ಒಂದು ಸಮೀಕ್ಷೆ ಆಗಿದೆ. ಅದರ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ತಿಂಗಳ ಕುಟುಂಬ ವೆಚ್ಚ ಶೇ 10ರಷ್ಟು ಹೆಚ್ಚಾಗಿದೆ ಎಂದು ಶೇ 92ರಷ್ಟು ಕುಟುಂಬಗಳು ಹೇಳಿವೆ. ಈ ಶೇಕಡಾವಾರು ಪ್ರಮಾಣವನ್ನು ಸಂಖ್ಯೆಯಲ್ಲಿ ಹೇಳಬೇಕು ಅಂದರೆ, ತಿಂಗಳಿಗೆ ಕುಟುಂಬ ವೆಚ್ಚ ಎಂದು 10 ಸಾವಿರ ರೂಪಾಯಿ ಆಗುತ್ತಿದ್ದವರಿಗೆ ಈಗ 11,000 ರೂಪಾಯಿ ಖರ್ಚು. ಅಲ್ಲಿಗೆ 1000 ರೂಪಾಯಿ ಹೆಚ್ಚಳ. ಇದಕ್ಕೆ ಕಾರಣ ಏನು ಅಂತ ನೋಡಿದರೆ, ಪೆಟ್ರೋಲ್, ಡೀಸೆಲ್, ಖಾದ್ಯ ತೈಲ, ಗೃಹಬಳಕೆ ಅಗತ್ಯ ವಸ್ತುಗಳು ಮತ್ತು ಇತರ ಸಂಬಂಧಿಸಿದ ಉತ್ಪನ್ನಗಳು ಹಾಗೂ ಸೇವೆಗಳ ಬೆಲೆಯಲ್ಲಿ ಹೆಚ್ಚಳ (Price Hike) ಆಗಿರುವುದು ಕಂಡುಬರುತ್ತದೆ.
ಈ ಸಮೀಕ್ಷೆಯಲ್ಲಿ ಭಾಗಿ ಆದವರ ಪೈಕಿ ಶೇ 70ರಷ್ಟು ಮಂದಿ ತಮ್ಮ ತಿಂಗಳ ಬಜೆಟ್ನಲ್ಲಿ ಶೇ 10ರಷ್ಟು ಹೆಚ್ಚಳ ಆಗಿರುವ ಬಗ್ಗೆ ಹೇಳಿದ್ದು, ಶೇ 55ರಷ್ಟು ಮಂದಿ ಅಭಿಪ್ರಾಯದ ಪ್ರಕಾರ, ಮುಂದಿನ ಮೂರು ತಿಂಗಳಲ್ಲಿ ಇನ್ನೂ ಶೇ 10ರಷ್ಟು ಹೆಚ್ಚಳ ಆಗುತ್ತದೆ ಎಂದು ನಿರೀಕ್ಷಿಸುವುದಾಗಿ ಹೇಳಿದ್ದಾರೆ. ಈ ಸಮೀಕ್ಷೆಯನ್ನು ಲೋಕಲ್ ಸರ್ಕಲ್ಸ್ ನಡೆಸಿದ್ದು, 323 ಜಿಲ್ಲೆಗಳ 12 ಸಾವಿರ ಕುಟುಂಬಗಳು ಹಾಗೂ 23,500 ಮಂದಿ ಭಾಗಿ ಆಗಿದ್ದರು.
ಲೋಕಲ್ ಸರ್ಕಲ್ಸ್ ಎಂಬುದು ಸಮುದಾಯ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್. ನಾಗರಿಕರು, ಸಣ್ಣ ವ್ಯಾಪಾರದವರು ಈ ವಿಚಾರವನ್ನು ಪ್ರಸ್ತಾಪಿಸಿ, ನೀತಿ ಹಾಗೂ ಜಾರಿಗೆ ಮಧ್ಯಸ್ಥಿಕೆ ವಹಿಸುವುದಕ್ಕೆ ಒತ್ತಡ ಹೇರುವಂತೆ ಗಟ್ಟಿಗೊಳಿಸುತ್ತದೆ. ಲೋಕಲ್ ಸರ್ಕಲ್ಸ್ ಹೇಳಿರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಿದರೆ ಕುಟುಂಬಗಳ ಖರ್ಚಿ ಪ್ರಮಾಣದಲ್ಲಿ ಪ್ರಮುಖ ಪರಿಣಾಮ ಉಂಟು ಮಾಡಲಿದೆ.
ಇನ್ನು ಇದಕ್ಕೆ ಪರಿಹಾರ ಏನು ಅಂತ ನೋಡುವುದಾದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಸೇರಿ ಕನಿಷ್ಠ ಲೀಟರ್ಗೆ 10 ರೂಪಾಯಿಯಷ್ಟು ಇಳಿಕೆ ಮಾಡಬಹುದು. ಆದರೆ ಅದಕ್ಕಾಗಿ ಕೇಂದ್ರದಿಂದ ಅಬಕಾರಿ ಸುಂಕ ಹಾಗೂ ರಾಜ್ಯದಿಂದ ವ್ಯಾಟ್ ಕಡಿಮೆ ಮಾಡಿದಲ್ಲಿ ಆಗ ಪೆಟ್ರೋಲ್- ಡೀಸೆಲ್ ಬೆಲೆ ಕಡಿಮೆ ಆಗುತ್ತದೆ.ಆಗ ಏರುತ್ತಿರುಬ ತೈಲ ಬೆಲೆ ಕುಟುಂಬಗಳ ವೆಚ್ಚದ ಮೇಲೆಬೀರುತ್ತಿರುವ ಪ್ರಭಾವವೂ ತಗ್ಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Sat, 21 May 22