AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ಮರುಪಾವತಿ ವಿಫಲ: ಚೇತರಿಕೆ ಹಾದಿಯಲ್ಲಿದ್ದ ಕಾಫಿ ಡೇ ಷೇರು ಮೌಲ್ಯ ಶೇ 9ರಷ್ಟು ಕುಸಿತ

ಕಾಫಿ ಬೀಜಗಳ ಖರೀದಿ, ಸಂಸ್ಕರಣೆ ಮತ್ತು ಮಾರಾಟ ಕಾಫಿ ಡೇ ಎಂಟರ್​ಪ್ರೈಸಸ್​ನ ಮುಖ್ಯ ವಹಿವಾಟಿನ ಅಂಶ. ಭಾರತದ ವಿವಿಧ ನಗರಗಳಲ್ಲಿ ಮತ್ತು ವಿಶ್ವದ ಹಲವೆಡೆ ಕಾಫಿ ಡೇ ಸ್ವಂತ ಮಳಿಗೆಗಳನ್ನು ಹೊಂದಿದೆ.

ಸಾಲ ಮರುಪಾವತಿ ವಿಫಲ: ಚೇತರಿಕೆ ಹಾದಿಯಲ್ಲಿದ್ದ ಕಾಫಿ ಡೇ ಷೇರು ಮೌಲ್ಯ ಶೇ 9ರಷ್ಟು ಕುಸಿತ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 08, 2022 | 7:52 AM

Share

ಬೆಂಗಳೂರು: ಕಾಫಿ ಡೇ ಎಂಟರ್​ಪ್ರೈಸಸ್​ ಕಂಪನಿಯ (Coffee Day Enterprises) ಷೇರು ಮೌಲ್ಯವು ಗುರುವಾರ (ಏಪ್ರಿಲ್ 8) ಒಂದೇ ದಿನ ಶೇ 9.4ರಷ್ಟು ಕುಸಿದಿದೆ. ಮಾರ್ಚ್​ 31, 2022ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಸಾಲ ಮತ್ತು ಸಾಲಪತ್ರಗಳ ಮೇಲೆ ಪಡೆದಿರುವ ₹ 479.68 ಕೋಟಿಯಷ್ಟು ಹಣ ಮರುಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಷೇರುದಾರರು ಆತಂಕದಿಂದ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ದಿನದ (ಬುಧವಾರ) ವಹಿವಾಟು ಅಂತ್ಯಗೊಂಡಾಗ ಷೇರು ಮೌಲ್ಯವು ₹ 59.60 ಇತ್ತು. ಸತತವಾಗಿ ಇಳಿಕೆ ಕಂಡಿರುವ ಷೇರು ಮೌಲ್ಯವು ಶೇ 6ರಷ್ಟು ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿತ್ತು. ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಮಾಹಿತಿ ಪ್ರಕಾರ ಕಾಫಿ ಡೇ ಕಂಪೆನಿಯು ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ₹ 22.88 ಕೋಟಿ ಸಾಲ ಮರುಪಾವತಿ ಸಾಧ್ಯವಾಗಿಲ್ಲ ಎಂದು ಹೇಳಿತ್ತು. ಇದೇ ಮೊತ್ತಕ್ಕೆ ಕಟ್ಟಬೇಕಿದ್ದ ₹ 5.78ರ ಬಡ್ಡಿಯನ್ನೂ ಕಟ್ಟಲು ಸಾಧ್ಯವಾಗಿಲ್ಲ ಎಂದು ಘೋಷಿಸಿತ್ತು. ಲಿಸ್ಟ್ ಆಗದ ಸೆಕ್ಯುರಿಟಿ ಮತ್ತು ನಾನ್ ಕನ್​ವರ್ಟಿಬಲ್ ಡಿಬೆಂಚರ್, ನಾನ್ ಕನ್​ವರ್ಟಿಬಲ್ ರಿಡೀಮಬಲ್ ಆದ್ಯತೆಯ ಷೇರುಗಳಿಗಾಗಿ ಪಾವತಿಸಬೇಕಿದ್ದ ₹ 200 ಕೋಟಿ ಮೊತ್ತವನ್ನೂ ಪಾವತಿಸಲು ಸಾಧ್ಯವಾಗಿಲ್ಲ ಎಂದು ಕಾಫಿ ಡೇ ಹೇಳಿತ್ತು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (National Stock Exchange – NSE) ಬುಧವಾರ (ಏಪ್ರಿಲ್ 6) ₹ 59.60ಗೆ ವಹಿವಾಟು ಮುಗಿಸಿದ್ದ ಕಾಫಿ ಡೇ ಎಂಟರ್​ಪ್ರೈಸಸ್ ಲಿಮಿಟೆಡ್ ಗುರುವಾರದ (ಏಪ್ರಿಲ್ 7) ವಹಿವಾಟಿನಲ್ಲಿ ದಿನದ ಕನಿಷ್ಠ ಮಟ್ಟವಾದ ₹ 53.65ಕ್ಕೆ ಇಳಿದಿತ್ತು. ನಂತರ ಚೇತರಿಸಿಕೊಂಡು ₹ 57.50ಯಲ್ಲಿ ದಿನದ ವಹಿವಾಟು ಮುಗಿಸಿತು. ಒಂದು ವರ್ಷದ ಅವಧಿಯ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, 52 ವಾರಗಳ ಸರಾಸರಿಯಲ್ಲಿ ಕಾಫಿ ಡೇ ಷೇರು ಗರಿಷ್ಠ ₹ 86.80, ಕನಿಷ್ಠ ₹ 20.20 ಮುಟ್ಟಿತ್ತು. ಕಾಫಿ ಡೇ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 1,171 ಕೋಟಿ ಇದೆ.

