Apple Inc. Stock Bonus: ಆಪಲ್ ಇಂಕ್ ಸಿಬ್ಬಂದಿಗೆ 75 ಲಕ್ಷದಿಂದ 1.5 ಕೋಟಿ ರೂಪಾಯಿ ಸ್ಟಾಕ್​ ಬೋನಸ್

ಆಪಲ್​ ಇಂಕ್​ನ ಆಯ್ದ ಗುಂಪು ಉದ್ಯೋಗಿಗಳಿಗೆ 1.5 ಕೋಟಿ ರೂಪಾಯಿಯ ಸ್ಟಾಕ್​ ಬೋನಸ್ ಕೊಡುವ ಸಾಧ್ಯತೆ ಇದ್ದು, ಪ್ರತಿಭಾವಂತ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಹೀಗೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ.

Apple Inc. Stock Bonus: ಆಪಲ್ ಇಂಕ್ ಸಿಬ್ಬಂದಿಗೆ 75 ಲಕ್ಷದಿಂದ 1.5 ಕೋಟಿ ರೂಪಾಯಿ ಸ್ಟಾಕ್​ ಬೋನಸ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 26, 2022 | 12:56 PM

ಆಪಲ್ ಇಂಕ್​ನಿಂದ  (Apple Inc.) ಸಣ್ಣ ಸಂಖ್ಯೆಯ ಎಂಜಿನಿಯರ್​ಗಳಿಗೆ ಮತ್ತೊಂದು ಸುತ್ತಿನ ವಿಶೇಷ ಬೋನಸ್ ನೀಡಲಾಗುತ್ತಿದೆ. ಕಂಪೆನಿಯ ಪ್ರಮುಖ ಪ್ರತಿಭೆಗಳನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ಇಂಥ ನಿರ್ಧಾರಕ್ಕೆ ಬರಲಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಕಂಪೆನಿಯ ಹಾರ್ಡ್​ವೇರ್​ ಮತ್ತು ಸಾಫ್ಟ್​ವೇರ್​ ವಿಭಾಗದಲ್ಲಿನ ಆಯ್ದ ಗುಂಪಿನ ಉದ್ಯೋಗಿಗಳಿಗೆ ಬೋನಸ್ ನೀಡುವುದಕ್ಕೆ ಮುಂದಾಗಿದೆ. ಬೋನಸ್ ವಿಚಾರವನ್ನು ಅಧಿಕೃತವಾಗಿ ಸಾರ್ವಜನಿಕಗೊಳಿಸದ ಕಾರಣಕ್ಕೆ ತಮ್ಮ ಹೆಸರನ್ನು ಹೇಳಲು ಇಚ್ಛಿಸದ ಜನರ ಪ್ರಕಾರ, ಕಂಪೆನಿಯ ಉದ್ಯೋಗಿಗಳಿಗೆ 1 ಲಕ್ಷ ಯುಎಸ್​ಡಿಯಿಂದ (ಭಾರತದ ರೂಪಾಯಿ ಲೆಕ್ಕದಲ್ಲಿ 76 ಲಕ್ಷ) 2 ಲಕ್ಷ ಯುಎಸ್​ಡಿ (1.52 ಕೋಟಿ ರೂಪಾಯಿ) ನಿರ್ಬಂಧಿತ ಸ್ಟಾಕ್​ ಯೂನಿಟ್ಸ್​ನಲ್ಲಿ ನೀಡಲಾಗುತ್ತದೆ.

ಸಿಬ್ಬಂದಿಯನ್ನು ಕಂಪೆನಿಯಲ್ಲೇ ಉಳಿಸಿಕೊಳ್ಳುವುದಕ್ಕಾಗಿ ಈ ಸ್ಟಾಕ್​ ಬೋನಸ್ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ಕಂಪೆನಿಯಲ್ಲಿ ಇರುವಂಥವರು ಕೆಲಸ ಬಿಡಬಾರದು ಎಂಬ ಕಾರಣಕ್ಕೆ ಹೀಗೆ ಬೋನಸ್ ನೀಡಲಾಗುತ್ತಿದ್ದು, ಸ್ಟಾಕ್​ ಬೆಲೆ ಏರಿಕೆ ಆದಂತೆಯೂ ಅದರ ಮೌಲ್ಯ ಹೆಚ್ಚಾಗುತ್ತದೆ. ಕಳೆದ ಹನ್ನೆರಡು ತಿಂಗಳಲ್ಲಿ ಆಪಲ್​ ಷೇರಿನ ಬೆಲೆ ಶೇ 40ಕ್ಕೂ ಹೆಚ್ಚಾಗಿದೆ. 2022ರಲ್ಲಿ ಆಪಲ್ ಕಂಪೆನಿ ಷೇರಿನ ಬೆಲೆಯಲ್ಲಿ ಇಳಿಕೆ ಆದ ನಂತರವೂ ಇಷ್ಟು ಬೆಲೆಯಿದೆ. ಈ ವರ್ಷ ಟೆಕ್​ ಸ್ಟಾಕ್​ ಬೆಲೆಗಳು ಕಡಿಮೆ ಆಗಿವೆ.

