ಡೇಟಾ ಇರದ ವಾಯ್ಸ್ ಪ್ಲಾನ್ ಮಾತ್ರ ಇರಬೇಕು: ಟ್ರಾಯ್ ಹೊಸ ರೂಲ್ಸ್​ನಿಂದ ನಿಟ್ಟುಸಿರು ಬಿಟ್ಟ ಜನರು

ಡೇಟಾ ಬಳಸದ ಮೊಬೈಲ್ ಬಳಕೆದಾರರಿಗೆ ಏರ್ಟೆಲ್, ಜಿಯೋ ಮತ್ತು ವಿ ಹೊಸ ರೀಚಾರ್ಜ್ ಆಯ್ಕೆಗಳನ್ನು ನೀಡಬೇಕಾಗುತ್ತದೆ. ಟ್ರಾಯ್ ನಿಯಮದಂತೆ ಕೇವಲ ಧ್ವನಿ ಕರೆ ಮತ್ತು ಎನ್ಎಮ್ಎಸ್ ಸೌಲಭ್ಯ ಹೊಂದಿರುವ ಪ್ಲಾನ್‌ಗಳನ್ನು ವಿವಿಧ ಅವಧಿಗೆ ಪರಿಚಯಿಸಬೇಕು. 30 ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಆಯ್ಕೆಗಳ ಜೊತೆಗೆ ಮಾಸಿಕ ರೀಚಾರ್ಜ್‌ಗೂ ಅವಕಾಶ ಇರಲಿದೆ.

ಡೇಟಾ ಇರದ ವಾಯ್ಸ್ ಪ್ಲಾನ್ ಮಾತ್ರ ಇರಬೇಕು: ಟ್ರಾಯ್ ಹೊಸ ರೂಲ್ಸ್​ನಿಂದ ನಿಟ್ಟುಸಿರು ಬಿಟ್ಟ ಜನರು
Jio, Airtel, Vi And Trai
Edited By:

Updated on: Sep 26, 2026 | 9:20 AM

ಮುಖ್ಯಾಂಶಗಳು

  • ಡೇಟಾ ಬೇಡವೇ? ಏರ್ಟೆಲ್, ಜಿಯೋ ಮತ್ತು ವಿ ಬಳಕೆದಾರರಿಗೆ ಹೊಸ ಪ್ಲಾನ್!
  • ಕೇವಲ ಕರೆ, SMS ಬಳಸುವವರಿಗೆ TRAIನಿಂದ ಹೊಸ ನಿಯಮ!
  • ರೀಚಾರ್ಜ್ ಮಾಡುವ ಮುನ್ನ ಈ ಹೊಸ ನಿಯಮ ತಿಳಿದುಕೊಳ್ಳಿ!

ಮೊಬೈಲ್‌ನಲ್ಲಿ ಇಂಟರ್‌ನೆಟ್ ಡೇಟಾ ಬಳಸದೆ ಕೇವಲ ಕರೆ ಮತ್ತು ಎಸ್‌ಎಂಎಸ್‌ಗಾಗಿ ಸಿಮ್ ಬಳಸುವವರಿಗೆ ಇನ್ನು ಮುಂದೆ ಹೆಚ್ಚಿನ ರೀಚಾರ್ಜ್ ಆಯ್ಕೆಗಳು ಸಿಗಲಿವೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಏರ್ಟೆಕ್, ಜಿಯೋ, ವೊಡಾಫೋನ್ ಐಡಿಯಾ (Vi) ಸೇರಿದಂತೆ ಟೆಲಿಕಾಂ ಕಂಪನಿಗಳು ಕೇವಲ ಧ್ವನಿ ಕರೆ ಮತ್ತು ಎಸ್‌ಎಂಎಸ್ ಸೌಲಭ್ಯ ಹೊಂದಿರುವ ರೀಚಾರ್ಜ್ ಪ್ಲಾನ್‌ಗಳನ್ನು ನೀಡಬೇಕಾಗುತ್ತದೆ. ಈ ಹೊಸ ನಿಯಮಗಳು 2026ರ ಅಕ್ಟೋಬರ್ 21ರಿಂದ ಜಾರಿಗೆ ಬರಲಿವೆ.

30 ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಗೂ ಪ್ಲಾನ್

TRAI ನಿಯಮದ ಪ್ರಕಾರ, ಟೆಲಿಕಾಂ ಕಂಪನಿಗಳು ಈಗ ಡೇಟಾ ಪ್ಲಾನ್‌ಗಳನ್ನು ಯಾವ ಅವಧಿಗೆ ನೀಡುತ್ತವೆಯೋ, ಅದೇ ಅವಧಿಗೆ Voice-SMS ಮಾತ್ರ ಇರುವ ವಿಶೇಷ ಟ್ಯಾರಿಫ್ ವೌಚರ್‌ಗಳನ್ನು ಕೂಡ ನೀಡಬೇಕು. ವಿಶೇಷವಾಗಿ 30 ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಡೇಟಾ ಪ್ಲಾನ್‌ಗಳಿಗೆ ಇದೇ ಅವಧಿಯ ವಾಯ್ಸ್-ಎಸ್‌ಎಂಎಸ್ ಪ್ಲಾನ್ ಇರಬೇಕು.

ಇದರಿಂದ ಗ್ರಾಹಕರು ಕೇವಲ 84 ದಿನ ಅಥವಾ 365 ದಿನಗಳಂತಹ ದೀರ್ಘಾವಧಿಯ ರೀಚಾರ್ಜ್‌ಗಳನ್ನೇ ಅವಲಂಬಿಸಬೇಕಾಗಿಲ್ಲ. ತಮ್ಮ ಅಗತ್ಯಕ್ಕೆ ತಕ್ಕಂತೆ ಕಡಿಮೆ ಅವಧಿಯ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಇದರ ಜೊತೆಗೆ 30 ದಿನಕ್ಕಿಂತ ಹೆಚ್ಚಿನ ಅವಧಿಯ ಕನಿಷ್ಠ ಒಂದು ವಾಯ್ಸ್-ಎಸ್‌ಎಂಎಸ್ ಪ್ಲಾನ್ ಕೂಡ ಕಂಪನಿಗಳು ನೀಡಬೇಕಾಗುತ್ತದೆ.

ಯಾರಿಗೆ ಹೆಚ್ಚು ಉಪಯೋಗ?

ಮೊಬೈಲ್ ಡೇಟಾ ಅಗತ್ಯವಿಲ್ಲದವರಿಗೆ ಈ ನಿಯಮ ಹೆಚ್ಚು ಅನುಕೂಲವಾಗಬಹುದು. ಫೀಚರ್ ಫೋನ್ ಬಳಸುವವರು, ಹಿರಿಯ ನಾಗರಿಕರು, ಕೇವಲ ಕರೆಗಾಗಿ ಎರಡನೇ ಸಿಮ್ ಇಟ್ಟುಕೊಂಡಿರುವವರು ಹಾಗೂ ಇಂಟರ್‌ನೆಟ್‌ಗಾಗಿ ಮನೆಯ ವೈ-ಫೈ ಬಳಸುವವರು ಇಂತಹ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದು. ಅಂದರೆ, ಅಗತ್ಯವಿಲ್ಲದ ಡೇಟಾಕ್ಕೂ ಹಣ ಪಾವತಿಸುವ ಬದಲು ಕೇವಲ ಕರೆ ಮತ್ತು ಎಸ್‌ಎಂಎಸ್ ಸೇವೆಗಳಿಗೆ ರೀಚಾರ್ಜ್ ಮಾಡಿಕೊಳ್ಳಲು ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಸಿಗಲಿದೆ.

Apple Pay: ಭಾರತಕ್ಕೆ ಬರಲಿದೆ ಆಪಲ್ ಪೇ; ಯುಪಿಐ ಇಲ್ಲದೆ ಇದು ಹೇಗೆ ಕೆಲಸ ಮಾಡಲಿದೆ?

ಪ್ರತಿ ತಿಂಗಳು ಒಂದೇ ದಿನ ರೀಚಾರ್ಜ್ ಮಾಡಬಹುದು

ಮಾಸಿಕ ರೀಚಾರ್ಜ್‌ಗೂ ಹೊಸ ನಿಯಮದಲ್ಲಿ ಅವಕಾಶ ನೀಡಲಾಗಿದೆ. ಕಂಪನಿಗಳು ಕನಿಷ್ಠ ಒಂದು ವಾಯ್ಸ್-ಎಸ್‌ಎಂಎಸ್ ಪ್ಲಾನ್ ಅನ್ನು ನೀಡಬೇಕು. ಅದನ್ನು ಪ್ರತಿ ತಿಂಗಳು ಒಂದೇ ದಿನದಂದು ನವೀಕರಿಸಿಕೊಳ್ಳಲು ಸಾಧ್ಯವಾಗಬೇಕು. ಉದಾಹರಣೆಗೆ, ಒಂದು ತಿಂಗಳು 15ರಂದು ರೀಚಾರ್ಜ್ ಮಾಡಿದರೆ ಮುಂದಿನ ತಿಂಗಳಲ್ಲೂ 15ರಂದು ನವೀಕರಿಸಬಹುದು. ಆ ದಿನಾಂಕವಿಲ್ಲದ ತಿಂಗಳಲ್ಲಿ ತಿಂಗಳ ಕೊನೆಯ ದಿನ ನವೀಕರಣವಾಗುತ್ತದೆ.

TRAI ಏಕೆ ಈ ನಿಯಮ ತಂದಿದೆ?

TRAI 2024ರ ಡಿಸೆಂಬರ್‌ನಲ್ಲಿಯೇ ಟೆಲಿಕಾಂ ಕಂಪನಿಗಳಿಗೆ ಕನಿಷ್ಠ ಒಂದು Voice-SMS ಮಾತ್ರ ಇರುವ ಪ್ಲಾನ್ ನೀಡುವಂತೆ ಸೂಚಿಸಿತ್ತು. ಆದರೆ ಇಂತಹ ಪ್ಲಾನ್‌ಗಳ ಆಯ್ಕೆಗಳು ಸೀಮಿತವಾಗಿದ್ದು, ಹಲವು ಪ್ಲಾನ್‌ಗಳು ದೀರ್ಘಾವಧಿಯದ್ದಾಗಿದ್ದವು. ಕಡಿಮೆ ಅವಧಿಯ ರೀಚಾರ್ಜ್‌ಗಳ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ TRAI ಹೊಸ ನಿಯಮಗಳನ್ನು ರೂಪಿಸಿದೆ.

2026ರ ಏಪ್ರಿಲ್‌ನಲ್ಲಿ ಟ್ರಾಯ್ ಕರಡು ನಿಯಮಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಅಭಿಪ್ರಾಯ ಕೇಳಿತ್ತು. ಈ ಪ್ರಕ್ರಿಯೆಯಲ್ಲಿ 1,132 ಪ್ರತಿಕ್ರಿಯೆಗಳು ಬಂದಿದ್ದು, ಸೆಪ್ಟೆಂಬರ್ 21ರಂದು ಹೊಸ ನಿಯಮಗಳನ್ನು ಅಧಿಸೂಚನೆ ಮಾಡಲಾಗಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us