Apple iPhone: ಆಪಲ್ ಐಫೋನ್ ಎಸ್ಇ3, ಐಪ್ಯಾಡ್ ಏರ್ 2022 ಭಾರತದಲ್ಲಿ ಮಾರಾಟ ಶುರು
ಭಾರತದಲ್ಲಿ ಆಪಲ್ ಐಫೋನ್ ಎಸ್ಇ3, ಐಪ್ಯಾಡ್ ಏರ್ 2022 ಭಾರತದಲ್ಲಿ ಮಾರಾಟವನ್ನು ಆರಂಭ ಮಾಡಿದೆ. ಬೆಲೆ, ಫೀಚರ್ ಮತ್ತಿತರ ವಿವರಗಳು ಇಲ್ಲಿವೆ.
ಆಪಲ್ ಐಫೋನ್ (Apple iPhone) ಎಸ್ಇ 2022 ಮತ್ತು ಐದನೇ ತಲೆಮಾರಿನ ಐಪ್ಯಾಡ್ ಏರ್ ಭಾರತದಲ್ಲಿ ಮಾರಾಟ ಆರಂಭಿಸಿವೆ. ಇವುಗಳನ್ನು ಮಾರ್ಚ್ 8, 2022ರಂದು ಆಪಲ್ ಕಂಪೆನಿಯ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಗಿತ್ತು. ಇದರ ಜತೆಗೆ ಹೊಸ ಬಣ್ಣದೊಂದಿಗೆ ಆಪಲ್ ಐಪೋನ್ 13ರ ಸರಣಿ, ಹೊಸ ಮ್ಯಾಕ್ ಸ್ಟುಡಿಯೋ ಹಾಗೂ ಸ್ಟುಡಿಯೋ ಡಿಸ್ಪ್ಲೇ ಸಹ ಸೇರ್ಪಡೆ ಮಾಡಲಾಗಿದೆ. ಆಪಲ್ ಐಫೋನ್ 13 ಮತ್ತು ಐಫೋನ್ ಮಿನಿ ಹಸಿರು ಬಣ್ಣದ ವೇರಿಯಂಟ್ನೊಂದಿಗೆ ಬರುತ್ತದೆ. ಐಫೋನ್ 13 ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಆಲ್ಪೈನ್ ಗ್ರೀನ್ ಜತೆಗೆ ಬರುತ್ತದೆ. ಐಫೋನ್ 13 ಸರಣಿ ಹೊಸ ಬಣ್ಣದ ವೇರಿಯಂಟ್ನೊಂದಿಗೆ ಬಂದಿದ್ದು, ಅದು ಕೂಡ ಮಾರಾಟ ಶುರು ಮಾಡಿದೆ.
ಐಫೋನ್ ಎಸ್ಇ 2022 ಮತ್ತು ಐಪ್ಯಾಡ್ ಏರ್ ಪ್ರೀ ಆರ್ಡರ್ ಮಾರ್ಚ್ 11ರಂದು ಆರಂಭವಾಗಿತ್ತು. ಮತ್ತು 18ನೇ ತಾರೀಕು ಭಾರತದಲ್ಲಿ ಡೆಲಿವರಿ ಶುರುವಾಗಿತ್ತು. ಐಫೋನ್ ಎಸ್ಇ ಮೂರು ಬಣ್ಣದಲ್ಲಿ ಲಭ್ಯ ಇವೆ. ಅದು ಮಿಡ್ನೈಟ್, ಸ್ಟಾರ್ಲೈಟ್ ಹಾಗೂ ಪ್ರಾಡಕ್ಟ್ ರೆಡ್ ಬಣ್ಣಗಳಲ್ಲಿ ದೊರೆಯುತ್ತದೆ. ಆಪಲ್ ಐಫೋನ್ ಎಸ್ಇ3 4.7 ಇಂಚಿನ ಐಪಿ67 ರೇಟೆಡ್ ಡಿಸ್ಪ್ಲೇ ಜತೆ ಇರುತ್ತದೆ. ಗುಂಡನೆಯ ಟಚ್ ಐಡಿ ಐಫೋನ್ ಎಸ್ಇ3ರಲ್ಲಿ ಮುಂದುವರಿದಿದೆ. ಈಗ ಫೇಸ್ ಐಡಿ ನೋಡಲು ಸಾಧ್ಯವಿಲ್ಲ. ಐಫೋನ್ ಎಸ್ಇ3ರಲ್ಲಿ 12 ಮೆಗಾಪಿಕ್ಸೆಲ್ನ ಹಿಂಬದಿಯ ಕ್ಯಾಮೆರಾ ಹಾಗೂ ಮುಂಬದಿಯಲ್ಲಿ 7 ಮೆಗಾಪಿಕ್ಸೆಲ್ನ ಕ್ಯಾಮೆರಾ ಬರುತ್ತದೆ.
