AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಗು ಲಗಾಮು ತಪ್ಪಿದ ಎಐ ಏಜೆಂಟ್​ಗಳು; ಸರ್ಕಾರಿ ವೆಬ್​ಸೈಟ್​ಗಳ ಮೇಲೆಯೇ ದಾಳಿ; ಕಂಗೆಟ್ಟ ಓಪನ್​ಎಐ

ಓಪನ್​ಎಐನ ರೋಗ್ ಏಜೆಂಟ್​ಗಳು ವಿವಿಧ ಸರ್ಕಾರಿ ಜಾಲತಾಣಗಳನ್ನೇ ಹ್ಯಾಕ್ ಮಾಡಲು ಯತ್ನಿಸಿದ ಘಟನೆ ಎಐ ಜಗತ್ತನ್ನು ಎಚ್ಚರಿಸಿದೆ. ಇದರ ಬೆನ್ನಲ್ಲೇ ಓಪನ್ಎಐ ಸಂಸ್ಥೆ ತನ್ನ ಶಕ್ತಿಶಾಲಿ ಮಾಡಲ್​ಗಳಿಗೆ ಮುಂದಿನ ಹಂತದ ಟ್ರೈನಿಂಗ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಎಐ ಟೆಕ್ನಾಲಜಿ ಅಭಿವೃದ್ಧಿಗೊಳ್ಳುತ್ತಿರುವ ವೇಗಕ್ಕೆ ಕಡಿವಾಣ ಹಾಕದಿದ್ದರೆ ಅಪಾಯ ಎನ್ನುವ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ.

ಲಂಗು ಲಗಾಮು ತಪ್ಪಿದ ಎಐ ಏಜೆಂಟ್​ಗಳು; ಸರ್ಕಾರಿ ವೆಬ್​ಸೈಟ್​ಗಳ ಮೇಲೆಯೇ ದಾಳಿ; ಕಂಗೆಟ್ಟ ಓಪನ್​ಎಐ
ಎಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2026 | 1:30 PM

Share

ವಾಷಿಂಗ್ಟನ್, ಸೆಪ್ಟೆಂಬರ್ 29: ಎಐ ಟೆಕ್ನಾಲಜಿ ವಿಪರೀತವಾಗಿ ಬೆಳವಣಿಗೆ ಹೊಂದುತ್ತಿದ್ದು, ಇದಕ್ಕೆ ಬ್ರೇಕ್ ಹಾಕದಿದ್ದರೆ ಭಾರೀ ಅನಾಹುತ ಕಾದಿದೆ ಎಂದು ಆ ಕ್ಷೇತ್ರದ ಹಲವು ಪರಿಣಿತರು ಬಾರಿ ಬಾರಿ ಎಚ್ಚರಿಸುತ್ತಿರುವುದುಂಟು. ಓಪನ್​ಎಐನ (OpenAI) ಅತ್ಯಂತ ಶಕ್ತಿಶಾಲಿ ಮಾಡಲ್​ಗಳು ಹಲವು ಕಡೆ ಅವಾಂತರ ಸೃಷ್ಟಿಸಿವೆ. ವಿವಿಧ ಸರ್ಕಾರಗಳ, ಸರ್ಕಾರಿ ಏಜೆನ್ಸಿಗಳ ವೆಬ್ಸೈಟ್​ಗಳನ್ನು ಯಾರ ಸೂಚನೆಯೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ಹ್ಯಾಕ್ ಮಾಡಲು ಯತ್ನಿಸಿರುವ ಆತಂಕಕಾರಿ ಸಂಗತಿಗಳು ವರದಿಯಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಓಪನ್​ಎಐ ಸಂಸ್ಥೆಯು ತನ್ನ ಪ್ರಬಲ ಎಐ ಮಾಡಲ್​ಗಳಿಗೆ ಟ್ರೈನಿಂಗ್ ಕೊಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಹೇಳಿದೆ.

ಓಪನ್​ಎಐನ ಲಂಗು ಲಗಾಮು ತೊರೆದು ದಾರಿ ತಪ್ಪಿರುವ ಎಐ ಏಜೆಂಟ್​ಗಳು (Rogue AI Agents) ಈ ಅವಾಂತರ ಸೃಷ್ಟಿಸಿವೆ. ಈ ರೀತಿ ಭದ್ರತಾ ಅಪಾಯ ಎದುರಾದ ಪ್ರಕರಣಗಳಲ್ಲಿ ಸಂಸ್ಥೆಯು ನಿರೀಕ್ಷಿತ ವೇಗದಲ್ಲಿ ಸ್ಪಂದಿಸಿಲ್ಲ ಎಂಬುದನ್ನು ಓಪನ್ಎಐ ಸಿಇಒ ಸ್ಯಾಮ್ ಆಲ್ಟ್​ಮನ್ ಒಪ್ಪಿಕೊಂಡಿದ್ದಾರೆ. ರೋಗ್ ಆಗಿರುವ ಎಐ ಏಜೆಂಟ್​ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ.

ಏನಿದು ರೋಗ್ ಎಐ ಏಜೆಂಟ್?

