Banking News: ಕೋ ಆಪರೇಟಿವ್ ಬ್ಯಾಂಕ್- ಕೋ ಆಪರೇಟಿವ್ ಸೊಸೈಟಿಗಳಲ್ಲಿ ಇಡುವ ಹಣವೆಷ್ಟು ಸುರಕ್ಷಿತ?

ಕೋ ಆಪರೇಟಿವ್ ಬ್ಯಾಂಕ್​ ಅಥವಾ ಕೋ ಆಪರೇಟಿವ್ ಸೊಸೈಟಿಗಳಲ್ಲಿ ಇರುವ ಠೇವಣಿ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಬಗ್ಗೆ ವಿವರಣೆ ಇಲ್ಲಿದೆ.

Banking News: ಕೋ ಆಪರೇಟಿವ್ ಬ್ಯಾಂಕ್- ಕೋ ಆಪರೇಟಿವ್ ಸೊಸೈಟಿಗಳಲ್ಲಿ ಇಡುವ ಹಣವೆಷ್ಟು ಸುರಕ್ಷಿತ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:Mar 26, 2022 | 6:10 PM

“ಜಾಸ್ತಿ ಬಡ್ಡೀಗೆ ಆಸೆ ಪಡ್ತೀರಿ. ಕೊನೆಗೆ ಅಸಲಿಗೂ ಮೋಸ ಆಗುತ್ತೆ. ಈಗ ಬಂದು, ಅಯ್ಯೋ ನಮ್​ ದುಡ್ಡು ಹೋಯಿತು ಅಂತೀರಿ. ನೀವು ಓದಿದವರು ತಾನೆ? ಕೋ ಆಪರೇಟಿವ್​ ಸೊಸೈಟಿಗಳಲ್ಲಿ ಯಾಕೆ ಹಣ ಇಡ್ತೀರಿ? ಇಷ್ಟಾದರೂ ತಿಳಿವಳಿಕೆ ಬೇಡವಾ?” – ಆ ಸಬ್​ ಇನ್​ಸ್ಪೆಕ್ಟರ್ ಮಾತಿನ ಧಾಟಿ ಹೀಗೇ ಮುಂದುವರಿದಿತ್ತು. ಬೆಂಗಳೂರಿನ ವಿದ್ಯಾಪೀಠದ ಬಳಿಯ ನಾಗರತ್ನ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್​ ಸೊಸೈಟಿಯಲ್ಲಿ ಇದ್ದ ಹಣಕ್ಕೆ ಮೋಸ ಆಗಿದೆ. ಸೊಸೈಟಿ ಬಾಗಿಲು ಮುಚ್ಚಿದೆ. ಅದರಲ್ಲಿ ಇದ್ದ 1 ಲಕ್ಷ ರೂಪಾಯಿ ಫಿಕ್ಸೆಡ್​ ಡೆಪಾಸಿಟ್ (Fixed Deposits) ವಾಪಸ್ ಕೊಡಿಸಿ ಎಂಬುದು ಪೊಲೀಸರ ಮುಂದೆ ಇಡಲಾಗಿದ್ದ ಬೇಡಿಕೆ ಆಗಿತ್ತು. ಅದಕ್ಕೆ ಆ ಪೊಲೀಸ್ ಅಧಿಕಾರಿ ಪಾಲಿಗೆ ದೂರು ನೀಡಲು ಬಂದವರು ಅತಿಯಾಸೆಗೆ ಬಿದ್ದು, ಹಣ ಕಳೆದುಕೊಂಡವರು. ಹಾಗಿದ್ದರೆ ಹಣವನ್ನು ಎಲ್ಲಿಡಬೇಕು, ಏಕಾಗಿ ಕೋ-ಆಪರೇಟಿವ್​ ಸೊಸೈಟಿ, ಕೋ- ಆಪರೇಟಿವ್ ಬ್ಯಾಂಕ್ ಹಣವನ್ನು ಇಡುವುದಕ್ಕೆ ಸೂಕ್ತ ಅಲ್ಲ? ಹೀಗೆ ವಿವಿಧ ಪ್ರಶ್ನೆಗಳು ನಿಮ್ಮ ಮನಸ್ಸಲ್ಲೂ ಮೂಡಿರಬೇಕು. ಅದಕ್ಕೆ ಉತ್ತರ ನೀಡುವ ಪ್ರಯತ್ನವಾಗಿ ಈ ಲೇಖನ ನಿಮ್ಮೆದುರು ಇದೆ.

