ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ

| Updated By: Ganapathi Sharma

Updated on: Oct 29, 2022 | 5:52 PM

ವೈರಸ್ ದಾಳಿಯಿಂದ ಬ್ಯಾಂಕ್​ ಖಾತೆಗೆ ಸಂಬಂಧಿಸಿದ ದತ್ತಾಂಶಗಳನ್ನು ಸಂರಕ್ಷಿಸಿಕೊಳ್ಳಲು ನಿಮಗೆ ಈ ಮಾಹಿತಿ ತಿಳಿದಿರಲಿ...

ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಡ್ರಿಲಿಂಕ್ ಕುತಂತ್ರಾಂಶದ (Drinik malware) ಸುಧಾರಿತ ಅಥವಾ ಅಪ್​ಗ್ರೇಡೆಡ್ ವರ್ಷನ್ ದಾಳಿಯಿಂದಾಗಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶಗಳು ಅಪಾಯದಲ್ಲಿವೆ ಎಂದು ವರದಿಯಾಗಿದೆ. ವಿಶ್ಲೇಷಕರ ಪ್ರಕಾರ, ಮಾಲ್​ವೇರ್ ಸದ್ಯ ಆ್ಯಂಡ್ರಾಯ್ಡ್ ಟ್ರೋಜನ್ ಆಗಿ ಪರಿವರ್ತನೆಗೊಂಡಿದ್ದು, ಮಹತ್ವದ ವೈಯಕ್ತಿ ವಿಚಾರಗಳು ಹಾಗೂ ಬ್ಯಾಂಕಿಂಗ್ ದತ್ತಾಂಶಕ್ಕೆ ಕನ್ನ ಹಾಕುವ ಸಾಧ್ಯತೆ ಇದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

2016ರಲ್ಲೇ ಕನ್ನ ಹಾಕಿದ್ದ ಮಾಲ್​ವೇರ್

ಡ್ರಿಲಿಂಕ್ ಕುತಂತ್ರಾಂಶ ಅಥವಾ ಮಾಲ್​ವೇರ್ 2016ರಲ್ಲೇ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಟಕೊಟ್ಟಿತ್ತು. ಆಗ ಎಸ್​ಎಂಎಸ್​ಗಳ ಮೂಲಕ ಗ್ರಾಹಕರ ದತ್ತಾಂಶ ಕದಿಯುತ್ತಿದ್ದ ಮಾಲ್​ವೇರ್ ಈಗ ಇನ್ನಷ್ಟು ಸುಧಾರಿತಗೊಂಡು ಮರಳಿದೆ. ಪ್ರಸ್ತುತ ಸ್ಕ್ರೀನ್​ ರೆಕಾರ್ಡಿಂಗ್, ಕೀಲಾಗಿಂಗ್, ಆಕ್ಸೆಸಿಬಿಲಿಟಿ ಸೇವೆಗಳ ದುರಪಯೋಗ, ಓವರ್​ಲೇ ದಾಳಿಗಳನ್ನು ನಡೆಸುವ ಸಾಮರ್ಥ್ಯ ಒಳಗೊಂಡಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಇದನ್ನೂ ಓದಿ
ಟ್ವಿಟರ್​ನಿಂದ ವಜಾಗೊಂಡ ಪರಾಗ್ ಅಗರ್​ವಾಲ್​ಗೆ ಸಿಗಲಿದೆ 346 ಕೋಟಿ ರೂ. ಪರಿಹಾರ
Maruti Suzuki: ಮಾರುತಿ ಸುಜುಕಿ ನಿವ್ವಳ ಲಾಭ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳ
ಟಿಡಿಎಸ್​ ಸಲ್ಲಿಕೆ ಗಡುವು ನವೆಂಬರ್ 30ಕ್ಕೆ ವಿಸ್ತರಿಸಿದ ಸಿಬಿಡಿಟಿ
RBI MPC meet: ಬೆಲೆ ಏರಿಕೆ, ಹಣದುಬ್ಬರ ತಡೆಯಲಾಗದ್ದಕ್ಕೆ ಏನು ಕಾರಣ ನೀಡಬಹುದು ಆರ್​ಬಿಐ?

