
ನವದೆಹಲಿ, ಮೇ 19: ಭಾರತದಲ್ಲಿ ಡಿಜಿಟಲ್ ಪೇಮೆಂಟ್ಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನೂರಕ್ಕೆ ನೂರು ಡಿಜಿಟಲ್ ಪಾವತಿಯಾಗುವ ದಿನಗಳು ದೂರ ಇಲ್ಲ ಎನ್ನುವಂತಿದೆ ಆರ್‌ಬಿಐ ಬಿಡುಗಡೆ ಮಾಡಿದ ದತ್ತಾಂಶ. ಭಾರತದಲ್ಲಿ ಪೇಮೆಂಟ್ ಟ್ರಾನ್ಸಾಕ್ಷನ್ಗಳು (Payment transactions) ನಾಲ್ಕು ವರ್ಷದ ಹಿಂದಕ್ಕೆ ಹೋಲಿಸಿದರೆ ಶೇ. 316ರಷ್ಟು ಹೆಚ್ಚಿದೆ. ಇದರಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಪಾಲು ಅತಿಹೆಚ್ಚು ಇದೆ. ಆದರೆ, ಪಾವತಿ ಮೌಲ್ಯದ (payment value) ವಿಚಾರಕ್ಕೆ ಬಂದರೆ ಆರ್ಟಿಜಿಎಸ್ ನಂಬರ್ ಒನ್ ಎನಿಸಿದೆ.
ಸುದ್ದಿಯ ಮುಖ್ಯಾಂಶಗಳು
ದೇಶದಲ್ಲಿ ನಡೆಯುವ ಒಟ್ಟು ಸಣ್ಣ ಮೊತ್ತದ (ಚಿಲ್ಲರೆ/Retail) ಡಿಜಿಟಲ್ ಪಾವತಿಗಳ ಪೈಕಿ ಯುಪಿಐ ಬರೋಬ್ಬರಿ ಶೇ. 85.5 ರಷ್ಟು ಪಾಲನ್ನು ಹೊಂದುವ ಮೂಲಕ ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿದೆ.
ದಿನಸಿ ಖರೀದಿ, ತರಕಾರಿ, ಸಣ್ಣ ಪುಟ್ಟ ಅಂಗಡಿಗಳು ಮತ್ತು ದೈನಂದಿನ ವೈಯಕ್ತಿಕ ವ್ಯವಹಾರಗಳಿಗೆ ಜನರು ಯುಪಿಐ ಅನ್ನು ಅತಿ ಹೆಚ್ಚಾಗಿ ಅವಲಂಬಿಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್ಗೆ ಗೊತ್ತಾಗೋದು ಹೇಗೆ?
ದೊಡ್ಡ ಮೊತ್ತದ (High-value) ಅಥವಾ ಸಗಟು ಹಣ ವರ್ಗಾವಣೆಯ ಮೌಲ್ಯದ ವಿಷಯಕ್ಕೆ ಬಂದರೆ ಆರ್‌ಟಿಜಿಎಸ್ ಶೇ. 68.6 ರಷ್ಟು ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ.
ಉದ್ಯಮಗಳು, ದೊಡ್ಡ ಕಂಪನಿಗಳು ಮತ್ತು ಸಂಸ್ಥೆಗಳ ನಡುವೆ ನಡೆಯುವ ಭಾರಿ ಪ್ರಮಾಣದ ಆರ್ಥಿಕ ವಹಿವಾಟುಗಳಿಗೆ ಆರ್‌ಟಿಜಿಎಸ್ ವ್ಯವಸ್ಥೆಯನ್ನೇ ಪ್ರಮುಖವಾಗಿ ಬಳಸಲಾಗುತ್ತಿದೆ.
ಭಾರತದಲ್ಲಿ ಡಿಜಿಟಲ್ ಪಾವತಿ ಇಕೋಸಿಸ್ಟಂ (Digital Payments Ecosystem) ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ಪ್ಲಾಟ್ಫಾರ್ಮ್ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆರ್‌ಬಿಐ ವರದಿ ಉಲ್ಲೇಖಿಸಿದೆ.
