
ನವದೆಹಲಿ, ಸೆಪ್ಟೆಂಬರ್ 27: ಅಕ್ಟೋಬರ್ 2, ಗಾಂಧಿ ಜಯಂತಿಯಂದು ದೇಶಾದ್ಯಂತ ‘ನೋ ಯುಪಿಐ ಡೇ’ (No UPI Day) ಆಚರಿಸಲು ಅಥವಾ ಯುಪಿಐ ವಹಿವಾಟು ಬಹಿಷ್ಕರಿಸಲು ಕರೆ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳು ಮತ್ತು ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ದಾರಿ ತಪ್ಪಿಸುವಂತದ್ದು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (CAIT – Confederation of All India Traders) ಸ್ಪಷ್ಟಪಡಿಸಿದೆ. ಅಕ್ಟೋಬರ್ 2 ರಂದು ಯಾವುದೇ ರೀತಿಯ ‘ನೋ ಯುಪಿಐ ಡೇ’ ಆಚರಿಸುವ ಬಗ್ಗೆ ಸಂಸ್ಥೆಯು ಯಾವುದೇ ನಿರ್ಣಯ, ಸಭೆ ಅಥವಾ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ ಎಂದು ಸಿಎಐಟಿ ಸ್ಪಷ್ಟಪಡಿಸಿದೆ.
ಡಿಜಿಟಲ್ ಪಾವತಿಗೆ ಬೆಂಬಲ: ಭಾರತದ ಡಿಜಿಟಲ್ ಆರ್ಥಿಕತೆ ಮತ್ತು ಯುಪಿಐ (UPI) ಕ್ರಾಂತಿಯನ್ನು ಸಿಎಐಟಿ ಸದಾ ಬೆಂಬಲಿಸುತ್ತಾ ಬಂದಿದ್ದು, ಲಕ್ಷಾಂತರ ವರ್ತಕರು ಮತ್ತು ಗ್ರಾಹಕರಿಗೆ ಯುಪಿಐ ಅತ್ಯಂತ ಪಾರದರ್ಶಕ ವ್ಯವಸ್ಥೆಯಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ಚಿಪ್‌ಗಳಿಂದ ಶಿಪ್‌ಗಳವರೆಗೆ ರಕ್ಷಣಾ ವಲಯದಲ್ಲಿ ಭಾರತ ಸಂಪೂರ್ಣ ಸ್ವಾವಲಂಬಿಯಾಗಬೇಕು’ – ರಾಜನಾಥ್ ಸಿಂಗ್ ಕರೆ
ಎಂಡಿಆರ್ (MDR) ಶುಲ್ಕ ವಿವಾದ: ಅಕ್ಟೋಬರ್ 15 ರಿಂದ 2,000 ರೂಗಿಂತ ಹೆಚ್ಚಿನ ಮೌಲ್ಯದ ವ್ಯಾಪಾರಿ ಯುಪಿಐ ವಹಿವಾಟುಗಳ (P2M) ಮೇಲೆ ಶೇಕಡಾ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ಸರ್ಕಾರದ ಪ್ರಸ್ತಾವಿತ ನಿರ್ಧಾರವನ್ನು ಕೆಲವು ಸ್ಥಳೀಯ ಮತ್ತು ಪ್ರಾದೇಶಿಕ ವರ್ತಕರ ಸಂಘಟನೆಗಳು ವಿರೋಧಿಸುತ್ತಿವೆ.
ಸಿಎಐಟಿ ಹೇಳಿಕೆ ಬಗ್ಗೆ ಟ್ವೀಟ್
The Confederation of All India Traders (CAIT) has officially clarified that it has not given any call for “No UPI Day”, nor has it announced, endorsed, or decided to participate in such an observance. CAIT has stated that any such attribution is factually incorrect.
Citizens… https://t.co/XPYNudTqYT
— DFS (@DFS_India) September 27, 2026
ಸಿಎಐಟಿ ಸ್ಪಷ್ಟನೆ: ಕೆಲವು ಪ್ರಾದೇಶಿಕ ಸಂಘಟನೆಗಳು ಸ್ವತಂತ್ರವಾಗಿ ನಗದು ಪಾವತಿ ಆಂದೋಲನ ಅಥವಾ ಪ್ರತಿಭಟನೆಗಳನ್ನು ಹಮ್ಮಿಕೊಂಡಿರಬಹುದು, ಆದರೆ ಅಂತಹ ನಿರ್ಧಾರಗಳಿಗೂ ಸಿಎಐಟಿ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ‘ಇತಿಹಾಸದಲ್ಲೇ ಅತಿ ಹೆಚ್ಚು ಜನರಿಗೆ ಇಂಧನ ಸೌಲಭ್ಯ ನೀಡಿದ ದೇಶ ಭಾರತ’; ಪ್ರಧಾನಿ ಮೋದಿ ಕುರಿತು ಆಸ್ಟ್ರೇಲಿಯಾ ಪ್ರಧಾನಿ ಶ್ಲಾಘನೆ
ಅಕ್ಟೋಬರ್ 2 ರಂದು ದೇಶಾದ್ಯಂತ ಯುಪಿಐ ಸೇವೆಗಳು ಬಂದ್ ಆಗುವುದಿಲ್ಲ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ವರ್ತಕರ ಬಹಿಷ್ಕಾರವಿಲ್ಲ. ವದಂತಿಗಳನ್ನು ನಂಬದಂತೆ ಮತ್ತು ಅಧಿಕೃತ ಮಾಹಿತಿಗಾಗಿ ಮಾತ್ರ ಕಾಯುವಂತೆ ಸಿಎಐಟಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Sun, 27 September 26