ಕಾಫಿ ಡೇ ಪ್ರವರ್ತಕ ವಿ.ಜಿ.ಸಿದ್ಧಾರ್ಥ ಹೆಗ್ಡೆ ನಿಧನದ ನಂತರ ಕಂಪನಿಯ ಭವಿಷ್ಯದ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಸಕಾಲಿಕ ಮಧ್ಯಪ್ರವೇಶ ಮತ್ತು ಅವರು ತೆಗೆದುಕೊಂಡ ಕೆಲ ದೃಢ ನಿರ್ಧಾರಗಳಿಂದ ಕಂಪನಿ ದಿವಾಳಿಯಾಗುವುದು ತಪ್ಪಿತು. ಕಳೆದ ಜನವರಿಯಿಂದೀಚೆಗೆ ಕಂಪನಿಯ ಷೇರು ಮೌಲ್ಯವು ಶೇ 31.15ರಷ್ಟು ಹೆಚ್ಚಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ 115ರಷ್ಟು ಹೆಚ್ಚಾಗಿತ್ತು. ಹೂಡಿಕೆದಾರರ ವಿಶ್ವಾಸ ಮರಳಿ ಗಳಿಸುವ ಹಾದಿಯಲ್ಲಿ ಕಂಪನಿ ಸಾಕಷ್ಟು ಸಾಧನೆ ಮಾಡಿತ್ತು.

ಇದೀಗ ಕಂಪನಿಯು ಸಾಲ ಮರುಪಾವತಿಸಲು ಸಾಧ್ಯವಿಲ್ಲ ಎಂದು ಘೋಷಿಸಿಕೊಂಡಿದ್ದರೂ ಕಂಪನಿಯ ಆರ್ಥಿಕ ಸ್ಥಿತಿಗತಿ ತಕ್ಕಮಟ್ಟಿಗೆ ಚೆನ್ನಾಗಿಯೇ ಇದೆ. ಡಿಸೆಂಬರ್ 21ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ಶೇ 131ರಷ್ಟು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಇದೇ ಅವಧಿಯಲ್ಲಿ ಕಂಪನಿಯು ₹ 20.47 ಕೋಟಿ ನಿವ್ವಳ ಲಾಭ ಪಡೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ₹ 66.11 ಕೋಟಿ ನಷ್ಟ ದಾಖಲಿಸಿತ್ತು. ಕಂಪನಿಯ ಉತ್ಪನ್ನಗಳ ಮಾರಾಟ (ಸೇಲ್ಸ್) ಸಹ 2021-22ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಶೇ 48.30ಯಷ್ಟು ಹೆಚ್ಚಾಗಿದೆ.

ಕಾಫಿ ಬೀಜಗಳ ಖರೀದಿ, ಸಂಸ್ಕರಣೆ ಮತ್ತು ಮಾರಾಟ ಕಾಫಿ ಡೇ ಎಂಟರ್​ಪ್ರೈಸಸ್​ನ ಮುಖ್ಯ ವಹಿವಾಟಿನ ಅಂಶ. ಭಾರತದ ವಿವಿಧ ನಗರಗಳಲ್ಲಿ ಮತ್ತು ವಿಶ್ವದ ಹಲವೆಡೆ ಕಾಫಿ ಡೇ ಸ್ವಂತ ಮಳಿಗೆಗಳನ್ನು ಹೊಂದಿದೆ. ವಿದೇಶಗಳಿಗೂ ಕಾಫಿ ಬೀಜ ಮತ್ತು ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇದರ ಜೊತೆಗೆ ರೆಸಾರ್ಟ್ ಒಂದರ ಮಾಲೀಕತ್ವ ಹೊಂದಿರುವ ಕಂಪನಿಯು ಪ್ರವಾಸೋದ್ಯಮದಲ್ಲಿಯೂ ತೊಡಗಿಸಿಕೊಂಡಿದೆ. ಕನ್ಸಲ್​ಟೆನ್ಸಿ ಸರ್ವೀಸ್​ಗಳನ್ನೂ ಒದಗಿಸುತ್ತಿದೆ.

ಇದನ್ನೂ ಓದಿ: ಕೆಫೆ ಕಾಫಿ ಡೇ ಸಂಸ್ಥಾಪಕ ದಿ ಸಿದ್ದಾರ್ಥ​ರನ್ನು ಆದರ್ಶವಾಗಿಟ್ಟುಕೊಂಡ ಯುವಕ ಮದುವೆಗೆ ಮೊದಲು ಕಾಫಿದೊರೆಗೆ ಪುಷ್ಪನಮನ ಸಲ್ಲಿಸಿದರು

ಇದನ್ನೂ ಓದಿ: ಸಂಕಷ್ಟದಿಂದ ಮತ್ತೆ ಸ್ವಾವಲಂಬನೆಯತ್ತ ಕೆಫೆ ಕಾಫಿ ಡೇ: ಕೊಟ್ಟಿದ್ದ ಮಾತಿನೊಂದಿಗೆ ಕಂಪನಿಯನ್ನೂ ಉಳಿಸಿಕೊಂಡ ಮಾಳವಿಕಾ ಹೆಗ್ಡೆ

Follow Us
TV9 Web
TV9 Web

TV9 Kannada

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು