇಶಿ ಆಸ್ತಿ ಅಥವಾ ಆದಾಯ. ಅಂದರೆ, ಈ ಆಸ್ತಿ ಹೇಗೆ ಬಂತು ಎಂಬುದಕ್ಕೆ ಸಮಂಜಸವಾದ ವಿವರಣೆ ಇಲ್ಲದಿದ್ದಲ್ಲಿ. ಇಲ್ಲಿ ಗರಿಷ್ಠ ಮಿತಿ ₹1 ಕೋಟಿ. ಇದಕ್ಕೆ ಮೇಲೆ ಹೇಳಿದಂತೆ 60% ವೆಚ್ಚವಾಗಬಹುದು.

ಎರಡನೇ ವಿಭಾಗ (Category 2): ಒಂದು ವೇಳೆ ನಿಮ್ಮ ವಿದೇಶಿ ಆಸ್ತಿ ಈಗಾಗಲೇ ತೆರಿಗೆ ಪಾವತಿಸಿದ ಹಣದಿಂದ ಬಂದಿರಬಹುದು ಅಥವಾ ನೀವು ಅನಿವಾಸಿ ಭಾರತೀಯರಾಗಿದ್ದಾಗ (NRI) ಗಳಿಸಿರಬಹುದು. ಆದರೆ ಅದನ್ನು ನಿಮ್ಮ ಐಟಿಆರ್ (Income Tax Return) ನಲ್ಲಿ ತೋರಿಸಲು ಮರೆತಿದ್ದರೆ, ಅದಕ್ಕೆ ಅಂತಹ ಭಾರಿ ತೆರಿಗೆ ಇರುವುದಿಲ್ಲ. ಈ ವರ್ಗಕ್ಕೆ ₹5 ಕೋಟಿಯವರೆಗಿನ ಆಸ್ತಿಯನ್ನು ತೋರಿಸಬಹುದು. ಇದಕ್ಕೆ ಕೇವಲ ₹1 ಲಕ್ಷದ ನಿಗದಿತ ಶುಲ್ಕ ಪಾವತಿಸಿದರೆ ಸಾಕು.

ಯಾರಿಗೆ ಈ ಯೋಜನೆ ಸೂಕ್ತ?

  • ಹಿಂದೆ ವಿದೇಶದಲ್ಲಿ ಕೆಲಸ ಮಾಡಿ ಭಾರತಕ್ಕೆ ಮರಳಿದವರು.
  • ಮರೆತುಹೋದ ಸಣ್ಣ ಪ್ರಮಾಣದ ವಿದೇಶಿ ಬ್ಯಾಂಕ್ ಖಾತೆಗಳು, ESOP ಅಥವಾ RSU (ಷೇರುಗಳು) ಹೊಂದಿರುವವರು.
  • ಅಕಸ್ಮಾತಾಗಿ ಮಾಹಿತಿ ನೀಡಲು ಮರೆತವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