Closing bell: ಸೆನ್ಸೆಕ್ಸ್ 983 ಪಾಯಿಂಟ್ಸ್, ನಿಫ್ಟಿ 264 ಪಾಯಿಂಟ್ಸ್ ಕುಸಿತ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಶುಕ್ರವಾರದಂದು ಸೆನ್ಸೆಕ್ಸ್ 984 ಪಾಯಿಂಟ್ಸ್ ಕುಸಿತ ಕಂಡಿದ್ದರೆ, ನಿಫ್ಟಿ 264 ಪಾಯಿಂಟ್ಸ್ ನೆಲ ಕಚ್ಚಿದೆ.
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ನಾಲ್ಕು ದಿನದಿಂದ ಏರಿಕೆ ಕಾಣುತ್ತಿದ್ದದ್ದು ಶುಕ್ರವಾರ (ಏಪ್ರಿಲ್ 30, 2021) ಭಾರೀ ಪ್ರಮಾಣದಲ್ಲಿ ಇಳಿಕೆ ದಾಖಲಿಸಿವೆ. ಬ್ಯಾಂಕಿಂಗ್, ವಾಹನ ವಲಯದ ಷೇರುಗಳಲ್ಲಿ ಕುಸಿತ ಕಂಡುಬಂದಿದ್ದರಿಂದ ಸೆನ್ಸೆಕ್ಸ್ 983.58 ಪಾಯಿಂಟ್ಸ್ ಅಥವಾ ಶೇ 1.98ರಷ್ಟು ಇಳಿಕೆ ದಾಖಲಿಸಿ, 48,782.36 ಪಾಯಿಂಟ್ನಲ್ಲಿ ವ್ಯವಹಾರ ಮುಗಿಸಿತು. ಮತ್ತು ನಿಫ್ಟಿ ಸೂಚ್ಯಂಕವು 263.80 ಪಾಯಿಂಟ್ಸ್ ಅಥವಾ ಶೇ 1.77 ಕುಸಿದು, 14.631 ಪಾಯಿಂಟ್ನೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಇಂದಿನ ವಹಿವಾಟಿನಲ್ಲಿ 1332 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1554 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ ಮತ್ತು 166 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ವಲಯವಾರು ಷೇರುಗಳ ಬಗ್ಗೆ ನೋಡುವುದಾದರೆ, ಬ್ಯಾಂಕ್, ವಾಹನ, ಐ.ಟಿ., ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು ಮತ್ತು ಎಫ್ಎಂಸಿಜಿ ಸೂಚ್ಯಂಕಗಳು ಶೇ 1ರಿಂದ 2ರಷ್ಟು ಕುಸಿತ ಕಂಡಿವೆ. ಇನ್ನು ಫಾರ್ಮಾಸ್ಯುಟಿಕಲ್ ಸೂಚ್ಯಂಕ ಮಾತ್ರ ಇದಕ್ಕೆ ಹೊರತಾಗಿ ಶೇ 1ರಷ್ಟು ಏರಿಕೆ ದಾಖಲಿಸಿವೆ.
ಈಕ್ವಿಟಿ ಮಾರ್ಕೆಟ್ ಕುಸಿತದ ಮಧ್ಯೆ ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಅಲ್ಪ ಪ್ರಮಾಣದ ಕುಸಿತ ದಾಖಲಿಸಿದೆ. ಬೆಳಗ್ಗೆ ವಹಿವಾಟಿನಲ್ಲಿ ರೂಪಾಯಿ 74.03ರೊಂದಿಗೆ ಆರಂಭವಾಗಿತ್ತು. ಈ ಹಿಂದಿನ ದಿನ 74.04ಕ್ಕೆ ವಹಿವಾಟು ಮುಗಿಸಿತ್ತು. ಇಂದು ರೂಪಾಯಿ ಮೌಲ್ಯ 73.94ರಿಂದ 74.13ರ ಮಧ್ಯೆ ವಹಿವಾಟು ನಡೆಸಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಪರ್ಸೆಂಟ್ ಒಎನ್ಜಿಸಿ ಶೇ 3.94 ಕೋಲ್ ಇಂಡಿಯಾ ಶೇ 3.90 ಡಿವೀಸ್ ಲ್ಯಾಬ್ಸ್ ಶೇ 3.87 ಗ್ರಾಸಿಮ್ ಶೇ 3.78 ಐಒಸಿ ಶೇ 2.19
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಪರ್ಸೆಂಟ್ ಎಚ್ಡಿಎಫ್ಸಿ ಶೇ -4.68 ಎಚ್ಡಿಎಫ್ಸಿ ಬ್ಯಾಂಕ್ ಶೇ -4.09 ಐಸಿಐಸಿಐ ಬ್ಯಾಂಕ್ ಶೇ -3.37 ಕೊಟಕ್ ಮಹೀಂದ್ರಾ ಶೇ -3.11 ಏಷ್ಯನ್ ಪೇಂಟ್ಸ್ ಶೇ -2.95
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
(Indian stock market index sensex tank 983 points and nifty 264 points under selling pressure on April 30, 2021)