ಬೋನಸ್ ಷೇರು ಬಿಡುಗಡೆಯಾಗಿ ಎರಡೇ ದಿನಕ್ಕೆ ಅಕೌಂಟ್ ಸೇರಲಿದೆ; ಸೆಬಿ ನಡೆಯಿಂದ ಯಾರಿಗೆ ಲಾಭ?

SEBI T+2 rule for bonus shares: ಬೋನಸ್ ಷೇರು ಹಂಚಿಕೆ ಮಾಡಿದ ಬಳಿಕ ಎರಡು ಕಾರ್ಯ ದಿನಗಳಲ್ಲಿ ಅದು ಟ್ರೇಡಿಂಗ್​ಗೆ ಲಭ್ಯ ಆಗುವಂತಾಗಬೇಕು ಎಂದು ಸೆಬಿ ಹೊಸ ನಿಯಮ ಮಾಡಿದೆ. ಸದ್ಯ ಇರುವ ವ್ಯವಸ್ಥೆಯಲ್ಲಿ ಬೋನಸ್ ಷೇರು ಹಂಚಿಕೆಯಾಗಿ ಎರಡು ವಾರದಲ್ಲಿ ಅದು ಟ್ರೇಡಿಂಗ್​ಗೆ ಸಿಗುತ್ತದೆ. ಈಗ ಸೆಬಿ ರೂಪಿಸಿರುವ ಟಿ+2 ನಿಯಮವು ಅಕ್ಟೋಬರ್​ನಿಂದ ಜಾರಿಗೆ ಬರಬಹುದು.

ಬೋನಸ್ ಷೇರು ಬಿಡುಗಡೆಯಾಗಿ ಎರಡೇ ದಿನಕ್ಕೆ ಅಕೌಂಟ್ ಸೇರಲಿದೆ; ಸೆಬಿ ನಡೆಯಿಂದ ಯಾರಿಗೆ ಲಾಭ?
ಸೆಬಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 18, 2024 | 10:46 AM

ನವದೆಹಲಿ, ಸೆಪ್ಟೆಂಬರ್ 18: ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳು ಬೋನಸ್ ಷೇರುಗಳನ್ನು ನೀಡಿದರೆ ಅವುಗಳು ಇನ್ಮುಂದೆ ತ್ವರಿತವಾಗಿ ಲಭ್ಯ ಇರಲಿವೆ. ಬೋನಸ್ ಷೇರು ಎರಡೇ ದಿನಕ್ಕೆ ಟ್ರೇಡಿಂಗ್​ಗೆ ಲಭ್ಯ ಇರುವಂತೆ ಸೆಬಿ (SEBI) ನಿಯಮ ಬದಲಿಸಿದೆ. ಅಕ್ಟೋಬರ್ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಸದ್ಯ ಇರುವ ನಿಯಮದ ಪ್ರಕಾರ ಬೋನಸ್ ಷೇರು ನೀಡುವ ರೆಕಾರ್ಡ್ ಡೇಟ್​ನಿಂದ ಎರಡು ವಾರದ ಬಳಿಕ ಆ ಬೋನಸ್ ಷೇರುಗಳನ್ನು ಟ್ರೇಡಿಂಗ್ ಮಾಡಬಹುದು. ಮೊನ್ನೆ (ಸೆ. 16) ಸೆಬಿ ಹೊರಡಿಸಿದ ಸುತ್ತೋಲೆಯಲ್ಲಿ ಟಿ+2 ನಿಯಮ ಪಾಲನೆಗೆ ಸೂಚಿಸಲಾಗಿದೆ. ಟಿ ಎಂದರೆ ಇಲ್ಲಿ ಬೋನಸ್ ಷೇರು ನೀಡುವ ದಿನಾಂಕವಾಗಿರುತ್ತದೆ. ಎರಡು ಕಾರ್ಯಕಾರಿ ದಿನ ಅಥವಾ ವರ್ಕಿಂಗ್ ಡೇನಲ್ಲಿ ಬೋನಸ್ ಷೇರುಗಳು ಟ್ರೇಡಿಂಗ್​ಗೆ ಲಭ್ಯ ಇರಬೇಕು ಎನ್ನುತ್ತದೆ ಸೆಬಿ ನಿಯಮ.

ವರ್ಕಿಂಗ್ ಡೇ ಎಂದರೆ ಷೇರು ಮಾರುಕಟ್ಟೆ ತೆರೆದಿರುವ ದಿನ. ಶನಿವಾರ ಮತ್ತು ಭಾನುವಾರ ಇತ್ಯಾದಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳು ವರ್ಕಿಂಗ್ ಡೇಗಳಾಗಿರುತ್ತವೆ. ಶುಕ್ರವಾರ ಒಂದು ಕಂಪನಿ ಬೋನಸ್ ಷೇರು ಒದಗಿಸಿದರೆ ಆ ಷೇರುಗಳು ಮಂಗಳವಾರ ಟ್ರೇಡಿಂಗ್​ಗೆ ಲಭ್ಯ ಇರುತ್ತವೆ.

