ಮೂರು ದಿನಗಳ ಮುಷ್ಕರ: ಭಾನುವಾರ ಬ್ಯಾಂಕ್​ಗಳನ್ನು ತೆರೆಯಲು ಸರ್ಕಾರ ಅನುಮತಿ; ಗ್ರಾಹಕರ ಹಿತದೃಷ್ಟಿಯಿಂದ ಈ ಕ್ರಮ

ಸೆಪ್ಟೆಂಬರ್ 27, ಭಾನುವಾರದಂದು ಸಾರ್ವಜನಿಕ ರಜೆ ಇದ್ದರೂ ಬ್ಯಾಂಕ್ ಕಚೇರಿಗಳು ಬಾಗಿಲು ತೆರೆದಿರುವ ಸಾಧ್ಯತೆ ಇದೆ. ಬ್ಯಾಂಕ್ ಉದ್ಯೋಗಿಗಳ ಮುಷ್ಕರದಿಂದಾಗಿ ಸೆಪ್ಟೆಂಬರ್ 28ರಿಂದ ಮೂರು ದಿನಗಳ ಕಾಲ ಬ್ಯಾಂಕ್ ಬಂದ್ ಇರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ದೇಶಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳನ್ನು ತೆರೆಯಲು ಆರ್​ಬಿಐ ಅನುಮತಿಸಿದೆ.

ಮೂರು ದಿನಗಳ ಮುಷ್ಕರ: ಭಾನುವಾರ ಬ್ಯಾಂಕ್​ಗಳನ್ನು ತೆರೆಯಲು ಸರ್ಕಾರ ಅನುಮತಿ; ಗ್ರಾಹಕರ ಹಿತದೃಷ್ಟಿಯಿಂದ ಈ ಕ್ರಮ
ಎಕ್ಸಿಸ್ ಬ್ಯಾಂಕ್
Image Credit source: Getty Images

Updated on: Sep 23, 2026 | 3:08 PM

ನವದೆಹಲಿ, ಸೆಪ್ಟೆಂಬರ್ 23: ಈ ಭಾನುವಾರ ರಜಾ ದಿನ ಇದ್ದರೂ ಬ್ಯಾಂಕುಗಳ ಕಚೇರಿ ತೆರೆದಿರುವ ಸಾಧ್ಯತೆ ಇದೆ. ಮುಂಬರುವ ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳಿಂದ ಮುಷ್ಕರ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರವು ಭಾನುವಾರ ಬ್ಯಾಂಕ್ ಕಚೇರಿ ತೆರೆಯಲು ಅನುಮತಿಸಿದೆ. 2026ರ ಸೆಪ್ಟೆಂಬರ್ 27 ರಂದು ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಲಿವೆ ಎಂದು ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರಕಟಣೆ ಪ್ರಕಾರ, ಎಲ್ಲಾ ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ ಜೋಡಿತ ಕಚೇರಿಗಳು, ಕರೆನ್ಸಿ ಚೆಸ್ಟ್​ಗಳು ಸೆಪ್ಟೆಂಬರ್ 27ರಂದು ಪೂರ್ಣ ರೀತಿಯಲ್ಲಿ ಕಾರ್ಯನಿರ್ವಹಿಸಲು ಆರ್​ಬಿಐ ಅನುಮೋದಿಸಿದೆ. ಎಲ್ಲಾ ಸರ್ಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸಾರ್ವಜನಿಕ ಸೇವೆಗೆ ಭಾನುವಾರವೂ ತೆರೆದಿರುತ್ತವೆ.

ಇದನ್ನೂ ಓದಿ: ಇಪಿಎಫ್​ ವೇತನ ಮಿತಿ 25,000 ರೂಗೆ ಏರಿಸಿದ್ದರ ಪರಿಣಾಮಗಳೇನು? ಬದಲಾಗುವುದೇನು, ಇತ್ಯಾದಿ ಮಾಹಿತಿ