ಕೋ-ಆಪರೇಟಿವ್ ಬ್ಯಾಂಕ್​ಗಳು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಅಡಿಯಲ್ಲಿ ಬರುತ್ತವೆ. ಅಂಥಲ್ಲಿ ಹೂಡಿಕೆದಾರರಿಗೆ 5 ಲಕ್ಷ ರೂಪಾಯಿ ತನಕದ ಮೊತ್ತಕ್ಕೆ ಸುರಕ್ಷತೆ ಇರುತ್ತದೆ. ಏಕೆಂದರೆ ಠೇವಣಿ, ಬಡ್ಡಿ ಎರಡೂ ಸೇರಿಕೊಂಡು 5 ಲಕ್ಷದ ತನಕ ಇನ್ಷೂರೆನ್ಸ್ ಇರುತ್ತದೆ. ಆ ಮೊತ್ತವನ್ನು ದಾಟಿದಲ್ಲಿ ಮಾತ್ರ ಉಳಿಕೆ ಹಣ ಸಿಗಲ್ಲ. ಅದಕ್ಕಾಗಿ 90 ದಿನದ ಗಡುವು ಸಹ ಹಾಕಲಾಗಿದೆ. ಅಷ್ಟರೊಳಗೆ ಹಣವೂ ವಿಲೇವಾರಿ ಆಗುತ್ತದೆ. ತೀರಾ ಇತ್ತೀಚಿನವರೆಗೆ ಆ ಇನ್ಷೂರೆನ್ಸ್ ಮೊತ್ತ 1 ಲಕ್ಷ ರೂಪಾಯಿಯೇ ಇತ್ತು. ಆರ್​ಬಿಐ ಅಡಿಯಲ್ಲಿ ನೋಂದಣಿ ಆಗಿ, ಡೆಪಾಸಿಟ್​ ಇನ್ಷೂರೆನ್ಸ್​ ಇರುವಂಥ ಖಾಸಗಿ ಬ್ಯಾಂಕ್, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಇಲ್ಲೆಲ್ಲ ಇದೇ ನಿಯಮಗಳು ಅನ್ವಯಿಸುತ್ತವೆ.

ಕೋ ಆಪರೇಟಿವ್​ ಸೊಸೈಟಿ ಹಾಗೂ ಕೋ ಆಪರೇಟಿವ್ ಬ್ಯಾಂಕ್​ ಮಧ್ಯೆ ವ್ಯತ್ಯಾಸ ಏನು? ಆದರೆ, ಕೋ ಆಪರೇಟಿವ್​ ಸೊಸೈಟಿಗಳಲ್ಲಿ ಇಡುವ ಹಣಕ್ಕೆ ವಂಚನೆ ಆದಲ್ಲಿ ಯಾವ ಇನ್ಷೂರೆನ್ಸ್ ಕೂಡ ಇಲ್ಲ. ಸಾಮಾನ್ಯ ಜನರಲ್ಲಿ ಕೋ ಆಪರೇಟಿವ್​ ಸೊಸೈಟಿ ಹಾಗೂ ಕೋ ಆಪರೇಟಿವ್ ಬ್ಯಾಂಕ್​ ಮಧ್ಯೆ ಇರುವ ವ್ಯತ್ಯಾಸ ಏನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ತಮ್ಮ ಡೆಪಾಸಿಟ್​ಗೆ ಯಾವುದು ಸುರಕ್ಷಿತ ಎಂದು ತಿಳಿದುಕೊಳ್ಳುವುದು ಮುಖ್ಯ. ಆರ್​ಬಿಐ ಅಡಿಯಲ್ಲಿ ಬರುವ ಕೋ-ಆಪರೇಟಿವ್​ ಬ್ಯಾಂಕ್​ನಲ್ಲಿನ ವಹಿವಾಟನ್ನು ನಿಯಮಿತವಾಗಿ ಆಡಿಟ್​ ಮಾಡಲಾಗುತ್ತದೆ. ಅದರಲ್ಲಿ ಲೋಪ- ದೋಷಗಳು ಕಂಡುಬಂದಲ್ಲಿ ಕೂಡಲೇ ಸಾರ್ವಜನಿಕವಾಗಿ ಆ ಬಗ್ಗೆ ಪ್ರಕಟಣೆ ನೀಡಲಾಗುತ್ತದೆ. ವ್ಯವಹಾರದ ಮೇಲೆ ನಿರ್ಬಂಧ ಹೇರಲಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್. ಅಲ್ಲಿ ಹಣ ಡೆಪಾಸಿಟ್​ ಮಾಡಿದವರಿಗೆ 5 ಲಕ್ಷ ರೂಪಾಯಿ ತನಕ ಹಿಂತಿರುಗಿಸಲಾಗಿದೆ. ಆರ್​ಬಿಐನಿಂದ ಆಡಳಿತಾಧಿಕಾರಿ ನೇಮಕ ಮಾಡಿ, ಸಮಸ್ಯೆ ಬಗೆಹರಿಸುವ ಪ್ರಯತ್ನ ಮುಂದುವರಿದಿದೆ.

