AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೂ ಬಂದ ಆಂಥ್ರೋಪಿಕ್; ಬೆಂಗಳೂರಿನಲ್ಲಿ ಅಂಗಡಿ ತೆರೆದ ಎಐ ಕಂಪನಿ

Anthropic starts its office in Bengaluru: ಕೋಡಿಂಗ್ ಇತ್ಯಾದಿ ಕೆಲಸಗಳನ್ನು ಸಲೀಸಾಗಿ ಮಾಡುವ ಎಐ ಮಾಡಲ್​ಗಳನ್ನು ಹೊಂದಿರುವ ಆಂಥ್ರೋಪಿಕ್ ಎನ್ನುವ 2021ರ ಸಂಜಾತ ಕಂಪನಿ ಭಾರತದಲ್ಲಿ ಮೊದಲ ಕಚೇರಿ ಆರಂಭಿಸಿದೆ. ಬೆಂಗಳೂರಿನಲ್ಲಿ ಇವತ್ತು (ಫೆ. 16) ಆಂಥ್ರೋಪಿಕ್ ಕಚೇರಿ ಆರಂಭವಾಗಿದೆ. ಅಮೆರಿಕ, ಯೂರೋಪ್​ಗಳಲ್ಲಿ ಹಲವು ಕಚೇರಿಗಳನ್ನು ಅದು ಹೊಂದಿದೆ. ಜಪಾನ್​ನ ಟೋಕಿಯೋ ಬಿಟ್ಟರೆ ಏಷ್ಯಾದಲ್ಲಿ ಅದರ ಕಚೇರಿ ಇರುವುದು ಈಗ ಬೆಂಗಳೂರಿನಲ್ಲಿ ಮಾತ್ರ.

ಭಾರತಕ್ಕೂ ಬಂದ ಆಂಥ್ರೋಪಿಕ್; ಬೆಂಗಳೂರಿನಲ್ಲಿ ಅಂಗಡಿ ತೆರೆದ ಎಐ ಕಂಪನಿ
ಆಂಥ್ರೋಪಿಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2026 | 5:17 PM

Share

ಬೆಂಗಳೂರು, ಫೆಬ್ರುವರಿ 16: ಎಐ ಸೇವೆಗಳನ್ನು ನೀಡುವ ಆಂಥ್ರೋಪಿಕ್ (Anthropic) ಸಂಸ್ಥೆ ಬೆಂಗಳೂರಿನಲ್ಲಿ ಹೊಸ ಕಚೇರಿ ತೆರೆದಿದೆ. ಇದು ಭಾರತದಲ್ಲಿ ಆಂಥ್ರೋಪಿಕ್​ನ ಮೊದಲ ಕಚೇರಿಯಾಗಿದೆ. ಏಷ್ಯಾದಲ್ಲಿ ಅದರ ಎರಡನೇ ಕಚೇರಿಯಾಗಿದೆ. ಭಾರತದ ಅಗಾಧ ಮಾರುಕಟ್ಟೆ, ವಿಫುಲ ಅವಕಾಶಗಳಿರುವ ಹಿನ್ನೆಲೆಯಲ್ಲಿ ಈ ಅಮೆರಿಕನ್ ಎಐ ಕಂಪನಿ ಬೆಂಗಳೂರಿನಲ್ಲಿ ಕಚೇರಿ ತೆರೆದಿದೆ.

ಆಂಥ್ರೋಪಿಕ್​ನ ಸೂಪರ್ ಹಿಟ್ ಎಐ ಉತ್ಪನ್ನಗಳಲ್ಲಿ ಕ್ಲಾಡ್ ಎಐ ಒಂದು. ಇದು ಜನರೇಟಿವ್ ಎಐ ಮಾಡಲ್ ಆದರೂ ಕೋಡಿಂಗ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದಕ್ಕೆ ಖ್ಯಾತಿ ಪಡೆದಿದೆ. ಅದರ ಕ್ಲಾಡ್ ಎಐ ಸರ್ವಿಸ್​ಗೆ ಭಾರತವೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ. ಆ್ಯಪ್​ಗಳನ್ನು ತಯಾರಿಸುವುದು, ಸಿಸ್ಟಂಗಳ ಆಧುನೀಕರಣ, ಪ್ರೊಡಕ್ಷನ್ ಸಾಫ್ಟ್​ವೇರ್ ಸಾಗಣೆ ಇತ್ಯಾದಿಗೆ ಕ್ಲಾಡ್ ಎಐ ಬಳಕೆ ಭಾರತದಲ್ಲಿ ಹೆಚ್ಚಿದೆ. ಹೀಗಾಗಿ, ಭಾರತದ ಮಾರುಕಟ್ಟೆಯ ಮೇಲೆ ಆಂಥ್ರೋಪಿಕ್ ಹೆಚ್ಚಿನ ಕಣ್ಣು ನೆಡಲು ನಿರ್ಧರಿಸಿದೆ.

ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

‘ಬೆಂಗಳೂರು ಕಚೇರಿಯನ್ನು ಇವತ್ತು ಅಧಿಕೃತವಾಗಿ ತೆರೆದಿದ್ದೇವೆ. ಉದ್ದಿಮೆ, ಶಿಕ್ಷಣ ಮತ್ತು ಕೃಷಿ ಸೆಕ್ಟರ್​ಗಳಲ್ಲಿ ಜೊತೆಗಾರಿಕೆಗಳನ್ನು ಹೊಂದಿದ್ದೇವೆ. ಭಾರತದ ಎಲ್ಲಾ ಸೆಕ್ಟರ್​ಗಳಲ್ಲೂ ಎಐ ಸೇವೆ ಮಾಡಲು ಬದ್ಧರಾಗಿದ್ದೇವೆ. ಹೆಚ್ಚು ಜನರು ಮತ್ತು ಉದ್ದಿಮೆಗಳಿಗೆ ಎಐ ಲಾಭಗಳನ್ನು ಕೊಡಲು ಭಾರತ ಒಳ್ಳೆಯ ಅವಕಾಶ ಕೊಡುತ್ತದೆ. ಭಾರತದಲ್ಲಿ ಅಸಾಧಾರಣ ತಾಂತ್ರಿಕ ಪ್ರತಿಭೆ, ಅಗಾಧ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಇದೆ. ತಂತ್ರಜ್ಞಾನ ಮೂಲಕ ಜನರ ಜೀವನ ಸುಧಾರಿಸುವ ಕಾರ್ಯದಲ್ಲಿ ಯಶಸ್ಸು ಹೊಂದಿದೆ. ಈ ಎಐ ತಂತ್ರಜ್ಞಾನವು ಜನರಿಗೆ ಅನುಕೂಲವಾಗುವಂತಾಗಲು ಇಂತಹ ವಾತಾವರಣವೇ ಬೇಕಿರುವುದು’ ಎಂದು ಆಂಥ್ರೋಪಿಕ್​ನ ಭಾರತ ವಿಭಾಗದ ಎಂಡಿ ಇರಿನಾ ಘೋಸ್ ಹೇಳುತ್ತಾರೆ.

ಭಾರತದಲ್ಲಿ ಕನ್ನಡ, ಹಿಂದಿ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಎಐ ಮಾಡಲ್ ಅಭಿವೃದ್ಧಿಪಡಿಸುವ ಕಡೆಗೂ ಆಂಥ್ರೋಪಿಕ್ ಗಮನ ಹರಿಸುತ್ತಿದ್ದು, ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸಿದೆ. ಈಗಿರುವ ಎಐ ಮಾಡಲ್​ಗಳು ಇಂಗ್ಲೀಷ್​ನಲ್ಲಿ ಉತ್ತಮ ಸೇವೆ ಒದಗಿಸುತ್ತವೆ. ಆದರೆ, ಹಿಂದಿ, ಬಂಗಾಳ, ಮರಾಠಿ, ಕನ್ನಡ, ತೆಲುಗು, ತಮಿಳುನ, ಪಂಜಾಬಿ, ಗುಜರಾತಿ, ಮಲಯಾಳಂ, ಉರ್ದು ಭಾಷೆಗಳಲ್ಲಿ ಸಾಕಷ್ಟು ಟ್ರೈನಿಂಗ್ ಮಾಡಿ, ಈ ಅಂತರವನ್ನು ಕಡಿಮೆ ಮಾಡಲು ಆರು ತಿಂಗಳ ಹಿಂದೆಯೇ ಆಂಥ್ರೋಪಿಕ್ ಪ್ರಯತ್ನ ಆರಂಭಿಸಿತ್ತು. ಇದು ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

ಆಂಥ್ರೋಪಿಕ್ ಕಂಪನಿ ಇತ್ತೀಚೆಗಷ್ಟೇ 30 ಬಿಲಿಯನ್ ಡಾಲರ್​ನಷ್ಟು ಫಂಡಿಂಗ್ ಪಡೆದಿದೆ. ಇದರ ಮೌಲ್ಯ ಇದೀಗ 380 ಬಿಲಿಯನ್ ಡಾಲರ್ ಎಂದು ಮೌಲ್ಯೀಕರಿಸಲಾಗಿದೆ. ಬಹಳಷ್ಟು ಐಟಿ ಸರ್ವಿಸ್ ಕೆಲಸಗಳನ್ನು ಇದರ ಎಐ ಏಜೆಂಟ್​ಗಳು ತ್ವರಿತವಾಗಿ ಮಾಡಬಲ್ಲುವುದು. ಹೀಗಾಗಿ, ಐಟಿ ಸರ್ವಿಸ್ ಕ್ಷೇತ್ರದಲ್ಲಿ ಆಂಥ್ರೋಪಿಕ್ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?