SBI Customer Alert: ಎಸ್​ಬಿಐ ಗ್ರಾಹಕರೇ ಯುಪಿಐ, ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಈ ಹಂತಗಳನ್ನು ಅನುಸರಿಸಿ

| Updated By: Srinivas Mata

Updated on: Apr 25, 2022 | 5:50 PM

ವಿವಿಧ ಬಗೆಯ ಆನ್​ಲೈನ್ ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಲ್ಲಿ ಎಚ್ಚರಿಕೆ ಮೂಡಿಸಲಾಗಿದೆ.

SBI Customer Alert: ಎಸ್​ಬಿಐ ಗ್ರಾಹಕರೇ ಯುಪಿಐ, ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಈ ಹಂತಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us on

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಅಥವಾ ಎಸ್​ಬಿಐ ಸೋಮವಾರದಂದು ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದೆ. ಭಾರತದಲ್ಲಿ ಈಚೆಗೆ ಇಂಟರ್​ನೆಟ್​ನಲ್ಲಿ ಡಿಜಿಟಲ್ ವಹಿವಾಟುಗಳ ಪ್ರಮಾಣ ಜಾಸ್ತಿಯಾಗಿದೆ. ಸರ್ಕಾರ ಕೂಡ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತಿದೆ. ಆದರೆ ಈ ವಹಿವಾಟು ಸದಾ ಸುರಕ್ಷಿತ ಅಂತಲ್ಲ. ಒಂದು ವೇಳೆ ಏನಾದರೂ ತಪ್ಪಾಗಿ ಮಾಡಿದಲ್ಲಿ ಮತ್ತು ಮಾಹಿತಿ ಸುರಕ್ಷಿತವಾಗಿಲ್ಲದಿದ್ದಲ್ಲಿ ಹ್ಯಾಕರ್​ಗಳಿಗೆ ಕಳುವಿಗೆ ಮಾರ್ಗ ಸಲೀಸಾಗುತ್ತದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದ್ದು, ಡಿಜಿಟಲ್ ವಹಿವಾಟು ಮಾಡುವ ವೇಳೆ ಇವುಗಳನ್ನು ಪಾಲಿಸಿ, ಸುರಕ್ಷಿತವಾಗಿರುವಂತೆ ತಿಳಿಸಲಾಗಿದೆ. “ಎಸ್​ಬಿಐನಿಂದ ಗ್ರಾಹಕರಿಗಾಗಿ ಸಮಗ್ರವಾದ ಡಿಜಿಟಲ್ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ಅದರಲ್ಲಿ ಗ್ರಾಹಕರ ಸುರಕ್ಷಿತ ಹಾಗೂ ಭದ್ರವಾದ ಡಿಜಿಟಲ್ ವಹಿವಾಟು ಖಾತ್ರಿ ಮಾಡಿಕೊಳ್ಳಲು ಏನು ಮಾಡಬೇಕು ಹಾಗೂ ಮಾಡಬಾರದು ಎಂದು ತಿಳಿಸಲಾಗಿದೆ,” ಎಂಬುದಾಗಿ ಎಸ್​ಬಿಐ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಡಿಜಿಟಲ್ ಬ್ಯಾಂಕಿಂಗ್, ಟಿಜಿಟಲ್ ವಹಿವಾಟುಗಳು, ಎಲೆಕ್ಟ್ರಾನಿಕ್ ಪಾವತಿಗಳು ಮತ್ತು ಸಾಮಾಜಿಕ ಮಾಧ್ಯಮ ಭದ್ರತೆಗಳಲ್ಲಿ ಗ್ರಾಹಕರು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಲಾಗಿದೆ.