ಕಳೆದ ಬಾರಿ 2021ರ ಡಿಸೆಂಬರ್​ನಲ್ಲಿ ಆಪಲ್ ಕಂಪೆನಿಯಿಂದ ಸ್ಟಾಕ್ ಆಧಾರಿತ ಬೋನಸ್​ ನೀಡಲಾಗಿತ್ತು. ಆಗಿನ ಗರಿಷ್ಠ ಮಟ್ಟ ಅಂದರೆ 1,80,000 ಯುಎಸ್​ಡಿ ಆಗಿತ್ತು. ಆ ಪ್ರಕರಣದಲ್ಲಿ ಕಂಪೆನಿಯ ಹಾರ್ಡ್​ವೇರ್​ ಟೆಕ್ನಾಲಜೀಸ್ ಗುಂಪಿಗೆ ನೀಡಲಾಗಿತ್ತು. ಅದು ಕಸ್ಟಮ್ ಚಿಪ್ಸ್ ರೂಪಿಸುತ್ತದೆ, ಮತ್ತು ಇದೇ ಗುಂಪು ಭವಿಷ್ಯದ ವರ್ಚುವಲ್ ಮತ್ತು ಆಗುಮೆಂಟೆಡ್ ರಿಯಾಲಿಟಿ ಹೆಡ್​ಸೆಟ್​ಗಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಈ ಹಿಂದೆ ಇಂಥ ಬಗೆಯಲ್ಲಿ ಉದ್ಯೋಗಿಗಳಿಗೆ ರಿವಾರ್ಡ್ಸ್ ನೀಡಿರುವುದು ತುಂಬ ವಿರಳ. ಅಂದ ಹಾಗೆ ಚಿಪ್​ ಡಿಸೈನ್ ಗುಂಪಿನಲ್ಲಿ ಕೆಲವು ಪ್ರಮಾಣದಲ್ಲಿ ಕೆಲಸದಿಂದ ಬಿಟ್ಟರು. ಫೇಸ್​ಬುಕ್​ ಮಾತೃ ಸಂಸ್ಥೆ ಮೆಟಾ ಪ್ಲಾಟ್​ಫಾರ್ಮ್ಸ್ ಇಂಕ್ ಎಂಜಿನಿಯರ್​ಗಳ ನೇಮಕಾತಿಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಆ ಎಂಜಿನಿಯರ್​ಗಳನ್ನು ಮೆಟಾ ವರ್ಸ್​ನಲ್ಲಿ ಕೆಲಸಕ್ಕೆ ಇರಿಸುವ ಉದ್ದೇಶವನ್ನು ಇಟ್ಟುಕೊಂಡಿದೆ.

ಕಳೆದ ಡಿಸೆಂಬರ್​ನಲ್ಲಿ ಎಷ್ಟು ಉದ್ಯೋಗಿಗಳಿಗೆ ವಿಶೇಷ ಮೊತ್ತ ಸಿಕ್ಕಿತೋ ಅದಕ್ಕಿಂತ ಕಡಿಮೆ ಸಂಖ್ಯೆಯವರಿಗೆ ಈ ಬಾರಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ. ಆಯಾ ವಿಭಾಗದ ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಈ ಬೋನಸ್​ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಕಳೆದ ಕೆಲವು ವಾರದಿಂದ ವಾಋ್ಷಿಕ ಬೋನಸ್​ಗಳನ್ನು ನೀಡಲಾಗುತ್ತಿದೆ. ಅದಕ್ಕೆ ಏಪ್ರಿಲ್​ 15 ದಿನಾಂಕ ಆಗಿದೆ. ಉದ್ಯೋಗಿಗಳಿಗೆ ವರ್ಷಕ್ಕೆ ಎರಡು ಸಲ, ಅಂದರೆ ಏಪ್ರಿಲ್ ಮತ್ತು ಅಕ್ಟೋಬರ್​ನಲ್ಲಿ ನೀಡಲಾಗುತ್ತದೆ. ಇನ್ನು ಹಣದುಬ್ಬರದ ಕಾರಣಕ್ಕಾಗಿ ಈಗ ವೇತನ ಹೆಚ್ಚಿಸಬೇಕಾದ ಒತ್ತಡದಲ್ಲಿ ಉದ್ಯೋಗದಾತರಿದ್ದಾರೆ. ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳುವ ಸಿದ್ಧತೆ ನಡೆಸಿದ್ದು, ಕೆಲ ಉದ್ಯೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕನಿಷ್ಠ ಮೂರು ದಿನ ಕಚೇರಿ ನಡೆಸುವುದಕ್ಕಾಗಿ ಆಪಲ್​ ಕಂಪೆನಿಗೆ ಎಂಜಿನಿಯರ್​ಗಳು ಮತ್ತು ಇತರ ಕಾರ್ಪೊರೇಟ್ ಸಿಬ್ಬಂದಿ ಅಗತ್ಯ ಇದೆ.

ಇದನ್ನೂ ಓದಿ: ಆಪಲ್ ಐಫೋನ್​ ಎಸ್​ಇ3 ಬಿಡುಗಡೆ; ಫೋನ್​ನ ಫೀಚರ್ಸ್, ದರ ಮತ್ತಿತರ ವಿವರ ಇಲ್ಲಿದೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