Petrol Diesel Price on July 22: ಬಜೆಟ್ ಮಂಡನೆ ಮುನ್ನ, ಇಂದಿನ ನಿಮ್ಮ ನಗರದಲ್ಲಿನ ಪೆಟ್ರೋಲ್, ಡೀಸೆಲ್ ಬೆಲೆ ತಿಳಿಯಿರಿ
ಮಂಗಳವಾರ (ಜು.23) ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 7ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೂ ಒಂದು ದಿನ ಮುನ್ನ ಇಂದು (ಜು.22) ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಬೆಲೆ ಏರಿಕೆ ಅಥವಾ ಇಳಿಕೆಯಾಗಿದೆಯಾ ಎಂಬೆಲ್ಲ ವಿವರ ಇಲ್ಲಿದೆ ತಿಳಿಯಿರಿ.
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂದಿನ (ಜು.22) ಪೆಟ್ರೋಲ್ ಮತ್ತು ಡೀಸೆಲ್ (Petro and Diesel) ಬೆಲೆಯನ್ನು ಬಿಡುಗಡೆ ಮಾಡುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿವಿಧ ತೆರಿಗೆಗಳನ್ನು ವಿಧಿಸುತ್ತವೆ. ಒಂದೊಂದು ರಾಜ್ಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ವಿಭಿನ್ನವಾಗಿದೆ. ಹೀಗಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಳಿತ ಇರುತ್ತದೆ. ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಲ್ಲಿದೆ.
ಪೆಟ್ರೋಲ್, ಡೀಸೆಲ್ ಬೆಲೆ
- ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ಗೆ 102.86 ರೂ. ಇದೆ. ಡೀಸೆಲ್ ಲೀಟರ್ಗೆ 88.94 ರೂ. ಇದೆ.
- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 94.72 ರೂ. ಇದೆ. ಡೀಸೆಲ್ ಲೀಟರ್ಗೆ 87.62 ರೂ. ಇದೆ
- ಲಖನೌನಲ್ಲಿ ಪೆಟ್ರೋಲ್ ಲೀಟರ್ಗೆ 96.57 ರೂ. ಇದೆ. ಡೀಸೆಲ್ ಲೀಟರ್ಗೆ 89.76 ರೂ. ಇದೆ
- ಪಾಟ್ನಾದಲ್ಲಿ ಪೆಟ್ರೋಲ್ ಲೀಟರ್ಗೆ 107.24 ರೂ. ಇದೆ. ಡೀಸೆಲ್ ಲೀಟರ್ಗೆ 94.04 ರೂ. ಇದೆ
- ಮುಂಬೈನಲ್ಲಿ ಪೆಟ್ರೋಲ್ ಲೀಟರ್ಗೆ 106.07 ರೂ. ಇದೆ. ಡೀಸೆಲ್ ಲೀಟರ್ಗೆ 94.27 ರೂ. ಇದೆ
- ನಾಗಪುರ ಪೆಟ್ರೋಲ್ ಲೀಟರ್ಗೆ 106.04 ರೂ. ಇದೆ. ಡೀಸೆಲ್ ಲೀಟರ್ಗೆ 92.59 ರೂ. ಇದೆ
- ಶ್ರೀನಗರ ಪೆಟ್ರೋಲ್ ಲೀಟರ್ಗೆ 101.34 ರೂ. ಇದೆ. ಡೀಸೆಲ್ ಲೀಟರ್ಗೆ 86.59 ರೂ. ಇದೆ
- ವಡೋದರ ಪೆಟ್ರೋಲ್ ಲೀಟರ್ಗೆ 96.08 ರೂ. ಇದೆ. ಡೀಸೆಲ್ ಲೀಟರ್ಗೆ 91.82 ರೂ. ಇದೆ
- ವಾರಣಾಸಿ ಪೆಟ್ರೋಲ್ ಲೀಟರ್ಗೆ 89.93ರೂ. ಇದೆ. ಡೀಸೆಲ್ ಲೀಟರ್ಗೆ 89.93 ರೂ. ಇದೆ
- ನೋಯ್ಡಾ ಪೆಟ್ರೋಲ್ ಲೀಟರ್ಗೆ 94.92 ರೂ. ಇದೆ. ಡೀಸೆಲ್ ಲೀಟರ್ಗೆ 90.14 ರೂ. ಇದೆ
ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಗೆ ಪ್ರಾಥಮಿಕ ಕಚ್ಚಾ ವಸ್ತುವು ಕಚ್ಚಾ ತೈಲವಾಗಿದೆ. ಅದರಂತೆ, ಅದರ ಬೆಲೆ ನೇರವಾಗಿ ಈ ಇಂಧನಗಳ ಅಂತಿಮ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ.ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸಹ ನೀವು ಪರಿಶೀಲಿಸಬಹುದು. ತೈಲ ಮಾರುಕಟ್ಟೆ ಕಂಪನಿಗಳ ವೆಬ್‌ಸೈಟ್‌ಗೆ ಹೋಗಿ ಅಥವಾ SMS ಕಳುಹಿಸಿ. ನೀವು ಇಂಡಿಯನ್ ಆಯಿಲ್ ಗ್ರಾಹಕರಾಗಿದ್ದರೆ ನಗರ ಕೋಡ್ ಜೊತೆಗೆ 9224992249 ಸಂಖ್ಯೆಗೆ SMS ಕಳುಹಿಸಬಹುದು.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