Bima Sugam: ಅಗ್ಗವಾಗಲಿದೆ ವಿಮೆ, ಖರ್ಚು ಕಡಿಮೆ ಮಾಡಲಿದೆ ಆನ್​ಲೈನ್ ತಾಣ ಬಿಮಾ ಸುಗಮ್

ಬಿಮಾ ಸುಗಮ್ ತಾಣದಿಂದಾಗಿ ಮಧ್ಯವರ್ತಿಗಳಿಗೆ ಪಾವತಿಸುವ ಕಮಿಷನ್‌ಗಳು ಕಡಿಮೆಯಾಗಲಿವೆ. ಆದ್ದರಿಂದ, ಕಡಿಮೆ ಬೆಲೆಯಲ್ಲಿ ಉತ್ತಮ ವಿಮೆಯನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಐಆರ್​ಡಿಎಐ ತಿಳಿಸಿದೆ.

Bima Sugam: ಅಗ್ಗವಾಗಲಿದೆ ವಿಮೆ, ಖರ್ಚು ಕಡಿಮೆ ಮಾಡಲಿದೆ ಆನ್​ಲೈನ್ ತಾಣ ಬಿಮಾ ಸುಗಮ್
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Oct 20, 2022 | 3:03 PM

ನವದೆಹಲಿ: ಎಲ್ಲ ಜೀವ ವಿಮೆ ಮತ್ತು ಇತರ ವಿಮೆಗಳನ್ನು ಒಂದೇ ವೇದಿಕೆ ಅಡಿ ತರುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಐಆರ್​ಡಿಎಐ (Irdai) ನೂತನ ಆನ್​ಲೈನ್ ತಾಣ ಬಿಮಾ ಸುಗಮ್ (Bima Sugam) ಅನ್ನು ಜಾರಿಗೆ ತರುವುದಾಗಿ ಘೋಷಿಸಿದೆ. 2023ರ ಜನರಿ 1ರಿಂದ ಈ ತಾಣ ಜನರಿಗೆ ಲಭ್ಯವಾಗಲಿದೆ. ವಿಮೆ ಪಾಲಿಸಿಗಳ ಖರೀದಿ, ಪೋರ್ಟಬಿಲಿಟಿ ಸೌಲಭ್ಯಗಳು, ವಿಮೆ ಏಜೆಂಟ್​ಗಳ ಬದಲಾವಣೆ, ಕ್ಲೇಮ್​ಗಳ ಸೆಟಲ್​ಮೆಂಟ್… ಹೀಗೆ ಎಲ್ಲ ವಿಧದ ಸೇವೆಗಳೂ ಬಿಮಾ ಸುಗಮ್​ನಲ್ಲಿ ಲಭ್ಯವಾಗಲಿದೆ.

