ಡಿಶ್, ಕೇಬಲ್ ಟಿವಿ ಉದ್ಯಮದ ಸಂಕಷ್ಟ: ಕೆಲಸ ಕಳೆದುಕೊಂಡ 5.77 ಲಕ್ಷ ಮಂದಿ

Cable TV industry on decline: ಡಿಟಿಎಚ್, ಕೇಬಲ್ ಟಿವಿ ಇತ್ಯಾದಿ ಇರುವ ಪೇ-ಟಿವಿ ಉದ್ಯಮ ಕಳೆದ ಏಳೆಂದು ವರ್ಷಗಳಿಂದ ಇಳಿಕೆ ಕಂಡಿದೆ. ಈ ಉದ್ಯಮದ ಆದಾಯ ಮತ್ತು ಲಾಭ ಕಡಿಮೆ ಆಗಿದೆ. ಇದರ ಪರಿಣಾಮವಾಗಿ 2018ರಿಂದೀಚೆ ಈ ಉದ್ಯಮದಲ್ಲಿ 5.77 ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಡಿಜಿಟಲ್ ಕೇಬಲ್ ಫೆಡರೇಶನ್ ಮತ್ತು ಇವೈ ಇಂಡಿಯಾ ಜಂಟಿಯಾಗಿ ನಡೆಸಿದ ಸಮೀಕ್ಷೆ ಮತ್ತು ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಡಿಶ್, ಕೇಬಲ್ ಟಿವಿ ಉದ್ಯಮದ ಸಂಕಷ್ಟ: ಕೆಲಸ ಕಳೆದುಕೊಂಡ 5.77 ಲಕ್ಷ ಮಂದಿ
ಕೇಬಲ್ ಟಿವಿ

Updated on: Jun 10, 2025 | 3:11 PM

ಮುಂಬೈ, ಜೂನ್ 10: ಭಾರತದಲ್ಲಿ ಕೇಬಲ್ ಟಿವಿ ಉದ್ಯಮ ಕಳೆದ ಏಳೆಂದು ವರ್ಷಗಳಿಂದ ಗಣನೀಯವಾಗಿ ಇಳಿಕೆ ಆಗುತ್ತಿರುವುದು ಕಂಡು ಬಂದಿದೆ. 2018ರಿಂದ 2024ರವರೆಗೂ ಡಿಟಿಎಚ್, ಕೇಬಲ್ ಸಬ್​​ಸ್ಕ್ರೈಬರ್​​ಗಳ ಸಂಖ್ಯೆ ಬರೋಬ್ಬರಿ 4 ಕೋಟಿಯಷ್ಟು ಕಡಿಮೆ ಆಗಿದೆ. ಈ ಉದ್ಯಮದ ಆದಾಯವೂ ಗಣನೀಯವಾಗಿ ತಗ್ಗಿದೆ. ಇದರ ಪರಿಣಾಮವಾಗಿ ಈ ಏಳು ವರ್ಷದಲ್ಲಿ ಒಟ್ಟಾರೆ 5,57,000 ಉದ್ಯೋಗನಷ್ಟವಾಗಿದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.

ಅಖಿಲ ಭಾರತ ಡಿಜಿಟಲ್ ಕೇಬಲ್ ಒಕ್ಕೂಟ (ಎಐಡಿಸಿಎಫ್) ಮತ್ತು ಇವೈ ಇಂಡಿಯಾ ಜಂಟಿಯಾಗಿ ಸಿದ್ಧಪಡಿಸಿರುವ ‘ಭಾರತದಲ್ಲಿ ಕೇಬಲ್ ಟಿವಿ ವಿತರಣೆಯ ಸ್ಥಿತಿ’ ಎನ್ನುವ ಈ ವರದಿ ಪ್ರಕಾರ, 2018ರಲ್ಲಿ ಪೇ ಟಿವಿ (ಡಿಶ್, ಕೇಬಲ್ ಇತ್ಯಾದಿ) ಚಂದಾದಾರರ ಸಂಖ್ಯೆ 151 ಮಿಲಿಯನ್ (15.1 ಕೋಟಿ) ಇತ್ತು. 2024ರಲ್ಲಿ ಅದು 111 ಮಿಲಿಯನ್​ಗೆ ಇಳಿದಿದೆ. 2030ರಲ್ಲಿ ಈ ಸಂಖ್ಯೆ 71-81 ಮಿಲಿಯನ್​​ಗೆ ಇಳಿಯಬಹುದು.

ಇದನ್ನೂ ಓದಿ: ಆರ್​​ಸಿಬಿ ಮಾರಾಟ, 17,000 ಕೋಟಿ ರೂಗೆ? ಫ್ರಾಂಚೈಸಿ ಮಾರುವ ಯೋಚನೆಯಲ್ಲಿದ್ದಾರಾ ಮಾಲೀಕರು?

ಕೇಬಲ್ ಟಿವಿ ಉದ್ಯಮದ ಆದಾಯವೂ ಕುಸಿತ

ನಾಲ್ಕು ಡಿಟಿಎಚ್​ಗಳು ಮತ್ತು ಹತ್ತು ಪ್ರಮುಖ ಕೇಬಲ್ ಟಿವಿ ಕಂಪನಿಗಳ ಒಟ್ಟಾರೆ ಆದಾಯವು 2018ರಿಂದ ಈಚೆಗೆ ಶೇ. 16ರಷ್ಟು ಕಡಿಮೆ ಆಗಿದೆ. ಲಾಭ ಕೂಡ ಶೇ. 29ರಷ್ಟು ಕಡಿಮೆ ಆಗಿದೆ. 2018-19ರಲ್ಲಿ ಈ ಉದ್ಯಮದ ಒಟ್ಟಾರೆ ಆದಾಯವು 25,700 ಕೋಟಿ ರೂ ಇತ್ತು. 2023-24ರಲ್ಲಿ ಅದು 21,500 ಕೋಟಿ ರೂಗೆ ಇಳಿದಿದೆ.

ಕೇಬಲ್ ಟಿವಿ ಉದ್ಯಮ ಕುಸಿಯಲು ಕಾರಣಗಳೇನು?

  • ಚಾನಲ್ ಸಬ್​​ಸ್ಕ್ರಿಪ್ಷನ್ ವೆಚ್ಚ ಹೆಚ್ಚುತ್ತಿರುವುದು
  • ಒಟಿಟಿ ಪ್ಲಾಟ್​​ಫಾರ್ಮ್​​ಗಳಿಂದ ಸ್ಪರ್ಧೆ ಹೆಚ್ಚಳಗೊಂಡಿರುವುದು
  • ಡಿಡಿ ಫ್ರೀ ಡಿಶ್ ಇತ್ಯಾದಿ ಉಚಿತವಾಗಿ ಡಿಶ್ ಸರ್ವಿಸ್ ನೀಡುತ್ತಿರುವುದು.

ಇದನ್ನೂ ಓದಿ: ಟ್ರೆಂಡ್ಸ್ ಎಐ ಗ್ಲೋಬಲ್ 30 ಟೆಕ್ ಕಂಪನಿಗಳ ಪಟ್ಟಿ: ರಿಲಾಯನ್ಸ್ ಏಕಮಾತ್ರ ಭಾರತೀಯ ಸಂಸ್ಥೆ

5.57 ಲಕ್ಷ ಉದ್ಯೋಗ ನಷ್ಟ

ದೇಶಾದ್ಯಂತ 28,181 ಲೋಕಲ್ ಕೇಬಲ್ ಆಪರೇಟರುಗಳನ್ನು ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಕೇಬಲ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಶೇ. 31ರಷ್ಟು ಉದ್ಯೋಗನಷ್ಟ ಆಗಿದೆ. 2018ರಿಂದ ಈಚೆಗೆ 900 ಎಂಎಸ್​​ಒ (ಮಲ್ಟಿ ಸಿಸ್ಟಂ ಆಪರೇಟರ್ಸ್) ಮತ್ತು 72,000 ಲೋಕಲ್ ಕೇಬಲ್ ಆಪರೇಟರ್​​ಗಳು ಬಂದ್ ಆಗಿವೆ. ಇವೆಲ್ಲವುಗಳಿಂದ ಆಗಿರುವ ಉದ್ಯೋಗನಷ್ಟ ಸುಮಾರು 5,77,000 ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us