ಆದರೆ, ಕೋ ಆಪರೇಟಿವ್​ ಸೊಸೈಟಿ ಕಥೆ ಬೇರೆ. ನಾಗರತ್ನ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಒಂದು ಉದಾಹರಣೆ ಮಾತ್ರ. ಹೆಸರು ಹೇಳುವುದಕ್ಕೆ ಇಚ್ಛಿಸದ ಆಡಿಟರ್​ವೊಬ್ಬರ ಪ್ರಕಾರ, ಕೋ ಆಪರೇಟಿವ್​ ಸೊಸೈಟಿಗಳಲ್ಲಿ ವಂಚನೆ ಪ್ರಕರಣಗಳನ್ನು ಬೇಕಾದಷ್ಟು ಕಾಣಬಹುದು. ಅಷ್ಟೇ ಅಲ್ಲ, ಅಂಥ ಸೊಸೈಟಿಗಳಲ್ಲಿ ಮನೆಯ ಪತ್ರವನ್ನೋ ಇನ್ನೊಂದನ್ನೋ ಅಡಮಾನ ಮಾಡಿ, ಸಾಲ ಪಡೆಯುವುದು ಕೂಡ ಅಷ್ಟೇ ರಿಸ್ಕ್. ಬಡ್ಡಿಯ ವಿಚಾರಕ್ಕೆ ಬಂದಾಗ ಸೊಸೈಟಿಗಳಲ್ಲಿ ಹೆಚ್ಚಿಗೆ ಸಿಗುತ್ತದೆ ಎಂಬುದೇನೋ ನಿಜ. ಆದರೆ ಅಸಲಿಗೇ ಖಾತ್ರಿ ಇಲ್ಲದ ಕಡೆ ಧೈರ್ಯವಾಗಿ ಹಣವನ್ನು ಇಡುವುದಾದರೂ ಹೇಗೆ?

