Multibagger: 1 ರುಪಾಯಿಗೆ 4 ವರ್ಷದಲ್ಲಿ 45 ರುಪಾಯಿ ಲಾಭ; ಇದು ಈ ಪೆನ್ನಿ ಸ್ಟಾಕ್​ನ ಮ್ಯಾಜಿಕ್

Comfort Intech Ltd share: ಮುಂಬೈ ಮೂಲದ ಟ್ರೇಡಿಂಗ್ ಕಂಪನಿ ಕಂಫರ್ಟ್ ಇಂಟೆಕ್ಸ್ ಷೇರು ಅಗಾಧ ಬೆಳವಣಿಗೆಯಿಂದ ಗಮನ ಸೆಳೆದಿದೆ. ನಾಲ್ಕು ವರ್ಷದ ಹಿಂದೆ 2020ರಲ್ಲಿ ಕೇವಲ 22 ಪೈಸೆ ಇದ್ದ ಇದರ ಷೇರುಬೆಲೆ ಈ ವಾರದ ಕೊನೆಯಲ್ಲಿ 10.06 ರೂ ಆಗಿದೆ. ನಾಲ್ಕು ವರ್ಷದಲ್ಲಿ ಹಲವು ಪಟ್ಟು ಲಾಭ ಮಾಡಿದೆ. 2020ರಲ್ಲಿ ಈ ಷೇರುಗಳ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರಿಗೆ 45 ಲಕ್ಷ ರೂ ಆಗಿರುತ್ತಿತ್ತು.

Multibagger: 1 ರುಪಾಯಿಗೆ 4 ವರ್ಷದಲ್ಲಿ 45 ರುಪಾಯಿ ಲಾಭ; ಇದು ಈ ಪೆನ್ನಿ ಸ್ಟಾಕ್​ನ ಮ್ಯಾಜಿಕ್
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 17, 2024 | 9:03 AM

ನವದೆಹಲಿ, ಮಾರ್ಚ್ 17: ಬಹಳ ಕಡಿಮೆ ಬೆಲೆಯ ಷೇರುಗಳು (penny stocks) ಅಚ್ಚರಿ ರೀತಿಯಲ್ಲಿ ಲಾಭ ತಂದುಕೊಟ್ಟಿರುವ ಹಲವು ನಿದರ್ಶನಗಳಿವೆ. ನಿರ್ದಿಷ್ಟ ಅವಧಿಯಲ್ಲಿ ಮಲ್ಟಿಬ್ಯಾಗರ್ (Multibagger) ಆಗುವ ಈ ಷೇರುಗಳು ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿವೆ. ಇಂಥ ಮಲ್ಟಿಬ್ಯಾಗರ್ ಷೇರುಗಳು ಹಲವಿವೆ. ಕಂಫರ್ಟ್ ಇಂಟೆಕ್ (comfort intech) ಎಂಬ ಕಂಪನಿಯ ಷೇರು ಅಂಥದ್ದೊಂದು. ಇದು ಕಳೆದ ನಾಲ್ಕು ವರ್ಷದಲ್ಲಿ ಶೇ. 4,000ಕ್ಕೂ ಅಧಿಕ ಬೆಳೆದಿದೆ. 2020ರ ಏಪ್ರಿಲ್ ತಿಂಗಳಲ್ಲಿ ಇದರ ಷೇರು ಬೆಲೆ ಕೇವಲ 22 ಪೈಸೆ ಇತ್ತು. ಈಗ 10.06 ರೂ ಆಗಿದೆ. ಅಂದರೆ ಬೆಲೆ 47 ಪಟ್ಟು ಹೆಚ್ಚು ಬೆಳೆದಿದೆ.

ಒಂದು ಲಕ್ಷಕ್ಕೆ 45 ಲಕ್ಷ ರೂ ಲಾಭ

ಒಂದು ವೇಳೆ 2020ರ ಎಪ್ರಿಲ್​ನಲ್ಲಿ ಕಂಫರ್ಟ್ ಇಂಟೆಕ್​ನ ಷೇರುಬೆಲೆ 22 ರೂ ಇದ್ದಾಗ ನೀವೇನಾದರೂ ಒಂದು ಲಕ್ಷ ರೂನಷ್ಟು ಹೂಡಿಕೆ ಮಾಡಿದ್ದೇ ಆದಲ್ಲಿ ಇವತ್ತು ನಿಮ್ಮ ಸಂಪತ್ತು 45 ಲಕ್ಷ ರೂ ಆಗಿರುತ್ತಿತ್ತು.