ಸಣ್ಣ ಮತ್ತು ರಿಯಲ್ಟೈಮ್ ಪಾವತಿಗಳಿಗೆ ಯುಪಿಐ ಸುಲಭ ಹಾಗೂ ವೇಗದ ಆಯ್ಕೆಯಾಗಿದ್ದರೆ, ಸುರಕ್ಷಿತ ಹಾಗೂ ದೊಡ್ಡ ಮೊತ್ತದ ಸಾಂಸ್ಥಿಕ ವರ್ಗಾವಣೆಗೆ ಆರ್‌ಟಿಜಿಎಸ್ ಭರವಸೆಯ ಮಾಧ್ಯಮವಾಗಿದೆ. ಹಾಗೆಯೇ, ಯುಪಿಐ ಪಾವತಿಯಲ್ಲಿ ಹಣದ ಮೊತ್ತ ಮತ್ತು ಅವಧಿಗೆ ಮಿತಿ ಇರುವುದರಿಂದ ದೊಡ್ಡ ಮೌಲ್ಯದ ವಹಿವಾಟುಗಳಿಗೆ ಆರ್ಟಿಜಿಎಸ್ ಬಳಸುವುದು ಜನರಿಗೆ ಅನಿವಾರ್ಯ ಹೌದು.
ಇದನ್ನೂ ಓದಿ: ದೇವಸ್ಥಾನಗಳ ಚಿನ್ನದ ನಗದೀಕರಣದ ಯಾವ ಯೋಜನೆಯೂ ಇಲ್ಲ; ವೈರಲ್ ಸುದ್ದಿ ಕೇವಲ ವದಂತಿ: ಕೇಂದ್ರ ಸರ್ಕಾರ ಸ್ಪಷ್ಟನೆ
2021ರ ಕ್ಯಾಲಂಡರ್ ವರ್ಷದಲ್ಲಿ 6,437 ಕೋಟಿ ಸಂಖ್ಯೆಯಷ್ಟು ಪೇಮೆಂಟ್ ಟ್ರಾನ್ಸಾಕ್ಷನ್ ಆಗಿತ್ತು. 2025ರಲ್ಲಿ ಅದು 26,819 ಕೋಟಿಗೆ ಹಗಿದೆ. ಇನ್ನು, ಇದೇ ಅವಧಿಯಲ್ಲಿ ಪೇಮೆಂಟ್ ಟ್ರಾನ್ಸಾಕ್ಷನ್ ಮೌಲ್ಯದ ವಿಚಾರಕ್ಕೆ ಬಂದರೆ 2021ರಲ್ಲಿ 1,741 ಲಕ್ಷ ಕೋಟಿ ರೂ ಮೌಲ್ಯದ ಪೇಮೆಂಟ್ಗಳಾಗಿವೆ. 2025ರಲ್ಲಿ ಅದು 3,215 ಲಕ್ಷ ಕೋಟಿ ರೂಗೆ ಏರಿದೆ.
2025ರ ಜುಲೈನಿಂದ ಡಿಸೆಂಬರ್ವರೆಗೆ ಆದ ಸಂಖ್ಯಾವಾರ ಪಾವತಿಗಳ ಪ್ರಮಾಣ ಹೀಗಿದೆ:
ಪೇಮೆಂಟ್ ಮೌಲ್ಯದಲ್ಲಿ ವಿವಿಧ ಪ್ಲಾಟ್ಫಾರ್ಮ್ಗಳ ಪಾಲು
ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್ಗಳು; ಯಾಕಿದು ಪ್ರತಿಭಟನೆ?
ಆರ್‌ಬಿಐನ ಪೇಮೆಂಟ್ಸ್ ಸಿಸ್ಟಂ ರಿಪೋರ್ಟ್ನ ಈ ದತ್ತಾಂಶವು ಭಾರತೀಯ ಆರ್ಥಿಕತೆಯಲ್ಲಿ ಡಿಜಿಟಲ್ ಕ್ರಾಂತಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಸಾಮಾನ್ಯ ನಾಗರಿಕನ ಚಹಾದ ಅಂಗಡಿಯ ಪಾವತಿಯಿಂದ ಹಿಡಿದು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಕೋಟ್ಯಂತರ ರೂಪಾಯಿಗಳ ವ್ಯವಹಾರದವರೆಗೆ ಎಲ್ಲವೂ ಡಿಜಿಟಲ್ ವ್ಯವಸ್ಥೆಯಡಿ ಸುರಕ್ಷಿತವಾಗಿ ಹಂಚಿಕೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