ನೋಟುಗಳಲ್ಲಿ ಲಕ್ಷ್ಮೀ, ಗಣೇಶರ ಚಿತ್ರ ಮುದ್ರಿಸಬಹುದೇ, ಆರ್​ಬಿಐ ನಿಯಮದಲ್ಲೇನಿದೆ? ಇಲ್ಲಿದೆ ಮಾಹಿತಿ

| Updated By: ಗಣಪತಿ ಶರ್ಮ

Updated on: Oct 31, 2022 | 10:46 AM

ಕರೆನ್ಸಿ ನೋಟಿನ ವಿನ್ಯಾಸ ಮಾಡುವುದು ಯಾರು? ಅದಕ್ಕೆ ಅನುಮತಿ ನೀಡುವುದು ಯಾರು? ಭಾರತದ ಕರೆನ್ಸಿ ನೋಟುಗಳ ಇತಿಹಾಸವೇನು? ವಿವರ ಇಲ್ಲಿದೆ.

ನೋಟುಗಳಲ್ಲಿ ಲಕ್ಷ್ಮೀ, ಗಣೇಶರ ಚಿತ್ರ ಮುದ್ರಿಸಬಹುದೇ, ಆರ್​ಬಿಐ ನಿಯಮದಲ್ಲೇನಿದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: Reuters
Follow us on

ಕರೆನ್ಸಿ ನೋಟಿನಲ್ಲಿ (Currency Notes) ಹಿಂದೂ (Hindu) ದೇವರುಗಳಾದ ಲಕ್ಷ್ಮೀ ಮತ್ತು ಗಣೇಶ ಭಾವಚಿತ್ರವನ್ನು ಮುದ್ರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿರುವುದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ‘ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮೆ ದೈವಾನುಗ್ರಹ ಬೇಕಾಗುತ್ತದೆ. ಹೀಗಾಗಿ ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಚಿತ್ರದ ಜೊತೆ, ಲಕ್ಷ್ಮೀ ಮತ್ತು ಗಣೇಶರ ಚಿತ್ರವನ್ನು ಮುದ್ರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸಲಹೆ ನೀಡುತ್ತೇನೆ’ ಎಂದು ಅವರು ಹೇಳಿದ್ದರು. ಜತೆಗೆ ಈ ವಿಚಾರವಾಗಿ ಪ್ರಧಾನಿಗೆ ಪತ್ರವನ್ನೂ ಬರೆದಿದ್ದರು. ಹಾಗಿದ್ದರೆ, ಕರೆನ್ಸಿ ನೋಟಿನ ವಿನ್ಯಾಸ ಮಾಡುವುದು ಯಾರು? ಅದಕ್ಕೆ ಅನುಮತಿ ನೀಡುವುದು ಯಾರು? ಭಾರತದ ಕರೆನ್ಸಿ ನೋಟುಗಳ ಇತಿಹಾಸವೇನು? ವಿವರ ಇಲ್ಲಿದೆ.

ಕರೆನ್ಸಿ ನೋಟುಗಳ ವಿನ್ಯಾಸ ಮಾಡುವುದು ಯಾರು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರಕ್ಕೆ ಕರೆನ್ಸಿ ನೋಟುಗಳ ವಿನ್ಯಾಸ ಮಾಡುವ ಅಧಿಕಾರವಿದೆ. ಕರೆನ್ಸಿ ನೋಟು ವಿನ್ಯಾಸದಲ್ಲಿ ಏನೇ ಬದಲಾವಣೆ ಮಾಡುವುದಿದ್ದರೂ ಆರ್​ಬಿಐನ ಕೇಂದ್ರೀಯ ಮಂಡಳಿ ಮತ್ತು ಕೇಂದ್ರ ಸರ್ಕಾರದ ಅನುಮೋದನೆ ಅತ್ಯಗತ್ಯ. ಕೇಂದ್ರ ಸರ್ಕಾರಕ್ಕೆ ಕೂಡ ಕರೆನ್ಸಿ ನೋಟುಗಳ ವಿನ್ಯಾಸದಲ್ಲಿ ಬದಲಾವಣೆ ಮಾಡುವ ಅಧಿಕಾರವಿದೆ.

