Sign In

By signing in or creating an account, you agree with Associated Broadcasting Company's Terms & Conditions and Privacy Policy.

CCI Penalty: ಮೇಕ್​ಮೈಟ್ರಿಪ್, ಓಯೊ, ಗೊಯಿಬಿಬೊಗೆ ಸಿಸಿಐಯಿಂದ 392 ಕೋಟಿ ರೂ. ದಂಡ

ಕಾನೂನು ಪ್ರಕಾರ ಸಮ್ಮತವಲ್ಲದ ವ್ಯಾಪಾರ ತಂತ್ರಗಳನ್ನು ಅನುಸರಿಸಿದ್ದಕ್ಕಾಗಿ ಆನ್​ಲೈನ್ ಟ್ರಾವೆಲ್ ಕಂಪನಿಗಳಾದ ಮೇಕ್​ಮೈಟ್ರಿಪ್, ಗೊಯಿಬಿಬೊ ಹಾಗೂ ಸೇವಾ ಪೂರೈಕೆದಾರ ಕಂಪನಿ ಓಯೊಗೆ ಭಾರತೀಯ ಸ್ಪರ್ಧಾ ಆಯೋಗವು 392 ಕೋಟಿ ರೂಪಾಯಿ ದಂಡ ವಿಧಿಸಿದೆ.

CCI Penalty: ಮೇಕ್​ಮೈಟ್ರಿಪ್, ಓಯೊ, ಗೊಯಿಬಿಬೊಗೆ ಸಿಸಿಐಯಿಂದ 392 ಕೋಟಿ ರೂ. ದಂಡ
ಓಯೊ (ಸಂಗ್ರಹ ಚಿತ್ರ)
Follow us
TV9 Web
| Updated By: Ganapathi Sharma

Updated on:Oct 20, 2022 | 11:29 AM

ನವದೆಹಲಿ: ಕಾನೂನು ಪ್ರಕಾರ ಸಮ್ಮತವಲ್ಲದ ವ್ಯಾಪಾರ ತಂತ್ರಗಳನ್ನು ಅನುಸರಿಸಿದ್ದಕ್ಕಾಗಿ ಆನ್​ಲೈನ್ ಟ್ರಾವೆಲ್ ಕಂಪನಿಗಳಾದ ಮೇಕ್​ಮೈಟ್ರಿಪ್ (Make My Trip), ಗೊಯಿಬಿಬೊ (Goibibo) ಹಾಗೂ ಸೇವಾ ಪೂರೈಕೆದಾರ ಕಂಪನಿ ಓಯೊಗೆ ಭಾರತೀಯ ಸ್ಪರ್ಧಾ ಆಯೋಗವು (Competition Commission of India) 392 ಕೋಟಿ ರೂಪಾಯಿ ದಂಡ ವಿಧಿಸಿದೆ. ಮೇಕ್​​ಮೈಟ್ರಿಪ್-ಗೊಯಿಬಿಬೊಗೆ (MMT-Go) 223.48 ಕೋಟಿ ರೂ. ಹಾಗೂ ಓಯೊಗೆ 168.88 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು 131 ಪುಟಗಳ ಆದೇಶದಲ್ಲಿ ಸ್ಪರ್ಧಾ ಆಯೋಗ ತಿಳಿಸಿದೆ.

ಮೇಕ್​​ಮೈಟ್ರಿಪ್-ಗೊಯಿಬಿಬೊ ತನ್ನ ಹೋಟೆಲ್ ಪಾಲುದಾರರೊಂದಿಗೆ ಬೆಲೆಯ ಕುರಿತು ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದದ ಪ್ರಕಾರ, ಪಾಲುದಾರ ಹೋಟೆಲ್​ಗಳು ಬೇರೆ ಯಾವುದೇ ಆನ್​ಲೈನ್ ತಾಣಗಳಲ್ಲಿ ಕಡಿಮೆ ದರಕ್ಕೆ ಕೊಠಡಿಗಳನ್ನು ಕಾಯ್ದಿರಿಸಲು ಅವಕಾಶ ನೀಡುವಂತಿಲ್ಲ. ಅಲ್ಲದೆ, ತಮ್ಮದೇ ಆದ ಆನ್​ಲೈನ್ ತಾಣಗಳಲ್ಲಿಯೂ ಮೇಕ್​​ಮೈಟ್ರಿಪ್-ಗೊಯಿಬಿಬೊದ ದರಕ್ಕಿಂತ ಕಡಿಮೆ ಬೆಲೆಗೆ ಕೊಠಡಿ ಬುಕಿಂಗ್​ಗೆ ಅವಕಾಶ ನೀಡುವಂತಿಲ್ಲ.