ಇದನ್ನೂ ಓದಿ: ಮಾ. 8ರ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 636 ಬಿಲಿಯನ್ ಡಾಲರ್​ಗೆ ಏರಿಕೆ; ಒಂದು ವಾರದಲ್ಲಿ 10.47 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಕಂಫರ್ಟ್ ಇಂಟೆಕ್ ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿದ್ದು, ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ. ಷೇರು ಮತ್ತು ಮ್ಯೂಚುವಲ್ ಫಂಡ್​ಗಳ ಟ್ರೇಡಿಂಗ್, ಚಿರಾಸ್ತಿಗಳಿಗೆ ಹಣಕಾಸು ವ್ಯವಸ್ಥೆ ಮತ್ತು ಲೀಸಿಂಗ್, ಲಿಕ್ಕರ್ ತಯಾರಿಕೆ ಇತ್ಯಾದಿ ವ್ಯವಹಾರಗಳನ್ನು ನಡೆಸುತ್ತದೆ. 1994ರಲ್ಲಿ ಕಂಫರ್ಟ್ ಫಿನ್​ವೆಸ್ಟ್ ಲಿ ಎಂದು ಹೆಸರಿದ್ದ ಇದು 2000ರಲ್ಲಿ ಕಂಫರ್ಟ್ ಇಂಟೆಕ್ ಲಿ ಎಂದು ಹೆಸರು ಬದಲಾಯಿಸಿಕೊಂಡಿತು.

ಕಂಫರ್ಟ್ ಇಂಟೆಕ್ ಷೇರು ಮಾರುಕಟ್ಟೆ ಇತ್ತೀಚೆಗೆ ಪ್ರವೇಶ ಮಾಡಿದ್ದಲ್ಲ. ತನ್ನ ಸುದೀರ್ಘ ಇರುವಿಕೆಯಲ್ಲಿ ಬಹಳ ಏರಿಳಿತಗಳನ್ನು ಕಂಡಿದೆ. 2010ರಲ್ಲಿ ಅದರ ಷೇರುಬೆಲೆ 17.50 ರೂಗೆ ಏರಿತ್ತು. 2009ರಲ್ಲಿ ಕೇವಲ 1.76 ರೂ ಇದ್ದ ಇದರ ಬೆಲೆ ಒಂದೇ ವರ್ಷದಲ್ಲಿ 17 ರೂ ಮಟ್ಟ ತಲುಪಿ ಅಚ್ಚರಿ ಮೂಡಿಸಿತ್ತು.

ಇದನ್ನೂ ಓದಿ: ಮಾರ್ಚ್ ತಿಂಗಳ ಕೊನೆಯ 10 ದಿನದಲ್ಲಿ ಬ್ಯಾಂಕುಗಳಿಗೆ 8 ದಿನ ರಜೆ; ನೋಡಿ ಪಟ್ಟಿ

ಅದಾದ ಬಳಿಕ ಕಂಫರ್ಟ್ ಇಂಟೆಕ್​ನ ಷೇರುಬೆಲೆ ಮತ್ತೆ ಹೈ ಜಂಪ್ ಮಾಡಿದೆ. ಈ ಏರಿಕೆಯ ಹಾದಿ ಎಷ್ಟು ಎತ್ತರಕ್ಕೆ ಹೋಗುತ್ತದೆ ಎಂಬುದು ಗೊತ್ತಿಲ್ಲ. ತನ್ನ ಹಿಂದಿನ ಗರಿಷ್ಠ ಮಟ್ಟವನ್ನು ಅದು ಇನ್ನೂ ತಲುಪಿಲ್ಲ. ಹೀಗಾಗಿ, ಅದರ ಮೇಲೆ ಈಗಲೂ ಹೂಡಿಕೆ ಮಾಡಬಹುದು ಎಂದು ಕೆಲ ತಜ್ಞರು ಹೇಳಿರುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