AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

28 ದಿನ ಅಲ್ಲ, ಪೂರ್ಣ ತಿಂಗಳ ರೀಚಾರ್ಜ್ ಪ್ಲಾನ್: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ನಿರ್ದೇಶನ

ಟೆಲಿಕಾಂ ಕಂಪನಿಗಳು 28 ದಿನಗಳ ಬದಲಿಗೆ ಕಡ್ಡಾಯವಾಗಿ 30 ದಿನಗಳು ಮತ್ತು ಪೂರ್ಣ ತಿಂಗಳ ವ್ಯಾಲಿಡಿಟಿ ಇರುವ ರೀಚಾರ್ಜ್ ಪ್ಲಾನ್‌ಗಳನ್ನು ತರಬೇಕೆಂದು ಟ್ರಾಯ್ ಹೊಸ ನಿಯಮ ಹಾಕಿದೆ. ಡಾಟಾ ಇಲ್ಲದೆ ಕೇವಲ ಧ್ವನಿ ಕರೆ ಮತ್ತು ಎಸ್ಸೆಮ್ಮೆಸ್ ಸೇವೆಗಳಿರುವ ಸರಳ ರೀಚಾರ್ಜ್ ಪ್ಲಾನ್​ಗಳನ್ನೂ ಕಡ್ಡಾಯವಾಗಿ ಬಿಡುಗಡೆ ಮಾಡಬೇಕು. ಟ್ರಾಯ್ (TRAI) ಹೊಸ ನಿರ್ದೇಶನಗಳನ್ನು ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಸ್ವಾಗತಸಿದ್ದಾರೆ.

28 ದಿನ ಅಲ್ಲ, ಪೂರ್ಣ ತಿಂಗಳ ರೀಚಾರ್ಜ್ ಪ್ಲಾನ್: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ನಿರ್ದೇಶನ
ಏರ್ಟೆಲ್ ಮತ್ತು ಜಿಯೋ ಸಾಂದರ್ಭಿಕ ಚಿತ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 28, 2026 | 11:54 AM

Share

ನವದೆಹಲಿ, ಸೆಪ್ಟೆಂಬರ್ 28: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್ ಎರಡು ಮಹತ್ವದ ನಿರ್ದೇಶನಗಳನ್ನು ಹೊರಡಿಸಿದೆ. ಖಾಸಗಿ ಟೆಲಿಕಾಂ ಕಂಪನಿಗಳು (Telecom Operators) ಸಾರ್ವಜನಿಕರಿಗೆ ನೀಡುತ್ತಿದ್ದ 28 ದಿನಗಳ ವ್ಯಾಲಿಡಿಟಿ ಪ್ಲಾನ್‌ಗಳ ಬದಲಿಗೆ, ಕಡ್ಡಾಯವಾಗಿ 30 ದಿನಗಳು ಮತ್ತು ಪೂರ್ಣ ಕ್ಯಾಲೆಂಡರ್ ತಿಂಗಳ (Full Month) ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳನ್ನು ನೀಡಬೇಕೆಂದು ಟ್ರಾಯ್ ಸೂಚಿಸಿದೆ. ಹಾಗೆಯೇ, ವಾಯ್ಸ್ ಕಾಲ್ ಮತ್ತು ಎಸ್ಸೆಮ್ಮೆಸ್ ಸರ್ವಿಸ್ ಇರುವ ಸರಳ ಪ್ಲಾನ್​ನ ಆಯ್ಕೆಯನ್ನೂ ಕಡ್ಡಾಯವಾಗಿ ನೀಡಬೇಕೆಂದು ದೂರವಾಣಿ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಈ ವಿಚಾರದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದ ಬಿಜೆಪಿಯ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಟ್ರಾಯ್​ನ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

28 ದಿನಗಳ ಪ್ಲಾನ್‌ ಕೈಬಿಡಬೇಕೆನ್ನುವ ಪ್ಲಾನ್ ಯಾಕೆ?

ಟೆಲಿಕಾಂ ಕಂಪನಿಗಳು ಒಂದು ತಿಂಗಳ ಪ್ಲಾನ್ ಹೆಸರಿನಲ್ಲಿ ಕೇವಲ 28 ದಿನಗಳ ವ್ಯಾಲಿಡಿಟಿ ನೀಡುತ್ತಿವೆ. ಈ ಪ್ರಕಾರ ಒಂದು ವರ್ಷದಲ್ಲಿ 12 ತಿಂಗಳ ಬದಲು 13 ತಿಂಗಳ ರೀಚಾರ್ಜ್ ಮಾಡಿಸಬೇಕಾಗುವ ಅನಿವಾರ್ಯತೆ ಇರುತ್ತದೆ. ಇದರಿಂದಾಗಿ ಪ್ರತಿಯೊಬ್ಬ ಭಾರತೀಯ ಗ್ರಾಹಕನು ಪ್ರತಿ ವರ್ಷ ಹೆಚ್ಚುವರಿಯಾಗಿ ಒಂದು ತಿಂಗಳ ರೀಚಾರ್ಜ್ ವೆಚ್ಚವನ್ನು ಭರಿಸಬೇಕಾಗಿತ್ತು. ಇದು ಟೆಲಿಕಾಂ ಕಂಪನಿಗಳಿಗೆ ಸಾವಿರಾರು ಕೋಟಿ ರೂ ಹೆಚ್ಚುವರಿ ಆದಾಯ ತಂದುಕೊಡುತ್ತದೆ.