ಲಾಗ್​ಇನ್ ಭದ್ರತೆ:
– ವಿಶಿಷ್ಟ ಹಾಗೂ ಸಂಕೀರ್ಣವಾದ ಪಾಸ್​ವರ್ಡ್​ಗಳನ್ನು ಬಳಸಿ
– ನಿಯಮಿತವಾಗಿ ಪಾಸ್​ವರ್ಡ್​ ಬದಲಿಸುವುದನ್ನು ನೆನಪಿಟ್ಟುಕೊಳ್ಳಿ
– ಬಳಕೆದಾರ ಐಡಿ, ಪಾಸ್​ವರ್ಡ್​ ಅಥವಾ PIN ಅನ್ನು ಎಲ್ಲೂ ಬಯಲು ಮಾಡಬೇಡಿ, ಸಂಗ್ರಹಿಸಬೇಡಿ ಅಥವಾ ಬರೆದಿಡಬೇಡಿ
– ಬ್ಯಾಂಕ್​ನಿಂದ ಯಾವತ್ತಿಗೂ ಬಳಕೆದಾರರ ಐಡಿ/ಪಾಸ್​ವರ್ಡ್​ಗಳು/ಕಾರ್ಡ್ ಸಂಖ್ಯೆ/PIN/ಸಿವಿವಿ/ಒಟಿಪಿ ಕೇಳುವುದಿಲ್ಲ, ನೆನಪಿಟ್ಟುಕೊಳ್ಳಿ
– ಆಟೋ ಸೇವ್ ಅಥವಾ ರಿಮೆಂಬರ್ ಎಂಬುದನ್ನು ಡಿವೈಸ್​ನಲ್ಲಿ ಡಿಸೇಬಲ್ ಮಾಡಬೇಕು. ಬಳಕೆದಾರರ ಐಡಿ ಮತ್ತು ಪಾಸ್​ವರ್ಡ್​ಗಳನ್ನು ಸಂಗ್ರಹಿಸುವುದನ್ನು ತಪ್ಪಿಸಿ.

ಇಂಟರ್​​ನೆಟ್ ಭದ್ರತೆ:
-ಬ್ಯಾಂಕ್ ವೆಬ್​ಸೈಟ್​ನ ಅಡ್ರೆಸ್​ ಬಾರ್​ನಲ್ಲಿ “https”​ ಎಂಬುದಿದೆಯೇ ಗಮನಿಸಿ
– ಓಪನ್ ವೈ-ಫೈ ನೆಟ್​ವರ್ಕ್​​ಗಳನ್ನು ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಆನ್​ಲೈನ್​ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡದಿರಿ
– ಕೆಲಸ ಮುಗಿದ ಮೇಲೆ ಲಾಗ್​ಔಟ್ ಆಗಿ, ಬ್ರೌಸರ್ ಕ್ಲೋಸ್ ಮಾಡಬೇಕು.

ಯುಪಿಐ ಭದ್ರತೆ:
– ಮೊಬೈಲ್ PIN ಮತ್ತು ಯುಪಿಐ PIN ಬೇರೆಬೇರೆಯಾಗಿರಲಿ.
– ಯಾವುದೇ ಅಪರಿಚಿತ ಯುಪಿಐ ವಿನಂತಿಗೆ ಪ್ರತಿಕ್ರಿಯಿಸಬೇಡಿ.
– ಮೊತ್ತವನ್ನು ವರ್ಗಾವಣೆ ಮಾಡುವುದಕ್ಕೆ PIN ಬೇಕೇ ಹೊರತು ಹಣ ಪಡೆಯುವುದಕ್ಕಲ್ಲ ಎಂಬುದು ನೆನಪಿರಲಿ
– ನೀವು ಮಾಡದೆ ಯಾವುದೇ ವಹಿವಾಟು ಆಗಿದ್ದಲ್ಲಿ ಕೂಡಲೇ ಯುಪಿಐ ಸೇವೆ ನಿಮ್ಮ ಖಾತೆ ಡಿಸೇಬಲ್ ಮಾಡಿ.

ಡೆಬಿಟ್/ಕ್ರೆಡಿಟ್ ಕಾರ್ಡ್ ಭದ್ರತೆ:
– ಎಟಿಎಂ ಮಶೀನ್ ಅಥವಾ ಪಿಒಎಸ್ ಸಾಧನಗಳನ್ನು ಬಳಸಿ ವಹಿವಾಟುಗಳನ್ನು ಮಾಡುವಾಗ ನಿಮ್ಮ ಸುತ್ತಮುತ್ತ ಯಾರಿದ್ದಾರೆ ಎಂಬ ಬಗ್ಗೆ ಗಮನ ಇರಲಿ.
– PIN ಟೈಪ್ ಮಾಡುವಾಗ ಕೀ ಪ್ಯಾಡ್ ಇತರರಿಗೆ ಕಾಣದಂತೆ ಕವರ್ ಮಾಡಿ
– ಯಾವುದೇ ವಹಿವಾಟು ಮಾಡುವ ಮುನ್ನ ಇ-ಕಾಮರ್ಸ್ ವೆಬ್​ಸೈಟ್​ಗಳನ್ನು ಖಾತ್ರಿ ಮಾಡಿಕೊಳ್ಳಿ.
– ಡೆಬಿಟ್ ಕಾರ್ಡ್​ ವಹಿವಾಟುಗಳನ್ನು ಆನ್​ಲೈನ್ ಬ್ಯಾಂಕಿಂಗ್ ಮೂಲಕ ನಿರ್ವಹಿಸಿ
– ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳು, ಪಿಒಎಸ್ ಮತ್ತು ಎಟಿಎಂ ದೇಶೀ ಹಾಗೂ ಅಂತರರಾಷ್ಟ್ರೀಯ ವಹಿವಾಟುಗಳಿಗೆ ಕಾರ್ಡ್​ ವಹಿವಾಟಿಗೆ ಮಿತಿಯನ್ನು ನಿಗದಿ ಮಾಡಬೇಕು.