ಒಂದು ಎಐ ಏಜೆಂಟ್​ಗೆ ನಿರ್ದಿಷ್ಟ ನಿಯಮಾವಳಿಗಳು, ಕಟ್ಟುಪಾಡುಗಳನ್ನು ನಿಗದಿ ಮಾಡಲಾಗಿರುತ್ತದೆ. ತನಗೆ ವಹಿಸಿದ ಕೆಲಸವನ್ನು ಪೂರ್ಣಗೊಳಿಸುವ ಉಮೇದಿನಲ್ಲಿ ಈ ಕೃತಕ ಬುದ್ಧಿಮತ್ತೆಯ ತಂತ್ರಾಂಶ ಅಥವಾ ಏಜೆಂಟ್ ತನ್ನ ಕಟ್ಟುಪಾಡುಗಳನ್ನು ಮೀರಿ ಪ್ರಯತ್ನಿಸಬಹುದು. ಸೆಕ್ಯೂರಿಟಿ ಪ್ರೋಟೋಕಾಲ್ ಉಲ್ಲಂಘಿಸಿ ಮಾಹಿತಿ ಹೆಕ್ಕಲು ಯತ್ನಿಸಬಹುದು. ಇಂಥವನ್ನು ರೋಗ್ ಎಐ ಏಜೆಂಟ್ ಅಥವಾ ದಾರಿತಪ್ಪಿದ ಎಐ ಏಜೆಂಟ್ ಎಂದು ಕರೆಯಬಹುದು.

ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಸ್ಟೀಲ್ ಫ್ಯಾಕ್ಟರಿ; ಇದು ನಿರ್ಮಿಸುತ್ತಿರೋದು ಭಾರತೀಯ ಕಂಪನಿ

ಸೈಬರ್ ಭದ್ರತಾ ಬೆದರಿಕೆ: ಅತ್ಯಂತ ಸುಧಾರಿತ ಮಟ್ಟದ ಎಐ ಏಜೆಂಟ್‌ಗಳು ಮಾನವನ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿ ಸಂಕೀರ್ಣ ಕೋಡ್‌ಗಳನ್ನು ಬಳಸಿ ಸರ್ಕಾರಿ ವ್ಯವಸ್ಥೆಗಳ ಒಳಗೆ ನುಸುಳಲು ಯತ್ನಿಸಿವೆ. ಈ ತಂತ್ರಜ್ಞಾನ ದುರ್ಬಳಕೆಯ ಅಪಾಯವನ್ನು ಮನಗಂಡು ಓಪನ್‌ಎಐ ಮುಂದಿನ ಹಂತದ ತರಬೇತಿಯನ್ನು ತಡೆಹಿಡಿದಿದೆ.

ತನ್ನ ಮುಂದಿನ ಪೀಳಿಗೆಯ ಎಐ ಮಾದರಿಗಳು ಸೈಬರ್ ಬೆದರಿಕೆಗಳಿಗೆ ಅಥವಾ ಸ್ವಯಂಪ್ರೇರಿತ ದಾಳಿಗಳಿಗೆ ಬಳಕೆಯಾಗದಂತೆ ತಡೆಯಲು ಭದ್ರತಾ ಪರಿಶೀಲನೆ (Safety Audits) ಮತ್ತು ಹೊಸ ನಿಯಂತ್ರಣ ಮಾನದಂಡಗಳನ್ನು ರೀವ್ಯಾಲ್ಯುಯೇಟ್ ಮಾಡಲು ಸಂಸ್ಥೆ ಮುಂದಾಗಿದೆ.

ಸರ್ಕಾರದ ಜೊತೆ ಸಹಕಾರ: ಸಾಮಾಜಿಕ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗದಂತೆ ತಡೆಯಲು ಜಾಗತಿಕ ಸೈಬರ್ ಭದ್ರತಾ ಸಂಸ್ಥೆಗಳು ಮತ್ತು ಸರ್ಕಾರಿ ಆಡಳಿತಗಳ ಜೊತೆಗೂಡಿ ಓಪನ್‌ಎಐ ಕಾರ್ಯನಿರ್ವಹಿಸುತ್ತಿದ್ದು, ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸುವವರೆಗೆ ಅತ್ಯಾಧುನಿಕ ಮಾಡೆಲ್‌ಗಳ ತರಬೇತಿಯನ್ನು ಮುಂದುವರಿಸದಿರಲು ತೀರ್ಮಾನಿಸಿದೆ.

ಇದನ್ನೂ ಓದಿ: ಸಿಬಿಡಿಟಿ ಮಹತ್ವದ ಘೋಷಣೆ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಮತ್ತು ಇನ್ಕಮ್ ರಿಟರ್ನ್ ಸಲ್ಲಿಸಲು ಗಡುವುಗಳ ವಿಸ್ತರಣೆ

ಎಐ ಭದ್ರತೆಯ ಕುರಿತು ಹೆಚ್ಚಿದ ಕಳವಳ

ಎಐ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ ಸ್ವಯಂಚಾಲಿತ ರೋಗ್ ಏಜೆಂಟ್‌ಗಳು ಸೃಷ್ಟಿಸುತ್ತಿರುವ ಭದ್ರತಾ ಅಪಾಯಗಳು ಜಾಗತಿಕ ಮಟ್ಟದಲ್ಲಿ ತಜ್ಞರು ಮತ್ತು ಸರ್ಕಾರಗಳ ನಿದ್ದೆಗೆಡಿಸಿವೆ. ತಂತ್ರಜ್ಞಾನದ ಅಭಿವೃದ್ಧಿಗಿಂತ ಅದರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ವಾದಕ್ಕೆ ಈ ಘಟನೆ ಮತ್ತಷ್ಟು ಪುಷ್ಟಿ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