ಇದನ್ನೂ ಓದಿ
World Savings Day 2022: ವಿಶ್ವ ಉಳಿತಾಯ ದಿನ; ಮಹತ್ವ, ಇತಿಹಾಸ, ಧ್ಯೇಯದ ಬಗ್ಗೆ ಇಲ್ಲಿದೆ ವಿವರ
ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ
FD Rates: ಎಫ್​ಡಿ ಬಡ್ಡಿ ದರ ಹೆಚ್ಚಳ; ವಿವಿಧ ಬ್ಯಾಂಕ್​ಗಳ ಎಫ್​ಡಿ ದರ ವಿವರ ಇಲ್ಲಿದೆ
LIC Saral Pension Plan: 1 ಲಕ್ಷ ರೂ. ವಾರ್ಷಿಕ ಪಿಂಚಣಿ ಪಡೆಯಲು ನೀವೆಷ್ಟು ಹೂಡಿಕೆ ಮಾಡಬೇಕು?

1934ರ ಆರ್​ಬಿಐ ಕಾಯ್ದೆಯ ಸೆಕ್ಷನ್ 25 ರ ಪ್ರಕಾರ, ಕರೆನ್ಸಿ ನೋಟುಗಳ ವಿನ್ಯಾಸವನ್ನು ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸಿನ ಪ್ರಕಾರ ರೂಪಿಸಬೇಕು. ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ದೊರೆಯಬೇಕು. ಕರೆನ್ಸಿಗಳಿಗೆ ಸಂಬಂಧಿಸಿದ ಮುಖ್ಯವಾದ ಕಾರ್ಯಗಳನ್ನು ಆರ್‌ಬಿಐನ ಕರೆನ್ಸಿ ನಿರ್ವಹಣಾ ವಿಭಾಗ ನಿರ್ವಹಿಸುತ್ತದೆ. ಕರೆನ್ಸಿ ನಿರ್ವಹಣೆ ಎಂದರೆ, ಕರೆನ್ಸಿ ನೋಟುಗಳನ್ನು ಮತ್ತು ಕಾಯಿನ್​ಗಳನ್ನು ಚಲಾವಣೆಗೆ ತರುವುದು ಹಾಗೂ ಹಳೆಯದಾಗಿರುವ ಕರೆನ್ಸಿಗಳನ್ನು ವಾಪಸ್ ಪಡೆದುಕೊಳ್ಳುವುದಾಗಿದೆ.

ಇದನ್ನೂ ಓದಿ: ನೋಟುಗಳಲ್ಲಿ ಲಕ್ಷ್ಮೀ ಹಾಗೂ ಗಣೇಶನ ಚಿತ್ರ ಮುದ್ರಿಸಿ: ಪ್ರಧಾನಿ ಮೋದಿಗೆ ಪತ್ರ ಬರೆದು ಒತ್ತಾಯಿಸಿದ ಆಪ್​ ನಾಯಕ ಕೇಜ್ರಿವಾಲ್

ಈ ಕೆಲಸವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದೇಶದಾದ್ಯಂತ ಇರುವ 18 ಕಚೇರಿಗಳಲ್ಲಿ ಹಾಗೂ ಅವುಗಳ ಅಧೀನ ಕಚೇರಿಗಳಲ್ಲಿ ನಡೆಯುತ್ತದೆ ಎಂಬ ಮಾಹಿತಿ ಆರ್​ಬಿಐ ವೆಬ್​ಸೈಟ್​ನಲ್ಲಿದೆ.

ಕರೆನ್ಸಿ ನೋಟುಗಳ ಬದಲಾವಣೆ ಪ್ರಕ್ರಿಯೆ

ರೂಪಾಯಿ ನೋಟಿನ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕೆಂದಿದ್ದರೆ ಕರೆನ್ಸಿ ನಿರ್ವಹಣಾ ವಿಭಾಗವು ಹೊಸ ವಿನ್ಯಾಸದ ಪ್ರಸ್ತಾವನೆ ಸಿದ್ಧಪಡಿಸುತ್ತದೆ. ಪ್ರಸ್ತಾವಿತ ವಿನ್ಯಾಸವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ದೊರೆಯಬೇಕು.

ಆರ್​ಬಿಐ ಕರೆನ್ಸಿ ನಿರ್ವಹಣಾ ವಿಭಾಗದ ಕೆಲಸಗಳು

  • 1 ಬ್ಯಾಂಕ್ ನೋಟುಗಳನ್ನು ವಿನ್ಯಾಸಗೊಳಿಸುವುದು
  • ಕರೆನ್ಸಿ ನೋಟುಗಳ ಮತ್ತು ಕಾಯಿನ್​ಗಳ ಬೇಡಿಕೆಗಳ ಕುರಿತು ಅಂದಾಜಿಸುವುದು
  • ದೇಶದಾದ್ಯಂತ ಕರೆನ್ಸಿ ನೋಟುಗಳ ಮತ್ತು ಕಾಯಿನ್​ಗಳ ಸುಲಲಿತ ಹಂಚಿಕೆ, ಚಲಾವಣೆಗೆ ಯೋಗ್ಯವಲ್ಲದ ಕರೆನ್ಸಿಗಳ ವಾಪಸ್ ಪಡೆಯುವಿಕೆ ಇತ್ಯಾದಿಗಳು ಕರೆನ್ಸಿ ನಿರ್ವಹಣಾ ವಿಭಾಗದ ಜವಾಬ್ದಾರಿ
  • ಕರೆನ್ಸಿ ನೋಟುಗಳ ರೀಫಂಡ್ ನಿಯಮಗಳನ್ನು ಅನುಷ್ಠಾನಗೊಳಿಸುವುದು.

ರೂಪಾಯಿ ನೋಟುಗಳ ಇತಿಹಾಸ;

ಅಶೋಕ ಸ್ತಂಭ

1950ರಲ್ಲಿ 2, 5, 10, 100 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಯಿತು. ಆ ನೋಟುಗಳಲ್ಲಿ ಅಶೋಕ ಸ್ತಂಭದ ಚಿತ್ರ ಅಡಕವಾಗಿತ್ತು.

ಮಹಾತ್ಮ ಗಾಂಧಿ ಸರಣಿ

ಮಹಾತ್ಮ ಗಾಂಧಿ ಅವರ ಚಿತ್ರವಿರುವ ಹೊಸ ಸರಣಿಯ (ಇದಕ್ಕೂ ಮೊದಲಿನ ನೋಟುಗಳಲ್ಲಿಯೂ ಗಾಂಧಿ ಚಿತ್ರ ಇತ್ತು) ನೋಟುಗಳನ್ನು 1996 ರಲ್ಲಿ ಚಲಾವಣೆಗೆ ತರಲಾಯಿತು. ಬದಲಾದ ವಾಟರ್ಮಾರ್ಕ್, ಸೆಕ್ಯೂರಿಟಿ ಥ್ರೆಡ್ ಹಾಗೂ ವಿವಿಧ ಗುಣಲಕ್ಷಣಗಳನ್ನು ಈ ಹೊಸ ಸರಣಿಯ ನೋಟುಗಳು ಒಳಗೊಂಡಿದ್ದವು. 2000 ನೇ ಇಸವಿಯ ಅಕ್ಟೋಬರ್ 9ರಂದು 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಯಿತು. ಅದೇ ವರ್ಷ ಅಕ್ಟೋಬರ್ 9ರಂದು 2000 ಹಾಗೂ ನವೆಂಬರ್ 18ರಂದು 500ರ ಮುಖಬೆಲೆಯ ನೋಟುಗಳನ್ನು ಬದಲಾದ ಬಣ್ಣಗಳಲ್ಲಿ ಚಲಾವಣೆಗೆ ತರಲಾಯಿತು.

ಇಷ್ಟೇ ಅಲ್ಲದೆ 2006ರಲ್ಲಿ ನಕ್ಷತ್ರ ಚಿಹ್ನೆ ಸರಣಿಯ ನೋಟುಗಳನ್ನು, 2011ರಲ್ಲಿ ರೂಪಾಯಿ ಚಿಹ್ನೆ ಒಳಗೊಂಡಿರುವ ನೋಟುಗಳನ್ನು ಹಾಗೂ 2016ರಲ್ಲಿ ನೋಟು ರದ್ದತಿಯ ನಿರ್ಧಾರದ ಬಳಿಕ ಮಹಾತ್ಮ ಗಾಂಧಿ ಚಿತ್ರವುಳ್ಳ ಹೊಸ ಸರಣಿಯ ನೋಟುಗಳನ್ನು ವಿಸ್ಯಾನ ಮಾಡಿ ಬಿಡುಗಡೆ ಮಾಡಲಾಯಿತು.

ಹೀಗೆ ಕರೆನ್ಸಿ ನೋಟಿನ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕಿದ್ದರೆ ಆರ್​ಬಿಐ ಮಾರ್ಗಸೂಚಿ ಪ್ರಕಾರ ಹಂತ ಹಂತವಾಗಿಯೇ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