ಸತತ ಐದು ದಿನಗಳ ರಜೆ ತಪ್ಪಲಿದೆ…

ಸೆಪ್ಟೆಂಬರ್ 28ರಿಂದ 30ವರೆಗೆ ಬ್ಯಾಂಕ್ ಉದ್ಯೋಗಿಗಳ ಮುಷ್ಕರ ಇದೆ. ಸೆಪ್ಟೆಂಬರ್ 26 ಮತ್ತು 27ರಂದು ನಾಲ್ಕನೇ ಶನಿವಾರ ಮತ್ತು ಭಾನುವಾರವಾದ್ದರಿಂದ ರಜೆಗಳಿವೆ. ಹೀಗಾಗಿ, ಸೆಪ್ಟೆಂಬರ್ 26ರಿಂದ 30ರವರೆಗೆ ಸತತ ಐದು ದಿನಗಳ ಕಾಲ ಬ್ಯಾಂಕ್ ಕಚೇರಿ ಬಾಗಿಲು ಹಾಕುವ ಸಾಧ್ಯತೆ ಇತ್ತು. ಇದರಿಂದ ಗ್ರಾಹಕರಿಗೆ ಆಗುವ ದೊಡ್ಡ ಅನನುಕೂಲಗಳನ್ನು ಗಮನಿಸಿ, ಭಾನುವಾರ ಬ್ಯಾಂಕ್ ಕಚೇರಿ ತೆರೆಯುವ ಕ್ರಮವನ್ನು ಆರ್​ಬಿಐ ತೆಗೆದುಕೊಂಡಿದೆ.

ಬ್ಯಾಂಕ್ ಉದ್ಯೋಗಿಗಳಿಂದ ಮುಷ್ಕರ ಯಾಕೆ?

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬ್ಯಾಂಕ್ ಮಹಾ ಒಕ್ಕೂಟವಾದ ಯುಎಫ್​ಬಿಯು ಮುಷ್ಕರ ನಡೆಸುತ್ತಿದೆ. ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ವೀಕಾಫ್ ಕೊಡಬೇಕು ಎಂಬುದು ಪ್ರಮುಖ ಬೇಡಿಕೆ. ಸೆಪ್ಟೆಂಬರ್ 13ರಂದು ಈಗಾಗಲೆ ಒಂದು ದಿನದ ಮುಷ್ಕರ ನಡೆಸಲಾಗಿದೆ. ಈಗ ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನ ಮುಷ್ಕರ ನಡೆಸಲಿದೆ. ಅಕ್ಟೋಬರ್ ತಿಂಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿಯೂ ಬೆದರಿಕೆ ಹಾಕಿದೆ.

ಇದನ್ನೂ ಓದಿ: Mahindra Thar OG: ಹೊಸ ಅವತಾರದಲ್ಲಿ ಮಹೀಂದ್ರ ಥಾರ್ OG ಬಿಡುಗಡೆ; ವಿನ್ಯಾಸ, ಎಂಜಿನ್, ಸುರಕ್ಷತೆಯಲ್ಲಿ ದೊಡ್ಡ ಬದಲಾವಣೆ

ಸರ್ಕಾರ ಸ್ಪಂದಿಸಿದರೆ ಮುಷ್ಕರ ಕೈಬಿಡುವುದಾಗಿ ಒಕ್ಕೂಟ ಸ್ಪಷ್ಟನೆ

ಬ್ಯಾಂಕ್ ಉದ್ಯೋಗಿಗಳ ಮುಷ್ಕರ ನಿಲ್ಲಿಸಲು ಸರ್ಕಾರ ಕೂಡ ಪ್ರಯತ್ನಿಸುತ್ತಿದೆ. ಮುಷ್ಕರ ನಿರ್ಧಾರ ಕೈಬಿಡಬೇಕೆಂದು ಹಣಕಾಸು ಸೇವೆಗಳ ಇಲಾಖೆ, ಭಾರತೀಯ ಬ್ಯಾಂಕುಗಳ ಸಂಸ್ಥೆ ಹಾಗು ವಿವಿಧ ಬ್ಯಾಂಕುಗಳ ಮ್ಯಾನೇಜ್ಮೆಂಟ್​ಗಳು ಮುಷ್ಕರ ಕೈಬಿಡುವಂತೆ ಯುಎಫ್​ಬಿಯುಗೆ ಮನವಿ ಮಾಡಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಪ್ರಯತ್ನ ಮಾಡುತ್ತದೆ ಎಂದಾದಲ್ಲಿ ತಮ್ಮ ಮುಷ್ಕರ ಕ್ರಮದಿಂದ ಹಿಂದಕ್ಕೆ ಸರಿಯುವುದಾಗಿ ಯುಎಫ್​ಬಿಯು ಕೂಡ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Wed, 23 September 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us