ಚ್ಯಾಟ್ಜಿಪಿಟಿ ಗೋ ಪ್ಲಾನ್ ಬಿಡುಗಡೆ: ತಿಂಗಳಿಗೆ 399 ರೂ; ಇದರ ವಿಶೇಷತೆ ತಿಳಿದಿರಿ
ChatGPT Go subscription plan for Rs 399: ಓಪನ್ಎಐ ಸಂಸ್ಥೆಯ ಚ್ಯಾಟ್ಜಿಪಿಟಿ ಗೋ ಅನ್ನು ತಿಂಗಳಿಗೆ 399 ರೂಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಬಹುದು. ಚ್ಯಾಟ್ಜಿಪಿಟಿ ಮುಖ್ಯಸ್ಥ ನಿಕ್ ಟರ್ಲಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಈ ಮಾಹಿತಿ ನೀಡಿದ್ದಾರೆ. ಬೇಸಿಕ್ ವರ್ಷನ್ನ ಚ್ಯಾಟ್ಜಿಪಿಟಿ ಈಗಲೂ ಉಚಿತವಾಗಿ ಸಿಗುತ್ತದೆ. ಪ್ರೀಮಿಯಮ್ ಆವೃತ್ತಿಗಳಲ್ಲಿ ಅತ್ಯಂತ ಕಡಿಮೆ ದರದ ಪ್ಲಾನ್ ಚ್ಯಾಟ್ಜಿಪಿಟಿ ಗೋ.

ನವದೆಹಲಿ, ಆಗಸ್ಟ್ 19: ಓಪನ್ಎಐನ ಪ್ರೀಮಿಯಮ್ ಮಾಡಲ್ಗಳಲ್ಲಿ ಒಂದಾದ ಚ್ಯಾಟ್ಜಿಪಿಟಿ ಗೋ (ChatGPT Go) ಅನ್ನು ಕೇವಲ 399 ರೂ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಉಚಿತ ಆವೃತ್ತಿಯ ಚ್ಯಾಟ್ಜಿಟಿಪಿ ಮಾಡಲ್ ಸೇವೆ ಮುಂದುವರಿಯುತ್ತದೆ. ಈ ಪ್ರೀಮಿಯಮ್ ವರ್ಷನ್ನಲ್ಲಿ ಹೆಚ್ಚಿನ ಮೆಸೇಜ್, ಹೆಚ್ಚಿನ ಇಮೇಜ್ ತಯಾರಿಕೆ, ಹೆಚ್ಚಿನ ಫೈಲ್ ಅಪ್ಲೋಡ್, ಹೆಚ್ಚಿನ ಮೆಮೊರಿ ಇವೆಲ್ಲವೂ ಸಿಗುತ್ತದೆ. ಚ್ಯಾಟ್ಜಿಟಪಿ ಗೋ ಪ್ಲಾನ್ನ ಸಬ್ಸ್ಕ್ರಿಪ್ಷನ್ ದರ ತಿಂಗಳಿಗೆ 399 ರೂ ಇದೆ.