ಇದನ್ನೂ ಓದಿ: Rupee Value: ಮತ್ತೆ ಪಾತಾಳಕ್ಕೆ ಕುಸಿದ ರೂಪಾಯಿ, ಡಾಲರ್ ವಿರುದ್ಧ 83.06ಕ್ಕೆ ಇಳಿಕೆ

ಇದನ್ನೂ ಓದಿ
Image
Gold Price Today: ಮತ್ತೆ ಕುಸಿದ ಬೆಳ್ಳಿ ದರ, ದೇಶದ ಪ್ರಮುಖ ನಗರಗಳ ಚಿನ್ನದ ದರ ಇಲ್ಲಿದೆ ನೋಡಿ
Image
JioFiber: ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ ಬಂದಿದೆ! ವಿವರ ಇಲ್ಲಿದೆ
Image
Nestle India Q3 Results: ನೆಸ್ಲೆ ಇಂಡಿಯಾ ನಿವ್ವಳ ಲಾಭದಲ್ಲಿ 8% ಏರಿಕೆ, ಮಾರಾಟದಲ್ಲಿ 5 ವರ್ಷಗಳ ಗರಿಷ್ಠ ಸಾಧನೆ
Image
ಅವಧಿಯೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ಏನೆಲ್ಲ ತೊಂದರೆ? ಇಲ್ಲಿದೆ ಮಾಹಿತಿ

ದಂಡ ವಿಧಿಸಿರುವುದು ಮಾತ್ರವಲ್ಲದೆ, ಹೋಟೆಲ್​ಗಳೊಂದಿಗೆ ದರಕ್ಕೆ ಸಂಬಂಧಿಸಿ ಮಾಡಿರುವ ಸಮ್ಮತವಲ್ಲದ ಒಪ್ಪಂದವನ್ನು ಹಿಂಪಡೆಯುವಂತೆ ಮೇಕ್​​ಮೈಟ್ರಿಪ್-ಗೊಯಿಬಿಬೊಗೆ ಆಯೋಗ ಸೂಸಿಚಿದೆ.

ಕಂಪನಿಗಳ ವಿರುದ್ಧ ದಾಖಲಾದ ದೂರುಗಳಿಗೆ ಸಂಬಂಧಿಸಿ ವಿಸ್ತೃತ ತನಿಖೆ ನಡೆಸುವಂತೆ ಆಯೋಗವು 2019ರಲ್ಲಿ ಆದೇಶಿಸಿತ್ತು.

ಗ್ರಾಹಕರು ಆನ್​ಲೈನ್ ಮೂಲಕ ಕೊಠಡಿಗಳನ್ನು ಕಾಯ್ದಿರಿಸುವ ಸಂದರ್ಭದಲ್ಲಿ ಮೇಕ್​​ಮೈಟ್ರಿಪ್-ಗೊಯಿಬಿಬೊ ಒಂದು ಶುಲ್ಕ ವಿಧಿಸುತ್ತಿತ್ತು. ಅದನ್ನು ಸಂಬಂಧಪಟ್ಟ ಹೋಟೆಲ್​ಗೆ ವರ್ಗಾಯಿಸುತ್ತಿರಲಿಲ್ಲ. ಪರಿಣಾಮವಾಗಿ ಗ್ರಾಹಕರು ಹೋಟೆಲ್​ನಲ್ಲಿ ಮರಳಿ ಶುಲ್ಕ ನೀಡಬೇಕಾಗುತ್ತಿತ್ತು ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಸ್ಪರ್ಧಾ ಆಯಯೋಗ ತಿಳಿಸಿದೆ.

ಇಬಿಬೊ ಸಮೂಹವನ್ನು 2017ರಲ್ಲಿ ಎಂಎಂಟಿ ಇಂಡಿಯಾ (ಮೇಕ್​ಮೈ ಟ್ರಿಪ್) ಖರೀದಿಸಿತ್ತು. ಎಂಎಂಟಿ ಇಂಡಿಯಾವು ಮೇಕ್​ಮೈಟ್ರಿಪ್ ಎಂಬ ಬ್ರ್ಯಾಂಡ್ ಅಡಿಯಲ್ಲಿ ಹಾಗೂ ಇಬಿಬೊ ಇಂಡಿಯಾ ಗೊಯಿಬಿಬೊ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಭಾರತೀಯ ಸ್ಪರ್ಧಾ ಆಯೋಗವು ದೇಶದಲ್ಲಿ ಉದ್ಯಮಗಳ ನ್ಯಾಯಸಮ್ಮತವಲ್ಲದ ಸ್ಪರ್ಧಾತ್ಮಕತೆಯನ್ನು ತಡೆಯುವುದಕ್ಕಾಗಿ ರೂಪಿಸಲ್ಪಟ್ಟಿರುವ ಸಂಸ್ಥೆಯಾಗಿದೆ. ಇದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸನಬದ್ಧ ಸಂಸ್ಥೆಯಾಗಿದೆ. 2002ರ ಸ್ಪರ್ಧಾ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಈ ಸಂಸ್ಥೆಗಿದೆ. ಆಯೋಗವು 2003ರ ಅಕ್ಟೋಬರ್ 14 ರಂದು ಅಸ್ತಿತ್ವಕ್ಕೆ ಬಂತು. ಇದು 2009ರ ಮೇ ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಾರಂಭಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:19 am, Thu, 20 October 22

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