ಇದನ್ನೂ ಓದಿ: ಇಂದು ಎನ್​ಪಿಎಸ್ ವಾತ್ಸಲ್ಯ ಸ್ಕೀಮ್ ಲೋಕಾರ್ಪಣೆ; ಮಕ್ಕಳ ಉಜ್ವಲ ಭವಿಷ್ಯಕ್ಕಿರುವ ಈ ಯೋಜನೆ ಬಗ್ಗೆ ಸಮಗ್ರ ಮಾಹಿತಿ

ಸೆಬಿ ಹೊರಡಿಸಿದ ಸುತ್ತೋಲೆ ಪ್ರಕಾರ ಒಂದು ಕಂಪನಿಯು ಬೋನಸ್ ಷೇರು ನೀಡಲು ನಿರ್ಧರಿಸಿದರೆ, ಅದರ ಮಂಡಳಿ ಅನುಮೋದನೆ ಸಿಕ್ಕು ಐದು ಕಾರ್ಯ ದಿನದೊಳಗೆ ಷೇರು ವಿನಿಮಯ ಕೇಂದ್ರಗಳಿಂದಲೂ ಅನುಮೋದನೆಗೆ ಅರ್ಜಿ ಸಲ್ಲಿಸಬೇಕು. ಹಾಗೆಯೇ, ಬೋನಸ್ ಷೇರು ವಿತರಣೆಗೆ ಕಂಪನಿಯು ರೆಕಾರ್ಡ್ ಡೇಟ್ ನಿಗದಿ ಮಾಡಿ ಅದರ ಮಾಹಿತಿಯನ್ನು ಸ್ಟಾಕ್ ಎಕ್ಸ್​ಚೇಂಜ್​ಗೂ ನೀಡಿರಬೇಕು.

ಬೋನಸ್ ಷೇರುಗಳ ದಾಖಲು ದಿನ ಅಥವಾ ರೆಕಾರ್ಡ್ ಡೇಟ್ ಆಗಿ ಒಂದು ಕಾರ್ಯ ದಿನದ ಬಳಿಕ ಆ ಷೇರುಗಳನ್ನು ಅಲಾಟ್ಮೆಂಟ್ ಮಾಡಬೇಕು. ಅಲಾಟ್ಮೆಂಟ್ ದಿನದಂದು ಮಧ್ಯಾಹ್ನದ ವೇಳೆಗೆ ಡೆಪಾಸಿಟರಿ ಸಿಸ್ಟಂಗೆ ಬೋನಸ್ ಷೇರುಗಳನ್ನು ಕಳುಹಿಸಬೇಕು. ಬೋನಸ್ ಷೇರು ಸಂಬಂಧ ಸೆಬಿ ಹೊರಡಿಸಿದ ಈ ಟಿ+2 ನಿಯಮದಿಂದ ಕಂಪನಿ, ಹೂಡಿಕೆದಾರರು, ಬ್ರೋಕರ್​ಗಳು ಮತ್ತು ಷೇರು ವಿನಿಮಯ ಕೇಂದ್ರಗಳು ಎಲ್ಲರಿಗೂ ಅನುಕೂಲವಾಗುತ್ತದೆ.

ಇದನ್ನೂ ಓದಿ: ಪೌಂಡ್ ಸ್ಟರ್ಲಿಂಗ್​ಗೆ 14 ಶತಮಾನಗಳ ಇತಿಹಾಸ; ವಿಶ್ವದ ಅತ್ಯಂತ ಹಳೆಯ ಕರೆನ್ಸಿಯ ಕುತೂಹಲಕಾರಿ ಕಥೆ

ಇತ್ತೀಚೆಗೆ, ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ವಿತರಿಸುವುದಾಗಿ ಹೇಳಿದೆ. ಅದರ ರೆಕಾರ್ಡ್ ಡೇಟ್ ಇನ್ನೂ ಘೋಷಣೆ ಆಗಿಲ್ಲ. ಅಕ್ಟೋಬರ್​ನಲ್ಲಿ ಆಗುವ ನಿರೀಕ್ಷೆ ಇದೆ.

ಬೋನಸ್ ಷೇರು ಎಂದರೇನು?

ಬೋನಸ್ ಷೇರು ಎಂದರೆ ಒಂದು ಕಂಪನಿ ಈಗಿರುವ ಷೇರುಗಳಿಗೆ ಹೆಚ್ಚುವರಿಯಾಗಿ ಇನ್ನಷ್ಟು ಷೇರುಗಳನ್ನು ಹಂಚುತ್ತದೆ. ಷೇರು ವಿಭಜನೆಗೂ ಬೋನಸ್ ಷೇರಿಗೂ ವ್ಯತ್ಯಾಸ ಇದೆ. ಷೇರು ವಿಭಜನೆಯಲ್ಲಿ ಒಂದು ಷೇರನ್ನು ನಿರ್ದಿಷ್ಟ ಭಾಗಗಳಾಗಿ ವಿಭಜನೆ ಮಾಡಲಾಗುತ್ತದೆ. ಅದರ ಷೇರುಮೌಲ್ಯವೂ ಅಷ್ಟೇ ಪ್ರಮಾಣದಲ್ಲಿ ಕಡಿಮೆ ಮಾಡಲಾಗುತ್ತದೆ. ಅದರ ಫೇಸ್ ವ್ಯಾಲ್ಯೂ ಕೂಡ ಅದೇ ರೀತಿ ಕಡಿಮೆ ಆಗುತ್ತದೆ. ಬೋನಸ್ ಷೇರಿನಲ್ಲೂ ಷೇರುಮೌಲ್ಯ ಒಟ್ಟಾರೆ ಅಷ್ಟೇ ಇರುತ್ತದಾದರೂ ಒಂದು ಷೇರಿನ ಫೇಸ್​​ವ್ಯಾಲ್ಯೂನಲ್ಲಿ ಬದಲಾವಣೆ ಆಗುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