ಇತರ ಚ್ಯಾಟ್ಜಿಪಿಟಿ ಪ್ರೀಮಿಯಮ್ ಮಾಡಲ್ಗಳ ಪ್ಲಾನ್ ದರ
- ಚ್ಯಾಟ್ಜಿಪಿಟಿ ಗೋ: ತಿಂಗಳಿಗೆ 399 ರೂ
- ಚ್ಯಾಟ್ಜಿಪಿಟಿ ಪ್ಲಸ್: 1,999 ರೂ
- ಚ್ಯಾಟ್ಜಿಪಿಟಿ ಪ್ರೋ: 19,999 ರೂ
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ರೈಲು ಹಳಿ ಮೂಲಕ ಸೌರ ವಿದ್ಯುತ್ ಉತ್ಪಾದನೆ; ಪೂರ್ಣ ನವೀಕರಣ ಇಂಧನದತ್ತ ರೈಲ್ವೇಸ್
ಚ್ಯಾಟ್ಜಿಪಿಟಿ ಗೋ ವಿಶೇಷತೆಗಳು…
ಚ್ಯಾಟ್ಜಿಪಿಟಿ ಗೋ 399 ರೂ ಪ್ಲಾನ್ನಲ್ಲಿ ಫ್ರೀ ವರ್ಷನ್ಗಿಂತ ಹತ್ತು ಪಟ್ಟು ಹೆಚ್ಚು ಮೆಸೇಜ್ ಲಿಮಿಟ್ ಇರುತ್ತದೆ. 10 ಪಟ್ಟು ಹೆಚ್ಚು ಇಮೇಜ್ ಸೃಷ್ಟಿಗೆ ಅವಕಾಶ ಇರುತ್ತದೆ. 10 ಪಟ್ಟು ಹೆಚ್ಚು ಫೈಲ್ಗಳನ್ನು ಅಪ್ಲೋಡ್ ಮಾಡಬಹುದು. ಎರಡು ಪಟ್ಟು ಹೆಚ್ಚು ಮೆಮೊರಿ ಪಡೆಯಬಹುದು ಎಂದು ಚ್ಯಾಟ್ಜಿಪಿಟಿ ಮುಖ್ಯಸ್ಥ ನಿಕ್ ಟರ್ಲಿ ಹೇಳಿದ್ದಾರೆ. ಆದರೆ, ಎಷ್ಟು ಮೆಸೇಜ್ ಲಿಮಿಟ್ ಇರುತ್ತದೆ, ಎಷ್ಟು ಇಮೇಜ್ ಸೃಷ್ಟಿಸಬಹುದು ಇತ್ಯಾದಿ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಲಾಗಿಲ್ಲ.
ಚ್ಯಾಟ್ಜಿಪಿಟಿ ಗೋ ಸಬ್ಸ್ಕ್ರೈಬ್ ಆಗುವುದು ಹೇಗೆ?
ಚ್ಯಾಟ್ಜಿಪಿಟಿ ಗೋ ಅನ್ನು ಸಬ್ಸ್ಕ್ರೈಬ್ ಮಾಡಲು ಬಯಸುವವರು ತಮ್ಮ ಮೊಬೈಲ್ಗೆ ಚ್ಯಾಟ್ಜಿಪಿಟಿ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿ ತೆರೆದು ಲಾಗಿನ್ ಆಗಬೇಕು. ಅಲ್ಲಿ ಅಪ್ಗ್ರೇಡ್ ಬಟನ್ ಒತ್ತಿದಾಗ ವಿವಿಧ ಸಬ್ಸ್ಕ್ರಿಪ್ಷನ್ ಆಯ್ಕೆಗಳು ಕಾಣುತ್ತವೆ.
ಇದನ್ನೂ ಓದಿ: ರೈಲುಗಳಲ್ಲಿ ಹೊಸ ಲಗೇಜ್ ನಿಯಮ; ಗಂಟುಮೂಟೆ ಕಟ್ಟಿ ರೈಲು ಹತ್ತುವ ಮುನ್ನ ಹುಷಾರ್
ಗೋ, ಪ್ಲಸ್ ಮತ್ತು ಪ್ರೋ ಆವೃತ್ತಿಯ ಚ್ಯಾಟ್ಜಿಪಿಟಿಗಳ ಆಯ್ಕೆ ಕಾಣಬಹುದು. ಮೂರಕ್ಕೂ ಬೇರೆ ಬೇರೆ ಸಬ್ಸ್ಕ್ರಿಪ್ಷನ್ ದರ ಇದೆ. ಚ್ಯಾಟ್ ಜಿಪಿಟಿ ಗೋ ಮಾಡಲ್ಗೆ ತಿಂಗಳಿಗೆ 399 ರೂ ದರ ಇದೆ. ಯುಪಿಐ ಮೂಲಕ ಹಣ ಪಾವತಿಸಲು ಅವಕಾಶ ಇರುತ್ತದೆ. ನಿಮಗೆ ಈ ಸರ್ವಿಸ್ ತೃಪ್ತಿ ತರದಿದ್ದರೆ ಯಾವಾಗ ಬೇಕಾದರೂ ಅನ್ಸಬ್ಸ್ಕ್ರೈಬ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