ಜೀವ ವಿಮೆ, ಮೋಟಾರು ಅಥವಾ ಆರೋಗ್ಯ ವಿಮೆ ಪಾಲಿಸಿಗಳನ್ನು ಗ್ರಾಹಕರು ಈ ತಾಣದಿಂದ ನೇರವಾಗಿ ಪಡೆಯಬಹುದಾಗಿದೆ. ಹೆಚ್ಚಿನ ಸೇವೆಗಳೆಲ್ಲ ಒಂದೇ ವೇದಿಕೆ ಅಡಿ ಬರುವುದರಿಂದ ಮತ್ತು ಮಧ್ಯವರ್ತಿಗಳ ಅಗತ್ಯ ಇಲ್ಲದೆಯೂ ವಿಮೆ ಮಾಡಬಹುದಾದ್ದರಿಂದ ವಿಮೆಗಾಗಿ ಜನರು ಮಾಡುವ ವೆಚ್ಚದಲ್ಲಿ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ವೆಬ್ ಅಗ್ರಿಗೇಟರ್​ಗಳು (ಪಾಲಿಸಿ ಎಕ್ಸ್, ಪಾಲಿಸಿಬಜಾರ್ ಇತ್ಯಾದಿ), ಬ್ರೋಕರ್​ಗಳು (ಬಜಾಜ್​ ಕ್ಯಾಪಿಟಲ್, ಪ್ರೊಬಸ್ ಇನ್ಶೂರೆನ್ಸ್ ಬ್ರೋಕರ್ ಇತ್ಯಾದಿ), ಬ್ಯಾಂಕ್​ಗಳು ಮತ್ತು ವಿಮಾ ಏಜೆಂಟ್​ಗಳು ವಿಮೆಗಳ ಮಾರಾಟಕ್ಕೆ ಅನುವು ಮಾಡಿಕೊಡಲಿದ್ದಾರೆ. ಇ-ವಿಮಾ ಖಾತೆಯ ಸಹಾಯದಿಂದ ಬಿಮಾ ಸುಗಮ್ ಎಲ್ಲ ರೀತಿಯ ಸೇವೆಗಳನ್ನು ಪಾಲಿಸಿದಾರರಿಗೆ ಒದಗಿಸಿಕೊಡಲಿದೆ. ಕೆಲವು ವಿಮಾ ಕಂಪನಿಗಳು (ಜೀವ ವಿಮೆ ಮತ್ತು ಸಾಮಾನ್ಯ ವಿಮೆ) ಬಿಮಾ ಸುಗಮ್​ನ ಪಾಲುದಾರರಾಗಿವೆ.

ಇದನ್ನೂ ಓದಿ
Wipro: ಕೇವಲ 10 ನಿಮಿಷಗಳಲ್ಲಿ ವಿಪ್ರೋದ 20 ಮಂದಿ ಉನ್ನತ ಸಿಬ್ಬಂದಿ ವಜಾ: ರಿಷದ್ ಪ್ರೇಮ್ ಜಿ
Rupee Value: ಮತ್ತೆ ಪಾತಾಳಕ್ಕೆ ಕುಸಿದ ರೂಪಾಯಿ, ಡಾಲರ್ ವಿರುದ್ಧ 83.06ಕ್ಕೆ ಇಳಿಕೆ
JioFiber: ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ ಬಂದಿದೆ! ವಿವರ ಇಲ್ಲಿದೆ
Nestle India Q3 Results: ನೆಸ್ಲೆ ಇಂಡಿಯಾ ನಿವ್ವಳ ಲಾಭದಲ್ಲಿ 8% ಏರಿಕೆ, ಮಾರಾಟದಲ್ಲಿ 5 ವರ್ಷಗಳ ಗರಿಷ್ಠ ಸಾಧನೆ

ಪ್ರಯೋಜನಗಳೇನು?

ಕೇಂದ್ರೀಕೃತ ದತ್ತಾಂಶಗಳ ಆಧಾರದಲ್ಲಿ ಬಿಮಾ ಸುಗಮ್ ಕೆಲಸ ಮಾಡಲಿದೆ. ಹಾಲಿ ವಿಮಾದಾರರು ಅಥವಾ ಏಜೆಂಟ್‌ಗಳೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ವಿಮೆದಾರರಿಗೆ ಅಥವಾ ವಿಮೆ ಖರೀದಿದಾರರಿಗೆ ಕವರೇಜ್ ಮತ್ತು ಬೆಲೆಯ ಆಧಾರದ ಮೇಲೆ ತಮ್ಮ ಪಾಲಿಸಿಗಳನ್ನು ಪೋರ್ಟ್ ಮಾಡಲು ಈ ತಾಣ ಸಹಾಯ ಮಾಡಲಿದೆ. ಹೊಸ ವಿಮೆಗಳ ತ್ವರಿತ ಖರೀದಿಗೂ ನೆರವಾಗಲಿದೆ. ಪಾಲಿಸಿಗಳಲ್ಲಿ ಹೆಚ್ಚಿನ ಆಯ್ಕೆಗಳನ್ನು ಬಿಮಾ ಸುಗಮ್ ನೀಡಲಿದ್ದು, ವಿಸ್ತೃತ ಮಾಹಿತಿ ಮತ್ತು ನವೀಕರಣದ ವಿವರನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲಿದೆ.

