PAN Card Fraud: ಸನ್ನಿ ಲಿಯೋನ್ಗೆ ಆಗಿದ್ದ ವಂಚನೆಯೇ ಈಗ ನಟ ರಾಜ್ಕುಮಾರ್ ರಾವ್ಗೆ; ಪ್ಯಾನ್ ಕಾರ್ಡ್ ದುರ್ಬಳಕೆ ದೂರು
ಬಾಲಿವುಡ್ ನಟ ರಾಜ್ಕುಮಾರ್ ರಾವ್ ಅವರು ತಮಗೆ ಪ್ಯಾನ್ಕಾರ್ಡ್ ವಂಚನೆ ಆಗಿರುವ ಬಗ್ಗೆ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.
ನಿಮ್ಮ ಪ್ಯಾನ್ ಕಾರ್ಡ್ (PAN Card) ಬಳಸಿ, ಬೇರೆಯವರು ವಂಚಿಸಬಹುದು ಎಂದು ಎಷ್ಟೇ ಎಚ್ಚರಿಸಿದರೂ ಅಂಥ ಪ್ರಕರಣಗಳು ಪದೇಪದೇ ಕಂಡುಬರುತ್ತಲೇ ಇರುತ್ತವೆ. ಇಲ್ಲಿನ ಉದಾಹರಣೆಯನ್ನೇ ಗಮನಿಸಿ, ಬಾಲಿವುಡ್ನ ಖ್ಯಾತ ನಟ ರಾಜ್ಕುಮಾರ್ ರಾವ್ ಅವರ ಪ್ಯಾನ್ ಕಾರ್ಡ್ನ ದುರ್ಬಳಕೆ ಮಾಡಿಕೊಂಡ ಬಗ್ಗೆ ದೂರಿದ್ದಾರೆ. ಪ್ಯಾನ್ ಕಾರ್ಡ್ ಮಾಹಿತಿಯನ್ನು ಬಳಸಿಕೊಂಡು, ತಮ್ಮ ಹೆಸರಿನಲ್ಲಿ ಸಾಲವನ್ನು ಪಡೆದುಕೊಂಡಿದ್ದಾರೆ ಎಂದು ರಾಜ್ಕುಮಾರ್ ರಾವ್ ಅವರು ಹೇಳಿದ್ದಾರೆ. 37 ವರ್ಷದ ರಾವ್ ಅವರು ಹೇಳಿಕೊಂಡಂತೆ, ಈ ವಂಚನೆಯಿಂದ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಿದೆ. ಈ ವಿಚಾರದ ಬಗ್ಗೆ ಗಮನ ನೀಡುವಂತೆ ಕ್ರೆಡಿಟ್ ಇನ್ಫರ್ಮೇಷನ್ ಬ್ಯುರೋ (ಇಂಡಿಯಾ) ಲಿಮಿಟೆಡ್ (CIBIL) ಅಧಿಕಾರಿಗಳನ್ನು ಕೇಳಿದ್ದಾಗಿ ಹೇಳಿದ್ದಾರೆ.
“#FraudAlert ನನ್ನ ಪ್ಯಾನ್ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ನತ್ತು ಸಣ್ಣ ಸಾಲ ರೂ. 2500 ನನ್ನ ಹೆಸರಲ್ಲಿ ಸಾಲ ಪಡೆದಿದ್ದಾರೆ. ಇದರಿಂದಾಗಿ ನನ್ನ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಿದೆ. @CIBIL_ಅಧಿಕಾರಿಗಳು ದಯವಿಟ್ಟು ಇದನ್ನು ತಿದ್ದುಪಡಿ ಮಾಡಿ ಹಾಗೂ ಇದರ ವಿರುದ್ಧ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಿ,” ಎಂದು ರಾವ್ ಟ್ವೀಟ್ ಮಾಡಿದ್ದಾರೆ. ಸಿಬಿಲ್ನ ಅಧಿಕೃತ ಟ್ವಿಟರ್ ಖಾತೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಈ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ಇಂಥದ್ದೇ ಆರೋಪ ಮಾಡಿದ್ದರು. ತಮ್ಮ ಪ್ಯಾನ್ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಂಡು 2000 ರೂಪಾಯಿ ಸಾಲ ಪಡೆದಿದ್ದು, ಇದರಿಂದ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಆಗಿತ್ತು. ತಮ್ಮ ಪ್ಯಾನ್ ಕಾರ್ಡ್ ಬಳಸಿ, ಸಾಲ ಪಡೆದುಕೊಂಡಿದ್ದಾರೆ. ವಂಚನೆಯ ಮಾರ್ಗವನ್ನು ಬಳಸಿ, ತಮ್ಮ ಸಹಿ ನಕಲಿ ಮಾಡಿದ್ದರು ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: PAN card fraud: ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಬಳಸಿ ಬೇರೆಯವರು ಸಾಲ ತೆಗೆದುಕೊಂಡಿದ್ದಾರಾ? ಇದನ್ನು ತಿಳಿಯುವುದು ಹೀಗೆ