ಬಡ್ಡಿ ಮೊತ್ತ ಕಡಿಮೆ ಇರಬಹುದು, ಆದರೆ ಸುರಕ್ಷಿತ ಮತ್ತೆ ಮೂಲ ಪ್ರಶ್ನೆಗೆ ಬರೋಣ. ಈಗಿನ ಏರುತ್ತಿರುವ ಹಣದುಬ್ಬರ ದರದಲ್ಲಿ ಎಫ್​ಡಿ ಇಟ್ಟು, ನಿಯಮಿತವಾಗಿ ಆದಾಯ ಬರಲಿ ಅನ್ನೋದು ಷೇರು ಮಾರ್ಕೆಟ್ ಮತ್ತಿತರ ರಿಸ್ಕ್ ಇರುವ ಕಡೆಗಳಲ್ಲಿ ಹೂಡಿಕೆ ಮಾಡಲು ಬಯಸದವರ ಆಯ್ಕೆ ಆಗಿರಬಹುದು. ಹೆಚ್ಚಿನ ಬಡ್ಡಿ ಸಿಗುತ್ತದೆ ಅಂದಾಗ ಕೋ ಆಪರೇಟಿವ್ ಸೊಸೈಟಿ, ಕೋ ಆಪರೇಟಿವ್​ ಬ್ಯಾಂಕ್​ ಕಡೆಗೆ ನೋಡುತ್ತಾರೆ. ತಮ್ಮ ಹಣವನ್ನು ಇಡುತ್ತಾರೆ. ಹಣಕ್ಕೆ ಮುಳುಗು ನೀರು ಬಂದಾಗ ಪೊಲೀಸ್​ ಠಾಣೆ ಮೆಟ್ಟಿಲೇರಿದರೆ ಅವರಿಂದ ಪುಕ್ಕಟೆ ಭಾಷಣ (ಆರಂಭದಲ್ಲಿ ಹೇಳಿದಂತೆ) ಕೇಳಿಬರುತ್ತದೆ. ಖಾಸಗಿ ಬ್ಯಾಂಕ್​ ಆದ ಯೆಸ್​ ಬ್ಯಾಂಕ್​ನಲ್ಲೂ ವಂಚನೆ ಆಗಿತ್ತು. ಆದರೆ ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಅದನ್ನು ಮೇಲೆತ್ತಲಾಯಿತು. ಹಾಗೆ ಹೋಲಿಕೆ ಮಾಡಿ ನೋಡಿದರೆ ಕೋ-ಆಪರೇಟಿವ್ ಸೊಸೈಟಿ, ಕೋ ಆಪರೇಟಿವ್​ ಬ್ಯಾಂಕ್​ಗಿಂತ ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಬಡ್ಡಿ ಮೊತ್ತ ಕಡಿಮೆ ಇರಬಹುದು, ಆದರೆ ಸುರಕ್ಷಿತ.

ಕೋ-ಆಪರೇಟಿವ್ ಸೊಸೈಟಿಗಳಿಗಾಗಿ ಕರ್ನಾಟಕದಲ್ಲಿ ರಿಜಿಸ್ಟ್ರಾರ್​ ಆಫ್​ ಕೋ-ಆಪರೇಟಿವ್​ ಸೊಸೈಟೀಸ್ ಅಂತ ಇದೆ. ಕೋ ಆಪರೇಟಿವ್​ ಸೊಸೈಟಿ ಗ್ರಾಹಕರಿಗೆ ಇರುವ ಇನ್ಷೂರೆನ್ಸ್ ಬಗ್ಗೆ ಕೇಳೋಣ ಅಂತ ಟಿವಿ9ಕನ್ನಡ ಡಿಜಿಟಲ್ ಕಡೆಯಿಂದ ಫೋನ್ ಮಾಡಿದರೆ ಯಾವ ರೀತಿಯ ಸ್ಪಂದನೆ ಸಿಗಲಿಲ್ಲ. ಅದೇ ರೀತಿ ನಾಗರತ್ನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಕರಣದ ಬಗ್ಗೆ ವಿಚಾರಿಸಲು ಕೆಂಪೇಗೌಡ ನಗರದ ಪೊಲೀಸ್​ ಠಾಣೆಗೆ ಫೋನ್​ ಮಾಡಿದರೆ ಅಲ್ಲಿಂದಲೂ ಯಾವುದೇ ಸಕಾರಾತ್ಮಕ ಉತ್ತರ ಸಿಗಲಿಲ್ಲ. ಆದ್ದರಿಂದ ನೆನಪಿಡಿ, ಹಣವನ್ನು ಸುರಕ್ಷಿತವಾಗಿ ಇರುವ ಕಡೆ ಇಡಿ. ​

ಇದನ್ನೂ ಓದಿ: Insurance On Deposits: ಬ್ಯಾಂಕ್​ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್

Published On - 6:08 pm, Sat, 26 March 22

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?