ಇದನ್ನೂ ಓದಿ: ಅಂಚೆ ಸುರಕ್ಷಾ ವಿಮೆ ಯೋಜನೆ: ಅಂಚೆ ಕಚೇರಿಯಲ್ಲಿ ನಿತ್ಯ 35 ರೂ ಹೂಡಿದರೆ ಸಿಗುತ್ತದೆ 18 ಲಕ್ಷ ರೂ ಲಾಭ, ಜೊತೆಗೆ ಜೀವಮಾನ ಭದ್ರತೆಯೂ!

ಬಿಮಾ ಸುಗಮ್ ತಾಣದಿಂದಾಗಿ ಮಧ್ಯವರ್ತಿಗಳಿಗೆ ಪಾವತಿಸುವ ಕಮಿಷನ್‌ಗಳು ಕಡಿಮೆಯಾಗಲಿವೆ. ಆದ್ದರಿಂದ, ಪ್ರೀಮಿಯಂ ಬೆಲೆಯಲ್ಲಿ ಉತ್ತಮ ವಿಮೆಯನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಐಆರ್​ಡಿಎಐ ತಿಳಿಸಿದೆ.

ಬಿಮಾ ಸುಗಮ್​ನಲ್ಲಿ ವಿಮೆ ಖರೀದಿಸಿದರೆ ಸಿಗಲಿದೆ ಡಿಸ್ಕೌಂಟ್:

ಬಿಮಾ ಸುಗಮ್ ತಾಣದಿಂದ ನೇರವಾಗಿ ವಿಮೆ ಖರೀದಿಸುವವರಿಗೆ ರಿಯಾಯಿತಿ ದರದ ಕೊಡುಗೆಗಳನ್ನು ನೀಡುವ ಬಗ್ಗೆಯೂ ಐಆರ್​ಡಿಎಐ ಪ್ರಸ್ತಾಪಿಸಿದೆ. ಆದರೆ ಈ ಕುರಿತ ಸ್ಪಷ್ಟ ರೂಪುರೇಷೆ ಇನ್ನಷ್ಟೇ ಸಿದ್ಧವಾಗಬೇಕಿದೆ ಎಂದು ಇಫ್ಕೊ ಟೋಕಿಯೊ ಜನರಲ್ ಇನ್ಶೂರೆನ್ಸ್ ಸಿಇಒ ಎಚ್​.ಒ. ಸೂರಿ ‘ಲೈವ್ ಮಿಂಟ್’ ತಾಣಕ್ಕೆ ತಿಳಿಸಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ ಬಿಮಾ ಸುಗಮ್?

ಎಂಡ್ ಟು ಎಂಡ್ ಡಿಜಿಟೈಸೇಷನ್ ಮೂಲಕ ಬಿಮಾ ಸುಗಮ್​ನಲ್ಲಿ ವಿಮೆ ಮಾರಾಟ ಮಾಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಪಾಲಿಸಿದಾರರಿಗೆ ಇ-ಬಿಮಾ ಅಥವಾ ಇ-ವಿಮಾ ಖಾತೆಗಳನ್ನು ನೀಡಲಾಗುತ್ತದೆ. ಅದರಲ್ಲಿ ಅವರು ತಮ್ಮ ಪಾಲಿಸಿಗಳ ವಿವರಗಳನ್ನು ತಿಳಿಯಬಹುದು ಮತ್ತು ಕ್ಲೇಮ್​ಗಾಗಿ ಮನವಿ ಸಲ್ಲಿಸಬಹುದು ಎಂದು ಸೂರಿ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