ಮೊಬೈಲ್ ಬ್ಯಾಂಕಿಂಗ್ ಭದ್ರತೆ
– ಬಲವಾದ ಪಾಸ್​ವರ್ಡ್ಸ್/ಬಯೋಮೆಟ್ರಿಕ್ ಅನುಮತಿಯನ್ನು ನಿಮ್ಮ ಫೋನ್​ನಲ್ಲಿ/ಲ್ಯಾಪ್​ಟಾಪ್​ಗಳು/ಟ್ಯಾಬ್​ಲೆಟ್​ಗಳನ್ನು ಸಕ್ರಿಯಗೊಳಿಸಬೇಕು.
– ಯಾರೊಂದಿಗೆ ನಿಮ್ಮ ಮೊಬೈಲ್ PIN ಹಂಚಿಕೊಳ್ಳಬೇಡಿ.
– ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಬಯೋಮೆಟ್ರಿಕ್ (ಬೆರಳಚ್ಚು) ದೃಢೀಕರಣ ಬಳಸಬೇಕು
– ಅಜ್ಞಾತರು ಸೂಚಿಸಿದ ಅಪರಿಚಿತ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಬಾರದು.
– ಅಧಿಕೃತ ಸ್ಟೋರ್​ಗಳ ಮೂಲಕ ಮಾತ್ರ ಅಪ್ಲಿಕೇಷನ್​ಗಳನ್ನು ಡೌನ್​ಲೋಡ್ ಮಾಡಬೇಕು.
– ಮೊಬೈಲ್​ಗಳಲ್ಲಿ ಇನ್​ಸ್ಟಾಲ್ ಆದ ಮುಖ್ಯವಾದ ಆ್ಯಪ್​​ಗಳನ್ನು ನಿಯಮಿತವಾಗಿ ನಿಗಾ ಮಾಡಬೇಕು ಹಾಗೂ ಅನಗತ್ಯವಾದ ಹಾಗೂ ಬಳಸದ ಆ್ಯಪ್​ಗಳnfnu ಗಮನಿಸಬೇಕು.
– ಸಾರ್ವಜನಿಕ ವಯರ್​ಲೆಸ್ ನೆಟ್​ವರ್ಕ್​ಗಳನ್ನು ಬಳಸದಿರಿ

ಸಾಮಾಜಿಕ ಮಾಧ್ಯಮ ಭದ್ರತೆ:
– ನೀವು ಯಾರ ಜತೆ ಸಂವಾದ ನಡೆಸುತ್ತೀರೋ ಅವರ ಗುರುತು ಖಾತ್ರಿ ಮಾಡಿಕೊಳ್ಳಿ
– ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳಲ್ಲಿ ನಿಮ್ಮ ವೈಯಕ್ತಿಕ/ಆರ್ಥಿಕ ಮಾಹಿತಿಯನ್ನು ಹಂಚಿಕೊಳ್ಳದಿರಿ
– ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳು ಮತ್ತು ಸ್ಥಳಗಳಲ್ಲಿ ರಹಸ್ಯ ಮಾಹಿತಿಗಳ ಬಗ್ಗೆ ಚರ್ಚಿಸಬೇಡಿ.

ಇದನ್ನೂ ಓದಿ: State Bank Of India: ಎಸ್​ಬಿಐ ಯೋನೋ ಆ್ಯಪ್​ ಮೂಲಕ ಚೆಕ್​ ಪಾವತಿ ನಿಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