ಇದನ್ನೂ ಓದಿ: ಕಾರುಗಳ ಸುರಕ್ಷತಾ ಪರೀಕ್ಷೆ ಮತ್ತಷ್ಟು ಕಠಿಣ; ಭಾರತ NCAP 2.0ನಲ್ಲಿ 5 ಕ್ರ್ಯಾಶ್ ಟೆಸ್ಟ್

ತಿಂಗಳ ಪ್ಲಾನ್​ನಲ್ಲಿ ಕಡ್ಡಾಯ 30 ದಿನಗಳ ವ್ಯಾಲಿಡಿಟಿ ಇರಲಿ: ಟ್ರಾಯ್

ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಪ್ಲಾನ್​ಗಳಲ್ಲಿ 30 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ಅನ್ನು ಗ್ರಾಹಕರಿಗೆ ನೀಡುವುದು ಕಡ್ಡಾಯ ಎಂದು ಟ್ರಾಯ್ ತಿಳಿಸಿದೆ. ಇದರಿಂದ ಒಂದು ವರ್ಷದಲ್ಲಿ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ 13ರಿಂದ 12ಕ್ಕೆ ಇಳಿಯುತ್ತದೆ.

ವಾಯ್ಸ್ ಕಾಲ್ ಮತ್ತು ಎಸ್ಸೆಮ್ಮೆಸ್ ಪ್ಲಾನ್

ಟ್ರಾಯ್​ನ ಮತ್ತೊಂದು ಮಹತ್ವದ ನಿರ್ದೇಶನವು ಕೂಡ ಟೆಲಿಕಾಂ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದೆ. ಎಸ್ಸೆಮ್ಮೆಸ್ ಮತ್ತು ವಾಯ್ಸ್ ಕಾಲ್ ಸೇವೆ ಮಾತ್ರವೇ ಇರುವ ಒಂದು ತಿಂಗಳ ಪ್ಲಾನ್​ನ ಆಯ್ಕೆಯನ್ನು ಒದಗಿಸಲು ಟ್ರಾಯ್ ತಿಳಿಸಿದೆ. ಪ್ರಸಕ್ತ ಟೆಲಿಕಾಂ ಕಂಪನಿಗಳ ಯಾವುದೇ ಪ್ಲಾನ್​ನಲ್ಲಿ ವಾಯ್ಸ್, ಎಸ್ಸೆಮ್ಮೆಸ್ ಜೊತೆಗೆ ಡಾಟಾ ಸರ್ವಿಸ್ ಇರುವ ಪ್ಯಾಕೇಜ್ ಇರುತ್ತದೆ. ಇವುಗಳ ಬೆಲೆ ಬಹಳ ಹೆಚ್ಚಿರುತ್ತದೆ. ಡಾಟಾ ಬಳಕೆಯ ಅಗತ್ಯ ಇಲ್ಲದ, ಮತ್ತು ಕೇವಲ ಧ್ವನಿ ಕರೆ ಮತ್ತು ಎಸ್ಸೆಮ್ಮೆಸ್ ಮಾತ್ರವೇ ಅಗತ್ಯ ಇರುವ ಗ್ರಾಹಕರಿಗೆ ಯಾವುದೇ ಮೂಲಭೂತ ಆಯ್ಕೆಗಳಿಲ್ಲ. ಡಾಟಾ ಅಗತ್ಯ ಇಲ್ಲದಿದ್ದರೂ ದುಬಾರಿ ಬೆಲೆಯ ಪ್ಲಾನ್ ಪಡೆಯುವುದು ಅನಿವಾರ್ಯವಾಗುತ್ತದೆ.

ಈಗ ಟ್ರಾಯ್ ನಿರ್ದೇಶನ ಜಾರಿಗೆ ಬಂದರೆ, ಧ್ವನಿ ಕರೆ ಮತ್ತು ಎಸ್ಸೆಮ್ಮೆಸ್​ನ ಮೂಲಭೂತ ಪ್ಲಾನ್​ಗಳು ಗ್ರಾಹಕರ ಆಯ್ಕೆಗೆ ಸಿಗಲಿದ್ದು, ರೀಚಾರ್ಜ್ ದರ ಬಹಳ ಕಡಿಮೆ ಆಗುತ್ತದೆ.

ಇದನ್ನೂ ಓದಿ: ಇಂದಿನಿಂದ ನಡೆಯಬೇಕಿದ್ದ 3 ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ

ಸಂಸದ ರಾಘವ್ ಚಡ್ಡಾ ಅವರ ಪ್ರತಿಕ್ರಿಯೆ

ಈ ಕುರಿತು ಸಂಸತ್ತಿನಲ್ಲಿ ಮತ್ತು ಟೆಲಿಕಾಂ ಸಚಿವಾಲಯಕ್ಕೆ ಪತ್ರ ಬರೆಯುವ ಮೂಲಕ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ್ದ ರಾಘವ್ ಚಡ್ಡಾ, “ಟ್ರಾಯ್‌ನ ಈ ನಿರ್ಧಾರವು ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಆರ್ಥಿಕ ಪರಿಹಾರ ತರಲಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್