ಈ ಫೋನ್ನಲ್ಲಿ ಪ್ರಮುಖವಾದದ್ದು ಏನೆಂದರೆ, ಎ15 ಬಯೋನಿಕ್ ಚಿಪ್ಸೆಟ್. ಇದನ್ನೇ ಐಫೋನ್ 13ರ ಸರಣಿಯಲ್ಲಿ ಬಳಸಲಾಗಿದೆ. 5ಜಿ ಸಕ್ರಿಯ ಆಗಿರುವ 4ಎನ್ಎಂ ಚಿಪ್ಸೆಟ್ ಐಒಎಸ್ 15ರೊಂದಿಗೆ ಇರುತ್ತದೆ. ಎ15 ಚಿಪ್ಸೆಟ್ ಇರುವುದರಿಂದ ಇಡೀ ದಿನ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಆಪಲ್ ಹೇಳಿಕೊಂಡಿದೆ. ಭಾರತದಲ್ಲಿ 64ಜಿಬಿ ಆಪಲ್ ಐಫೋನ್ ಎಸ್ಇ3 ಖರೀದಿಸಿದಲ್ಲಿ 43,900 ರೂಪಾಯಿ ಆಗುತ್ತದೆ. ಆಪಲ್ ಇಂಡಿಯಾ ಸ್ಟೋರ್ಸ್ ಮತ್ತು ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ನಿಂದ ಕೂಡ ಮಾರಾಟ ಮಾಡಲಾಗುತ್ತದೆ. 64 ಜಿಬಿ, 128 ಜಿಬಿ, 256 ಜಿಬಿ ಮಾಡೆಲ್ಗಳಲ್ಲಿ ಬರುತ್ತದೆ. ಇತರ ಎರಡು ವೇರಿಯಂಟ್ಗಳ ಬೆಲೆ ಕ್ರಮವಾಗಿ 48,900 ಹಾಗೂ 58,900 ರೂಪಾಯಿ ಆಗುತ್ತದೆ.
ಅದೇ ರೀತಿ ಐದನೇ ತಲೆಮಾರಿನ ಐಪ್ಯಾಡ್ ಏರ್ 2022 64 ಜಿಬಿ ವೈ-ಫೈ ಮಾಡೆಲ್ 54,900 ರೂಪಾಯಿ. ಅದೇ ವೈಫೈ ಹಾಗೂ ಸೆಲ್ಯುಲಾರ್ ಮಾಡೆಲ್ 68,900 ರೂಪಾಯಿ. ಇದು ನೀಲಿ, ಗುಲಾಬಿ, ನೇರಳೆ, ಆಕಾಶ ಕಂದು ಮತ್ತು ಸ್ಟಾರ್ಲೈಟ್ ಬಣ್ಣದಲ್ಲಿ, ಈ ಮೇಲ್ಕಂಡ ಸ್ಟೋರ್ಗಳಲ್ಲಿ ಲಭ್ಯ ಇವೆ. ಐಪ್ಯಾಡ್ ಏರ್ 2022 10.1 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇ, ಜತೆಗೆ ಎಂ1 ಚಿಪ್ ಇರುತ್ತದೆ. ಇದರಲ್ಲಿ ವಿಡಿಯೋ ಕಾಲ್ಗಾಗಿ ಮುಂಬದಿಯಲ್ಲಿ 12 ಮೆಗಾಪಿಕ್ಸೆಲ್ ಮತ್ತು ಹಿಂಬದಿಯಲ್ಲೂ 12 ಮೆಗಾಪಿಕ್ಸೆಲ್ ಕ್ಯಾಮೆರಾದ ಜತೆಗೆ ಬರುತ್ತದೆ.
ಇದನ್ನೂ ಓದಿ: ಆಪಲ್, ಪೆಪ್ಸಿ, ರೋಲೆಕ್ಸ್ ಸೇರಿದಂತೆ 300ಕ್ಕೂ ಹೆಚ್ಚು ಕಂಪೆನಿಗಳಿಂದ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತ