ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿ, ದಸರಾ ಹಬ್ಬ ಸೇರಿ ಬ್ಯಾಂಕುಗಳಿಗೆ 15 ದಿನ ರಜೆ; ಇಲ್ಲಿದೆ ಪಟ್ಟಿ

2026ರ ಅಕ್ಟೋಬರ್ ತಿಂಗಳಲ್ಲಿ ಶನಿವಾರ, ಭಾನುವಾರದ ರಜೆ ಸೇರಿ ಒಟ್ಟು 15 ದಿನಗಳವರೆಗೆ ಬ್ಯಾಂಕ್​ಗಳಿಗೆ ರಜೆ ಇರುತ್ತದೆ. ಇದರಲ್ಲಿ ದಸರೆಯ ರಜೆಗಳೂ ಸೇರಿವೆ. ಗಾಂಧಿ ಜಯಂತಿ, ವಾಲ್ಮೀಕಿ ಜಯಂತಿಯ ರಜೆಗಳೂ ಒಳಗೊಂಡಿವೆ. ಕರ್ನಾಟಕದಲ್ಲಿ 11 ದಿನಗಳು ಬ್ಯಾಂಕ್​ಗಳಿಗೆ ರಜೆ ಇರುತ್ತದೆ. ಬ್ಯಾಂಕ್ ಮುಚ್ಚಿದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್​ಲೈನ್​ನಲ್ಲಿ ಲಭ್ಯ ಇರುತ್ತವೆ. ಎಟಿಎಂಗಳೂ ತೆರೆದಿರುತ್ತವೆ.

ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿ, ದಸರಾ ಹಬ್ಬ ಸೇರಿ ಬ್ಯಾಂಕುಗಳಿಗೆ 15 ದಿನ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕು
Image Credit source: Getty Images

Updated on: Sep 29, 2026 | 5:14 PM

ನವದೆಹಲಿ, ಸೆಪ್ಟೆಂಬರ್ 29: ಆರ್​ಬಿಐ ಹಾಲಿಡೇ ಕ್ಯಾಲೆಂಡರ್ ಪ್ರಕಾರ, 2026ರ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ ಇದೆ. ಇದರಲ್ಲಿ ರಾಷ್ಟ್ರೀಯ ರಜೆಗಳು, ನಿಯಮಿತ ರಜೆಗಳು ಹಾಗೂ ಪ್ರಾದೇಶಿಕ ರಜೆಗಳೂ ಒಳಗೊಂಡಿವೆ. ಹಬ್ಬದ ಸೀಸನ್ ಆಗಿರುವ ಅಕ್ಟೋಬರ್​ನಲ್ಲಿ ದಸರಾ ಉತ್ಸವವಿದೆ. ಗಾಂಧಿ ಜಯಂತಿ, ವಾಲ್ಮೀಕಿ ಜಯಂತಿ, ಕರ್ವಾ ಚೌತ್ ಇತ್ಯಾದಿ ವಿಶೇಷ ದಿನಗಳೂ ಇವೆ. ಗಾಂಧಿ ಜಯಂತಿ ಮತ್ತು ದಸರೆಯಲ್ಲಿ ರಾಷ್ಟ್ರವ್ಯಾಪಿ ರಜೆ ಇರುತ್ತದೆ.

ಕರ್ನಾಟಕದಲ್ಲಿ ಅಕ್ಟೋಬರ್ 18ರಿಂದ 21ರವರೆಗೆ ಸತತ ನಾಲ್ಕು ದಿನಗಳು ಬ್ಯಾಂಕ್ ಬಂದ್ ಆಗಿರುತ್ತವೆ. ಒಟ್ಟಾರೆ ಆ ತಿಂಗಳಲ್ಲಿ ರಾಜ್ಯದ ಬ್ಯಾಂಕುಗಳು 11 ದಿನ ಬಂದ್ ಆಗಿರುತ್ತವೆ. ಬೇರೆ ಕೆಲ ರಾಜ್ಯಗಲ್ಲಿ 11ಕ್ಕೂ ಹೆಚ್ಚು ರಜಾದಿನಗಳಿವೆ.

2026ರ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು

  • ಅ. 2, ಶುಕ್ರವಾರ: ಗಾಂಧಿ ಜಯಂತಿ
  • ಅ. 4: ಭಾನುವಾರದ ರಜೆ
  • ಅ. 10: ಎರಡನೇ ಶನಿವಾರದ ರಜೆ
  • ಅ. 11: ಭಾನುವಾರದ ರಜೆ
  • ಅ. 17, ಶನಿವಾರ: ಮಹಾ ಸಪ್ತಮಿ (ತ್ರಿಪುರಾದಲ್ಲಿ ರಜೆ)
  • ಅ. 18: ಭಾನುವಾರದ ರಜೆ
  • ಅ. 19, ಸೋಮವಾರ: ಮಹಾನವಮಿ, ದುರ್ಗಾ ಪೂಜೆ, ಆಯುಧ ಪೂಜೆ (ಪಶ್ಚಿಮ ಬಂಗಾಳ, ಬಿಹಾರ, ಕರ್ನಾಟಕ, ಜಾರ್ಖಂಡ್, ಅಸ್ಸಾಮ್, ತಮಿಳುನಾಡು ಇತ್ಯಾದಿ ಹಲವು ರಾಜ್ಯಗಳಲ್ಲಿ ರಜೆ)
  • ಅ. 20, ಮಂಗಳವಾರ: ದಸರಾ, ವಿಜಯದಶಮಿ ಹಬ್ಬ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಅ. 21, ಬುಧವಾರ: ವಿಜಯದಶಮಿ, ದುರ್ಗಾ ಪೂಜೆ (ಕರ್ನಾಟಕ, ಸಿಕ್ಕಿಂ, ಅಸ್ಸಾಮ್, ಕೇರಳ, ಬಂಗಾಳ, ತ್ರಿಪುರಾ ರಾಜ್ಯಗಳಲ್ಲಿ ರಜೆ)
  • ಅ. 22, ಗುರುವಾರ: ದುರ್ಗಾ ಪೂಜೆ, ದಸೇನ್ (ಸಿಕ್ಕಿಂನಲ್ಲಿ ರಜೆ)
  • ಅ. 23, ಶುಕ್ರವಾರ: ದುರ್ಗಾ ಪೂಜೆ, ದಸೇನ್ (ಸಿಕ್ಕಿಂನಲ್ಲಿ ರಜೆ)
  • ಅ. 24: ನಾಲ್ಕನೇ ಶನಿವಾರದ ರಜೆ
  • ಅ. 25: ಭಾನುವಾರದ ರಜೆ
  • ಅ. 26, ಸೋಮವಾರ: ಲಕ್ಷ್ಮೀ ಪೂಜೆ, ವಾಲ್ಮೀಕಿ ಜಯಂತಿ (ಕರ್ನಾಟಕ, ತ್ರಿಪುರಾ, ಚಂಡೀಗಡ, ಜಮ್ಮು, ಶ್ರೀನಗರ್, ಹಿಮಾಚಲದಲ್ಲಿ ರಜೆ)
  • ಅ. 29, ಗುರುವಾರ: ಕರ್ವಾ ಚೌತ್ (ಹಿಮಾಚಲದಲ್ಲಿ ರಜೆ)

ಇದನ್ನೂ ಓದಿ: ಲಂಗು ಲಗಾಮು ತಪ್ಪಿದ ಎಐ ಏಜೆಂಟ್​ಗಳು; ಸರ್ಕಾರಿ ವೆಬ್​ಸೈಟ್​ಗಳ ಮೇಲೆಯೇ ದಾಳಿ; ಕಂಗೆಟ್ಟ ಓಪನ್​ಎಐ

ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳಿನ ರಜಾ ದಿನಗಳು

  • ಅ. 2, ಶುಕ್ರವಾರ: ಗಾಂಧಿ ಜಯಂತಿ
  • ಅ. 4: ಭಾನುವಾರದ ರಜೆ
  • ಅ. 10: ಎರಡನೇ ಶನಿವಾರದ ರಜೆ
  • ಅ. 11: ಭಾನುವಾರದ ರಜೆ
  • ಅ. 18: ಭಾನುವಾರದ ರಜೆ
  • ಅ. 19, ಸೋಮವಾರ: ದಸರಾ
  • ಅ. 20, ಮಂಗಳವಾರ: ದಸರಾ
  • ಅ. 21, ಬುಧವಾರ: ದಸರಾ
  • ಅ. 24: ನಾಲ್ಕನೇ ಶನಿವಾರದ ರಜೆ
  • ಅ. 25: ಭಾನುವಾರದ ರಜೆ
  • ಅ. 26, ಸೋಮವಾರ: ವಾಲ್ಮೀಕಿ ಜಯಂತಿ

ಇದನ್ನೂ ಓದಿ: ಬ್ಯಾಂಕುಗಳಲ್ಲಿ ಬಲ್ಕ್ ಡೆಪಾಸಿಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮಗಳು ಅ. 1ರಿಂದ ಜಾರಿ

ಬ್ಯಾಂಕುಗಳು ಬಾಗಿಲು ಹಾಕಿದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಬೇರೆ ಬೇರೆ ಪ್ಲಾಟ್​ಫಾರ್ಮ್​ಗಳಲ್ಲಿ ಸದಾ ಲಭ್ಯ ಇರುತ್ತವೆ. ಸೀಮಿತ ಪ್ರಮಾಣದಲ್ಲಿ ಕ್ಯಾಷ್ ಬೇಕಾದವರು ಎಟಿಎಂ ಬಳಸಬಹುದು. ಹಣ ವರ್ಗಾಯಿಸಬೇಕೆನ್ನುವವರು ಯುಪಿಐ, ನೆಟ್​ಬ್ಯಾಂಕಿಂಗ್ ಬಳಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us