ಮಾಲ್​ವೇರ್ ಗ್ರಾಹಕರನ್ನು ಗುರಿಯಾಗಿಸುವುದು ಹೀಗೆ…

ಮಾಧ್ಯಮ ವರದಿಗಳ ಪ್ರಕಾರ, ಡ್ರಿಲಿಂಕ್ ಮಾಲ್​ವೇರ್​ನ ಇತ್ತೀಚಿನ ಸುಧಾರಿತ ವರ್ಷನ್ ಎಪಿಕೆ ಹೆಸರಿನ (APK) ಐಅಸಿಸ್ಟ್ (iAssist) ಮೂಲಕ ಗ್ರಾಹಕರನ್ನು ಗುರಿಯಾಗಿಸುತ್ತದೆ. ಐಅಸಿಸ್ಟ್ ಎಂಬುದು ಭಾರತೀಯ ತೆರಿಗೆ ಇಲಾಖೆಯ ಅಧಿಕೃತ ತೆರಿಗೆ ನಿರ್ವಹಣಾ ಟೂಲ್ ಆಗಿದೆ. ಒಮ್ಮೆ ಮಾಲ್​ವೇರ್ ಬಾಧಿತ ಐಅಸಿಸ್ಟ್ ಇನ್​ಸ್ಟಾಲ್ ಮಾಡಿದರೆ, ಅದು ಎಸ್​ಎಂಎಸ್​ಗಳನ್ನು ಕಳುಹಿಸುವ, ಓದುವ ಅನುಮತಿ ಕೇಳುತ್ತದೆ. ಎಕ್ಸ್​​ಟರ್ನಲ್ ಸ್ಟೋರೇಜ್ ಅನ್ನು ಓದುವ ಅನುಮತಿಯನ್ನೂ ಕೇಳುತ್ತದೆ. ಇತರ ಬ್ಯಾಂಕಿಂಗ್ ಟ್ರೋಜನ್​ಗಳಂತೆ ಡ್ರಿಲಿಂಕ್ ಕೂಡ ಸರ್ವೀಸ್ ಆಕ್ಸೆಸಿಬಿಲಿಟಿ ಆಧಾರದಲ್ಲೇ ದಾಳಿ ನಡೆಸುತ್ತದೆ. ಒಮ್ಮೆ ಸಂತ್ರಸ್ತರು ಎಲ್ಲದಕ್ಕೂ ಅನುಮತಿಸಿದ ಬಳಿಕ ಗೂಗಲ್ ಪ್ಲೇ ಪ್ರೊಟೆಕ್ಟ್ ಅನ್ನು ಡಿಸೇಬಲ್ ಮಾಡುತ್ತದೆ. ನಂತರ ತನ್ನ ಕಾರ್ಯಾಚರಣೆ ಶುರುಮಾಡುತ್ತದೆ.

ನಂತರ ನಕಲಿ ಪೇಜ್​ಗಳನ್ನು ತೆರೆಯುವ ಬದಲು ಭಾರತೀಯ ಆದಾಯ ತೆರಿಗೆ ಇಲಾಖೆಯ ನೈಜ ಸೈಟ್​ ಅನ್ನು ಲೋಡ್ ಆಗುವಂತೆ ಮಾಡುತ್ತದೆ. ಲಾಗಿನ್ ಪೇಜ್​ ಅನ್ನು ತೋರಿಸುವ ಮೊದಲು ಮಾಲ್​ವೇರ್, ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅಥೆಂಟಿಕೇಷನ್ ಸ್ಕ್ರೀನ್​ ಅನ್ನು ಡಿಸ್​ಪ್ಲೇ ಮಾಡುತ್ತದೆ. ಸಂತ್ರಸ್ತರು ಪಿನ್ ಎಂಟರ್ ಮಾಡಿದ ಕೂಡಲೇ ಮಾಲ್​ವೇರ್, ಮೀಡಿಯಾ ಪ್ರೊಜೆಕ್ಷನ್ ಬಳಸಿಕೊಂಡು ಸ್ಕ್ರೀನ್​ರೆಕಾರ್ಡಿಂಗ್ ಮೂಲಕ ಬಯೋಮೆಟ್ರಿಕ್ ಪಿನ್ ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಜತೆಗೆ ಕೀಸ್ಟ್ರೋಕ್​ಗಳನ್ನೂ ಸಂಗ್ರಹಿಸುತ್ತದೆ. ನಂಗತರ ಕದ್ದ ಮಾಹಿತಿಯನ್ನು C&C ಸರ್ವರ್​ಗೆ ಕಳುಹಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